ತಿಂಗಳಿಗೆ ₹3000 ಪಿಂಚಣಿ ಸಿಗುತ್ತೆ! ಶ್ರಮ ಯೋಗಿ ಯೋಜನೆಗೆ ಈಗಲೇ ಅರ್ಜಿ ಹಾಕಿ - Pension Scheme
ಅಸಂಘಟಿತ ವಲಯದ ಕಾರ್ಮಿಕರಿಗೆ ವೃದ್ಧಾಪ್ಯದಲ್ಲಿ ಆರ್ಥಿಕ ಭದ್ರತೆ ನೀಡುವ ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್‌ಧನ್ ಯೋಜನೆ, ಕಡಿಮೆ ಹೂಡಿಕೆಯಿಂದ ತಿಂಗಳಿಗೆ ₹3000 ಪಿಂಚಣಿ ನೀಡಲಿದೆ.

- ಶ್ರಮ ಯೋಗಿ ಯೋಜನೆಗೆ ಅರ್ಜಿ ಸಲ್ಲಿಸಿ, ₹3000 ಪಿಂಚಣಿ ಪಡೆಯಿರಿ
- ಅಸಂಘಟಿತ ವಲಯದ ಕಾರ್ಮಿಕರಿಗೆ ಆರ್ಥಿಕ ಬಲ
- ಸೇವಾ ಕೇಂದ್ರ ಅಥವಾ ಆನ್‌ಲೈನ್ ಮೂಲಕ ನೋಂದಣಿ ಸಾಧ್ಯ
Pension Scheme : ಆರ್ಥಿಕ ಬಿಕ್ಕಟ್ಟಿನ ನಡುವೆ ವಯೋವೃದ್ಧರಿಗಾಗಿ ಭಾರತ ಸರ್ಕಾರ ಶ್ರಮಯೋಗಿ ಮಾನ್‌ಧನ್ ಯೋಜನೆ ರೂಪಿಸಿದ್ದು, ಈ ಯೋಜನೆಯ ಲಾಭ ಪಡೆದರೆ ವೃದ್ಧಾಪ್ಯದಲ್ಲಿ ತಿಂಗಳಿಗೆ ₹3000 ಪಿಂಚಣಿ ಭದ್ರವಾಗಿರುತ್ತದೆ.
2019 ರಲ್ಲಿ ಆರಂಭವಾದ ಈ ಯೋಜನೆಯ ಉದ್ದೇಶ ಅಸಂಘಟಿತ ವಲಯದ ಕಾರ್ಮಿಕರಿಗೆ ಪಿಂಚಣಿ ಭದ್ರತೆ ನೀಡುವುದು. ಬೀದಿ ವ್ಯಾಪಾರಿ, ರಿಕ್ಷಾ ಚಾಲಕ, ಕೃಷಿ ಕಾರ್ಮಿಕ, ಬೀಡಿ ಕಾರ್ಮಿಕ, ಕಟ್ಟಡ ಕಾರ್ಮಿಕರು ಈ ಯೋಜನೆಯ ಪ್ರಮುಖ ಫಲಾನುಭವಿಗಳು.
ಈ ಯೋಜನೆಗೆ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆ ಇದ್ದರೆ ಸಾಕು. ಹತ್ತಿರದ CSC ಕೇಂದ್ರದಲ್ಲಿ ಅಥವಾ https://maandhan.in ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ನೋಂದಣಿಯ ನಂತರ ಶ್ರಮಯೋಗಿ ಕಾರ್ಡ್ ಹಾಗೂ ಖಾತೆ ಸಂಖ್ಯೆ ಸಿಗುತ್ತದೆ.
ಇದನ್ನೂ ಓದಿ: ರೈತರಿಗೆ ಹೈನುಗಾರಿಕೆ ಸಾಲ, ಡೇರಿ ಉದ್ಯಮಕ್ಕೆ 25 ಲಕ್ಷವರೆಗೆ ಸಬ್ಸಿಡಿ ಲೋನ್ ಸೌಲಭ್ಯ
ಯೋಜನೆಯ ಮತ್ತೊಂದು ವಿಶೇಷತೆ ಅಂದರೆ, ಪತಿ ಅಥವಾ ಪತ್ನಿಯು ಮೃತರಾದರೆ ಅವರ ಬದಲಿ 50% ಪಿಂಚಣಿಯನ್ನು ಇನ್ನೊಬ್ಬರಿಗೆ ನೀಡಲಾಗುತ್ತದೆ. ಜೊತೆಗೆ, LIC ಮತ್ತು CSC ಸಂಸ್ಥೆಗಳು ಈ ಯೋಜನೆಯ ನಿರ್ವಹಣೆಯನ್ನು ಮಾಡುತ್ತಿವೆ.
ಈ ಯೋಜನೆಗೆ 18 ರಿಂದ 40 ವರ್ಷದೊಳಗಿನವರು ಅರ್ಹರು. ಅವರ ಮಾಸಿಕ ಆದಾಯ ₹15,000 ಕ್ಕಿಂತ ಕಡಿಮೆ ಇರಬೇಕು. ಪಾವತಿಯು ವಯಸ್ಸಿನ ಆಧಾರದ ಮೇಲೆ ಬದಲಾಗುತ್ತದೆ:
18 ವರ್ಷ: ₹55/ತಿಂಗಳು
29 ವರ್ಷ: ₹100/ತಿಂಗಳು
40 ವರ್ಷ: ₹200/ತಿಂಗಳು ಹೂಡಿಕೆ ಮಾಡಬೇಕಾಗುತ್ತದೆ.
60 ವರ್ಷ ತಲುಪಿದ ಬಳಿಕ, ಸರ್ಕಾರಿ ಸಹಾಯಧನದೊಂದಿಗೆ ತಿಂಗಳಿಗೆ ₹3000 ಪಿಂಚಣಿಯನ್ನು ಪಡೆಯಬಹುದು. ಈವರೆಗೆ 46 ಲಕ್ಷಕ್ಕೂ ಹೆಚ್ಚು ಜನರು ಯೋಜನೆಗೆ ಸೇರಿದ್ದಾರೆ.
ಇದನ್ನೂ ಓದಿ: ಒಮ್ಮೆ ಹೂಡಿಕೆ ಮಾಡಿದ್ರೆ ತಿಂಗಳಿಗೆ 20,000 ಸಿಗುತ್ತೆ! ಬೆಸ್ಟ್ ಪೋಸ್ಟ್ ಆಫೀಸ್ ಸ್ಕೀಮ್
ಇನ್ನೊಂದು ವಿಶೇಷತೆ, ನೀವು ಕೊಡುವಷ್ಟು ಸರಕಾರವೂ ಕೊಡುಗೆ ನೀಡುತ್ತದೆ! ಆದರೆ, EPFO, NPS ಅಥವಾ ESIC ಸದಸ್ಯರಾಗಿದ್ದರೆ, ಹಾಗೂ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಈ ಯೋಜನೆಗೆ ಅರ್ಹರಾಗುವುದಿಲ್ಲ.
10 ವರ್ಷಗಳಲ್ಲಿ ಯೋಜನೆಯಿಂದ ಹೊರಬರಬೇಕಾದರೆ ಪಾವತಿಸಿದ ಮೊತ್ತವನ್ನು ಬಡ್ಡಿಯೊಂದಿಗೆ ವಾಪಸ್ ಪಡೆಯಬಹುದು. ಇದೊಂದು ನಿಖರವಾಗಿ ಯೋಜಿತ ಪಿಂಚಣಿ ಯೋಜನೆಯಾಗಿದ್ದು, ನಿವೃತ್ತಿ ದಿನಗಳಲ್ಲಿ ಆರ್ಥಿಕವಾಗಿ ಸ್ವತಂತ್ರವಾಗಿ ಬದುಕಲು ಸಹಾಯಕವಾಗುತ್ತದೆ.
Get Monthly Pension with This Simple Government Scheme



