ಯಾವುದೇ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ, ಆರ್‌ಬಿಐ ಹೊಸ ಸೂಚನೆ

ಸಾಲ ಮರುಪಾವತಿ (Loan-Re Payment) ಮಾಡಿದ ನಂತರ ಗ್ರಾಹಕರ ಆಸ್ತಿ ಅಡಮಾನ ಇಟ್ಟುಕೊಂಡಿದ್ದರೆ ಅದನ್ನು ಹತ್ತು ದಿನಗಳ ಒಳಗೆ ಹಿಂತಿರುಗಿಸಿ ಕೊಡಬೇಕು.

ಭಾರತೀಯ ರಿಸರ್ವ್ ಬ್ಯಾಂಕ್ (Reserve Bank of India) ದೇಶದ ಗ್ರಾಹಕರಿಗೆ ಅದ್ರಲ್ಲೂ ಬ್ಯಾಂಕ್ ವ್ಯವಹಾರ (bank transaction) ಮಾಡುವವರಿಗೆ ಅನುಕೂಲವಾಗುವಂತೆ ಸಾಕಷ್ಟು ಹೊಸ ರೀತಿಯ ಬದಲಾವಣೆಗಳನ್ನು ಮಾಡಿದೆ. ಬ್ಯಾಂಕಿಂಗ್ ನಿಯಮಗಳಲ್ಲಿ (banking rules) ಮಾಡಲಾಗುತ್ತಿರುವ ಈ ನಿಯಮ ಬದಲಾವಣೆ ಸಾಕಷ್ಟು ಗ್ರಾಹಕರಿಗೆ ಅನುಕೂಲವಾಗಿದೆ ಎನ್ನಬಹುದು.

ಇತ್ತೀಚೆಗೆ ಆರ್ ಬಿ ಐ ಹೊಸದೊಂದು ಆದೇಶ ಹೊರಡಿಸಿತ್ತು. ಸಾಲ ಮರುಪಾವತಿ (Loan-Re Payment) ಮಾಡಿದ ನಂತರ ಗ್ರಾಹಕರ ಆಸ್ತಿ ಅಡಮಾನ ಇಟ್ಟುಕೊಂಡಿದ್ದರೆ ಅದನ್ನು ಹತ್ತು ದಿನಗಳ ಒಳಗೆ ಹಿಂತಿರುಗಿಸಿ ಕೊಡಬೇಕು.

ಒಂದು ವೇಳೆ 30 ದಿನಗಳ ಒಳಗೆ ಅಂದರೆ ಸಾಲಗಾರ ಸಾಲ (Loan) ತೀರಿಸಿದ ನಂತರವೂ ಬ್ಯಾಂಕ್ ಅಡಮಾನ ಇಟ್ಟ ಪತ್ರಗಳನ್ನು (property documents for security) ಹಿಂತಿರುಗಿಸದೆ ಇದ್ದಲ್ಲಿ ಪ್ರತಿದಿನ 5000 ಗಳಂತೆ ದಂಡ ಪಾವತಿ ಮಾಡಬೇಕು ಎಂದು ಆದೇಶ ಹೊರಡಿಸಿದೆ

ಯಾವುದೇ ಬ್ಯಾಂಕುಗಳಲ್ಲಿ ಸಾಲ ಮಾಡಿರುವವರಿಗೆ ಸಿಹಿ ಸುದ್ದಿ, ಆರ್‌ಬಿಐ ಹೊಸ ಸೂಚನೆ - Kannada News

ಹೀಗಾಗಿ ಎಲ್ಲಾ ಬ್ಯಾಂಕುಗಳು (Banks) ಬಹಳ ಜಾಗರೂಕತೆಯಿಂದ ಸಾಲ ಮರುಪಾವತಿ ಮಾಡಿದ ನಂತರ ಆ ಗ್ರಾಹಕರ ಆಸ್ತಿ ಅಡಮಾನ ಪತ್ರ ಹಿಂತಿರುಗಿಸುವ ಕೆಲಸ ಮಾಡುತ್ತಿವೆ.

ಒಂದಕ್ಕಿಂತ ಹೆಚ್ಚು ಕಡೆ ಆಸ್ತಿ ಹೊಂದಿರುವವರೆಗೂ ಬಂತು ಹೊಸ ರೂಲ್ಸ್; ಹೊಸ ನಿಯಮ

ಬ್ಯಾಂಕುಗಳಿಗೆ ಮತ್ತೊಂದು ಹೊಸ ಆದೇಶ!

ಸಾಮಾನ್ಯವಾಗಿ ಸಾಲ ಪಡೆದುಕೊಂಡ ನಂತರ ಅದನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಬೇಕು. ಹಾಗಾಗಿ ಯಾವುದೇ ಬ್ಯಾಂಕ್ ಇರಲಿ ಅಥವಾ ಹಣಕಾಸು ಸಂಸ್ಥೆಗಳೇ (chal company) ಇರಲಿ ಯಾವುದೇ ಗ್ರಾಹಕನಿಗೆ ಸಾಲ ಕೊಟ್ಟ ನಂತರ ಅದನ್ನ ಸರಿಯಾದ ಸಮಯಕ್ಕೆ ಮರುಪಾವತಿ ಮಾಡದೆ ಇದ್ದರೆ ಕರೆ ಮಾಡಿ ಅಥವಾ ನೋಟಿಸ್ (notice) ಕಳುಹಿಸಿ ಅಥವಾ ಏಜೆಂಟ್ (agent) ಗಳ ಮೂಲಕ ಹಣ ವಸೂಲಿ ಮಾಡಲು ಪ್ರಯತ್ನಿಸುತ್ತವೆ.

ಈ ಸಮಯದಲ್ಲಿ ಬ್ಯಾಂಕುಗಳು ಕರೆ ಮಾಡುವಂತಿಲ್ಲ!

Loanಸಾಲ (Loan) ತೆಗೆದುಕೊಂಡ ವ್ಯಕ್ತಿ ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡದೆ ಇದ್ದರೆ ಆತನಿಗೆ ಕರೆ ಮಾಡಿ ಸಾಲ ತೀರಿಸುವಂತೆ ಕೇಳಬಹುದು ಅದಾದ ಬಳಿಕ ನೋಟಿಸ್ ಜಾರಿ ಮಾಡಬಹುದು ಅಥವಾ ಏಜೆಂಟ್ ಗಳ ಮೂಲಕ ಸಾಲ ಮರುಪಾವತಿ ಮಾಡುವಂತೆ ಹೇಳಬಹುದು.

ಆದರೆ ಇದಕ್ಕೂ ಒಂದು ನಿಗದಿತ ಸಮಯ ಇದೆ. ಬ್ಯಾಂಕಿಗೆ ಸಂಬಂಧಪಟ್ಟ ಯಾವುದೇ ಏಜೆಂಟ್ ಅಥವಾ ಸಿಬ್ಬಂದಿ, ಬೆಳಿಗ್ಗೆ 8:00 ಮೊದಲು ಹಾಗೂ ಸಂಜೆ ಏಳು ಗಂಟೆಯ ನಂತರ ಯಾವುದೇ ಕಾರಣಕ್ಕೂ ಗ್ರಾಹಕರಿಗೆ ಕರೆ ಮಾಡಿ ತೊಂದರೆ ನೀಡಬಾರದು.

ಸಾಲ ಹಿಂತಿರುಗಿಸಿ ಕಟ್ಟುವಂತೆ ಬೆಳಿಗ್ಗೆ ಎಂಟರಿಂದ ಸಂಜೆ 7:00 ಒಳಗಿನ ಅವಧಿಯಲ್ಲಿ ಕರೆ ಮಾಡಬಹುದು. ಇದು ಎಲ್ಲಾ ಬ್ಯಾಂಕ್ ಹಾಗೂ ಹಣಕಾಸು ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಪ್ರಸ್ತಾವನೆಯಲ್ಲಿ ತಿಳಿಸಿದ ಈ ಆದೇಶವನ್ನು ಪ್ರತಿಯೊಂದು ಬ್ಯಾಂಕ್ ಕೂಡ ಪಾಲಿಸಲೇಬೇಕಿದೆ.

Good news for those who have taken loans from any banks, RBI has issued a new notice

Follow us On

FaceBook Google News

Good news for those who have taken loans from any banks, RBI has issued a new notice