Gold Price: ಗನಕ್ಕೇರಿದ್ದ ಚಿನ್ನದ ಬೆಲೆ ರಾತ್ರೋ-ರಾತ್ರಿ ಇಳಿಕೆ! ಇಲ್ಲಿದೆ ಬೆಂಗಳೂರು ಚಿನ್ನದ ಮಾರುಕಟ್ಟೆ ಅಪ್‌ಡೇಟ್
Gold Price Today: ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆಯಾಗಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ದರ ಕಡಿಮೆಯಾಗಿದೆ. ಹೀಗಾಗಿ ಆಭರಣ ಖರೀದಿಸಲು ಇದು ಉತ್ತಮ ಸಮಯವೇ ಎಂಬ ಚರ್ಚೆ ಹೆಚ್ಚಾಗಿದೆ.
- ಹಲವು ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆ
- ಚಿನ್ನದ ದರದಲ್ಲಿ ಗಮನಾರ್ಹ ಕಡಿತ
- ಏರಿಕೆಯಾಗಿದ್ದ ಚಿನ್ನದ ಬೆಲೆ ಈಗ ಇಳಿಕೆ
Gold Price Today: ಬೆಂಗಳೂರು ಸೇರಿದಂತೆ ದೇಶದ ಹಲವಾರು ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿರುವುದು ಚಿನ್ನಾಭರಣ ಪ್ರಿಯರಿಗೆ ಸಂತಸದ ಸುದ್ದಿಯಾಗಿದೆ. ಕಳೆದ ವಾರದವರೆಗೆ ನಿರಂತರವಾಗಿ ಏರಿಕೆಯಾಗುತ್ತಿದ್ದ ಚಿನ್ನದ ಬೆಲೆ ಇದೀಗ ನಿಧಾನವಾಗಿ ಇಳಿಮುಖವಾಗುತ್ತಿರುವುದು ಮಾರುಕಟ್ಟೆಯಲ್ಲಿ ಗಮನ ಸೆಳೆಯುತ್ತಿದೆ.
ವಾರದ ಆರಂಭದಲ್ಲಿ ದಾಖಲೆ ಮಟ್ಟಕ್ಕೆ ತಲುಪಿದ್ದ ಚಿನ್ನದ ಬೆಲೆ ಇದೀಗ ಇಳಿಕೆಯಾಗುತ್ತಿದ್ದು, ಖರೀದಿದಾರರಲ್ಲಿ ಮತ್ತೆ ಆಸಕ್ತಿ ಹೆಚ್ಚಾಗಿದೆ. ಪ್ರಸ್ತುತ ಭಾರತದಲ್ಲಿ 24 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ಸುಮಾರು ₹16,112 ಆಗಿದ್ದು, 22 ಕ್ಯಾರಟ್ ಚಿನ್ನದ ಒಂದು ಗ್ರಾಂ ಬೆಲೆ ₹14,769ಕ್ಕೆ ಇಳಿಕೆಯಾಗಿದೆ.
ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
ನಗರವಾರು ದರಗಳ ವಿಚಾರಕ್ಕೆ ಬಂದರೆ, ಚೆನ್ನೈನಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹1,63,190 ಇದ್ದರೆ, 22 ಕ್ಯಾರಟ್ ಚಿನ್ನದ ಬೆಲೆ ₹1,49,590 ಆಗಿದೆ. ಮುಂಬೈನಲ್ಲಿ 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹1,61,120 ಇದ್ದು, 22 ಕ್ಯಾರಟ್ ಚಿನ್ನದ ದರ ₹1,47,690 ಆಗಿದೆ.
ರಾಜಧಾನಿ ದೆಹಲಿಯಲ್ಲಿ 24 ಕ್ಯಾರಟ್ ಚಿನ್ನದ 10 ಗ್ರಾಂ ಬೆಲೆ ₹1,61,270 ಆಗಿದ್ದು, 22 ಕ್ಯಾರಟ್ ಚಿನ್ನದ ದರ ₹1,47,840 ಇದೆ. ಇದೇ ವೇಳೆ ಕೊಲ್ಕತ್ತಾದಲ್ಲೂ 24 ಕ್ಯಾರಟ್ ಚಿನ್ನದ ದರ ₹1,61,120 ಮತ್ತು 22 ಕ್ಯಾರಟ್ ಚಿನ್ನದ ಬೆಲೆ ₹1,47,690 ಆಗಿದೆ.
ಬೆಂಗಳೂರಿನಲ್ಲೂ ಚಿನ್ನದ ದರದಲ್ಲಿ ಸ್ವಲ್ಪ ಇಳಿಕೆ ಕಂಡುಬಂದಿದೆ. ಇಲ್ಲಿ 10 ಗ್ರಾಂ 24 ಕ್ಯಾರಟ್ ಚಿನ್ನದ ಬೆಲೆ ₹1,61,120 ಆಗಿದ್ದು, 22 ಕ್ಯಾರಟ್ ಚಿನ್ನದ ದರ ₹1,47,690ಕ್ಕೆ ತಲುಪಿದೆ. ಇದೇ ದರ ಹೈದರಾಬಾದ್, ಕೇರಳ, ವಿಜಯವಾಡ ಹಾಗೂ ವಿಶಾಖಪಟ್ಟಣಂ ನಗರಗಳಲ್ಲಿಯೂ ಕಾಣಿಸಿದೆ.
ಇದೀಗ ಬೆಳ್ಳಿ ದರದ ವಿಚಾರಕ್ಕೆ ಬಂದರೆ, ಭಾರತದಲ್ಲಿ ಒಂದು ಗ್ರಾಂ ಬೆಳ್ಳಿ ಸುಮಾರು ₹289.90 ಆಗಿದೆ. ಅಂದರೆ 10 ಗ್ರಾಂ ಬೆಳ್ಳಿ ಸುಮಾರು ₹2,899 ಆಗಿದ್ದು, ಒಂದು ಕಿಲೋ ಬೆಳ್ಳಿಯ ದರದಲ್ಲಿ ನಿನ್ನೆಗಿಂತ ಸುಮಾರು ₹100 ಇಳಿಕೆಯಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಬೆಲೆ ಬದಲಾವಣೆಗಳ ಪರಿಣಾಮವಾಗಿ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ಆಗಾಗ್ಗೆ ಬದಲಾವಣೆ ಕಾಣುತ್ತಿವೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.



