ಚಿನ್ನದ ಬೆಲೆ ಗಗನಕ್ಕೆ! ಇಂದು ನಿಮ್ಮ ನಗರದಲ್ಲಿ ಬಂಗಾರದ ದರ ಎಷ್ಟಾಗಿದೆ ಗೊತ್ತಾ?
ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ. ಫೆಬ್ರವರಿ 11ರಂದು ಪ್ರಮುಖ ನಗರಗಳಲ್ಲಿ 22 ಮತ್ತು 24 ಕ್ಯಾರೆಟ್ ಬಂಗಾರದ ದರದಲ್ಲಿ ಮಹತ್ವದ ಬದಲಾವಣೆಗಳಿವೆ.
- ಅಮೆರಿಕಾ ತೆರಿಗೆ ನೀತಿಯಿಂದ ಚಿನ್ನದ ಬೆಲೆ ಏರಿಕೆ
- 24 ಕ್ಯಾರೆಟ್ ಬಂಗಾರದ ದರ ₹87,070ಕ್ಕೆ ತಲುಪಿದೆ
- ದೇಶದ ಪ್ರಮುಖ ನಗರಗಳಲ್ಲಿನ ಚಿನ್ನದ ದರ ಅವಲೋಕನ
Gold Price Today : ಚಿನ್ನದ ಬೆಲೆ ಇಳಿಕೆ ಕಾಣುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಉಕ್ಕು ಮತ್ತು ಅಲ್ಯೂಮಿನಿಯಂ ಮೇಲೆ 25% ಹೆಚ್ಚುವರಿ ಸುಂಕವನ್ನು ವಿಧಿಸಿದ ನಂತರ ಜಾಗತಿಕ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆಗಳಲ್ಲಿ ಭಾರೀ ಏರಿಕೆ ಕಂಡುಬಂದಿದೆ.
ಇದರ ಪರಿಣಾಮವಾಗಿ, ದೇಶದ ರಾಜಧಾನಿ ದೆಹಲಿಯಲ್ಲಿ ಫೆಬ್ರವರಿ 11ರಂದು ಬಂಗಾರದ ದರ 10 ಗ್ರಾಂಗೆ ₹88,500ರ ಆಲ್-ಟೈಂ ಗರಿಷ್ಠ ಮಟ್ಟವನ್ನು ತಲುಪಿದೆ. ಆದರೆ, ಮಂಗಳವಾರ ಬೆಲೆಗಳು (Gold and Silver Rates) ಸ್ಥಿರವಾಗಿದೆ ₹87,070ಕ್ಕೆ ಬಂದಿದೆ.
ಫೆಬ್ರವರಿ 11 ರಂದು ಬೆಳಿಗ್ಗೆ 6 ಗಂಟೆಯ ಹೊತ್ತಿಗೆ, 22 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 79,810 ರೂ.ಗಳಾಗಿದ್ದರೆ, 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 87,070 ರೂ.ಗಳಲ್ಲೇ ಇದೆ. ಬೆಳ್ಳಿಯ ಬೆಲೆ 99,400 ರೂ. ಆಗಿದೆ.
ಫೆಬ್ರವರಿ 11, 2025ರಂದು ಪ್ರಮುಖ ನಗರಗಳಲ್ಲಿನ ಚಿನ್ನದ ಬೆಲೆ
ದೆಹಲಿ: 22 ಕ್ಯಾರೆಟ್ ₹79,960 | 24 ಕ್ಯಾರೆಟ್ ₹87,220
ಮುಂಬೈ: 22 ಕ್ಯಾರೆಟ್ ₹79,810 | 24 ಕ್ಯಾರೆಟ್ ₹87,070
ಹೈದರಾಬಾದ್: 22 ಕ್ಯಾರೆಟ್ ₹79,810 | 24 ಕ್ಯಾರೆಟ್ ₹87,070
ವಿಜಯವಾಡಾ: 22 ಕ್ಯಾರೆಟ್ ₹79,810 | 24 ಕ್ಯಾರೆಟ್ ₹87,070
ಚೆನ್ನೈ: 22 ಕ್ಯಾರೆಟ್ ₹79,810 | 24 ಕ್ಯಾರೆಟ್ ₹87,070
ಬೆಂಗಳೂರು: 22 ಕ್ಯಾರೆಟ್ ₹79,810 | 24 ಕ್ಯಾರೆಟ್ ₹87,070
ಕೇರಳ: 22 ಕ್ಯಾರೆಟ್ ₹79,810 | 24 ಕ್ಯಾರೆಟ್ ₹87,070
ಕೋಲ್ಕತ್ತಾ: 22 ಕ್ಯಾರೆಟ್ ₹79,810 | 24 ಕ್ಯಾರೆಟ್ ₹87,070
ಚಿನ್ನದ ಗುಣಮಟ್ಟವನ್ನು ಹೇಗೆ ಪರೀಕ್ಷಿಸಬಹುದು?
- ಹಾಲ್‌ಮಾರ್ಕ್ ಪರಿಶೀಲನೆ: ಭಾರತೀಯ ಮಾನಕ ಬ್ಯೂರೋ (BIS) ನೀಡುವ ಹಾಲ್‌ಮಾರ್ಕ್ ಲೇಬಲ್ ಇದ್ದರೆ, ಅದು ಶುದ್ಧ ಬಂಗಾರ.
- ಕ್ಯಾರೆಟ್ ಗುರುತು: 24 ಕ್ಯಾರೆಟ್ ಶುದ್ಧವಾದ ಬಂಗಾರ, 22 ಕ್ಯಾರೆಟ್ ಅದಕ್ಕಿಂತ ಕಡಿಮೆ ಮಿಶ್ರಣ ಹೊಂದಿರುತ್ತದೆ.
- ಆಸಿಡ್ ಪರೀಕ್ಷೆ: ಬಂಗಾರದ ಮೇಲೆ ನೈಟ್ರಿಕ್ ಆಸಿಡ್ ಹಾಕಿದಾಗ ಬಣ್ಣ ಬದಲಾಗದಿದ್ದರೆ ಅದು ಶುದ್ಧ ಬಂಗಾರ.
- ಚುಂಭಕ ಪರೀಕ್ಷೆ: ಶುದ್ಧ ಬಂಗಾರ ಚುಂಭಕಕ್ಕೆ ಸೆಳೆಯುವುದಿಲ್ಲ.
- ಬಿಸಿ ಪರೀಕ್ಷೆ: ಹತ್ತಿ ಶುದ್ಧ ಬಂಗಾರದ ಮೇಲೆ ಹಚ್ಚಿದಾಗ ಬಣ್ಣ ಬದಲಾಗದಿದ್ದರೆ ಅದು ನಿಖರ ಗುಣಮಟ್ಟದ ಬಂಗಾರ.
Gold Prices Surge After US Tariff Hike, Check Today’s Rates
Our Whatsapp Channel is Live Now 👇