ಚಿನ್ನದ ಬೆಲೆ ಮತ್ತಷ್ಟು ಏರಿಕೆ, ಖರೀದಿಗೆ ಜನ ಕಂಗಾಲು! ಬೆಂಗಳೂರು ಲೇಟೆಸ್ಟ್ ದರಗಳು ಇಲ್ಲಿವೆ

Gold Rate: ಚಿನ್ನದ ಬೆಲೆಗಳು ಮತ್ತೊಮ್ಮೆ ಏರಿಕೆ ಕಂಡಿದ್ದು, ಸಾಮಾನ್ಯರಿಗೆ ಖರೀದಿ ಕಷ್ಟವಾಗಿದೆ. ಅಂತರಾಷ್ಟ್ರೀಯ ಅಸ್ಥಿರತೆ, ಅಮೆರಿಕಾ ಹಣಕಾಸು ನೀತಿ ಮತ್ತು ಮಾರುಕಟ್ಟೆ ಒತ್ತಡದಿಂದ ಚಿನ್ನ-ಬೆಳ್ಳಿ ದರಗಳು ದಾಖಲೆ ಮಟ್ಟಕ್ಕೆ ಏರಿವೆ.

Gold Price Today : ಬೆಂಗಳೂರು ಸೇರಿದಂತೆ ಭಾರತದ ಅನೇಕ ನಗರಗಳಲ್ಲಿ ಬುಧವಾರ ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆಗಳು ಏರಿಕೆ ಕಂಡಿವೆ. ಚಿನ್ನ ಖರೀದಿ ಮಾಡಲು ಮುಂದಾಗಿರುವವರು ಇದೀಗ ಹೊಸ ಶಾಕ್ನಲ್ಲಿ ಮುಳುಗಿದ್ದಾರೆ. 24 ಕ್ಯಾರೆಟ್ ಚಿನ್ನದ 10 ಗ್ರಾಂ ದರವು ₹1,22,030 ತಲುಪಿದ್ದು, ಹಿಂದಿನ ದಿನಕ್ಕಿಂತ ₹10 ರೂಪಾಯಿ ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ ₹1,11,860 ಆಗಿದೆ.

ಬೆಳ್ಳಿ ಬೆಲೆಗಳೂ ಸಹ ಏರಿಕೆಯನ್ನು ಮುಂದುವರಿಸಿಕೊಂಡಿವೆ. ಕಿಲೋ ಬೆಳ್ಳಿ ದರವು ₹1,57,100 ತಲುಪಿದೆ. ಬೆಲೆ ಏರಿಕೆಯಿಂದ ಆಭರಣ ವ್ಯಾಪಾರಿಗಳು ಮತ್ತು ಖರೀದಿದಾರರು ಇಬ್ಬರೂ ಸವಾಲಿನ ಸ್ಥಿತಿಯಲ್ಲಿದ್ದಾರೆ.

ಜಾಗತಿಕ ಮಟ್ಟದಲ್ಲಿ ಅಮೆರಿಕಾದ ಹಣಕಾಸು ನೀತಿಗಳ ಬದಲಾವಣೆ, ಫ್ರಾನ್ಸ್‌ನ ರಾಜಕೀಯ ಅಸ್ಥಿರತೆ ಹಾಗೂ ಜಪಾನ್ ಬಾಂಡ್ ಬಡ್ಡಿದರ ಏರಿಕೆಗಳ ಪರಿಣಾಮವಾಗಿ ಚಿನ್ನದ ದರದಲ್ಲಿ ನಿರಂತರ ಏರಿಕೆ ಕಾಣುತ್ತಿದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತಿದ್ದಾರೆ.

ಇದನ್ನೂ ಓದಿ: ಜಿರೋ ಬ್ಯಾಲೆನ್ಸ್! ಈ ಬ್ಯಾಂಕಿನಲ್ಲಿ ಖಾತೆ ಇದ್ದರೆ ಕನಿಷ್ಠ ಬ್ಯಾಲೆನ್ಸ್ ಅಗತ್ಯವಿಲ್ಲ

ಚಿನ್ನದ ಬೆಲೆ

ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿಯೂ ಚಿನ್ನದ ದರಗಳು ಇದೇ ಮಟ್ಟದಲ್ಲಿ ಇವೆ. ಮುಂಬೈ, ದೆಹಲಿ ಹಾಗೂ ಚೆನ್ನೈಯಲ್ಲಿ ಸಹ ಚಿನ್ನದ ಬೆಲೆಗಳು ಸುಮಾರು ₹1.22 ಲಕ್ಷದ ಸುತ್ತ ತಿರುಗುತ್ತಿವೆ. ಆದರೆ ಸ್ಥಳೀಯ ಬೇಡಿಕೆ, ರಾಜ್ಯ ತೆರಿಗೆ ಮತ್ತು ಪೂರೈಕೆ ಅಂಶಗಳ ಪ್ರಕಾರ ಸ್ವಲ್ಪ ವ್ಯತ್ಯಾಸ ಕಂಡುಬರುತ್ತದೆ.

ಬೆಂಗಳೂರು (Bengaluru) ಮಾರುಕಟ್ಟೆಯೂ ಈ ಏರಿಕೆಯಿಂದ ಹೊರತಾಗಿಲ್ಲ. ಇಲ್ಲಿ ಚಿನ್ನದ ದರ ₹1,22,030 ಮತ್ತು ಬೆಳ್ಳಿ ₹1,57,100 ಮಟ್ಟದಲ್ಲಿದೆ. ಹೀಗಾಗಿ ಹಬ್ಬದ ಸೀಸನ್‌ನಲ್ಲಿ ಚಿನ್ನದ ಖರೀದಿ ಸಾದ್ಯತೆ ಸಾಮಾನ್ಯರಿಗೆ ಕಷ್ಟಕರವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಈ 2 ಎಲೆಕ್ಟ್ರಿಕ್ ಸ್ಕೂಟರ್‌ಗಳ ಮೇಲೆ 45 ಸಾವಿರ ರಿಯಾಯಿತಿ! 100 ಕಿ.ಮೀ ಮೈಲೇಜ್

ಯಾರು ಚಿನ್ನ ಮತ್ತು ಬೆಳ್ಳಿ ದರಗಳ (Gold and Silver Rate) ನವೀಕರಿಸಿದ ಮಾಹಿತಿಯನ್ನು ಪಡೆಯಲು ಬಯಸುತ್ತಾರೋ, ಅವರು 8955664433 ಸಂಖ್ಯೆಗೆ ಮಿಸ್‌ಡ್ ಕಾಲ್ ನೀಡುವ ಮೂಲಕ ಮಾಹಿತಿ ಪಡೆಯಬಹುದು ಎಂದು ವ್ಯಾಪಾರ ವಲಯ ಮೂಲಗಳು ತಿಳಿಸಿವೆ.

Gold and Silver Prices Skyrocket Across Bengaluru and India

Related Stories