ಚಿನ್ನದ ಬೆಲೆ ಕೊನೆಗೂ ಇಳಿಕೆಯಾಯ್ತು! ಇನ್ನು ಚಿನ್ನ ಬೆಳ್ಳಿ ಕೊಳ್ಳಲು ತಡಮಾಡಬೇಡಿ, ಮತ್ತೆ ಏರಿಕೆ ಆದ್ರೆ ಕಷ್ಟ
Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ತಗ್ಗಿದ ಚಿನ್ನದ ಬೆಲೆ. ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ, ಅಂತೆಯೇ ಇದು ಸಹ ಚಿನ್ನ ಬೆಳ್ಳಿ ದರ ಸ್ವಲ್ಪ ಕಡಿಮೆಯಾಗಿರುವುದು ನೆಮ್ಮದಿಯ ಸಂಗತಿಯಾಗಿದೆ
Gold Price Today: ಆಭರಣ ಪ್ರಿಯರಿಗೆ ಸಿಹಿ ಸುದ್ದಿ, ತಗ್ಗಿದ ಚಿನ್ನದ ಬೆಲೆ (Gold Prices). ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯಲ್ಲಿ ಇಳಿಕೆಯಾಗುತ್ತಿದೆ, ಅಂತೆಯೇ ಇದು ಸಹ ಚಿನ್ನ ಬೆಳ್ಳಿ ದರ (Gold and Silver Rates) ಸ್ವಲ್ಪ ಕಡಿಮೆಯಾಗಿರುವುದು ನೆಮ್ಮದಿಯ ಸಂಗತಿಯಾಗಿದೆ.
ಇಂದು 21 ಜೂನ್ 2023 ರಂದು ಬೆಂಗಳೂರು, ಹೈದರಾಬಾದ್, ವಿಜಯವಾಡ, ಚೆನ್ನೈ, ದೆಹಲಿ, ಮುಂಬೈನಲ್ಲಿ ಚಿನ್ನದ ಬೆಲೆ ಮತ್ತು ಬೆಳ್ಳಿ ಬೆಲೆಗಳು ಹೇಗಿದೆ ಎಂದು ಪರಿಶೀಲಿಸಿ.
Gold Loan: ಗೋಲ್ಡ್ ಲೋನ್ ಪಡೆಯುವ ಮುನ್ನ ವಿವಿಧ ಬ್ಯಾಂಕ್‌ಗಳು ವಿಧಿಸುವ ಬಡ್ಡಿ ದರಗಳ ಪಟ್ಟಿ ಪರಿಶೀಲಿಸಿ
ಪ್ರಸ್ತುತ ಮಾರುಕಟ್ಟೆಯಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 55 ಸಾವಿರ ಇದ್ದರೆ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ರೂ. 60 ಸಾವಿರ. ಮಂಗಳವಾರಕ್ಕೆ ಹೋಲಿಸಿದರೆ ರೂ. 70 ಇಳಿಕೆಯಾಗಿದೆ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ – Gold Price
ಪ್ರಮುಖ ನಗರಗಳಿಗೆ ಸಂಬಂಧಿಸಿದಂತೆ ಮುಂಬೈನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 55 ಸಾವಿರ, 24 ಕ್ಯಾರೆಟ್ ರೂ. 60 ಸಾವಿರ.
ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ರೂ. 55, 150 ಆದರೆ 24 ಕ್ಯಾರೆಟ್ ಬೆಲೆ ರೂ. 60, 150.
ಬೆಂಗಳೂರಿನಲ್ಲಿ 22 ಕ್ಯಾರೆಟ್ ರೂ. 55 ಸಾವಿರ ಇದ್ದರೆ 24 ಕ್ಯಾರೆಟ್ ರೂ. 60 ಸಾವಿರ.
ತೆಲಂಗಾಣದ ಹೈದರಾಬಾದ್‌ನಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ದರ ರೂ. 55 ಸಾವಿರ, 10 ಗ್ರಾಂ 24 ಕ್ಯಾರೆಟ್ ಚಿನ್ನ ರೂ. 60 ಸಾವಿರ.
ಹಾಗೂ ಆಂಧ್ರಪ್ರದೇಶದ ವಿಜಯವಾಡದಲ್ಲಿ 22ಕ್ಯಾರೆಟ್ 10ಗ್ರಾಂ ಚಿನ್ನದ ಬೆಲೆ ರೂ. 55 ಸಾವಿರ, 10 ಗ್ರಾಂ 24 ಕ್ಯಾರೆಟ್ ಚಿನ್ನ ರೂ. 60 ಸಾವಿರ.
ಬೆಳ್ಳಿ ಬೆಲೆ – Silver Price
ಮತ್ತೊಂದೆಡೆ ಬೆಳ್ಳಿ ಬೆಲೆಯಲ್ಲಿಯೂ ಇಳಿಕೆಯಾಗಿದೆ. ಮಂಗಳವಾರಕ್ಕೆ ಹೋಲಿಸಿದರೆ.. ಕೆಜಿ ಬೆಳ್ಳಿ ರೂ. 500 ಇಳಿಕೆಯಾಗಿದೆ. ಪ್ರಸ್ತುತ ಪ್ರತಿ ಕೆಜಿ ಬೆಳ್ಳಿ ಬೆಲೆ ರೂ. 74 ಸಾವಿರ ಮುಂದುವರಿದಿದೆ.
ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಾಗಿ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಭಾರಿ ಬದಲಾವಣೆಯಾಗಿದೆ. ಇದು ಚಿನ್ನ ಪ್ರಿಯರಿಗೆ ಸಂತಸದ ಸುದ್ದಿ.. ಚಿನ್ನ ಬೆಳ್ಳಿ ಬೆಲೆಯಲ್ಲಿ ಇಳಿಕೆಯಾಗುತ್ತಿದೆ. ಇತ್ತೀಚಿನವರೆಗೂ, ಚಿನ್ನ ಭಾರೀ ಏರಿಕೆಯಾಗಿತ್ತು.
ಇನ್ನು ಮದುವೆಗಳು, ಹಬ್ಬಗಳು, ಯಾವುದೇ ಶುಭ ಸಮಾರಂಭಗಳು ಸೇರಿದಂತೆ ಭಾರತೀಯರು ಚಿನ್ನವನ್ನು ಕೊಳ್ಳಲು ಪ್ರಾಶಸ್ತ್ಯ ನೀಡುತ್ತಾರೆ, ಇನ್ನೊಂದೆಡೆ ಬೆಲೆ ಎಷ್ಟೇ ಏರಿಕೆ ಆದರೂ ಖರೀದಿ ಮಾತ್ರ ಜೋರಾಗಿರುತ್ತದೆ.
Gold Price Today 21st June 2023 in Bengaluru, Hyderabad, Vijayawada, Chennai, Delhi, Mumbai Cities of India