ಗಗನ್ನಕ್ಕೇರಿದ್ದ ಚಿನ್ನದ ಬೆಲೆ ಒಂದೇ ದಿನದಲ್ಲಿ ಪಾತಾಳಕ್ಕೆ ಕುಸಿತ! ಗ್ರಾಹಕರಿಗೆ ಸಿಹಿ ಸುದ್ದಿ

Gold Price Today : ಇದೀಗ ಚಿನ್ನದ ಬೆಲೆ ಸ್ವಲ್ಪ ಇಳಿಕೆ ಕಂಡು ಬಂದಿದೆ, ಕೇವಲ ಒಂದು ದಿನದ ಅಂತರದಲ್ಲಿ ಭಾರಿ ಇಳಿಕೆ ಕಂಡುಬಂದಿದ್ದು ಇಲ್ಲಿದೆ ಇಂದಿನ ಬೆಲೆಗಳ ವಿವರ

  • 22K ಚಿನ್ನದ ಬೆಲೆ: ₹78,900 (10ಗ್ರಾಂ), 24K ದರ: ₹86,070
  • ಹೈದರಾಬಾದ್, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಬೆಲೆ ಇಳಿಕೆ
  • ಬೆಳ್ಳಿ ದರ ಸ್ಥಿರ – 1Kg ಬೆಳ್ಳಿ ಬೆಲೆ ₹1,00,500

Gold Price Today : ಹಲವು ದಿನಗಳಿಂದ ಚಿನ್ನದ ಬೆಲೆ ಏರಿಕೆ ಕಂಡು ಬಂತು, ಇದು ಖರೀದಿದಾರರಿಗೆ ಆತಂಕ ಸೃಷ್ಟಿಸಿತ್ತು. ₹85,000 ಮೌಲ್ಯ ಮೀರಿ ಹೋಗುತ್ತಿದ್ದಂತೆ, ಮಹಿಳೆಯರು ಮತ್ತು ಬಂಗಾರ ಹೂಡಿಕೆದಾರರು ಚಿನ್ನ ಖರೀದಿಗೆ (Buy Gold) ನಿರಾಸಕ್ತಿ ತೋರಿದರು.

ಇತ್ತೀಚೆಗೆ ಬಂಗಾರ ಖರೀದಿಯಲ್ಲಿ ಕುಸಿತ ಕಂಡು ಬಂದಿದ್ದು, ಜನರು ದರ ಇಳಿಕೆಗೆ ಕಾಯುತ್ತಿದ್ದರು. ಈಗ, ಕೇಂದ್ರ ಬ್ಯಾಂಕ್‌ಗಳ ಬಂಗಾರ ಖರೀದಿ, ಹಣದುಬ್ಬರದ ಒತ್ತಡ, ಅಂತಾರಾಷ್ಟ್ರೀಯ ಬೇಡಿಕೆ ಕಡಿಮೆಯಾಗಿರುವ ಪರಿಣಾಮ ಚಿನ್ನದ ಬೆಲೆ (Gold Rate) ಕುಸಿದಿವೆ.

ಬರೋಬ್ಬರಿ 248 ಕಿ.ಮೀ ಮೈಲೇಜ್ ನೀಡುವ ಹೊಸ ಎಲೆಕ್ಟ್ರಿಕ್ ಸ್ಕೂಟರ್ ಇದು

ಇನ್ನು ಭಾರತದಲ್ಲಿ ಬಂಗಾರದ ದರ ಇಳಿಕೆ ಕಂಡು ಬಂದಿದೆ. ಆಲ್ ಇಂಡಿಯಾ ಸರಾಫಾ ಅಸೋಸಿಯೇಷನ್ ಪ್ರಕಾರ, 22 ಕ್ಯಾರಟ್ ಬಂಗಾರ 10 ಗ್ರಾಂ ದರ ₹78,900 ಮತ್ತು 24 ಕ್ಯಾರಟ್ ಬಂಗಾರ (999 ಪ್ಯೂರ್ ಗೋಲ್ಡ್) ₹86,070 ಆಗಿದೆ. ಮದುವೆ ಸೀಸನ್ ಹಿನ್ನೆಲೆಯಲ್ಲಿ ಬಂಗಾರದ ದರ ಇಳಿಕೆ, ಖರೀದಿ ಮಾಡುತ್ತಿರುವ ಗ್ರಾಹಕರಿಗೆ ಸಿಹಿ ಸುದ್ದಿ ಆಗಿದೆ.

ಚಿನ್ನದ ಬೆಲೆ

ಹೈದರಾಬಾದ್, ಬೆಂಗಳೂರು, ಮುಂಬೈ, ಚೆನ್ನೈ ಸೇರಿದಂತೆ ಪ್ರಮುಖ ನಗರಗಳಲ್ಲಿ ಬಂಗಾರದ ದರದಲ್ಲಿ ₹100-₹109 ರೂಪಾಯಿ ಇಳಿಕೆ ಕಂಡು ಬಂದಿದೆ. ಬಜಾರ್ ದರದಲ್ಲಿ ಸಣ್ಣ ಮಟ್ಟಿನ ಕುಸಿತ ಉಂಟಾದರೂ, ಮುಂದಿನ ದಿನಗಳಲ್ಲಿ ಬಂಗಾರದ ಮೌಲ್ಯ ಏರಬಹುದು ಎಂಬ ನಿರೀಕ್ಷೆ ಇದೆ. ಹೀಗಾಗಿ ಬಂಗಾರ ಖರೀದಿಗೆ ಇದು ಸೂಕ್ತ ಸಮಯ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

ಬೀದಿ ಬದಿ ವ್ಯಾಪಾರಕ್ಕೆ 50 ಸಾವಿರ ಸಬ್ಸಿಡಿ ಸಾಲ ಯೋಜನೆ! ಅರ್ಜಿ ಸಲ್ಲಿಸಿ ಎಲ್ಲರಿಗೂ ಸಿಗುತ್ತೆ

ದೇಶದ ವಿವಿಧ ನಗರಗಳ ಇಂದಿನ ಚಿನ್ನದ ಬೆಲೆ (10ಗ್ರಾಂ): 16-2-2025

ನಗರ 22K ದರ (₹) 24K ದರ (₹)
ದೆಹಲಿ 79,050 86,220
ಮುಂಬೈ 78,900 86,070
ಚೆನ್ನೈ 78,900 86,070
ಹೈದರಾಬಾದ್ 78,900 86,070
ಕೋಲ್ಕತ್ತಾ 78,900 86,070
ಬೆಂಗಳೂರು 78,900 86,070
ವಿಜಯವಾಡ 78,900 86,070
ಕೇರಳ 78,900 86,070

 

ಬೆಳ್ಳಿ ದರ: ಬೆಳ್ಳಿಯ ಮಾರುಕಟ್ಟೆ ದರದಲ್ಲಿ ಯಾವುದೇ ದೊಡ್ಡ ಬದಲಾವಣೆ ಕಾಣಿಸಿಲ್ಲ. ಪ್ರಸ್ತುತ ಬೆಳ್ಳಿ ದರ ₹100.50 ಪ್ರತಿ ಗ್ರಾಂ, ಮತ್ತು 1KG ಬೆಳ್ಳಿ ದರ ₹1,00,500 ಆಗಿದೆ.

Gold prices drop in India, Good news for buyers

English Summary▼

Kannada News Today

Kannada News Today Providing News, information & entertainment in Kannada Language, Since 2019. This Website reacts as a… More »

Related Stories