ಹೆಣ್ಣು ಮಕ್ಕಳು ಕಾರ್ ಡ್ರೈವ್ ಮಾಡುವಾಗಲೇ ಅಪಘಾತ ಆಗುವುದು ಜಾಸ್ತಿ! ಯಾಕೆ ಗೊತ್ತಾ?

ಸಾಮಾನ್ಯವಾಗಿ ಡ್ರೈವಿಂಗ್ ಎನ್ನುವುದು ಪುರುಷರಿಗೆ ದೊಡ್ಡ ವಿಷಯವಲ್ಲ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸೈಕಲ್, ಸ್ಕೂಟರ್ ಹೊಡೆಯುವುದನ್ನು ಕಲಿಯುವ ಪುರುಷರು ಸುಲಭವಾಗಿ ಕಾರು ಡ್ರೈವಿಂಗ್ (car Driving) ಕೂಡ ಮಾಡುತ್ತಾರೆ

ಸಾಮಾನ್ಯವಾಗಿ ತಮಾಷೆಗೆ ಹಲವರು ಈ ಮಾತುಗಳನ್ನು ಹೇಳಿಕೊಂಡಿರುವುದನ್ನ ನೀವು ಕೇಳಿರಬಹುದು. ಎಲ್ಲಾದರೂ ರಸ್ತೆಯಲ್ಲಿ ಅಪಘಾತವಾದರೆ ಡ್ರೈವಿಂಗ್ (Car Driving) ಮಾಡ್ತಾ ಇದ್ದವರು ಯಾರು ಮಹಿಳೆಯೊ ಪುರುಷನೋ? ಆಕ್ಸಿಡೆಂಟ್ ಆಗಿದೆ ಅಂದ್ರೆ ಅದು ಮಹಿಳಾ ಡ್ರೈವರ್ ಇರಬೇಕು ಅಂತ ಹಲವರು ತಮಾಷೆ ಮಾಡಿಕೊಳ್ಳುತ್ತಾರೆ

ಕೆಲವೊಮ್ಮೆ ಈ ಮಾತು ಸತ್ಯ ಎನಿಸಿದ್ದು ಇದೆ. ಇತ್ತೀಚಿಗೆ ಕೆಲವು ಸಂಶೋಧನೆಗಳ ಮೂಲಕ ತಿಳಿದುಬಂದಿರುವುದು ಏನೆಂದರೆ, ಪುರುಷರಿಗಿಂತ ಮಹಿಳೆಯರ ಡ್ರೈವಿಂಗ್ ನಲ್ಲಿ ರಸ್ತೆ ಅಪಘಾತಗಳು ಆಗುವುದು ಹೆಚ್ಚು.

ಶೀಘ್ರವೇ ಕೈಗೆಟುಕುವ ಬೆಲೆಯಲ್ಲಿ 4 ಅದ್ಭುತ ಎಲೆಕ್ಟ್ರಿಕ್ ಕಾರುಗಳನ್ನು ಮಹೀಂದ್ರಾ ರಸ್ತೆಗೆ ಇಳಿಸಲಿದೆ! ಇನ್ಮೇಲೆ ಪೈಪೋಟಿ ಶುರು

ಹೆಣ್ಣು ಮಕ್ಕಳು ಕಾರ್ ಡ್ರೈವ್ ಮಾಡುವಾಗಲೇ ಅಪಘಾತ ಆಗುವುದು ಜಾಸ್ತಿ! ಯಾಕೆ ಗೊತ್ತಾ? - Kannada News

ಮಹಿಳೆಯರು ಕೆಟ್ಟ ಚಾಲಕರೇ?

ಈ ಪ್ರಶ್ನೆ ಸಹಜವಾಗಿ ಮೂಡಬಹುದು. ಆದರೆ ಪ್ರತಿಶತ ನೂರರಷ್ಟು ಇದು ಸತ್ಯವಲ್ಲ ಆದರೆ 20- 30% ನಷ್ಟು ಈ ಮಾತು ಸತ್ಯ ಎನ್ನುತ್ತೆ ಸಂಶೋಧನೆ (Research). ಹೆದ್ದಾರಿ ಸುರಕ್ಷತೆಗಾಗಿ ವಿಮಾ ಸಂಸ್ಥೆ (Insurance Company) ಅಂಕಿ ಅಂಶಗಳನ್ನು ತೆರೆದು ನೋಡಿದಾಗ, ಮಹಿಳೆಯರಿಂದಲೇ ಆಕ್ಸಿಡೆಂಟ್ (Accident) ಆಗುವ ಸಾಧ್ಯತೆಗಳು ಹೆಚ್ಚಿವೆ.

ಅತ್ಯುತ್ತಮವಾಗಿ ಡ್ರೈವಿಂಗ್ (Driving) ಬರುವ ಮಹಿಳೆಯರು ಕೂಡ ಸಾಕಷ್ಟು ಜನ ಇದ್ದಾರೆ, ಆದರೆ ಇದರ ನಡುವೆ ಇನ್ನೂ ಹಲವಷ್ಟು ಜನರು ರಸ್ತೆಗೆ ಕಾರು ಇಳಿಯುತ್ತಿದ್ದ ಹಾಗೆ ಕಂಟ್ರೋಲ್ (Control) ತಪ್ಪುತ್ತಾರೆ, ಇದಕ್ಕೆ ಮುಖ್ಯವಾದ ಕಾರಣ ಏನು ಗೊತ್ತಾ?

ಫಾರ್ಚುನರ್ ಮತ್ತು ಮಹೀಂದ್ರಾ ಸ್ಕಾರ್ಪಿಯೊನಂತೆ ಕಾಣುವ ಈ ಎಸ್‌ಯುವಿಯನ್ನು ಕಡಿಮೆ ಬೆಲೆಗೆ ಖರೀದಿಸಿ

ಮಹಿಳೆಯರಿಂದ ಅಪಘಾತಗಳು ಹೆಚ್ಚಾಗುವುದಕ್ಕೆ ಕಾರಣ?

ಸಾಮಾನ್ಯವಾಗಿ ಡ್ರೈವಿಂಗ್ ಎನ್ನುವುದು ಪುರುಷರಿಗೆ ದೊಡ್ಡ ವಿಷಯವಲ್ಲ. ಬಹಳ ಚಿಕ್ಕ ವಯಸ್ಸಿನಲ್ಲಿಯೇ ಸೈಕಲ್, ಸ್ಕೂಟರ್ ಹೊಡೆಯುವುದನ್ನು ಕಲಿಯುವ ಪುರುಷರು ಸುಲಭವಾಗಿ ಕಾರು ಡ್ರೈವಿಂಗ್ (car Driving) ಕೂಡ ಮಾಡುತ್ತಾರೆ

ಆದರೆ ಮಹಿಳೆಯರ ವಿಷಯದಲ್ಲಿ ಹಾಗಲ್ಲ, ಇತ್ತೀಚಿನ ದಿನಗಳಲ್ಲಿ ಚಿಕ್ಕ ಹುಡುಗಿಯರು ಕೂಡ ಕಾರ್ ಡ್ರೈವಿಂಗ್ ಚೆನ್ನಾಗಿ ಕಲಿತಿರುತ್ತಾರೆ ಆದರೆ ಅದೆಷ್ಟೋ ಮಹಿಳೆಯರು ಮದುವೆ ಆದ ನಂತರ ಡ್ರೈವಿಂಗ್ ತರಗತಿಗಳಿಗೆ ಹೋಗಿ ಕಾರ್ ಓಡಿಸುವುದನ್ನು ಕಲಿಯುತ್ತಾರೆ. ಸೈಕಲ್ (Cycle) ಅಥವಾ ಸ್ಕೂಟರ್ (Scooter) ಓಡಿಸಲು ಬಾರದೆ ಇರುವವರು ನೇರವಾಗಿ ಕಾರನ್ನು ಕಲಿಯುತ್ತಾರೆ.

ಡ್ರೈವಿಂಗ್ ತರಗತಿಯಲ್ಲಿ ಕೊಡುವ ಕಾರಿಗೆ ಎರಡು ಕಡೆಯಲ್ಲಿ ಗೇರ್ ಬಾಕ್ಸ್ ಹಾಗೂ ಬ್ರೇಕ್ ಅಳವಡಿಸಲಾಗಿರುತ್ತದೆ. ಹಾಗಾಗಿ ಎಲ್ಲಿ ಬ್ರೇಕ್ ಹಾಕಬೇಕು ಯಾವ ರೀತಿ ಟರ್ನ್ ತೆಗೆದುಕೊಳ್ಳಬೇಕು ಯಾವಾಗ ಗೇರ್ ಅನ್ವಯ ಮಾಡಬೇಕು ಎನ್ನುವುದರ ಬಗ್ಗೆ ಕಾರ್ ಕಲಿಯುವ ಮಹಿಳೆಗೆ ಹೆಚ್ಚಾಗಿ ತಿಳಿಯುವುದಿಲ್ಲ

27km ಮೈಲೇಜ್ ನೀಡುವ ಈ ಕಾರಿನ ಮೇಲೆ 73 ಸಾವಿರ ರೂಗಳ ಡಿಸ್ಕೌಂಟ್, ಈ ಆಫರ್ ಸೆಪ್ಟೆಂಬರ್ 30ರವರೆಗೆ ಮಾತ್ರ !

ಯಾಕೆಂದರೆ ಕಾರಿನ ಸಂಪೂರ್ಣ ನಿಯಂತ್ರಣ ಕಾರು ಕಲಿಸುವ ವ್ಯಕ್ತಿಯ ಕೈಯಲ್ಲಿ ಇರುತ್ತದೆ. ಕಾರು ಕಲಿಸುವಾಗ ತಮ್ಮ ಕಾರಿಗೆ ಡ್ಯಾಮೇಜ್ ಆಗಬಾರದು ಎನ್ನುವ ಕಾರಣಕ್ಕೆ ಹೆಚ್ಚಿನ ಸಮಯ ಕಾರು ಕಲಿಸುವವರೇ ಕಾರನ್ನು ನಿಯಂತ್ರಿಸುತ್ತಾರೆ. ಕಾರು ಓಡಿಸುತ್ತೇನೆ ಎನ್ನುವುದು ಕೇವಲ ಮಹಿಳಾ ಚಾಲಕರ ಭ್ರಮೆ ಆಗಿರುತ್ತದೆ.

Girls are more likely to have accidents while driving a car, Do you know whyಹಂಗೂ ಹಿಂಗೂ ಚಾಲನೆ ಕಲಿತು ರಸ್ತೆಗೆ ಕಾರನ್ನು ಇಳಿಸಿದರೆ ತಾನು ಚೆನ್ನಾಗಿ ಡ್ರೈವಿಂಗ್ ಮಾಡಬಲ್ಲೆ ಎನ್ನುವ ಧೈರ್ಯ ಅವರಲ್ಲಿ ಇರುವುದಿಲ್ಲ. ಆಗಾಗ ಸೀಟ್ ನಿಂದ ಮುಂದೆ ಇಣುಕುವುದು ಬದಿಯಲ್ಲಿ ಎಷ್ಟು ಜಾಗ ಇದೆ ಎಂದು ತಿಳಿದುಕೊಳ್ಳದೆ ಸೈಡ್ ಹೋಗುವುದು ಅಥವಾ ರೈಟ್ ಲೆಫ್ಟ್ ಟರ್ನ್ ತೆಗೆದುಕೊಳ್ಳುವಾಗ ಇಂಡಿಕೇಟರ್ ಹಾಕದೆ ಇರುವುದು, ರಿವರ್ಸ್ ಗೇರ್ ಹಾಕಲು ಬಾರದೇ ಇರುವುದು ಅದೇ ರೀತಿ ಪಾರ್ಕಿಂಗ್ ಸರಿಯಾಗಿ ಮಾಡಲು ಬಾರದೆ ಇರುವುದು ಇಂತಹ ಸಮಸ್ಯೆಗಳು ಎದುರಾಗುತ್ತವೆ. ಮಹಿಳಾ ಚಾಲಕೀಯರು ಕೆಲವೊಮ್ಮೆ ನಿಯಂತ್ರಣ ತಪ್ಪುವುದು ಉಂಟು.

ಮಹಿಳಾ ಚಾಲಕರು (Lady driver) ಸರಿಯಾಗಿ ಗಾಡಿ ಓಡಿಸಿದರು ಕೂಡ ರಿವರ್ಸ್ ಗೇರ್ ಹಾಕುವಲ್ಲಿ ಎಡವುತ್ತಾರೆ. ಅಂತಹ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ (Traffic) ಕೂಡ ಆಗಿರುವ ಅನುಭವ ನಿಮಗೂ ಆಗಿರಬಹುದು.

ಸಕತ್ ವೈಶಿಷ್ಟ್ಯಗಳೊಂದಿಗೆ KTM 390 ಡ್ಯೂಕ್ Bike ಬಿಡುಗಡೆ; ಕೇವಲ ₹4,499 ಕ್ಕೆ ಬುಕ್ ಮಾಡಿಕೊಳ್ಳಿ

ಆರಂಭದಲ್ಲಿಯೇ ಅಂದರೆ ಚಿಕ್ಕ ವಯಸ್ಸಿನಲ್ಲಿಯೇ ವಾಹನ ಓಡಿಸುವುದನ್ನು ಕಲಿತರೆ ಮುಂದೆ ಯಾವುದೇ ಸಮಸ್ಯೆ ಆಗುವುದಿಲ್ಲ, ಆದರೆ ಮದುವೆಯಾದ ನಂತರದ ದಿನಗಳಲ್ಲಿ ಅಥವಾ ಶಿಕ್ಷಣ ಮುಗಿಸಿದ (After Education) ನಂತರದ ದಿನಗಳಲ್ಲಿ 30ರಿಂದ 40 ವರ್ಷ ವಯಸ್ಸಿನಲ್ಲಿ ಕಾರನ್ನು ಕಲಿತು ರಸ್ತೆಗೆ ಇಳಿದರೆ ಇರುವ ಆತ್ಮವಿಶ್ವಾಸದ ಮಟ್ಟ ಬಹಳ ಕಡಿಮೆ ಇರುತ್ತದೆ.

ಮಹಿಳೆಯರಲ್ಲಿ ಉತ್ತಮ ಚಾಲಕರು ಇಲ್ಲ ಎಂದಲ್ಲ, ಇವತ್ತಿನ ದಿನದಲ್ಲಿ ಆಟೋರಿಕ್ಷಾ, ಬಸ್, ಲಾರಿ, ಮೆಟ್ರೋ (Metro) ಗಳನ್ನು ಕೂಡ ಓಡಿಸುವ ಮಹಿಳಾ ಚಾಲಕಿಯರು ಇದ್ದಾರೆ. ಮುಖ್ಯವಾಗಿ ಕಾರನ್ನು ರಸ್ತೆಗಳಿದಾಗ ತಾನು ಓಡಿಸುತ್ತೇನೆ ಎನ್ನುವ ಕಾನ್ಫಿಡೆನ್ಸ್ ಅಥವಾ ಆತ್ಮವಿಶ್ವಾಸ ಬಹಳ ಮುಖ್ಯ.

ಕವಾಸಕಿಯಿಂದ 400cc ವಿಭಾಗದಲ್ಲಿ ಅತ್ಯಂತ ಶಕ್ತಿಶಾಲಿ ಬೈಕ್ ಬಿಡುಗಡೆ, ಬೆಲೆ ಎಷ್ಟು ಗೊತ್ತಾ?

ಈ ರೀತಿ ಮಹಿಳೆಯರು ತಮ್ಮ ಮೇಲೆ ತಾವು ನಂಬಿಕೆ ಇಟ್ಟು ಜಾಗರೂಕರಾಗಿ ಕಾರು ಓಡಿಸಿದರೆ ” ಯಾರು ಡ್ರೈವಿಂಗ್ ಮಾಡ್ತಾ ಇದ್ದಿದ್ದು ಲೇಡಿನ” ಎಂದು ಎಲ್ಲಾ ಸಂದರ್ಭದಲ್ಲಿ ಎಲ್ಲರೂ ಮಾತನಾಡಿಕೊಳ್ಳುವುದು ತಪ್ಪುತ್ತದೆ.

Girls are more likely to have accidents while driving a car, Do you know why

Follow us On

FaceBook Google News

Girls are more likely to have accidents while driving a car, Do you know why