Gold Price: ಚಿನ್ನದ ಬೆಲೆ ಏಕಾಏಕಿ ಜಿಗಿತ, ಬೆಳ್ಳಿ ದರವೂ ಏರಿಕೆ! ಒಂದೇ ದಿನದಲ್ಲಿ ಭಾರೀ ಹೆಚ್ಚಳ
Gold Price Today: ಅಂತರರಾಷ್ಟ್ರೀಯ ಬೆಳವಣಿಗೆಗಳ ಪ್ರಭಾವದಿಂದ ಚಿನ್ನ ಹಾಗೂ ಬೆಳ್ಳಿ ದರಗಳು ಮತ್ತೆ ಏರಿಕೆ ಕಂಡಿವೆ. ಒಂದೇ ದಿನದಲ್ಲಿ ಚಿನ್ನದ ಬೆಲೆ ಭಾರೀ ಹೆಚ್ಚಳವಾಗಿದ್ದು, ಹೂಡಿಕೆದಾರರು ಹಾಗೂ ಗ್ರಾಹರಿಗೆ ಮತ್ತೆ ಶಾಕ್ ಕೊಟ್ಟಿದೆ.
- ಚಿನ್ನದ ಬೆಲೆ ಏರಿಕೆ, ಒಂದೇ ದಿನದಲ್ಲಿ ಜಿಗಿತ
- ಬೆಳ್ಳಿ ದರ ಸಾವಿರಾರು ರೂಪಾಯಿ ಹೆಚ್ಚಳ
- ಪ್ರಮುಖ ನಗರಗಳಲ್ಲಿ ದಾಖಲೆ ಮಟ್ಟ
Gold Price Today: ಒಂದು ದಿನ ಏರಿಕೆ, ಮತ್ತೊಂದು ದಿನ ಇಳಿಕೆ… ಇತ್ತೀಚೆಗೆ ಚಿನ್ನ ಮತ್ತು ಬೆಳ್ಳಿ ದರಗಳು ಮಾರುಕಟ್ಟೆಯಲ್ಲಿ ಆಟವಾಡುತ್ತಿರುವಂತಿವೆ. ಆದರೆ ಇದೀಗ ಮತ್ತೆ ಚಿನ್ನದ ಬೆಲೆಗಳು ಮೇಲ್ಮುಖವಾಗಿದ್ದು, ಮಾರುಕಟ್ಟೆಯಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಆರ್ಥಿಕ ಬದಲಾವಣೆಗಳು, ಅಮೆರಿಕದ ಹಣಕಾಸು ನೀತಿ ಹಾಗೂ ಜಾಗತಿಕ ಉದ್ವಿಗ್ನತೆಗಳು ಅಮೂಲ್ಯ ಲೋಹಗಳ ದರ ಏರಿಕೆಗೆ ಪ್ರಮುಖ ಕಾರಣವಾಗಿವೆ.
ಕೆಲ ದಿನಗಳ ಹಿಂದೆ ಹೂಡಿಕೆದಾರರು ಲಾಭ ಪಡೆದು ಹಿಂದೆ ಸರಿದ ಕಾರಣ ದರಗಳು ಇಳಿಕೆಯಾಗಿದ್ದವು. ಇದೀಗ ಮತ್ತೆ ಬೇಡಿಕೆ ಹೆಚ್ಚಾಗಿದ್ದು, ದರಗಳು ಏಕಾಏಕಿ ಜಿಗಿತ ಕಂಡಿವೆ.
ಇಂದಿನ ಚಿನ್ನದ ಬೆಲೆ
ಶುಕ್ರವಾರ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ಒಂದೇ ದಿನದಲ್ಲಿ ಸುಮಾರು ₹1,140 ಹೆಚ್ಚಾಗಿ ₹1,36,200ಕ್ಕೆ ತಲುಪಿದೆ. 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ₹1,050 ಏರಿಕೆಯೊಂದಿಗೆ ₹1,24,850 ಆಗಿದೆ. ಈ ಏರಿಕೆ ಖರೀದಿದಾರರಿಗೆ ಸ್ವಲ್ಪ ಶಾಕ್ ನೀಡಿದೆ.
ಬೆಳ್ಳಿ ದರದಲ್ಲೂ ಭಾರೀ ಬದಲಾವಣೆ
ಚಿನ್ನದ ಜೊತೆ ಬೆಳ್ಳಿಯ ದರವೂ ಜಿಗಿತ ಕಂಡಿದೆ. ಒಂದು ಕಿಲೋ ಬೆಳ್ಳಿಯ ದರ ಸುಮಾರು ₹4,000 ಹೆಚ್ಚಾಗಿ ₹2,60,000 ಮಟ್ಟಕ್ಕೆ ತಲುಪಿದೆ. ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ಮೇಲಿನ ಹೂಡಿಕೆ ಆಸಕ್ತಿ ಕೂಡ ಹೆಚ್ಚುತ್ತಿರುವುದು ಕಂಡುಬರುತ್ತಿದೆ.
ಪ್ರಮುಖ ನಗರಗಳ ಸ್ಥಿತಿ
ದೆಹಲಿ, ಮುಂಬೈ, ಚೆನ್ನೈ, ಕೋಲ್ಕತ್ತಾ ಸೇರಿದಂತೆ ಪ್ರಮುಖ ನಗರಗಳಲ್ಲಿ ಚಿನ್ನದ ದರಗಳಲ್ಲಿ (Gold Rate) ವ್ಯತ್ಯಾಸ ಕಡಿಮೆಯೇ ಇದೆ. ದಕ್ಷಿಣ ಭಾರತದ ನಗರಗಳಾದ ಬೆಂಗಳೂರು, ಹೈದರಾಬಾದ್, ವಿಜಯವಾಡ ಹಾಗೂ ವಿಶಾಖಪಟ್ಟಣದಲ್ಲಿಯೂ ಇದೇ ದರಗಳು ದಾಖಲಾಗಿವೆ. ಈ ದರಗಳು ಮಧ್ಯಾಹ್ನದ ಹೊತ್ತಿಗೆ ದಾಖಲಾಗಿದ್ದು, ದಿನದೊಳಗೆ ಮತ್ತೆ ಬದಲಾಗುವ ಸಾಧ್ಯತೆ ಇದೆ.
ಮಾರುಕಟ್ಟೆಯ ಚಲನವಲನವನ್ನು ಗಮನಿಸಿದರೆ, ಚಿನ್ನ ಖರೀದಿಗೆ (Buy Gold) ಹೋಗುವವರು ತಕ್ಷಣದ ದರ ಪರಿಶೀಲನೆ ಮಾಡಿಕೊಳ್ಳುವುದು ಒಳಿತು. ಹೂಡಿಕೆದಾರರು ಕೂಡ ತಾಳ್ಮೆಯಿಂದ ನಿರ್ಧಾರ ಕೈಗೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.





