ಚಿನ್ನ ಕೊಳ್ಳುವವರಿಗೆ ಬಂಪರ್ ಅವಕಾಶ, ಚಿನ್ನದ ಬೆಲೆ ಮತ್ತೆ ಕುಸಿತ! ಭರ್ಜರಿ ಇಳಿದ ಚಿನ್ನದ ದರ
Gold Price Today: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಇಳಿಕೆ ಮುಂದುವರಿದಿದೆ. 22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ದರ ಕಡಿಮೆಯಾಗಿದ್ದು, ಬೆಳ್ಳಿ ಬೆಲೆ ಪ್ರಮುಖ ನಗರಗಳಲ್ಲಿ ಗ್ರಾಮ್ ಮಟ್ಟದಲ್ಲಿ ತಗ್ಗಿದೆ.

Gold Price Today: ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ಇಳಿಕೆಯ ಪ್ರವೃತ್ತಿ ಮುಂದುವರಿದಿದ್ದು, ಖರೀದಿದಾರರಿಗೆ ಸ್ವಲ್ಪ ಮಟ್ಟಿನ ನೆಮ್ಮದಿ ಸಿಕ್ಕಿದೆ. ಮಾರ್ಚ್ ತಿಂಗಳ ಆರಂಭದಿಂದಲೇ ಚಿನ್ನದ ದರದಲ್ಲಿ ನಿರಂತರ ಕುಸಿತ ಕಂಡುಬರುತ್ತಿದ್ದು, ಕಳೆದ ಮೂರು ವಾರಗಳಲ್ಲಿ ಒಟ್ಟಾರೆ ಎರಡು ಸಾವಿರ ರೂಪಾಯಿಗಿಂತ ಹೆಚ್ಚು ಇಳಿಕೆ ದಾಖಲಾಗಿದೆ.
ಭಾರತೀಯ ಮಾರುಕಟ್ಟೆಯಲ್ಲಿ ಈಗ 10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಸುಮಾರು 1,33,800 ರೂಪಾಯಿಗೆ ಇಳಿದಿದೆ. ಅದೇ ರೀತಿ 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,45,970 ರೂಪಾಯಿಯಷ್ಟಿದೆ. ಬೆಳ್ಳಿ ದರದಲ್ಲೂ ಇಳಿಕೆ ಮುಂದುವರಿದಿದ್ದು, 100 ಗ್ರಾಂ ಬೆಳ್ಳಿಯ ಬೆಲೆ ಸುಮಾರು 24,500 ರೂಪಾಯಿಯ ಮಟ್ಟದಲ್ಲಿದೆ.
ಬೆಂಗಳೂರಿನಲ್ಲಿ ಕೂಡ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ದಾಖಲಾಗಿದೆ. ಇಲ್ಲಿ 1 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ 13,380 ರೂಪಾಯಿ ಇದ್ದರೆ, 24 ಕ್ಯಾರಟ್ ಚಿನ್ನದ ಬೆಲೆ 14,597 ರೂಪಾಯಿಯಷ್ಟಿದೆ. ಬೆಳ್ಳಿ ದರ ಗ್ರಾಮ್‌ಗೆ ಸುಮಾರು 245 ರೂಪಾಯಿಯ ಮಟ್ಟದಲ್ಲಿದೆ.
ಮಾರ್ಚ್ 22ರ ಚಿನ್ನ ಮತ್ತು ಬೆಳ್ಳಿ ದರ
ಭಾರತದಲ್ಲಿ ಇಂದಿನ ಸರಾಸರಿ ದರಗಳು ಹೀಗಿವೆ
- 24 ಕ್ಯಾರಟ್ ಚಿನ್ನ 1 ಗ್ರಾಂ ದರ ಸುಮಾರು 14,597 ರೂಪಾಯಿ
- 22 ಕ್ಯಾರಟ್ ಚಿನ್ನ 1 ಗ್ರಾಂ ದರ ಸುಮಾರು 13,380 ರೂಪಾಯಿ
- 18 ಕ್ಯಾರಟ್ ಚಿನ್ನ 1 ಗ್ರಾಂ ದರ ಸುಮಾರು 10,948 ರೂಪಾಯಿ
- ಬೆಳ್ಳಿ 1 ಗ್ರಾಂ ದರ ಸುಮಾರು 245 ರೂಪಾಯಿ
ಪ್ರಮುಖ ನಗರಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ
ಬೆಂಗಳೂರು 13,380 ರೂ
ಚೆನ್ನೈ 13,620 ರೂ
ಮುಂಬೈ 13,380 ರೂ
ದೆಹಲಿ 13,395 ರೂ
ಕೋಲ್ಕತಾ 13,380 ರೂ
ಕೇರಳ 13,380 ರೂ
ಅಹ್ಮದಾಬಾದ್ 13,385 ರೂ
ಜೈಪುರ್ 13,395 ರೂ
ಲಕ್ನೋ 13,395 ರೂ
ಭುವನೇಶ್ವರ್ 13,380 ರೂ
ವಿವಿಧ ನಗರಗಳಲ್ಲಿ ಬೆಳ್ಳಿ ಬೆಲೆ
ಬೆಂಗಳೂರು 245 ರೂ
ಚೆನ್ನೈ 250 ರೂ
ಮುಂಬೈ 245 ರೂ
ದೆಹಲಿ 245 ರೂ
ಕೋಲ್ಕತಾ 245 ರೂ
ಕೇರಳ 250 ರೂ
ಅಹ್ಮದಾಬಾದ್ 245 ರೂ
ಜೈಪುರ್ 245 ರೂ
ಲಕ್ನೋ 245 ರೂ
ಭುವನೇಶ್ವರ್ 250 ರೂ
ಪುಣೆ 245 ರೂ
ಗಮನಿಸಿ ಈ ದರಗಳು ಪ್ರಮುಖ ಆಭರಣ ಅಂಗಡಿಗಳಿಂದ ಸಂಗ್ರಹಿಸಿದ ಅಂದಾಜು ಮಾಹಿತಿಯಾಗಿದ್ದು, ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್ ಸೇರಿಸಿದ ನಂತರ ಅಂತಿಮ ಬೆಲೆ ಬದಲಾಗಬಹುದು.
22 ಕ್ಯಾರಟ್ ಮತ್ತು 24 ಕ್ಯಾರಟ್ ಚಿನ್ನದ ವ್ಯತ್ಯಾಸ
24 ಕ್ಯಾರಟ್ ಚಿನ್ನವನ್ನು ಅತ್ಯಂತ ಶುದ್ಧವಾದ ಚಿನ್ನ ಎಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಸುಮಾರು 99.9 ಶೇಕಡಾ ಶುದ್ಧ ಚಿನ್ನವಿರುತ್ತದೆ. ಆದ್ದರಿಂದ ಇದು ಹೂಡಿಕೆ ಅಥವಾ ಚಿನ್ನದ ಬಾರ್ ಹಾಗೂ ನಾಣ್ಯ ರೂಪದಲ್ಲಿ ಹೆಚ್ಚು ಬಳಸಲಾಗುತ್ತದೆ. ಆದರೆ 24 ಕ್ಯಾರಟ್ ಚಿನ್ನ ಮೃದುವಾಗಿರುವುದರಿಂದ ಆಭರಣ ತಯಾರಿಕೆಗೆ ಹೆಚ್ಚು ಬಳಸುವುದಿಲ್ಲ.
ಇದರ ವಿರುದ್ಧವಾಗಿ 22 ಕ್ಯಾರಟ್ ಚಿನ್ನದಲ್ಲಿ ಸುಮಾರು 91.6 ಶೇಕಡಾ ಚಿನ್ನವಿದ್ದು, ಉಳಿದ ಭಾಗದಲ್ಲಿ ಬೆಳ್ಳಿ, ತಾಮ್ರ ಮುಂತಾದ ಲೋಹಗಳನ್ನು ಸೇರಿಸಲಾಗುತ್ತದೆ. ಈ ಕಾರಣದಿಂದ ಇದು ಹೆಚ್ಚು ಬಲಿಷ್ಠವಾಗಿದ್ದು, ಆಭರಣ ತಯಾರಿಕೆಗೆ ಬಳಸಲು ಸೂಕ್ತವಾಗುತ್ತದೆ. ಸಾಮಾನ್ಯವಾಗಿ ಮದುವೆ ಹಾಗೂ ದಿನನಿತ್ಯ ಧರಿಸುವ ಆಭರಣಗಳಲ್ಲಿ 22 ಕ್ಯಾರಟ್ ಚಿನ್ನವೇ ಹೆಚ್ಚು ಬಳಕೆಯಲ್ಲಿದೆ.





