Gold Price: ಚಿನ್ನದ ಬೆಲೆ ಸ್ವಲ್ಪ ಇಳಿಕೆ, ಬೆಳ್ಳಿ ದರ ಸ್ಥಿರ! ಇಂದಿನ ಬೆಂಗಳೂರು ದರಗಳು ಹೀಗಿವೆ
Gold Price Today: ಜಾಗತಿಕ ಉದ್ವಿಗ್ನತೆಯ ಪರಿಣಾಮವಾಗಿ ಚಿನ್ನದ ಬೆಲೆ ಮತ್ತೆ ಏರುಪೇರು ಕಂಡುಬರುತ್ತಿದ್ದು ಇಂದು ಸ್ವಲ್ಪ ಇಳಿಕೆಯಾಗಿದೆ. ಆದರೆ ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಸ್ಥಿರವಾಗಿರುವುದು ಗಮನಸೆಳೆಯುತ್ತಿದೆ.
Gold Price Today: ಜಾಗತಿಕ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ರಾಜಕೀಯ ಮತ್ತು ಆರ್ಥಿಕ ಉದ್ವಿಗ್ನತೆಗಳು ಬಂಗಾರದ ದರದ ಮೇಲೆ ಸ್ಪಷ್ಟ ಪರಿಣಾಮ ಬೀರುತ್ತಿವೆ. ಕೆಲ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆಯಾಗುತ್ತಿದ್ದರೆ, ಮತ್ತೊಮ್ಮೆ ಸ್ವಲ್ಪ ಮಟ್ಟಿಗೆ ಇಳಿಕೆ ಕಾಣುತ್ತಿದೆ.
ಹೂಡಿಕೆದಾರರು ಕೆಲವೊಮ್ಮೆ ಸುರಕ್ಷಿತ ಹೂಡಿಕೆ ಎಂದು ಬಂಗಾರವನ್ನು ಆಯ್ಕೆ ಮಾಡುತ್ತಿರುವುದೂ, ಮತ್ತೊಂದೆಡೆ ಡಾಲರ್ ಬಲವಾದಾಗ ಹೂಡಿಕೆ ಹಿಂತೆಗೆದುಕೊಳ್ಳುವುದೂ ಈ ಏರುಪೇರುಗಳಿಗೆ ಕಾರಣವಾಗಿದೆ.
ಮಾರ್ಚ್ 5ರಂದು ದೇಶದ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡುಬಂದಿದ್ದು, ಬೆಳ್ಳಿ ದರ ಮಾತ್ರ ಸ್ಥಿರವಾಗಿದೆ. ಇಂದಿನ ಮಾರುಕಟ್ಟೆಯಲ್ಲಿ 24 ಕ್ಯಾರೆಟ್ 10 ಗ್ರಾಂ ಬಂಗಾರದ ದರ ಸುಮಾರು ₹1,63,530ಕ್ಕೆ ಇಳಿಕೆಯಾಗಿದೆ.
ಅದೇ ರೀತಿ 22 ಕ್ಯಾರೆಟ್ 10 ಗ್ರಾಂ ಬಂಗಾರದ ದರ ಸುಮಾರು ₹1,49,900ಕ್ಕೆ ತಲುಪಿದೆ. ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಕಿಲೋಗ್ರಾಂಗೆ ಸುಮಾರು ₹2,95,000 ಮಟ್ಟದಲ್ಲಿದೆ.
ದೇಶದ ಪ್ರಮುಖ ನಗರಗಳ ಚಿನ್ನದ ಬೆಲೆ
ದೇಶದ ಪ್ರಮುಖ ನಗರಗಳ ದರಗಳನ್ನು ಗಮನಿಸಿದರೆ, ದೆಹಲಿ ನಗರದಲ್ಲಿ 24 ಕ್ಯಾರೆಟ್ 10 ಗ್ರಾಂ ಬಂಗಾರದ ದರ ₹1,63,680 ಇದ್ದರೆ, 22 ಕ್ಯಾರೆಟ್ ಬಂಗಾರದ ದರ ₹1,50,050 ಇದೆ. ಮುಂಬೈ ಮತ್ತು ಕೊಲ್ಕತ್ತಾ ನಗರಗಳಲ್ಲಿ 24 ಕ್ಯಾರೆಟ್ ಬಂಗಾರದ ದರ ₹1,63,530 ಮತ್ತು 22 ಕ್ಯಾರೆಟ್ ದರ ₹1,49,900 ಇದೆ.
ಚೆನ್ನೈನಲ್ಲಿ ಬಂಗಾರದ ದರ ಇನ್ನೂ ಸ್ವಲ್ಪ ಹೆಚ್ಚು ಕಾಣುತ್ತಿದ್ದು, 24 ಕ್ಯಾರೆಟ್ 10 ಗ್ರಾಂ ಬಂಗಾರ ಸುಮಾರು ₹1,64,950ಕ್ಕೆ ಮಾರಾಟವಾಗುತ್ತಿದೆ. 22 ಕ್ಯಾರೆಟ್ ಬಂಗಾರದ ದರ ಸುಮಾರು ₹1,51,200 ಇದೆ.
ಬೆಂಗಳೂರು ನಗರದಲ್ಲಿಯೂ ಬಂಗಾರದ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಇಂದು ಬೆಂಗಳೂರಿನಲ್ಲಿ 24 ಕ್ಯಾರೆಟ್ ಬಂಗಾರದ ದರ ಪ್ರತಿ ಗ್ರಾಂಗೆ ಸುಮಾರು ₹16,288 ಇದ್ದು, 10 ಗ್ರಾಂಗೆ ಸುಮಾರು ₹1,62,880 ಆಗಿದೆ. ಅದೇ ರೀತಿ 22 ಕ್ಯಾರೆಟ್ ಬಂಗಾರದ ದರ ಪ್ರತಿ ಗ್ರಾಂಗೆ ಸುಮಾರು ₹14,930 ಇದ್ದು, 10 ಗ್ರಾಂಗೆ ಸುಮಾರು ₹1,49,300 ಆಗಿದೆ.
ಇನ್ನೂ 8 ಗ್ರಾಂ 24 ಕ್ಯಾರೆಟ್ ಬಂಗಾರದ ದರ ಬೆಂಗಳೂರಿನಲ್ಲಿ ಸುಮಾರು ₹1,30,304 ಇದ್ದರೆ, 100 ಗ್ರಾಂಗೆ ಸುಮಾರು ₹16,28,800 ಮಟ್ಟದಲ್ಲಿದೆ. 22 ಕ್ಯಾರೆಟ್ 8 ಗ್ರಾಂ ಬಂಗಾರದ ದರ ಸುಮಾರು ₹1,19,440 ಆಗಿದ್ದು, 100 ಗ್ರಾಂಗೆ ಸುಮಾರು ₹14,93,000 ಇದೆ.
ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣಂ ಸೇರಿದಂತೆ ಹಲವು ನಗರಗಳಲ್ಲಿ 24 ಕ್ಯಾರೆಟ್ ಬಂಗಾರದ ದರ ₹1,63,530 ಇದ್ದರೆ, 22 ಕ್ಯಾರೆಟ್ ಬಂಗಾರದ ದರ ₹1,49,900 ಇದೆ. ಬೆಳ್ಳಿ ದರ ದೇಶದಾದ್ಯಂತ ಬಹುತೇಕ ಕಿಲೋಗ್ರಾಂಗೆ ₹2,95,000 ಮಟ್ಟದಲ್ಲೇ ಮುಂದುವರಿಯುತ್ತಿದೆ.
ಮಾರುಕಟ್ಟೆಯ ಪರಿಸ್ಥಿತಿಗೆ ಅನುಗುಣವಾಗಿ ಬಂಗಾರದ ದರ ದಿನವೂ ಬದಲಾಗುವ ಸಾಧ್ಯತೆ ಇರುವುದರಿಂದ, ಖರೀದಿ ಮಾಡಲು ಹೊರಡುವ ಮೊದಲು ಇಂದಿನ ದರವನ್ನು ಮತ್ತೊಮ್ಮೆ ಪರಿಶೀಲಿಸುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಿದ್ದಾರೆ.



