Business News

ಇಂತಹ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಗಲಿದೆ ₹17,000 ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

Education Scholarship : ರಾಜ್ಯದಲ್ಲಿ ಹಲವು ಬಡವಿದ್ಯಾರ್ಥಿಗಳಿಗೆ ನೆರವಾಗುವುದು ಸ್ಕಾಲರ್ಶಿಪ್ ಯೋಜನೆಗಳು. ಇದೀಗ ಸರ್ಕಾರಿ ಕಾಲೇಜುಗಳಲ್ಲಿ ಪದವಿ ಓದುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ಕಾದಿದ್ದು, ₹17,000 ಸ್ಕಾಲರ್ಶಿಪ್ ಕೊಡುವ ಯೋಜನೆಯನ್ನು ನಿಮಗಾಗಿ ಜಾರಿಗೆ ತರಲಾಗಿದೆ.

ಈ ಯೋಜನೆಗೆ ಸರ್ಕಾರಿ ಕಾಲೇಜಿನ (Government College) ವಿದ್ಯಾರ್ಥಿಗಳು ಮಾತ್ರ ಅರ್ಹರಾಗುತ್ತಾರೆ. ಹಾಗಿದ್ದಲ್ಲಿ ಈ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ? ಯಾರೆಲ್ಲಾ ಇದರ ಸೌಲಭ್ಯ ಪಡೆಯುತ್ತಾರೆ? ಪೂರ್ತಿಯಾಗಿ ತಿಳಿಯೋಣ..

The central government brought a new scholarship scheme for students

ಆಧಾರ್ ಕಾರ್ಡ್ ಇದ್ರೆ ಸಾಕು ಸಿಗಲಿದೆ ₹10,000 ರೂಪಾಯಿವರೆಗೂ ಸಾಲ! ಪಡೆಯಿರಿ ಆಧಾರ್ ಲೋನ್

CRISP ಸ್ಕಾಲರ್ಶಿಪ್ ಯೋಜನೆ:

ವಿದ್ಯಾರ್ಥಿಗಳು ಕಾಲೇಜಿನಲ್ಲಿ ಕಲಿಸುವ ಪಾಠಗಳನ್ನು ಕಲಿಯುವುದರ ಜೊತೆಗೆ ಕೆಲಸಕ್ಕೆ ಸಹಾಯ ಆಗುವ ಹಾಗೆ ಕೆಲವು ಕೌಶಲ್ಯಗಳನ್ನು ಕಲಿಯುವುದು ಒಳ್ಳೆಯದು, ಅದರಿಂದ ಅವರ ಕೆರಿಯರ್ ಶುರು ಮಾಡುವುದಕ್ಕೆ ಸಹಾಯ ಆಗುತ್ತದೆ.

ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ವಿಚಾರವಾಗಿ ಸಹಾಯ ಮಾಡುವುದಕ್ಕೆ, ರಿಟೈರ್ ಆಗಿರುವ 10 ನಿವೃತ್ತ ಐಎಎಸ್ ಅಧಿಕಾರಿಗಳು Center for Research in Schemes and Policies ಎನ್ನುವ ಯೋಜನೆಯನ್ನು ಶುರು ಮಾಡಿದ್ದು, ಇದಕ್ಕೆ ರಾಜ್ಯ ಸರ್ಕಾರ ಸಹ ಕೈಜೋಡಿಸಿ, ಒಪ್ಪಂದಕ್ಕೆ ಸೈನ್ ಮಾಡಿದೆ.

ಈ ಯೋಜನೆ ಶುರುವಾಗಿರುವ ಮೊದಲನೇ ವರ್ಷದಲ್ಲಿ, ಒಟ್ಟು 60 ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ 3,600 ವಿದ್ಯಾರ್ಥಿಗಳಿಗೆ ಈ ಯೋಜನೆಯ ಸೌಲಭ್ಯ ಸಿಗುತ್ತಿದ್ದು, ಇದರ ಮೂಲಕ ಕಾಲೇಜಿಗೆ ಅಡ್ಮಿಷನ್ ಪಡೆದಿದ್ದಾರೆ. ಇನ್ನು ಮುಂದಿನ ವರ್ಷ ಅಂದರೆ 2026-27ನೇ ಸಾಲಿಗೆ ಇನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡುವ ಗುರಿಯನ್ನು ಹೊಂದಿದ್ದು, 239 ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ 14,340 ವಿದ್ಯಾರ್ಥಿಗಳಿಗೆ ಈ ಸೌಲಭ್ಯ ಸಿಗಲಿದೆ.

ಉಚಿತ ಮನೆ ಯೋಜನೆ! ಬಿಪಿಎಲ್ ಕಾರ್ಡ್ ಇರೋರು ಅರ್ಜಿ ಸಲ್ಲಿಸಿ; ಸರ್ಕಾರದಿಂದ ಬಂಪರ್ ಸ್ಕೀಮ್

Education Scholarshipವಿದ್ಯಾರ್ಥಿಗಳಿಗೆ ಈ ಸ್ಕಾಲರ್ಶಿಪ್ ಸೌಲಭ್ಯ ಯಾವಾಗ ಸಿಗುತ್ತದೆ ಎಂದು ನೋಡುವುದಾದರೆ, ಸರ್ಕಾರಿ ಕಾಲೇಜಿನಲ್ಲಿ ಮೊದಲ ವರ್ಷ ಪದವಿಗೆ ಸೇರಿಕೊಂಡ ಬಳಿಕ, ಅವರು ಕೊನೆಯ ಸೆಮಿಸ್ಟರ್ ನಲ್ಲಿ ಇದ್ದಾಗ, 17,000 ರೂಪಾಯಿವರೆಗು ಸಹಾಯ ಧನ ಪಡೆಯಬಹುದು.

Crisp ಯೋಜನೆಯಲ್ಲಿ ಮೊದಲಿಗೆ ಬಿಕಾಮ್, ಬಿಬಿಎ, ಬಿಎಸ್ಸಿ, ಬಿಬಿಎಂ ಮಾಡುತ್ತಿರುವರಿಗೆ ಈ ಸ್ಕಾಲರ್ಶಿಪ್ ಸೌಲಭ್ಯ ಸಿಗಲಿದೆ. ಈ ವಿದ್ಯಾರ್ಥಿಗಳು ಮೆಡಿಸಿನ್ ತಯಾರಿಕೆ, ಇನ್ಫರ್ಮೇಷನ್ ಟೆಕ್ನಾಲಜಿ, ಫೈನಾನ್ಸ್, ಜೀವ ವಿಮೆ, ಫ್ಯಾಶನ್ ಡಿಸೈನಿಂಗ್ ಈ ಎಲ್ಲಾ ವಿಷಯಗಳ ಬಗ್ಗೆ ತರಬೇತಿ ಪಡೆದುಕೊಳ್ಳಬಹುದು.

ಇದು ವಿಶೇಷವಾಗಿ ಎಲ್ಲಾ ವಿದ್ಯಾರ್ಥಿಗಳು ತಮ್ಮ ಕೌಶಲ್ಯತೆಯನ್ನು ಹೆಚ್ಚಿಸಿಕೊಳ್ಳಲಿ ಎಂದು ಜಾರಿಗೆ ತಂದಿರುವ ಕೋರ್ಸ್ ಗಳಾಗಿದ್ದು, ಇವುಗಳ ಮೂಲಕ ವಿದ್ಯಾರ್ಥಿಗಳ ಕೆರಿಯರ್ ರೂಪಿಸಿಕೊಳ್ಳಲು ಸಹಾಯ ಆಗುತ್ತದೆ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು.

ಜುಲೈ 1ರಿಂದ ಗ್ಯಾಸ್ ಸಿಲಿಂಡರ್, ಕ್ರೆಡಿಟ್ ಕಾರ್ಡ್ ಸೇರಿದಂತೆ ಜಾರಿಗೆ ಬರಲಿದೆ ಹೊಸ ನಿಯಮಗಳು!

ಅರ್ಜಿ ಸಲ್ಲಿಕೆ ಯಾವಾಗಿನಿಂದ?

ಕಷ್ಟದಲ್ಲಿದ್ದು, ಸರ್ಕಾರಿ ಕಾಲೇಜ್ ನಲ್ಲಿದ್ದು ಒಳ್ಳೆಯ ವೃತ್ತಿಪರ ಕೋರ್ಸ್ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಜಾರಿಗೆ ತಂದಿರುವ ಈ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂನ್ 30ರಿಂದ ಶುರುವಾಗಿದೆ, ಆಗಸ್ಟ್ ತಿಂಗಳ ವರೆಗು ಕೊನೆಯ ದಿನಾಂಕ ಇದ್ದು, ಅಲ್ಲಿಯವರೆಗೂ ವಿದ್ಯಾರ್ಥಿಗಳು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.

Such government college students will get 17,000 Education scholarship

Our Whatsapp Channel is Live Now 👇

Whatsapp Channel

Related Stories