5 ಯೋಜನೆಗಳ ಬೆನ್ನಲ್ಲೇ ರೈತರಿಗೆ ಗುಡ್ ನ್ಯೂಸ್ ಕೊಟ್ಟ ಸರ್ಕಾರ, ನಿಮ್ಮ ಹೊಲಕ್ಕೆ ಉಚಿತ ರಸ್ತೆ! ಇಂದೇ ಅರ್ಜಿ ಸಲ್ಲಿಸಿ!
ಕಾಂಗ್ರೆಸ್ ಸರ್ಕಾರ ರೈತರು ಹೊಲಗಳು ಹಾಗೂ ಗದ್ದೆಗಳಿಗೆ ಬಳಸುವ ಸಲಕರಣೆಗಳ ಮೇಲೂ ಕೂಡ ಈಗ ಸಬ್ಸಿಡಿ ನೀಡುವ ಮೂಲಕ ಸಹಾಯ ಹಸ್ತ ನೀಡಿದೆ.
ಯೋಜನೆಗಳ ಭರವಸೆ ಮೂಡಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ, ತಮ್ಮ ಐದು ವರ್ಷಗಳ ಅವಧಿಯಲ್ಲಿ ಮೂರು ತಿಂಗಳು ಕಳೆದಿದೆ. ಈ ಮೂರು ತಿಂಗಳ ಕಾಲಾವಕಾಶದಲ್ಲಿ ಕಾಂಗ್ರೆಸ್ ಸರ್ಕಾರ (Congress government) ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಸಿದ್ದರಾಮಯ್ಯ ( Siddaramaiah) ಅವರು ತಂದಿರುವ ಯೋಜನೆಗಳು ಹೆಚ್ಚಾಗಿ ರೈತರ (Farmers Scheme) ಹಾಗೂ ಮಹಿಳೆಯರ ಆರ್ಥಿಕ ಬದುಕಿಗೆ ಸಹಾಯ ಹಸ್ತ ನೀಡುತ್ತಿದೆ ಎಂದರೆ ತಪ್ಪಾಗಲಾರದು.
ಸಿದ್ದರಾಮಯ್ಯ ಅವರು ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ಕೂಡ ಬಿಡುಗಡೆ ಮಾಡಿದ್ದು ಈ ಬೆನ್ನಲ್ಲೇ ಮತ್ತೊಂದು ಯೋಜನೆಯನ್ನು ರೈತರಿಗಾಗಿ ತಂದಿದ್ದಾರೆ. ಹೌದು ಈ ಬಾರಿಯ ಕಾಂಗ್ರೆಸ್ ಸರ್ಕಾರ ನಮ್ಮ ದೇಶದ ಬೆನ್ನೆಲುಬು ರೈತರಿಗೆ ಆರ್ಥಿಕ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ. ರೈತರ ಬೆಳೆಗಳಿಗೆ ವಿಮೆ ಮಾಡಿದ್ದು ರೈತರು ಬೆಳೆಯುವ ವಿವಿಧ ಬೆಳೆಗಳು ವಾತಾವರಣದ ಕಾರಣದಿಂದ ನಷ್ಟವಾದರೆ ಆ ನಷ್ಟ ತುಂಬಲು ವಿಮೆ (Farmers Insurance) ಮಾಡಿಸಲಿದೆ.
ಬೆಳೆಗೆ ಮಾತ್ರವಲ್ಲದೆ ರೈತರಿಗೆ ಸಹಾಯವಾಗುವ ಹಸು, ಎಮ್ಮೆ ಹಾಗೂ ಆಡು ಮರಿಗಳು ಆಕಸ್ಮಿಕ ಮರಣ ಹೊಂದಿದರೆ ಆ ನಷ್ಟ ಪರಿಹಾರ ಮಾಡಲು ವಿಮೆಯ ಸೌಲಭ್ಯ ನೀಡಲಾಗಿದೆ. ಇದೀಗ ಕಾಂಗ್ರೆಸ್ ಸರ್ಕಾರ (Congress Government) ರೈತರು ಹೊಲಗಳು ಹಾಗೂ ಗದ್ದೆಗಳಿಗೆ ಬಳಸುವ ಸಲಕರಣೆಗಳ ಮೇಲೂ ಕೂಡ ಈಗ ಸಬ್ಸಿಡಿ ನೀಡುವ ಮೂಲಕ ಸಹಾಯ ಹಸ್ತ ನೀಡಿದೆ.
ರೈತರು ಬಳಸುವ ಸಲಕರಣೆಗಳ ಮೇಲೆ ಶೇಕಡ 75% ವರೆಗೂ ಅನುದಾನ ಹಣವನ್ನು ನೀಡಲು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಇದೀಗ ಈ ಬೆನ್ನಲ್ಲೇ ರಾಜ್ಯ ಸರ್ಕಾರ ರೈತರಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಆ ಸಿಹಿ ಸುದ್ದಿ ಏನು ಈ ಹೊಸ ಯೋಜನೆಯಿಂದ ರೈತ ಬಾಂಧವರಿಗೆ ಹೇಗೆ ಉಪಯೋಗ ಎನ್ನುವ ಸಂಪೂರ್ಣ ಮಾಹಿತಿ ಪಡೆಯಲು ನಮ್ಮ ಲೇಖನವನ್ನು ಪೂರ್ತಿ ಓದಿ..
ಕೆಲ ರೈತರ ಹೊಲ ಹಾಗೂ ಗದ್ದೆಗಳು ಬೇರೆಯವರ ಹೊಲ ಅಥವಾ ಗದ್ದೆಗಳ ಮಧ್ಯದಲ್ಲಿ ಇರುವ ಉದಾಹರಣೆಗಳು ನಮ್ಮಲ್ಲಿ ಸಾಕಷ್ಟಿವೆ. ಅವರ ಹೊಲ ಗದ್ದೆ ತಲುಪಲು ಬೇರೆಯವರ ಹೊಲ ಗದ್ದೆಯ ದಾಟಿ ಹೋಗುವ ಕಾರಣದಿಂದಲೇ ಕೆಲ ರೈತರ ನಡುವೆ ಸಂಘರ್ಷಗಳು ಆಗುವ ಪರಿಸ್ಥಿತಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ಸಮಸ್ಯೆಗೆ ಪರಿಹಾರ ಮಾಡಲು ರಾಜ್ಯದ ರೈತರ ಜಮೀನಿಗೆ ಪ್ರತ್ಯೇಕ ಮಾರ್ಗ ಮಾಡಿಕೊಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿದೆ.
ಈ ಯೋಜನೆಗೆ ರೈತರು ಅರ್ಜಿ ಸಲ್ಲಿಸಬಹುದು, ಅದರ ಖರ್ಚು ವೆಚ್ಚದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ರೈತರು ಹಳ್ಳಿಯ ಪಂಚಾಯಿತಿಗೆ (Village Panchayat) ಸಲ್ಲಿಸಬೇಕು. ಈ ನರೇಗಾ ಯೋಜನೆ ಅಥವಾ ಉದ್ಯೋಗ ಖಾತರಿ ಯೋಜನೆಯ ಅಡಿಯಲ್ಲಿ ರೈತರು ತಮ್ಮ ಜಮೀನಿಗೆ ರಸ್ತೆ ಮಾಡಿಕೊಳ್ಳಲು ಸರ್ಕಾರದ ವತಿಯಿಂದ ಸಹಾಯ ಪಡೆಯಬಹುದು. ರೈತರಿಗೆ ರಸ್ತೆ ಮಾಡಿಕೊಟ್ಟು ರೈತರ ನಡುವೆ ಜಗಳಗನ್ನು ತಪ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.
Good news to farmers from government news free road scheme