ಯಾವುದೇ ಉದ್ಯೋಗ ಇಲ್ಲದೇ ಇದ್ರೂ ಕ್ರೆಡಿಟ್ ಕಾರ್ಡ್ ಸಿಗುತ್ತಾ? ಪಡೆಯೋದು ಹೇಗೆ? ಇಲ್ಲಿದೆ ಟ್ರಿಕ್ಸ್

Credit Card : ಕ್ರೆಡಿಟ್ ಕಾರ್ಡ್ ಇದೆ ಎಂದು ಜವಾಬ್ದಾರಿ ಇಲ್ಲದೇ ಬಳಸಬಾರದು, ಆಗ ನೀವು ಸಾಲದ ಕೂಪಕ್ಕೆ ಸಿಲುಕಿಕೊಳ್ಳುತ್ತೀರಿ. ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿಲ್ಲ ಎಂದರೆ, ತೊಂದರೆ ಎದುರಿಸಬೇಕಾಗುತ್ತದೆ.

Bengaluru, Karnataka, India
Edited By: Satish Raj Goravigere

Credit Card : ಈಗಿನ ಕಾಲದಲ್ಲಿ ಬಹಳಷ್ಟು ಜನರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಕ್ರೆಡಿಟ್ ಕಾರ್ಡ್ ಗಳನ್ನು ಬಳಸಿ ಹಣಕಾಸಿನ ವಿಚಾರದಲ್ಲಿ ಬರುವ ಎಮರ್ಜೆನ್ಸಿ ಗಳನ್ನು ನಿಭಾಯಿಸುತ್ತಾರೆ.

ಯಾವುದೇ ಬ್ಯಾಂಕ್ (Bank) ಅಥವಾ ಹಣಕಾಸಿನ ಸಂಸ್ಥೆಗಳು ಕೆಲಸ ಇರುವವರಿಗೆ, ಅವರ ಸಂಬಳದ ಮೊತ್ತ ಪರಿಶೀಲಿಸಿ ಕ್ರೆಡಿಟ್ ಕಾರ್ಡ್ (Credit Card) ನೀಡುತ್ತದೆ. ಕ್ರೆಡಿಟ್ ಕಾರ್ಡ್ ಪಡೆಯಲು ಇರುವ ನಿಯಮವೇ ಇದು, ನಿಮ್ಮ ಆದಾಯದ ಮೂಲಕ್ಕೆ ಸ್ಯಾಲರಿ ಸ್ಲಿಪ್ ಅನ್ನು ನೀಡಬೇಕು. ಆಗ ಮಾತ್ರ ಕ್ರೆಡಿಟ್ ಕಾರ್ಡ್ ಸಿಗುತ್ತದೆ. ಆದರೆ ಕೆಲಸ ಇಲ್ಲದೇ ಇರುವವರಿಗೆ ಕ್ರೆಡಿಟ್ ಕಾರ್ಡ್ ಸೌಲಭ್ಯ ಸಿಗುತ್ತಾ?

Getting a credit card is now even easier, Here are the simple steps

ಸ್ಟೇಟ್ ಬ್ಯಾಂಕ್ ನಲ್ಲಿ 80 ಸಾವಿರ ರೂಪಾಯಿ ಫಿಕ್ಸೆಡ್ ಇಟ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

1. ಆದಾಯದ ಮೂಲ ತೋರಿಸಿ ಕ್ರೆಡಿಟ್ ಕಾರ್ಡ್ ಪಡೆಯಿರಿ:

ಒಂದು ವೇಳೆ ಎಲ್ಲರ ಹಾಗೆ ಒಂದು ಸಂಸ್ಥೆಯಲ್ಲಿ ಉದ್ಯೋಗ ಇಲ್ಲ ಎಂದರೆ, ನೀವು ಮಾಡುತ್ತಿರುವ ಸ್ವತಂತ್ರ್ಯ ಉದ್ಯೋಗದ ದಾಖಲೆ, ನಿಮ್ಮ ಬ್ಯಾಂಕ್ ಸ್ಟೇಟ್ಮೆಂಟ್, ಐಟಿಆರ್ ಕಾಪಿ, ಮ್ಯೂಚುವಲ್ ಫಂಡ್, ಶೇರ್ಸ್ ಇವುಗಳ ಕಾಪಿ ಇದೆಲ್ಲವನ್ನು ತೋರಿಸಿ ನಿಮಗೆ ಸಾಲ ಮರುಪಾವತಿ ಮಾಡುವ ಸಾಮರ್ಥ್ಯವಿದೆ ಎಂದು ತಿಳಿಸಿ, ಕ್ರೆಡಿಟ್ ಕಾರ್ಡ್ ಪಡೆಯುವ ಆಯ್ಕೆ. ಆದರೆ ನಿಮಗೆ ಕ್ರೆಡಿಟ್ ಕಾರ್ಡ್ ಕೊಡಬೇಕೋ ಬೇಡವೋ ಎನ್ನುವ ಅಂತಿಮ ನಿರ್ಧಾರ ಬ್ಯಾಂಕ್ ನದ್ದಾಗಿರುತ್ತದೆ.

2. FD ಮೇಲೆ ಕ್ರೆಡಿಟ್ ಕಾರ್ಡ್ ಪಡೆಯಬಹುದು:

ಒಂದು ವೇಳೆ ನಿಮಗೆ ಸರಿಯಾದ ಕೆಲಸ ಇಲ್ಲದೇ ಹೋದರು ಕೂಡ ನೀವು ಕ್ರೆಡಿಟ್ ಕಾರ್ಡ್ ಪಡೆಯಬಹುದು, ಬ್ಯಾಂಕ್ ನಲ್ಲಿ ನೀವು FD ಮಾಡಿದ್ದರೆ, ಅದರ ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಈ ರೀತಿ ಪಡೆಯುವ ಕ್ರೆಡಿಟ್ ಕಾರ್ಡ್ ನ ಮಿತಿ ನಿಮ್ಮ FD ಮೊತ್ತದ 80 ಇಂದ 90% ವರೆಗು ಇರುತ್ತದೆ. ಸರಿಯಾದ ಸಮಯಕ್ಕೆ FD ಮೊತ್ತ ಪಾವತಿ ಮಾಡದೇ ಇದ್ದರೆ, ನಿಮ್ಮ Fixed Deposit ಇಂದ ಹಣವನ್ನು ತೆಗೆದುಕೊಳ್ಳಲಾಗುತ್ತದೆ.

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಅನ್ನು ಗೂಗಲ್ ಪೇ ಗೆ ಲಿಂಕ್ ಮಾಡೋದು ಹೇಗೆ? ಸುಲಭ ವಿಧಾನ

credit card3. ಆಡ್ ಆನ್ ಕ್ರೆಡಿಟ್ ಕಾರ್ಡ್ :

ನಿಮಗೆ ಕೆಲಸ ಇಲ್ಲದೇ ಹೋದರು ಸಹ ನಿಮ್ಮ ಮನೆಯಲ್ಲಿ ಯಾರ ಬಳಿ ಆದರು ಕ್ರೆಡಿಟ್ ಕಾರ್ಡ್ ಇದ್ದರೆ, ಅದರಿಂದ ನೀವು ಆಡ್ ಆನ್ ಕಾರ್ಡ್ ಗಳನ್ನು ಪಡೆಯಬಹುದು. ಸಾಮಾನ್ಯವಾಗಿ ಆಡ್ ಆನ್ ಕಾರ್ಡ್ ಗಳನ್ನು ಪ್ರೈಮರಿ ಕ್ರೆಡಿಟ್ ಕಾರ್ಡ್ (Add-On Credit Cars) ಹೊಂದಿರುವವರ ಸಂಗಾತಿಗೆ, 18 ವರ್ಷ ತುಂಬಿದ ಮಕ್ಕಳಿಗೆ ಕೊಡಲಾಗುತ್ತದೆ.

ಈ ಕಾರ್ಡ್ ನಲ್ಲಿ ನೀವು ಏನು ಖರ್ಚು ಮಾಡುತ್ತೀರೋ ಅದನ್ನು ಪ್ರೈಮರಿ ಕ್ರೆಡಿಟ್ ಕಾರ್ಡ್ ಗೆ ಸೇರಿಸಲಾಗುತ್ತದೆ. ಆಡ್ ಆನ್ ಕಾರ್ಡ್ ನ ಮಿತಿಯನ್ನು ಪ್ರೈಮರಿ ಕಾರ್ಡ್ ಮಿತಿಯ ಜೊತೆಗೆ ಡಿವೈಡ್ ಮಾಡಿ, ಕೊಡಲಾಗುತ್ತದೆ.

ಈ ಕಾರಣಕ್ಕೆ ಪ್ರೈಮರಿ ಕಾರ್ಡ್ ಬಳಕೆ ಮಾಡುವವರು ಆಡ್ ಆನ್ ಕಾರ್ಡ್ ಬಳಕೆ ಹುಷಾರಾಗಿರಬೇಕು, ಆಡ್ ಆನ್ ಕಾರ್ಡ್ ನ ಮಿತಿ 30% ಗಿಂತ ಜಾಸ್ತಿಯಾದರೆ ಸಾಲಕ್ಕೆ ತುತ್ತಾಗಬಹುದು..

ಸ್ಟೇಟ್ ಬ್ಯಾಂಕ್ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 20 ಲಕ್ಷದವರೆಗೂ ಸಾಲ, ಕಡಿಮೆ ಬಡ್ಡಿಯಲ್ಲಿ!

4. ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್:

ಸ್ಟೂಡೆಂಟ್ ಆಗಿರುವವರಿಗೆ ಕೂಡ FD ಆಧಾರದ ಮೇಲೆ ಕ್ರೆಡಿಟ್ ಕಾರ್ಡ್ ಕೊಡಲಾಗುತ್ತದೆ. ಕೆಲವು ಬ್ಯಾಂಕ್ ಗಳಲ್ಲಿ ಈ ಸೌಲಭ್ಯ ಇದ್ದು, ಒಬ್ಬ ಸ್ಟೂಡೆಂಟ್ ಹೆಸರಿನಲ್ಲಿ ಮಿನಿಮಮ್ 10 ಸಾವಿರ ಇಂದ 50 ಸಾವಿರ ವರೆಗೂ FD ಇಟ್ಟಿದ್ದರೆ, ಅವರಿಗೆ ಸ್ಟೂಡೆಂಟ್ ಕ್ರೆಡಿಟ್ ಕಾರ್ಡ್ (Student Credit Card) ಪಡೆಯುವ ಅರ್ಹತೆ ಇರುತ್ತದೆ. ಈ ಕ್ರೆಡಿಟ್ ಕಾರ್ಡ್ ಮಿತಿ FD ಮೊತ್ತದ ಮೇಲೆ ಅವಲಂಬಿಸಿರುತ್ತದೆ.

ಕ್ರೆಡಿಟ್ ಕಾರ್ಡ್ ಇದೆ ಎಂದು ಜವಾಬ್ದಾರಿ ಇಲ್ಲದೇ ಬಳಸಬಾರದು, ಆಗ ನೀವು ಸಾಲದ ಕೂಪಕ್ಕೆ ಸಿಲುಕಿಕೊಳ್ಳುತ್ತೀರಿ. ಸಮಯಕ್ಕೆ ಸರಿಯಾಗಿ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡಿಲ್ಲ ಎಂದರೆ, ತೊಂದರೆ ಎದುರಿಸಬೇಕಾಗುತ್ತದೆ. ಹಾಗಾಗಿ ಕ್ರೆಡಿಟ್ ಕಾರ್ಡ್ ಬಳಕೆ ಬಗ್ಗೆ ಹುಷಾರಾಗಿರಿ.

Can you get a credit card without any job, How to get Here are the Tips