Business News

ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ರೆ ಸಿಗುತ್ತೆ 2 ರಿಂದ 3 ಲಕ್ಷದವರೆಗು ಸಾಲ! ಇಂದೇ ಅರ್ಜಿ ಸಲ್ಲಿಸಿ

Kisan Credit Card Loan : ನಮ್ಮ ದೇಶದಲ್ಲಿ ರೈತರು ಮುಂದುವರಿಯಬೇಕು, ಅವರು ಆರ್ಥಿಕವಾಗಿ ಸಬಲರಾಗಿ ಇರಬೇಕು ಎಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಎರಡು ಕೂಡ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ.

ಇದೀಗ ಸರ್ಕಾರವು ಕೃಷಿಯ (Agriculture) ಜೊತೆಗೆ ಇರುವ ಹೈನುಗಾರಿಕೆಯಲ್ಲಿ ತೊಡಗಿಕೊಂಡಿರುವ ರೈತರಿಗೆ ಸಹಾಯ ಮಾಡಲು ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ಜಾರಿಗೆ ತಂದಿದ್ದು, ಇದರ ಮೂಲಕ ಜಾನುವಾರುಗಳ ಸಾಕಾಣಿಕೆಗೆ ಸಹಾಯ ಮಾಡುವುದಕ್ಕೆ ಮುಂದಾಗಿದೆ. ಏನಿದು ಪಶು ಕಿಸಾನ್ ಕ್ರೆಡಿಟ್ ಕಾರ್ಡ್? ಇದರ ಸೌಲಭ್ಯ ಪಡೆಯುವುದು ಹೇಗೆ? ಎಲ್ಲವನ್ನು ತಿಳಿಸುತ್ತೇವೆ ನೋಡಿ..

Farmers will get 3 lakh loan if they have Kisan Credit card

ಇಂದು ಚಿನ್ನದ ಬೆಲೆ ಹೇಗಿದೆ ಗೊತ್ತಾ? ಭಾನುವಾರ (ಜೂನ್ 30, 2024) ಚಿನ್ನ ಮತ್ತು ಬೆಳ್ಳಿ ಬೆಲೆ ಡೀಟೇಲ್ಸ್

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಎಂದರೇನು?

ಇದು ನೀವು ಸಾಲ ಪಡೆಯಲು ಕೊಡುವ ಒಂದು ಕಾರ್ಡ್ ಆಗಿರುತ್ತದೆ. ಹಸು ಮತ್ತು ಎಮ್ಮೆಗಳ ಸಾಕಾಣಿಕೆ ಮಾಡುವುದಕ್ಕೆ ಸರ್ಕಾರದಿಂದ ಹಣ ಸಹಾಯ ಸಿಗಲಿದ್ದು. ಇದನ್ನು ಪಡೆಯಲು ಬ್ಯಾಂಕ್ ಗಳಲ್ಲಿ (Bank Loan) ಅರ್ಜಿ ಸಲ್ಲಿಸಿ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ (Pashu Kisan Credit Card Loan) ಅನ್ನು ಪಡೆದು, ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು.

ಈ ಕ್ರೆಡಿಟ್ ಕಾರ್ಡ್ ಮೂಲಕ ಪಡೆಯುವ ಸಾಲಕ್ಕೆ ಯಾವುದೇ ಗ್ಯಾರೆಂಟಿ ಕೇಳುವುದಿಲ್ಲ. ದೇಶದ ಹಲವು ರಾಜ್ಯಗಳಲ್ಲಿ ರೈತರಿಗೆ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗಿದ್ದು, ಇದರಿಂದ ಪಶುಗಳ ನಿರ್ವಹಣೆಗೆ 2 ರಿಂದ 3 ಲಕ್ಷದವರೆಗು ಸಾಲ ಪಡೆದುಕೊಳ್ಳಬಹುದು.

ಸಿಗುವ ಸಾಲದ ಮೊತ್ತವೆಷ್ಟು?

ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದವರಿಗೆ ಹಸು ಮತ್ತು ಎಮ್ಮೆ ಸಾಕಾಣಿಕೆಗೆ ಸಾಲ ನೀಡಲಾಗುತ್ತದೆ. ಒಂದು ಎಮ್ಮೆಯನ್ನು ನಿರ್ವಹಿಸಲು ₹60,249 ರೂಪಾಯಿ ಸಾಲ ಸಿಗಲಿದೆ, ಒಂದು ಆಕಳು ನಿರ್ವಹಣೆಗೆ ₹40,783 ರೂಪಾಯಿ ಸಾಲ ಸಿಗುತ್ತದೆ.

ನಿಮ್ಮ ಬಳಿ ಎಷ್ಟು ಹಸು ಅಥವಾ ಎಮ್ಮೆ ಇದೆಯೋ ಅಷ್ಟಕ್ಕೂ ಸಾಲ ಪಡೆಯಬಹುದು. 1.6 ಲಕ್ಷದವರೆಗಿನ ಸಾಲಕ್ಕೆ ಯಾವುದೇ ಗ್ಯಾರೆಂಟಿ ಕೇಳುವುದಿಲ್ಲ. ಬ್ಯಾಂಕ್ ಗಳಲ್ಲಿ ಪಶು ಕಿಸಾನ್ ಕ್ರೆಡಿಟ್ ಇಲ್ಲದೇ ಇದೇ ಸಾಲ ಪಡೆದರೆ 7% ಬಡ್ಡಿ ವಿಧಿಸಲಾಗುತ್ತದೆ. ಈ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಇದ್ದರೆ, 4% ಬಡ್ಡಿದರದಲ್ಲಿ ಸಾಲ ಸಿಗುತ್ತದೆ.

ಸ್ವಂತ ಬ್ಯುಸಿನೆಸ್ ಶುರು ಮಾಡೋಕೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೂ ಸಾಲ! ಬಂಪರ್ ಕೊಡುಗೆ

Kisan Credit Cardಯಾವ ಬ್ಯಾಂಕ್ ನಲ್ಲಿ ಸಾಲ ಸಿಗುತ್ತದೆ?

ದೇಶದಲ್ಲಿರುವ ಬಹುತೇಕ ಎಲ್ಲಾ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಸಾಲ ಸಿಗುತ್ತದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, HDFC, ಆಕ್ಸಿಸ್ ಬ್ಯಾಂಕ್ ಈ ಎಲ್ಲಾ ಬ್ಯಾಂಕ್ ಗಳಲ್ಲಿ ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಸೌಲಭ್ಯವಿದೆ.

ಇದನ್ನು ಪಡೆಯಲು ಮೊದಲು ನೀವು ಬ್ಯಾಂಕ್ ಗೆ ಹೋಗಿ, ಅಪ್ಲಿಕೇಶನ್ ಫಾರ್ಮ್ ಅನ್ನು ಕೇಳಿ ಪಡೆದು, ಭರ್ತಿ ಮಾಡಿ, ಅಗತ್ಯವಿರುವ KYC ಆಗಿರುವ ದಾಖಲೆಗಳನ್ನು ಕೊಟ್ಟು, ಅರ್ಜಿ ಸಲ್ಲಿಸಬೇಕು. ಬ್ಯಾಂಕ್ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಚೆಕ್ ಮಾಡಿ, ಎಲ್ಲವು ಸರಿ ಇದ್ದರೆ, ಪಶು ಕಿಸಾನ್ ಕ್ರೆಡಿಟ್ ಕಾರ್ಡ್ ಅನ್ನು ನಿಮಗೆ ನೀಡುತ್ತಾರೆ.

ಇಂತಹ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಗಲಿದೆ ₹17,000 ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

ಅಗತ್ಯವಿರುವ ದಾಖಲೆಗಳು:

*ಭೂಮಿಯ ದಾಖಲೆಗಳು
*ಜಾನುವಾರುಗಳ ಆರೋಗ್ಯದ ಬಗ್ಗೆ ಸರ್ಟಿಫಿಕೇಟ್
*ಪಾಸ್ ಪೋರ್ಟ್ ಸೈಜ್ ಫೋಟೋ
*ಆಧಾರ್ ಕಾರ್ಡ್
*ಪ್ಯಾನ್ ಕಾರ್ಡ್
*ವೋಟರ್ ಐಡಿ
*ಬ್ಯಾಂಕ್ ಅಕೌಂಟ್ ಡೀಟೇಲ್ಸ್

ಈ ಎಲ್ಲಾ ದಾಖಲೆಗಳನ್ನು ಹೊಂದಿರುವ ರೈತರು ನಿಮ್ಮ ಹತ್ತಿರದ ಬ್ಯಾಂಕ್ ಗೆ ಭೇಟಿ ನೀಡಿ, ಫಾರ್ಮ್ ಪಡೆದು, ಅರ್ಜಿ ಸಲ್ಲಿಸಿ, ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

If you have this Pashu Kisan credit card, you will get a loan of 2 to 3 lakh

Our Whatsapp Channel is Live Now 👇

Whatsapp Channel

Related Stories