ಬ್ಯಾಂಕ್ ಸಾಲ ಮಾಡಿ, ತೀರಿಸಲು ಕಷ್ಟಪಡುತ್ತಿರುವವರಿಗೆ ಸಿಹಿ ಸುದ್ದಿ! ಹೊಸ ರೂಲ್ಸ್ ಜಾರಿ
ಒಮ್ಮೆ ಬ್ಯಾಂಕ್ನಿಂದ ಸಾಲ (Bank Loan) ಪಡೆದುಕೊಂಡ ಮೇಲೆ ಅದನ್ನು ಮರುಪಾವತಿ (Loan Re Payment) ಮಾಡುವಾಗ ಬ್ಯಾಂಕ್ ನಲ್ಲಿ ಇರುವ ಕೆಲವು ನಿಯಮಗಳು ಗ್ರಾಹಕರಿಗೆ ಸಮಸ್ಯೆ ಉಂಟು ಮಾಡುತ್ತವೆ.
ನಮಗೆ ಅದೆಷ್ಟೋ ತುರ್ತು ಸಂದರ್ಭಗಳಲ್ಲಿ ಬ್ಯಾಂಕ್ ನಲ್ಲಿ ಸಾಲ (bank loan) ಮಾಡುವುದು ಕೂಡ ಅನಿವಾರ್ಯವಾಗಿ ಬಿಡುತ್ತದೆ. ಹೀಗೆ ಕೆಲವೊಮ್ಮೆ ದೊಡ್ಡ ಮೊತ್ತದ ಹಾಗೂ ಇನ್ನೂ ಕೆಲವೊಮ್ಮೆ ಕಡಿಮೆ ಮೊತ್ತದ ಹಣವನ್ನು ಸಾಲವಾಗಿ ಪಡೆದುಕೊಳ್ಳುತ್ತೇವೆ
ಕೆಲವೊಮ್ಮೆ ಈ ರೀತಿ ಸಾಲ ಪಡೆದು ಕೊಂಡಾಗ ಅದನ್ನ ಹಿಂತಿರುಗಿಸುವಲ್ಲಿ ಹಲವು ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಜೊತೆಗೆ ಬ್ಯಾಂಕುಗಳಲ್ಲಿ ಸಾಮಾನ್ಯವಾಗಿ ಸಾಲಕ್ಕೆ ಇರುವ ಬಡ್ಡಿದರ (loan interest) ತುಸು ಜಾಸ್ತಿ ಎಂದು ಹೇಳಬಹುದು.
ಇದು ನೀವು ಯಾವ ಬಗೆಯ ಸಾಲವನ್ನು ತೆಗೆದುಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ನಿಗದಿಯಾಗುತ್ತದೆ. ಹೀಗೆ ಒಮ್ಮೆ ಬ್ಯಾಂಕ್ನಿಂದ ಸಾಲ (Bank Loan) ಪಡೆದುಕೊಂಡ ಮೇಲೆ ಅದನ್ನು ಮರುಪಾವತಿ (Loan Re Payment) ಮಾಡುವಾಗ ಬ್ಯಾಂಕ್ ನಲ್ಲಿ ಇರುವ ಕೆಲವು ನಿಯಮಗಳು ಗ್ರಾಹಕರಿಗೆ ಸಮಸ್ಯೆ ಉಂಟು ಮಾಡುತ್ತವೆ.
ಯಮಹಾ ಬೈಕ್ ಮಾಡೆಲ್ ಗಳ ಮೇಲೆ ದೀಪಾವಳಿ ಹಬ್ಬಕ್ಕೆ ಬಾರೀ ಡಿಸ್ಕೌಂಟ್ ಹಾಗೂ ಕ್ಯಾಶ್‌ಬ್ಯಾಕ್
ಆರ್ ಬಿ ಐ ನಿಯಮವನ್ನು ಬ್ಯಾಂಕ್ ಪಾಲಿಸಬೇಕು! (RBI rules)
ಬ್ಯಾಂಕುಗಳಲ್ಲಿ ಸಾಲ ಪಡೆದುಕೊಂಡಾಗ ಅದನ್ನು ತಿಂಗಳ EMI ಪಾವತಿ ಮಾಡಲಾಗುತ್ತದೆ. ಆದ್ರೆ ಹೀಗೆ ಪಾವತಿ ಮಾಡುವಾಗ ಬ್ಯಾಂಕುಗಳು ಕೆಲವೊಮ್ಮೆ ಬಡ್ಡಿದರ ಹೆಚ್ಚಿಸಬಹುದು ಅಥವಾ ಶುಲ್ಕ ಹೆಚ್ಚಿಸಬಹುದು
ಈ ಎಲ್ಲಾ ಸಮಸ್ಯೆಗಳಿಂದ ಗ್ರಾಹಕರನ್ನು ಮುಕ್ತರಾಗಿಸಲು ಆರ್ ಬಿ ಐ ಹೊಸ ಅದಿ ಸೂಚನೆ ಹೊರಡಿಸಿದ್ದು ಬ್ಯಾಂಕ್ ಗಳು ಯಾವುದೇ ಕಾರಣಕ್ಕೂ ಸಾಲಗಾರರ ಮೇಲೆ ನಿಯಮಗಳನ್ನ ಮೀರಿ ಒತ್ತಡ ಹೇರುವಂತಿಲ್ಲ.
ದೀಪಾವಳಿ ಹಬ್ಬಕ್ಕೆ ಈ ಕಾರುಗಳ ಮೇಲೆ ಭಾರೀ ರಿಯಾಯಿತಿ, ಬರೋಬ್ಬರಿ 3.5 ಲಕ್ಷ ಡಿಸ್ಕೌಂಟ್
ಆರ್ ಬಿ ಐ ನ ಹೊಸ ನಿಯಮಗಳು ಇಂತಿವೆ! (RBI new rules)
*ಸಾಲಗಾರ ಪ್ರತಿ ತಿಂಗಳು ಕಟ್ಟುವ ಇಎಂಐ ಪಾವತಿ ಮಾಡದೆ ಇದ್ದರೆ ಆತನಿಗೆ ಬಡ್ಡಿಯ ಮೇಲೆ ಬಡ್ಡಿ ಹಾಕಿ ಅತಿ ಹೆಚ್ಚು ಹಣದ ಹೊರೆ ಹೊರಿಸುವಂತಿಲ್ಲ.
*ಸಾಲಗಳಿಗೆ ಒಮ್ಮೆ ಬಡ್ಡಿ ನಿರ್ಧಾರ ಮಾಡಿದ ಮೇಲೆ ಮತ್ತೆ ಮತ್ತೆ ಬಡ್ಡಿ ದರವನ್ನು ಹೆಚ್ಚಿಸುವುದು ತಪ್ಪು ಎಂದು ಆರ್‌ಬಿಐ ತಿಳಿಸಿದೆ.
*ಸಾಲಗಾರನ ಒಪ್ಪಿಗೆ ಇಲ್ಲದೆ ಯಾವುದೇ ಕಾರಣಕ್ಕೂ ಇಎಂಐ ಪಾವತಿಸುವ ಅವಧಿಯನ್ನು ಹೆಚ್ಚಿಸುವುದು ಅಥವಾ ಕಡಿಮೆ ಮಾಡುವುದು ಮಾಡುವಂತಿಲ್ಲ.
*ಸಾಲದ ಅವಧಿಯನ್ನು ಬದಲಾಯಿಸುವುದಿದ್ದರೆ ಅಥವಾ ಯಾವುದೇ ಬದಲಾವಣೆ ಮಾಡುವುದಿದ್ದರೆ ಮುಂಚಿತವಾಗಿ ಅದನ್ನು ಬ್ಯಾಂಕ್ ತನ್ನ ಗ್ರಾಹಕರಿಗೆ ತಿಳಿಸಬೇಕು.
*ಗ್ರಾಹಕರು ಸಾಲ ತೆಗೆದುಕೊಂಡಿದ್ದರೆ ಅದನ್ನು ಯಾವುದೇ ಸಂದರ್ಭದಲ್ಲಿ ಸಂಪೂರ್ಣವಾಗಿ ಮರುಪಾವತಿ ಮಾಡಲು ಬ್ಯಾಂಕ್ ಅವಕಾಶ ಮಾಡಿಕೊಡಬೇಕು.
*ಸಾಲ ತೆಗೆದುಕೊಂಡ ಗ್ರಾಹಕರು ಪ್ರತಿ ತಿಂಗಳು ಸರಿಯಾದ ಸಮಯಕ್ಕೆ ಇಎಂಐ ಪಾವತಿ ಮಾಡಲೇಬೇಕು ಆದರೆ ಒಂದು ವೇಳೆ ಹೆಚ್ಚುವರಿ ಬಡ್ಡಿ ವಿಧಿಸಬಾರದು ಎಂದು ಆರ್ ಬಿ ಐ ತಿಳಿಸಿದೆ.
ಗ್ರಾಹಕರು ಸಾಲ ತೀರಿಸುವಲ್ಲಿ ಕಷ್ಟಪಡಬಾರದು ಎನ್ನುವ ಕಾರಣಕ್ಕೆ ಗ್ರಾಹಕರ ಹಿತ ದೃಷ್ಟಿಯಿಂದ ಆರ್‌ಬಿಐ ಈ ಮೇಲಿನ ಹೊಸ ನಿಯಮಗಳನ್ನು ಜನವರಿ 2024 ರಿಂದ ಜಾರಿಗೆ ತರಲಿದೆ. ಪ್ರತಿಯೊಂದು ಬ್ಯಾಂಕ್ ಗಳು (Banks) ಕೂಡ ಈ ನಿಯಮಗಳನ್ನು ಪಾಲಿಸುವುದು ಕಡ್ಡಾಯವಾಗಿದೆ.
Good news for those who are struggling to pay off a bank loan