ಸ್ಟೇಟ್ ಬ್ಯಾಂಕ್ ಅಕೌಂಟ್ ಇರುವ ಹಿರಿಯ ನಾಗರಿಕರಿಗೆ ಭರ್ಜರಿ ಗುಡ್ ನ್ಯೂಸ್! ಬಂಪರ್ ಕೊಡುಗೆ
SBI Fixed Deposit Scheme : ಹಿರಿಯ ನಾಗರೀಕರಿಗೆ ವಯಸ್ಸಾದ ಕಾಲಕ್ಕೆ ತಮ್ಮ ಬದುಕು ನಿಶ್ಚಿಂತೆ ಇಂದ ಇರಬೇಕು ಎನ್ನುವುದೇ ಅವರ ದೊಡ್ಡ ಪ್ಲಾನ್ ಹಾಗೂ ಚಿಂತೆ ಕೂಡ ಆಗಿರುತ್ತದೆ. ಯಾರು ಕೂಡ ಮತ್ತೊಬ್ಬರಿಗೆ ಹೊರೆಯಾಗಿ ಇರಬೇಕು ಎಂದು ಬಯಸುವುದಿಲ್ಲ.
ಹಾಗಾಗಿ ಮುಂದಿನ ಭವಿಷ್ಯ ಚೆನ್ನಾಗಿರಬೇಕು, ಆರ್ಥಿಕವಾಗಿ ಮತ್ತೊಬ್ಬರಿಗೆ ತೊಂದರೆ ಕೊಡದೇ ಬದುಕಬೇಕು ಎಂದೇ ಎಲ್ಲಾ ಹಿರಿಯ ಜೇವಗಳು ಆಸೆ ಪಡುತ್ತದೆ. ಇದಕ್ಕಾಗಿ ತಾವು ಸಂಪಾದನೆ ಮಾಡಿದ ಹಣವನ್ನು ಕೂಡಿಟ್ಟು, ಮುಂದಿನ ಜೀವನಕ್ಕೆ ಬಳಸಿಕೊಳ್ಳಬೇಕು ಎಂದು ಸಹ ಬಯಸುತ್ತಾರೆ..
ಹೀಗೆ ತಮ್ಮ ಹಣವನ್ನು ಕೂಡಿಡುವುದಕ್ಕೆ ಹಿರಿಯ ನಾಗರೀಕರು ತಮ್ಮ ಬಳಿ ಇರುವ ಹಣವನ್ನು FD ಮಾಡಬೇಕು ಎಂದು ಯೋಜಿಸುತ್ತಾರೆ. ಹಲವು ಬ್ಯಾಂಕ್ ಗಳಲ್ಲಿ Fixed Deposit ಯೋಜನೆಗಳಿವೆ ಅವುಗಳಿಗೆ ಒಳ್ಳೆಯ ರಿಟರ್ನ್ಸ್ ಕೂಡ ಬರುತ್ತದೆ.
ಇಂದು ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಸ್ವಲ್ಪ ಇಳಿಕೆ! ತಿಂಗಳ ಮೊದಲ ದಿನವೇ ಚಿನ್ನದ ಬೆಲೆ ಕುಸಿತ
ಆದರೆ ನಮ್ಮ ದೇಶದಲ್ಲಿ ಹೆಚ್ಚಿನ ಜನರ ವಿಶ್ವಾಸ ಮತ್ತು ನಂಬಿಕೆ ಗಳಿಸಿರುವ SBI ನಲ್ಲಿ ಹಿರಿಯ ನಾಗರೀಕರಿಗಾಗಿಯೇ ಒಂದು ವಿಶೇಷವಾದ FD ಯೋಜನೆಯನ್ನು ಜಾರಿಗೆ ತರಲಾಗಿದ್ದು, ಇದರಲ್ಲಿ ಹೂಡಿಕೆ ಮಾಡಿದರೆ ಹಿರಿಯ ನಾಗರೀಕರಿಗೆ ಹೆಚ್ಚಿನ ಸೌಕರ್ಯ ಸಿಗಲಿದೆ.
ಹಿರಿಯ ನಾಗರೀಕರಿಗಾಗಿಯೇ ಜಾರಿಗೆ ಬಂದಿರುವ ಈ ಫಿಕ್ಸೆಡ್ ಡೆಪಾಸಿಟ್ ಯೋಜನೆಯಲ್ಲಿ, ಅವರಿಗೆ ಸಿಗುವ ಬಡ್ಡಿದರ ಕೂಡ ಹೆಚ್ಚು. ಸಾಮಾನ್ಯ ಜನರಿಗೆ ಸಿಗುವುದಕ್ಕಿಂತ ಜಾಸ್ತಿ ಬಡ್ಡಿ ಪಡೆಯುತ್ತಾರೆ, ಇದು 5 ವರ್ಷಗಳ FD ಯೋಜನೆ ಆಗಿರುತ್ತದೆ.
ಯಾವುದೇ ಉದ್ಯೋಗ ಇಲ್ಲದೇ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಪಡೆಯೋದು ಹೇಗೆ? ಇಲ್ಲಿದೆ ಟ್ರಿಕ್ಸ್
ಒಂದು ವರ್ಷಕ್ಕೆ ಇವರು ಮಾಡುವ 1.50 ಲಕ್ಷ ರೂಪಾಯಿಗಳ ವರೆಗಿನ ಹೂಡಿಕೆಗೆ ತೆರಿಗೆ ರಿಯಾಯಿತಿಯನ್ನು ಕೂಡ ಪಡೆದುಕೊಳ್ಳುತ್ತಾರೆ. ಈ FD ಯೋಜನೆಯಲ್ಲಿ ಎಷ್ಟು ರಿಟರ್ನ್ಸ್ ಬರುತ್ತದೆ ಎಂದು ತಿಳಿಯೋಣ..
*ಈ ಯೋಜನೆಯಲ್ಲಿ 80,000 ಹೂಡಿಕೆ ಮಾಡಿದರೆ, ಒಂದು ವರ್ಷಕ್ಕೆ ಬರುವ ರಿಟರ್ನ್ಸ್ 6002. ಅದೇ ರೀತಿ 1.2 ಲಕ್ಷ ಹೂಡಿಕೆ ಮಾಡಿದರೆ ಬರುವ ರಿಟರ್ನ್ಸ್ 12,004.
*80,000 ರೂಪಾಯಿಗಳನ್ನು 3 ವರ್ಷಕ್ಕೆ ಹೂಡಿಕೆ ಮಾಡಿದರೆ 19,244 ರೂಪಾಯಿ ರಿಟರ್ನ್ಸ್ ಬರುತ್ತದೆ. 1.60 ಲಕ್ಷ ರೂಪಾಯಿ ಹೂಡಿಕೆ ಮಾಡಿದರೆ, 38,488 ರೂಪಾಯಿ ರಿಟರ್ನ್ಸ್ ಬರುತ್ತದೆ.
ಸ್ಟೇಟ್ ಬ್ಯಾಂಕ್ ನಲ್ಲಿ 80 ಸಾವಿರ ರೂಪಾಯಿ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
*80,000 ರೂಪಾಯಿಗಳನ್ನು 5 ವರ್ಷಕ್ಕೆ ಹೂಡಿಕೆ ಮಾಡಿದರೆ 35,996 ರೂಪಾಯಿ ರಿಟರ್ನ್ಸ್ ಬರುತ್ತದೆ. 1.60 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ 71,992 ರೂಪಾಯಿ ರಿಟರ್ನ್ಸ್ ಬರುತ್ತದೆ. 2.40 ಲಕ್ಷ ಹೂಡಿಕೆ ಮಾಡಿದರೆ 1.07 ಲಕ್ಷ ರಿಟರ್ನ್ಸ್ ಬರುತ್ತದೆ. .
ಈ ಪ್ಲಾನ್ ಗಳನ್ನು ನೋಡಿದರೆ, ಹಿರಿಯ ನಾಗರೀಕರಿಗೆ ಒಳ್ಳೆಯ ಮೊತ್ತ ರಿಟರ್ನ್ಸ್ ನೀಡುವ ಯೋಜನೆ ಇದಾಗಿದೆ ಎಂದು ಗೊತ್ತಾಗುತ್ತದೆ. ಹಾಗಾಗಿ ತಮ್ಮ ಬಳಿ ಇರುವ ಹಣವನ್ನು ಹೂಡಿಕೆ ಮಾಡಿ, ಮುಂದಕ್ಕೆ ಒಳ್ಳೆಯ ಆದಾಯ ಪಡೆಯಬೇಕು ಎಂದರೆ, ಹಿರಿಯ ನಾಗರೀಕರು State Bank Of India ನ ಈ FD ಯೋಜನೆಯಲ್ಲಿ ಹೂಡಿಕೆ ಮಾಡುವುದಕ್ಕೆ ಶುರು ಮಾಡಬಹುದು.
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅನ್ನು ಗೂಗಲ್ ಪೇ ಗೆ ಲಿಂಕ್ ಮಾಡೋದು ಹೇಗೆ? ಸುಲಭ ವಿಧಾನ
Great news for senior citizens with State Bank Accounts