Business News

ಸ್ಟೇಟ್ ಬ್ಯಾಂಕ್ ಯೋಜನೆಯಲ್ಲಿ ಮಹಿಳೆಯರಿಗೆ ಸಿಗಲಿದೆ 20 ಲಕ್ಷದವರೆಗೂ ಸಾಲ, ಕಡಿಮೆ ಬಡ್ಡಿಯಲ್ಲಿ!

ಒಂದಷ್ಟು ವರ್ಷಗಳ ಹಿಂದೆ ಮಹಿಳೆಯರು ಅಡುಗೆ ಮನೆ ಮತ್ತು ಮನೆ ಕೆಲಸಕ್ಕೆ ಮಾತ್ರ ಸೀಮಿತವಾಗಿದ್ದರು, ಆದರೆ ಈಗ ಬ್ಯುಸಿನೆಸ್ ಇಂದ ಬಾಹ್ಯಾಕಾಶದವರೆಗೂ ಎಲ್ಲಾ ಕಡೆ ಮಹಿಳೆಯರು ರಾರಾಜಿಸುತ್ತಿದ್ದಾರೆ.

ಸರ್ಕಾರ ಮತ್ತು ಬ್ಯಾಂಕ್ ಗಳು (Banks) ಕೂಡ ಮಹಿಳೆಯರು ಆರ್ಥಿಕವಾಗಿ ಸಬಲವಾಗಿರಬೇಕು ಎಂದು ಪ್ರೋತ್ಸಾಹ ಕೊಡುತ್ತಿದೆ. ಹೀಗೆ ಮುಂದುವರಿಯಬೇಕು, ಬ್ಯುಸಿನೆಸ್ ಮಾಡಿ ಸಾಧನೆ ಮಾಡಬೇಕು ಎಂದುಕೊಂಡಿರುವ ಮಹಿಳೆಯರಿಗೆ ಇದೀಗ ಒಂದು ಗುಡ್ ನ್ಯೂಸ್ ಕಾದಿದೆ..

Bumper news for State Bank customers, New FD scheme Launched

ಮಹಿಳೆಯರು ಕೌಶಲ್ಯವನ್ನು ಕಲಿತು, ಸಣ್ಣದಾಗಿ ಬ್ಯುಸಿನೆಸ್ (Business) ಮಾಡಬೇಕು ಎಂದುಕೊಂಡಿದ್ದರೆ ಅಥವಾ ಈಗಾಗಲೇ ಅವರು ಬ್ಯುಸಿನೆಸ್ ಆರಂಭಿಸಿದ್ದು ಅದನ್ನು ಹೆಚ್ಚಿನ ಅಭಿವೃದ್ಧಿ ಪಡಿಸಬೇಕು ಎಂದುಕೊಂಡಿದ್ದರೆ ಅಂಥ ಮಹಿಳೆಯರಿಗಾಗಿ ಇದೀಗ SBI ವತಿಯಿಂದ ಸ್ತ್ರೀಶಕ್ತಿ ಯೋಜನೆಯನ್ನು ಜಾರಿಗೆ ತರಲಾಗಿದೆ.

ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ರೆ ಸಿಗುತ್ತೆ 2 ರಿಂದ 3 ಲಕ್ಷದವರೆಗು ಸಾಲ! ಇಂದೇ ಅರ್ಜಿ ಸಲ್ಲಿಸಿ

ಈ ಒಂದು ಯೋಜನೆಯ ಮೂಲಕ ಮಹಿಳೆಯರಿಗೆ 1 ರಿಂದ 20 ಲಕ್ಷದವರೆಗು ಸ್ವ ಉದ್ಯಮ ಶುರು ಮಾಡುವುದಕ್ಕೆ ಸಾಲ ಸೌಲಭ್ಯ (Business Loan) ಸಿಗಲಿದೆ.

ಸ್ತ್ರೀ ಶಕ್ತಿ ಯೋಜನೆಯಿಂದ ನೀವು ಪಡೆಯುವ ಸಾಲಕ್ಕೆ (Loan) ಕಡಿಮೆ ಬಡ್ಡಿ ಇರುತ್ತದೆ. 1 ರಿಂದ 5 ಲಕ್ಷದವರೆಗಿನ ಸಾಲಕ್ಕೆ ಹೆಚ್ಚಿನ ಡಾಕ್ಯುಮೆಂಟ್ ಗಳನ್ನು ಕೊಡುವ ಅಗತ್ಯ ಕೂಡ ಇಲ್ಲ. ಇನ್ನು 5 ಲಕ್ಷದಿಂದ 20 ಲಕ್ಷದವರೆಗಿನ ದೊಡ್ಡ ಮೊತ್ತದ ಸಾಲಕ್ಕೆ ಒಂದಷ್ಟು ಡಾಕ್ಯುಮೆಂಟ್ ಗಳ ಅವಶ್ಯಕತೆ ಇದೆ.

ಹಾಗೆಯೇ ಇಲ್ಲಿ ನಿಮ್ಮ ಬ್ಯುಸಿನೆಸ್ ಹೇಗಿದೆ, ಅದನ್ನು ಹೇಗೆ ಅಭಿವೃದ್ಧಿ ಪಡಿಸಬೇಕು ಎಂದು ಪ್ಲಾನ್ ಮಾಡಿಕೊಂಡಿದ್ದೀರಿ? ಇದೆಲ್ಲವನ್ನು ಪರಿಶೀಲಿಸಿ, ಅದರ ಅನುಸಾರ ನಿಮ್ಮ ಸಾಲದ ಮೊತ್ತವನ್ನು ನಿಗದಿಪಡಿಸಲಾಗುತ್ತದೆ.

ಈ ಯೋಜನೆಯ ಮೂಲಕ ಪಡೆಯುವ ಸಾಲಕ್ಕೆ, ಸಾಲದ ಮೊತ್ತದ ಆಧಾರದ ಮೇಲೆ 1 ರಿಂದ 15% ವರೆಗೂ ಬಡ್ಡಿ ವಿಧಿಸಲಾಗುತ್ತದೆ. ಕಡಿಮೆ ಮೊತ್ತದ ಸಾಲ 4 ರಿಂದ 8 ವಾರಗಳಲ್ಲಿ ನಿಮಗೆ ಸಿಗಲಿದ್ದು, ಹೆಚ್ಚಿನ ಮೊತ್ತದ ಸಾಲ 8 ರಿಂದ 12 ವಾರಗಳ ಸಮಯದಲ್ಲಿ ನಿಮಗೆ ಸಿಗಲಿದೆ.

ಈ ಯೋಜನೆಯ ಸೌಲಭ್ಯವನ್ನು SBI ಕಡೆಯಿಂದ ವಿಶೇಷವಾಗಿ ಮಹಿಳೆಯರಿಗೋಸ್ಕರ ಜಾರಿಗೆ ತರಲಾಗಿದೆ. ಬ್ಯುಸಿನೆಸ್ ಮಾಡಬೇಕು ಎಂದುಕೊಂಡವರ ಜೊತೆಗೆ, ಈಗಾಗಲೇ ಒಂದು ಕೆಲಸ ಮಾಡುತ್ತಾ, ಉಪಕಸುಬಿನ ಹಾಗೆ ಬ್ಯುಸಿನೆಸ್ ಮಾಡಬೇಕು ಎಂದುಕೊಂಡಿರುವವರಿಗೆ ಕೂಡ ಈ ಯೋಜನೆಯ ಮೂಲಕ ಸಾಲ ಸಿಗುತ್ತದೆ.

ಇಂದು ಚಿನ್ನದ ಬೆಲೆ ಹೇಗಿದೆ ಗೊತ್ತಾ? ಭಾನುವಾರ (ಜೂನ್ 30, 2024) ಚಿನ್ನ ಮತ್ತು ಬೆಳ್ಳಿ ಬೆಲೆ ಡೀಟೇಲ್ಸ್

State Bank Of Indiaಯಾರೆಲ್ಲಾ ಸಾಲ ಪಡೆಯಬಹುದು?

ಸಾಲ ಪಡೆಯಲು ಅರ್ಜಿ ಹಾಕುವ ಮಹಿಳೆಯ ವಯಸ್ಸು 18 ರಿಂದ 60 ವರ್ಷಗಳ ಒಳಗಿರಬೇಕು. ಈ ಮಹಿಳೆಯರು EDP ಅಟೆಂಡ್ ಮಾಡಿರಬೇಕು, ಜೊತೆಗೆ ಬ್ಯುಸಿನೆಸ್ ಬಗ್ಗೆ ತಿಳುವಳಿಕೆ ಇರಬೇಕು.

EDP ಎಂದರೆ Employment Development Project, ಇದರಲ್ಲಿ ಸರ್ಕಾರವು ಮಹಿಳೆಯರಿಗೆ ವಿವಿಧ ಕೌಶಲ್ಯಗಳ ಬಗ್ಗೆ ತರಬೇತಿ ನೀಡಲಾಗುತ್ತದೆ. ಹಾಗಾಗಿ ಲೋನ್ ಗಾಗಿ ಅರ್ಜಿ ಸಲ್ಲಿಸುವ ಮಹಿಳೆ EDP ಅಟೆಂಡ್ ಮಾಡಿದ್ದಾರಾ ಎಂದು ನೋಡಲಾಗುತ್ತದೆ.

ಸ್ವಂತ ಬ್ಯುಸಿನೆಸ್ ಶುರು ಮಾಡೋಕೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೂ ಸಾಲ! ಬಂಪರ್ ಕೊಡುಗೆ

ಬೇಕಾಗುವ ದಾಖಲೆಗಳು ಏನು?

ಅರ್ಜಿ ಹಾಕುವ ಮಹಿಳೆಯ ಈ ಎಲ್ಲಾ ದಾಖಲೆಗಳು

*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ವೋಟರ್ ಐಡಿ
*ಅಡ್ರೆಸ್ ಪ್ರೂಫ್
*ಪಾಸ್ ಪೋರ್ಟ್
*ಡ್ರೈವಿಂಗ್ ಲೈಸೆನ್ಸ್
*ಐಟಿಆರ್ ರಿಟರ್ನ್ಸ್
ಇದೆಲ್ಲಾ ದಾಖಲೆಗಳು ಬೇಕಾಗುತ್ತದೆ.

ಆಧಾರ್ ಕಾರ್ಡ್ ಇದ್ರೆ ಸಾಕು ಸಿಗಲಿದೆ ₹10,000 ರೂಪಾಯಿವರೆಗೂ ಸಾಲ! ಪಡೆಯಿರಿ ಆಧಾರ್ ಲೋನ್

ಯಾವೆಲ್ಲಾ ಬ್ಯುಸಿನೆಸ್ ಮಾಡಬಹುದು?

ಟೈಲರಿಂಗ್, ಬ್ಯುಟೀಷಿಯನ್, ಫೋನ್ ಅಂಗಡಿ, ಕಿರಾಣಿ ಅಂಗಡಿ, ಮಿಲ್ಕ್ ಪ್ರಾಡಕ್ಟ್ ಮಾರಾಟ ಮಾಡುಗ ಅಂಗಡಿ, ಸೋಪ್ ತಯಾರಿಕೆ, ಸೀರೆ ತಯಾರಿಕೆ, ಚಾಕೊಲೇಟ್ ತಯಾರಿಕೆ ಈ ಎಲ್ಲಾ ಬ್ಯುಸಿನೆಸ್ ಗಳನ್ನು ಮಾಡಬಹುದು. ಈ ಸಾಲದ (Loan) ಮೇಲೆ ನಿಮಗೆ ವಿನಾಯಿತಿ ಕೂಡ ಸಿಗುತ್ತದೆ.

In the State Bank scheme, women will get loan of up to 20 lakhs at low interest

Our Whatsapp Channel is Live Now 👇

Whatsapp Channel

Related Stories