Business News

ಸ್ವಂತ ಬ್ಯುಸಿನೆಸ್ ಶುರು ಮಾಡೋಕೆ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗೂ ಸಾಲ! ಬಂಪರ್ ಕೊಡುಗೆ

Loan : ಮಧ್ಯಮವರ್ಗದ ಕುಟುಂಬದಲ್ಲಿ ಜನಿಸಿದವರಿಗೆ ಒಳ್ಳೆಯ ಕೆಲಸ ಪಡೆಯಬೇಕು ಅಥವಾ ಸ್ವಂತ ಬ್ಯುಸಿನೆಸ್ ಶುರು (Own Business) ಮಾಡಬೇಕು ಎಂದು ಆಸೆ ಇರುತ್ತದೆ. ಅಂಥವರಿಗೆ ಈಗ ಕೇಂದ್ರ ಸರ್ಕಾರದ ವತಿಯಿಂದ ಒಂದು ಯೋಜನೆಯನ್ನು ಜಾರಿಗೆ ತರಲಾಗಿದೆ.

ಇದರಿಂದ ಜನರು ಸ್ವಂತ ಉದ್ಯಮ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ಆರ್ಥಿಕ ಸಹಾಯ ಸಿಗಲಿದೆ. ಈ ಯೋಜನೆ ಯಾವುದು? ಇದರಿಂದ ಆರ್ಥಿಕ ಸಹಾಯ ಪಡೆಯುವುದು ಹೇಗೆ? ತಿಳಿಯೋಣ…

Those who want to start their own business will get a loan of up to 3 lakhs

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯ ಹೆಸರು ಪಿಎಂ ವಿಶ್ವಕರ್ಮ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಕುಶಲಕರ್ಮಿಗಳಿಗೆ ಮತ್ತು ಕೆಲಸ ಮಾಡಲು ಆಸಕ್ತಿ ಇರುವವರಿಗೆ 7 ದಿನಗಳ ಕಾಲ ತರಬೇತಿ ನೀಡಿ, ಜೊತೆಗೆ ಕೆಲಸಕ್ಕೆ ಬೇಕಿರುವ ಯಂತ್ರಗಳನ್ನು ಖರೀದಿ ಮಾಡುವುದಕ್ಕೆ ₹15,000 ರೂಪಾಯಿಗಳನ್ನು ಕೂಡ ಕೊಡಲಾಗುತ್ತದೆ.

ಜೊತೆಗೆ, 5% ಬಡ್ಡಿದರದಲ್ಲಿ 3 ಲಕ್ಷದವರೆಗೂ ಬ್ಯುಸಿನೆಸ್ ಶುರು ಮಾಡುವುದಕ್ಕೆ ಸಾಲ (Business Loan) ಕೊಡಲಾಗುತ್ತದೆ. ಈ ಯೋಜನೆಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯೋಣ..

ಇಂತಹ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಸಿಗಲಿದೆ ₹17,000 ಸ್ಕಾಲರ್ಶಿಪ್! ಇಂದೇ ಅಪ್ಲೈ ಮಾಡಿ

ಅರ್ಜಿ ಸಲ್ಲಿಸಲು ಬೇಕಿರುವ ಅರ್ಹತೆ:

*18 ವರ್ಷ ಮೇಲ್ಪಟ್ಟ ವ್ಯಕ್ತಿಗಳು ಯಾರೇ ಇದ್ದರೂ ಅರ್ಜಿ ಸಲ್ಲಿಸಬಹುದು.

*ಒಂದು ಮನೆಯಲ್ಲಿ ಒಬ್ಬರು ಮಾತ್ರ ಅರ್ಜಿ ಸಲ್ಲಿಸಬಹುದು.

*ಅರ್ಜಿ ಹಾಕುವವರ ಮನೆಯಲ್ಲಿ ಯಾರಿಗೂ ಕೂಡ ಸರ್ಕಾರಿ ಕೆಲಸ ಇರಬಾರದು.

*ಅರ್ಜಿ ಹಾಕುವವರ ಬಳಿ ಬಿಪಿಎಲ್ ರೇಷನ್ ಕಾರ್ಡ್ ಇರುವುದು ಕಡ್ಡಾಯ ಆಗಿದೆ.

*ಅರ್ಜಿ ಹಾಕುವವರು ಈ ಮೊದಲು ಇಂಥ ಯಾವುದೇ ಯೋಜನೆ ಇಂದ ಸಾಲ ಪಡೆದಿರಬಾರದು.

*ಇವರ ಕುಟುಂಬದ ವಾರ್ಷಿಕ ಆದಾಯ 2.5 ಲಕ್ಷಕ್ಕಿಂತ ಕಡಿಮೆ ಇರಬೇಕು.

ಆಧಾರ್ ಕಾರ್ಡ್ ಇದ್ರೆ ಸಾಕು ಸಿಗಲಿದೆ ₹10,000 ರೂಪಾಯಿವರೆಗೂ ಸಾಲ! ಪಡೆಯಿರಿ ಆಧಾರ್ ಲೋನ್

Govt Schemeಬೇಕಾಗುವ ದಾಖಲೆಗಳು:

ಪಿಎಮ್ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು ಯಾವುವು ಎಂದು ನೋಡುವುದಾದರೆ..
*ಆಧಾರ್ ಕಾರ್ಡ್
*ರೇಷನ್ ಕಾರ್ಡ್
*ಫೋನ್ ನಂಬರ್
*ಉದ್ಯೋಗದ ಸರ್ಟಿಫಿಕೇಟ್
*ಬ್ಯಾಂಕ್ ಪಾಸ್ ಬುಕ್
*ಪಾಸ್ ಪೋರ್ಟ್ ಸೈಜ್ ಫೋಟೋ

ಉಚಿತ ಮನೆ ಯೋಜನೆ! ಬಿಪಿಎಲ್ ಕಾರ್ಡ್ ಇರೋರು ಅರ್ಜಿ ಸಲ್ಲಿಸಿ; ಸರ್ಕಾರದಿಂದ ಬಂಪರ್ ಸ್ಕೀಮ್

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

ಪಿಎಮ್ ವಿಶ್ವಕರ್ಮ ಯೋಜನೆಯ ಮೂಲಕ Loan ಪಡೆಯಬೇಕು ಎಂದರೆ, ಎಲ್ಲಾ ಅಗತ್ಯ ದಾಖಲೆಗಳ ಜೊತೆಗೆ ನಿಮಗೆ ಹತ್ತಿರ ಇರುವ ಆನ್ಲೈನ್ ಸೆಂಟರ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ಅಥವಾ
https://pmvishwakarma.gov.in/login ಈ ಲಿಂಕ್ ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು. ವಿಶ್ವಕರ್ಮ ಯೋಜನೆಯ ಅಡಿಯಲ್ಲಿ ತರಬೇತಿ ಪಡೆದು, 15,000 ಸಹಾಯ ಪಡೆಯಬಹುದು. ಜೊತೆಗೆ ಕಡಿಮೆ ಬಡ್ಡಿಯಲ್ಲಿ 3 ಲಕ್ಷದವರೆಗು Loan ಪಡೆಯಬಹುದು.

Those who want to start their own business will get a loan of up to 3 lakhs

Our Whatsapp Channel is Live Now 👇

Whatsapp Channel

Related Stories