ಗೂಗಲ್ ಪೇ ಗ್ರಾಹಕರಿಗೆ ಸುಲಭವಾಗಿ ಸಿಗಲಿದೆ 1 ಲಕ್ಷದವರೆಗೆ ಪರ್ಸನಲ್ ಲೋನ್
Personal Loan : ನಾವು ಯಾವುದೇ ರೀತಿಯ ದೈನಂದಿನ ಹಣಕಾಸು ವಹಿವಾಟಿಗಾಗಿ ಯುಪಿಐ ಪೇಮೆಂಟ್ (UPI Payment) ಬಳಸುತ್ತೇವೆ. ಇನ್ನು ಯುಪಿಐ ಪೇಮೆಂಟ್ ಗಾಗಿ ಬೇರೆ ಬೇರೆ ರೀತಿಯ ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಲಭ್ಯವಿದ್ದು ಅವುಗಳಲ್ಲಿ ಗೂಗಲ್ ಇಂಡಿಯಾದ ಗೂಗಲ್ ಪೇ (Google Pay) ಅಪ್ಲಿಕೇಶನ್ ಕೂಡ ಒಂದು.
ಕ್ಷಣಮಾತ್ರದಲ್ಲಿ ಯಾವುದೇ ರೀತಿಯ ಪೇಮೆಂಟ್ ಮಾಡಿಕೊಳ್ಳಲು ಸಹಾಯಕವಾಗುವಂತಹ ಗೂಗಲ್ ಪೇ ಇದೀಗ ಗ್ರಾಹಕರಿಗೆ ಅನುಕೂಲವಾಗುವಂತಹ ಮತ್ತೊಂದು ಸೌಲಭ್ಯ ಒದಗಿಸಲು ಮುಂದಾಗಿದೆ.
PhonePe Loan: ಫೋನ್‌ಪೇ ಮೂಲಕ ಪೇಮೆಂಟ್ ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಪಡೆಯಿರಿ ಲೋನ್
ಗೂಗಲ್ ಪೇ ನೀಡುತ್ತೆ ಸಾಲ – Google Pay Loan
ನೀವು ವೈಯಕ್ತಿಕ ಸಾಲ ಮಾಡಲು ಬಯಸಿದರೆ ಅದು ಕೆಲವೇ ಕ್ಷಣಗಳಲ್ಲಿ ಸಿಗುವಂತೆ ಇದ್ದರೆ ಚೆನ್ನಾಗಿರುತ್ತೆ ಅಂತ ಅನ್ನಿಸುವುದು ಸಹಜ. ಹಾಗಾದರೆ ಚಿಂತೆಯೇ ಬೇಡ. ಇನ್ನು ಮುಂದೆ ಬ್ಯಾಂಕ್ ನಿಂದ ಬ್ಯಾಂಕ್ ಗೆ ಅಲೆಯುವುದು ಬೇಡ.
ಮೊಬೈಲ್ ನಲ್ಲಿಯೇ ಗೂಗಲ್ ಪೇ (Google pay) ಅಥವಾ Gpay ಅಪ್ಲಿಕೇಶನ್ ಇದ್ರೆ ಸಾಕು, ಸುಲಭವಾಗಿ ಒಂದು ಲಕ್ಷ ರೂಪಾಯಿಗಳ ವರೆಗೆ ವೈಯಕ್ತಿಕ ಸಾಲ (personal loan) ಪಡೆಯಬಹುದು. ಇದು ಹೆಚ್ಚು ಅನುಕೂಲವಾಗಲಿದ್ದು ಬಹಳ ತುರ್ತು ಪರಿಸ್ಥಿತಿಯಲ್ಲಿಯೂ ಕೂಡ ಸಾಲ ಸೌಲಭ್ಯ ಪಡೆದುಕೊಳ್ಳಬಹುದು.
ಯಾವುದೇ ದಾಖಲೆ ಬೇಡ (documents needed)
ಸಾಲ ಎಂದ ತಕ್ಷಣ ಯಾವುದೇ ಆಸ್ತಿ ಅಥವಾ ಇತರ ಅಮೂಲ್ಯ ವಸ್ತುಗಳ ಅಡಮಾನ ಇಡಬೇಕಾಗುತ್ತದೆ. ನೀವು ಗೂಗಲ್ ಪೇಯಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಲು ಯಾವುದೇ ಗ್ಯಾರಂಟಿ (guarantee) ಇಡಬೇಕಾಗಿಲ್ಲ.
ಹಾಗೆಯೇ ನಿಮಗೆ ರೂ.1,00,000ಗಳ ವರೆಗೆ ಸಾಲ ಪಡೆದುಕೊಳ್ಳಲು ಸಾಧ್ಯವಿದೆ. ಆಕ್ಸಿಸ್ ಬ್ಯಾಂಕ್ (Axis Bank) , ಐಡಿಎಫ್‌ಸಿ ಬ್ಯಾಂಕ್ (IDFC bank) ಮೊದಲಾದ ಬ್ಯಾಂಕ್ ಗಳ ಜೊತೆಗೆ ಕಾರ್ಯನಿರ್ವಹಿಸುತ್ತಿರುವ Google pay ಈ ಬ್ಯಾಂಕ್ ಗಳ ಮೂಲಕ ಗ್ರಾಹಕರಿಗೆ ಸಾಲ ಸೌಲಭ್ಯ (loan) ಒದಗಿಸುತ್ತದೆ ಅಂದರೆ ಗ್ರಾಹಕರು ಹಾಗೂ ಬ್ಯಾಂಕುಗಳ ನಡುವೆ ಗೂಗಲ್ ಪೇ, ಮಧ್ಯವರ್ತಿಯಂತೆ ಕೆಲಸ ನಿರ್ವಹಿಸುತ್ತದೆ.
ಎಜುಕೇಶನ್ ಲೋನ್ ತೆಗೆದುಕೊಳ್ಳುವ ಮುನ್ನ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು
ಗೂಗಲ್ ಪೇ ವೈಯಕ್ತಿಕ ಸಾಲ (Who can get Google pay personal loan)
ಗೂಗಲ್ ಪೇ ಮೂಲಕ ವೈಯಕ್ತಿಕ ಸಾಲ ಪಡೆದುಕೊಳ್ಳಲು ನೀವು ಗೂಗಲ್ ಪೇ ಗ್ರಾಹಕರಾಗಿರಬೇಕು, ದೈನಂದಿನ ವ್ಯವಹಾರದಲ್ಲಿ ಗೂಗಲ್ ಪೇಯನ್ನು ಬಳಸಬೇಕು. ಸಾಲ ಪಡೆದುಕೊಳ್ಳಲು ಯಾವುದೇ ದಾಖಲೆ ಕೊಡಬೇಕಾಗಿಲ್ಲ, ಆದರೆ ನಿಮ್ಮ ಕ್ರೆಡಿಟ್ ಸ್ಕೋರ್ (credit score) ಉತ್ತಮವಾಗಿರಬೇಕು.
750 ಪಾಯಿಂಟ್ಗಿಂತಲೂ ಅಧಿಕವಾಗಿರುವ ಕ್ರೆಡಿಟ್ ಸ್ಕೋರ್ ನಿಮ್ಮದಾಗಿದ್ದರೆ ಸುಲಭವಾಗಿ ಒಂದೇ ಒಂದು ಕ್ಲಿಕ್ ನಲ್ಲಿ ಗೂಗಲ್ ಪೇ ಲೋನ್ ಪಡೆದುಕೊಳ್ಳಲು ಸಾಧ್ಯ.
ಇನ್ನು ಗೂಗಲ್ ಪೇ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಲು ನೀವು ನಿಮ್ಮ ಆಧಾರ್ ಕಾರ್ಡ್, ಬ್ಯಾಂಕ್ ನ ಐ ಎಫ್ ಎಸ್ ಸಿ ಕೋಡ್, ಮೊಬೈಲ್ ಸಂಖ್ಯೆ ಇ-ಮೇಲ್ ಐಡಿ ಮೊದಲಾದ ದಾಖಲೆಗಳನ್ನು ನೀಡಬೇಕಾಗುತ್ತದೆ.
ಚಿನ್ನದ ಬೆಲೆ ಭಾರೀ ಇಳಿಕೆ, ಅಂಗಡಿಗಳ ಮುಂದೆ ಜನಜಂಗುಳಿ! ಇಲ್ಲಿದೆ ಫುಲ್ ಡೀಟೇಲ್ಸ್
ಗೂಗಲ್ ಪೇ ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? (How to apply)
ಗೂಗಲ್ ಪೇ ಗ್ರಾಹಕರಾಗಿದ್ದರೆ 15,000 ಗಳಿಂದ ಒಂದು ಲಕ್ಷ ರೂಪಾಯಿಗಳ ವರೆಗೂ ಕೂಡ ಸಾಲ ಪಡೆದುಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನೀವು ಮೊದಲು ನಿಮ್ಮ ಮೊಬೈಲ್ ನಲ್ಲಿ ಗೂಗಲ್ ಅಪ್ಲಿಕೇಶನ್ ತೆರೆಯಿರಿ.
ನೀವು ಸ್ವಲ್ಪ ಸ್ಕ್ರಾಲ್ ಡೌನ್ ಮಾಡಿದರೆ ಲೋನ್ ಎನ್ನುವ ಆಯ್ಕೆ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿದರೆ ಇನ್ನೊಂದು ಪೇಜ್ ಓಪನ್ ಆಗುತ್ತದೆ, ಅದರಲ್ಲಿ ಪಡೆಯಬಹುದಾದ ಸಾಲದ ಮೊತ್ತ, EMI ಇನ್ನಿತರ ಮಾಹಿತಿಗಳು ಇರುತ್ತವೆ.
ನಂತರ ನೀವು ಕಂಟಿನ್ಯೂ ಎಂದು ಪ್ರೆಸ್ ಮಾಡಿ. ಈಗ ನೀವು ಸಾಲ ಪಡೆದುಕೊಳ್ಳಲು ಅರ್ಹರಾಗಿದ್ದರೆ ಅದರ ಬಗ್ಗೆ ಮಾಹಿತಿ ಲಭ್ಯವಾಗುತ್ತದೆ. ನಂತರ ನೀವು ನಿಮ್ಮ ವಿವರಗಳನ್ನು ನಮೂದಿಸಿ ಸಾಲಕ್ಕೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಕ್ಷಣಮಾತ್ರದಲ್ಲಿ ನಿಮ್ಮ ಖಾತೆಗೆ (Bank Account) ಹಣ ವರ್ಗಾವಣೆ ಆಗುತ್ತದೆ.
Google Pay customers will easily get a personal loan up to 1 lakh
Our Whatsapp Channel is Live Now 👇