ಉಚಿತ ಗ್ಯಾಸ್ ಕನೆಕ್ಷನ್ ಪಡೆಯಲು ಮತ್ತೊಮ್ಮೆ ಅವಕಾಶ! 2ನೇ ಹಂತದ ಅರ್ಜಿ ಸಲ್ಲಿಕೆ ಶುರು

ಈ ಒಂದು ಯೋಜನೆಯ ಮೂಲಕ ದೇಶದ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (Free Gas Connection) ಸಿಗುತ್ತಿದೆ.

- - - - - - - - - - - - - Story - - - - - - - - - - - - -

ಕೇಂದ್ರ ಸರ್ಕಾರವು ನಮ್ಮ ದೇಶದ ಹಳ್ಳಿಗಳಲ್ಲಿ ಇರುವ ಜನರು ಅಡುಗೆ ವಿಚಾರಕ್ಕೆ ಯಾವುದೇ ರೀತಿಯ ಸಮಸ್ಯೆಗಳನ್ನು ಎದುರಿಸದೇ ಇರಲಿ, ಅವರೆಲ್ಲರು ಒಲೆಗಳಲ್ಲಿ ಅಡುಗೆ ಮಾಡಿ, ಹೊಗೆಯಿಂದ ಆರೋಗ್ಯದಲ್ಲಿ ಸಮಸ್ಯೆ ಉಂಟಾಗದೇ ಇರಲಿ ಎಂದು ದೇಶದ ಪ್ರಧಾನಮಂತ್ರಿ ಪಿಎಮ್ ನರೇಂದ್ರ ಮೋದಿ ಅವರು 2016ರಲ್ಲಿ ಉಜ್ವಲಾ ಯೋಜನೆಯನ್ನು ಜಾರಿಗೆ ತಂದರು.

ಈ ಒಂದು ಯೋಜನೆಯ ಮೂಲಕ ದೇಶದ ಜನರಿಗೆ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ (Free Gas Connection) ಸಿಗುತ್ತಿದೆ.

ಕೂಲಿ ಕಾರ್ಮಿಕರಿಗೆ ಒಲಿದು ಬಂತು ಅದೃಷ್ಟ! ಇನ್ಮುಂದೆ ಸಿಗಲಿದೆ ತಿಂಗಳಿಗೆ ₹3000 ಮಾಸಿಕ ಪಿಂಚಣಿ

Big update from the center for LPG gas cylinder users

ಹಳ್ಳಿ ಜನರಿಗಾಗಿ ಜಾರಿಗೆ ಬಂದ ಯೋಜನೆ

ಸಣ್ಣ ಸಣ್ಣ ಹಳ್ಳಿಗಳಲ್ಲಿ ಕೂಡ ಈ ಯೋಜನೆಯ ಸೌಲಭ್ಯ ಸಿಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶ ಆಗಿದ್ದು, ಉಜ್ವಲಾ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ (Gas Cylinder) ಜೊತೆಗೆ ಪ್ರತಿ ತಿಂಗಳು ಗ್ಯಾಸ್ ಸಿಲಿಂಡರ್ ಪಡೆಯಲು ಸಬ್ಸಿಡಿಯನ್ನು (Gas Subsidy) ಸಹ ನೀಡಲಾಗುತ್ತದೆ. ಹಾಗಾಗಿ ಇದು ಹಳ್ಳಿಗಳಲ್ಲಿ ವಾಸ ಮಾಡುವ ಜನರಿಗೆ ಹೆಚ್ಚಿಗೆ ಅನುಕೂಲ ಮಾಡಿಕೊಡುತ್ತಿದೆ. ಇದರಿಂದಾಗಿ ಹಳ್ಳಿಯ ಜನರು ತೊಂದರೆ ಇಲ್ಲದೇ ಅಡುಗೆ ಮಾಡಬಹುದು.

2016ರಲ್ಲಿ ಈ ಯೋಜನೆ ಜಾರಿಗೆ ಬಂದು, ಈಗಾಗಲೇ 1 ಕೋಟಿಗಿಂತ ಹೆಚ್ಚು ಫಲಾನುಭವಿಗಳು ಈ ಯೋಜನೆಯ ಮೂಲಕ ಉಚಿತವಾಗಿ ಗ್ಯಾಸ್ ಸಿಲಿಂಡರ್ ಕನೆಕ್ಷನ್ ಪಡೆದಿದ್ದಾರೆ. ಇದೀಗ ಉಜ್ವಲಾ ಯೋಜನೆಯ 2ನೇ ಹಂತದ ಪ್ರಕ್ರಿಯೆ ಶುರುವಾಗಿದ್ದು, ಇನ್ನು ಕೂಡ ಯಾರೆಲ್ಲಾ ಈ ಯೋಜನೆಯ ಮೂಲಕ ಉಚಿತ ಗ್ಯಾಸ್ ಸಿಲಿಂಡರ್ ಪಡೆಯಬೇಕು ಎಂದುಕೊಂಡಿದ್ದೀರೋ ಅವರೆಲ್ಲರೂ ಸಹ ಸರ್ಕಾರದಿಂದ ಅಧಿಕೃತ ಮಾಹಿತಿ ಸಿಗುತ್ತಿದ್ದ ಹಾಗೆ ಉಜ್ವಲಾ ಯೋಜನೆಗೆ ಅಪ್ಲೈ ಮಾಡಬಹುದು. ಈ ಪ್ರಕ್ರಿಯೆ ಹೇಗೆ ನಡೆಯುತ್ತದೆ ಎಂದು ತಿಳಿಸುತ್ತೇವೆ ನೋಡಿ…

ಈ ಯೋಜನೆಯಲ್ಲಿ ಕೌಶಲ್ಯ ತರಬೇತಿ ಜೊತೆಗೆ ಸಿಗಲಿದೆ ₹8000! ಕೇಂದ್ರದಿಂದ ಸೂಪರ್ ಯೋಜನೆ

ಪಿಎಮ್ ಉಜ್ವಲಾ ಯೋಜನೆಯ ಅರ್ಹತೆ

*ಪಿಎಮ್ ಉಜ್ವಲಾ ಯೋಜನೆಯ 2ನೇ ಹಂತದಲ್ಲಿ ಅರ್ಜಿ ಸಲ್ಲಿಸಲು ಮಹಿಳೆಯರಿಗೆ ಮಾತ್ರ ಅರ್ಹತೆ ಇರಲಿದೆ.

*ಅರ್ಜಿ ಸಲ್ಲಿಸುವ ಮಹಿಳೆ ಭಾರತ ದೇಶದವರೇ ಆಗಿದ್ದು, ಅವರ ವಯಸ್ಸು 18 ವರ್ಷ ತುಂಬಿರಬೇಕು.

*ಹಳ್ಳಿಯಿಂದ ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ 1 ಲಕ್ಷಕ್ಕಿಂತ ಕಡಿಮೆ ಇರಬೇಕು, ಸಿಟಿ ಇಂದ ಅರ್ಜಿ ಸಲ್ಲಿಸುವವರ ವಯಸ್ಸು 2 ಲಕ್ಷಕ್ಕಿಂತ ಕಡಿಮೆ ಇರಬೇಕು.

*ಅರ್ಜಿ ಹಾಕುವ ವ್ಯಕ್ತಿಯ ಕುಟುಂಬದ ಮತ್ಯಾರು ಕೂಡ ಈ ಯೋಜನೆಯ ಸೌಲಭ್ಯ ಪಡೆದುಕೊಂಡಿರಬಾರದು.

Gas Cylinderಅಗತ್ಯವಿರುವ ದಾಖಲೆ:

*ಆಧಾರ್ ಕಾರ್ಡ್

*ಅಡ್ರೆಸ್ ಪ್ರೂಫ್

*ರೇಷನ್ ಕಾರ್ಡ್

*ಬ್ಯಾಂಕ್ ಪಾಸ್ ಬುಕ್

*ಫೋನ್ ನಂಬರ್

*ಪಾಸ್ ಪೋರ್ಟ್ ಸೈಜ್ ಫೋಟೋ

ನಿಮ್ಮ ಮಗಳ ಮದುವೆಗೆ ಸಿಗಲಿದೆ ₹60,000! ಕೇಂದ್ರ ಸರ್ಕಾರದ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಕೆ ಪ್ರಕ್ರಿಯೆ:

* https://www.pmuy.gov.in/ ಈ ಲಿಂಕ್ ಓಪನ್ ಮಾಡಿ

* ಹೋಮ್ ಪೇಜ್ ನಲ್ಲಿ ಪಿಎಮ್ ಉಜ್ವಲಾ ಯೋಜನೆ 2.0 ಗೆ ಅಪ್ಲೈ ಮಾಡಿ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ಈಗ ಯೋಜನೆಯ ಬಗ್ಗೆ ಎಲ್ಲಾ ಮಾಹಿತಿ ಬರುತ್ತದೆ, ಅದನ್ನೆಲ್ಲಾ ಸರಿಯಾಗಿ ಓದಿ

*ಪೇಜ್ ನ ಪೂರ್ತಿ ಕೆಳಗೆ ಆನ್ಲೈನ್ ಪೋರ್ಟಲ್ ಎನ್ನುವ ಆಪ್ಶನ್ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ

*ಅಲ್ಲಿ ಬರುವ ಲಿಸ್ಟ್ ಇಂದ ಗ್ಯಾಸ್ ಕಂಪನಿಯನ್ನು ಸೆಲೆಕ್ಟ್ ಮಾಡಿ

*ಬಳಿಕ ನಿಮ್ಮ ಫೋನ್ ನಂಬರ್ ಹಾಗೂ OTP ಇಂದ ಲಾಗಿನ್ ಮಾಡಿ. ಬಳಿಕ ಅಪ್ಲಿಕೇಶನ್ ಫಾರ್ಮ್ ಬರುತ್ತದೆ.

*ಅಲ್ಲಿ ಕೇಳುವ ಎಲ್ಲಾ ಮಾಹಿತಿಗಳನ್ನು ಫಿಲ್ ಮಾಡಿ.

*ಮಾಹಿತಿ ಎಲ್ಲವೂ ಸರಿ ಇದೆಯಾ ಎಂದು ಚೆಕ್ ಮಾಡಿ, ಮಂದೆ ಅಗತ್ಯವಿದೆ ಎನ್ನುವುದರಿಂದ, ಅಪ್ಲಿಕೇಶನ್ ಫಾರ್ಮ್ ಪ್ರಿಂಟೌಟ್ ಪಡೆಯಿರಿ.

ಕೊಂಚ ತಗ್ಗಿದ್ದ ಚಿನ್ನದ ಬೆಲೆ ಮತ್ತೂಮ್ಮೆ ಏರಿಕೆ, ವೀಕೆಂಡ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಡೀಟೇಲ್ಸ್

get free gas connection, 2nd stage application submission has started

Related Stories