PhonePe Loan: ಫೋನ್‌ಪೇ ಮೂಲಕ ಪೇಮೆಂಟ್ ಮಾತ್ರವಲ್ಲ, ಕ್ಷಣಮಾತ್ರದಲ್ಲಿ ಪಡೆಯಿರಿ ಲೋನ್

PhonePe Loan : ಫೋನ್‌ಪೇ ಮೂಲಕ ಅರ್ಹ ಗ್ರಾಹಕರು ಸುಲಭವಾಗಿ ವೈಯಕ್ತಿಕ ಸಾಲವನ್ನು (personal loan) ಪಡೆದುಕೊಳ್ಳಬಹುದು.

Bengaluru, Karnataka, India
Edited By: Satish Raj Goravigere

PhonePe Loan : ಇಂದು ಸಾಮಾನ್ಯವಾಗಿ ಎಲ್ಲರೂ ಯುಪಿಐ ಮೂಲಕವೇ ಪೇಮೆಂಟ್ (UPI payment) ಗಳನ್ನು ಮಾಡುತ್ತೇವೆ, ಅದರಲ್ಲೂ ಯುಪಿಐ ಪೇಮೆಂಟ್ ಮಾಡುವುದಕ್ಕೆ ಸಹಾಯಕವಾಗುವಂತಹ Google pay, PhonePe, Paytm, Amazon pay ಮೊದಲಾದ ಆಪ್ ಗಳು ಕೂಡ ಲಭ್ಯವಿದ್ದು ನಾವು ನಮ್ಮ ಮೊಬೈಲ್ ಮೂಲಕ ಈ ಆಪ್ ಗಳನ್ನು ಬಳಸಿಕೊಂಡು ಕ್ಷಣಮಾತ್ರದಲ್ಲಿ ಪೇಮೆಂಟ್ ಮಾಡಬಹುದು. ಪಿನ್ ಕೋಡ್ ಬಳಸದೆಯೂ (without pin code payment) ಕೂಡ ಪೇಮೆಂಟ್ ಮಾಡುವಷ್ಟು ಸುಲಭವಾಗಿದೆ.

ಫೋನ್‌ಪೇ (phonepe instant loan) ಈಗ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಪೇಮೆಂಟ್ ಮಾಡುವುದು ಮಾತ್ರವಲ್ಲದೆ ತನ್ನ ಕೋಟ್ಯಂತರ ಗ್ರಾಹಕರಿಗೆ ಕ್ಷಣಮಾತ್ರದಲ್ಲಿ ಸಾಲ ಸೌಲಭ್ಯ ನೀಡುವ ಹೊಸ ವ್ಯವಸ್ಥೆಯನ್ನು ಕೂಡ ಆರಂಭಿಸುತ್ತಿದೆ, ಇದರಿಂದ ಅರ್ಹ ಗ್ರಾಹಕರು ಸುಲಭವಾಗಿ ವೈಯಕ್ತಿಕ ಸಾಲವನ್ನು (personal loan) ಪಡೆದುಕೊಳ್ಳಬಹುದು.

Here are the tricks to earn 500 to 1000 per day using your PhonePe account

ಎಜುಕೇಶನ್ ಲೋನ್ ತೆಗೆದುಕೊಳ್ಳುವ ಮುನ್ನ ನೀವು ತಿಳಿದುಕೊಳ್ಳಬೇಕಾದ ವಿಷಯಗಳಿವು

ನಮ್ಮ ದೇಶದಲ್ಲಿ ಇರುವ ಐವತ್ತು ಕೋಟಿಗೂ ಹೆಚ್ಚು ಯುಪಿಐ ಬಳಕೆದಾರರ ಪೈಕಿ ಫೋನ್‌ಪೇ ಗ್ರಾಹಕರು ಸುಮಾರು 3.7 ಕೋಟಿ ಎಷ್ಟು ಎನ್ನಬಹುದು. ಈ ಎಲ್ಲ ಗ್ರಾಹಕರಿಗೂ ಅನುಕೂಲವಾಗುವಂತಹ ಸಾಲ ಸೌಲಭ್ಯ (Loan Facility) ನೀಡಲು ಮುಂದಾಗಿದೆ, ಹಣಕಾಸು ಕಂಪನಿಗಳ ಜೊತೆಗೆ ಮಾತುಕತೆ ನಡೆಸಿರುವ ಫೋನ್‌ಪೇ ಲೋನ್ ಸೌಲಭ್ಯವನ್ನು ಒದಗಿಸಿ ಕೊಡಲಿದೆ.

ಫೋನ್‌ಪೇ ಸಾಲ ಸೌಲಭ್ಯ – PhonePe instant loan

PhonePe instant loanಫೋನ್ ಪೇ ಲೋನ್ ಪ್ರಕ್ರಿಯೆ ಸುಮಾರು ಆರು ತಿಂಗಳುಗಳ ಅವಧಿಯಲ್ಲಿ ಆರಂಭವಾಗಲಿದೆ ಎನ್ನಬಹುದು, ಯಾಕೆಂದರೆ ಈಗಾಗಲೇ ಫೋನ್‌ಪೇ ತನ್ನಲಿರುವ ಗ್ರಾಹಕರನ್ನ ಗುರುತಿಸುತ್ತಿದೆ. ಅದರ ಆಧಾರದ ಮೇಲೆ ಯಾರಿಗೆ ಲೋನ್ ಕೊಡಬಹುದು ಎನ್ನುವುದನ್ನ ಫೋನ್‌ಪೇ ನಿಶ್ಚಯಿಸುತ್ತದೆ. ಅಲ್ಲದೆ ಇತರ ಬ್ಯಾಂಕ್ ಹಾಗೂ ಬ್ಯಾಂಕಿಂಗ್ ಅಲ್ಲದ (NFBC) ಕಂಪನಿಗಳ ಜೊತೆಗೂ ಮಾತನಾಡಿರುವ ಫೋನ್‌ಪೇ ಅವರ ಸಹಾಯದ ಮೇರೆಗೆ ತನ್ನಲ್ಲಿ ಸಾಲ ಸೌಲಭ್ಯ ಒದಗಿಸಲು ಮುಂದಾಗಿದೆ.

ಚಿನ್ನದ ಬೆಲೆ ಭಾರೀ ಇಳಿಕೆ, ಅಂಗಡಿಗಳ ಮುಂದೆ ಜನಜಂಗುಳಿ! ಇಲ್ಲಿದೆ ಫುಲ್ ಡೀಟೇಲ್ಸ್

ಫೋನ್‌ಪೇ ಸಾಲ ಸೌಲಭ್ಯ ಯಾರಿಗೆ ಸಿಗುತ್ತೆ? (Who are Eligible)

ಫೋನ್‌ಪೇ ಮೂಲಕ ಸಾಲ ಸೌಲಭ್ಯ ಪಡೆದುಕೊಳ್ಳಲು ಯಾರು ಉತ್ತಮ ಸಿಬಿಲ್ ಸ್ಕೋರ್ (CIBIL score) ಹೊಂದಿದ್ದಾರೋ ಅಂಥವರು ಅರ್ಹರು ಎನ್ನಬಹುದು, ವಯಕ್ತಿಕ ಸಾಲ ಪಡೆದುಕೊಳ್ಳಲು ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ ಸಾಕು ಇದಕ್ಕೆ ಬೇರೆ ಯಾವ ದಾಖಲೆಗಳನ್ನು ಕೂಡ ನೀವು ನೀಡಬೇಕಾಗಿಲ್ಲ.

ಕ್ರೆಡಿಟ್ ಸ್ಕೋರ್ (Credit Score) ಅಥವಾ ಸಿಬಿಲ್ ಸ್ಕೋರ್ 750ಕ್ಕಿಂತ ಜಾಸ್ತಿ ಇದ್ದರೆ ಸುಲಭವಾಗಿ ಸಾಲ ಪಡೆದುಕೊಳ್ಳಬಹುದು. ನೀವು ನಿಮ್ಮ ಕ್ರೆಡಿಟ್ ಸ್ಕೋರ್ ಅನ್ನು ಆನ್ಲೈನ್ ಮೂಲಕ ಚೆಕ್ ಮಾಡಿಕೊಳ್ಳಬಹುದು. ಅಥವಾ ಹತ್ತಿರದ ಯಾವುದೇ ಸೈಬರ್ ಸೆಂಟರ್ ನಲ್ಲಿ ಪ್ಯಾನ್ ಕಾರ್ಡ್ ಮಾಹಿತಿ ನೀಡಿ ಚೆಕ್ ಮಾಡಿಸಿಕೊಳ್ಳಿ.

151 ಕಿಮೀ ಮೈಲೇಜ್ ನೀಡೋ ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ ಮೇಲೆ 20 ಸಾವಿರ ರಿಯಾಯಿತಿ

ಗೂಗಲ್ ಪೇ ಸಾಲ (Google pay loan)

ಪೇಮೆಂಟ್ಗಾಗಿ ನಾವು ಬಳಸುವ ಮತ್ತೊಂದು ಜನಪ್ರಿಯ ಅಪ್ಲಿಕೇಶನ್ ಗೂಗಲ್ ಪೇ ಆಗಿದೆ ಇದನ್ನ ಈಗ ಜಿಪೇ ಎಂದು ಗುರುತಿಸಲಾಗುತ್ತದೆ. ಜಿಪೆಯಲ್ಲಿ ಸಣ್ಣ ವ್ಯಾಪಾರಿಗಳು, ಕ್ಷಣಮಾತ್ರದಲ್ಲಿ 15 ಸಾವಿರ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು. ವಿಶೇಷ ಅಂದರೆ ಇದಕ್ಕೆ ನೀವು ಪಾವತಿ ಮಾಡಬೇಕಾಗಿರುವ ತಿಂಗಳ EMI 111ರೂ. ಗಳು ಮಾತ್ರ.

ಗೂಗಲ್ ಪೇ ಸದ್ಯ ಈ ಪೇಲೇಟರ್ ಸಹಭಾಗಿತ್ವದಲ್ಲಿ ಸಣ್ಣ ವ್ಯಾಪಾರಿಗಳಿಗೆ ಸಾಲ ಸೌಲಭ್ಯವನ್ನು ಒದಗಿಸಿ ಕೊಡುತ್ತಿದೆ. ನಮಗೆಲ್ಲ ತಿಳಿದಿರುವಂತೆ ಯಾವುದೇ ಸಾಲ ಸೌಲಭ್ಯವನ್ನು ಬ್ಯಾಂಕ್ ಮೂಲಕ ಪಡೆದುಕೊಳ್ಳುವುದಿದ್ದರೆ, ಇದಕ್ಕೆ ಸಾಕಷ್ಟು ಸಮಯ ಬೇಕು, ಅಲ್ಲದೆ ದಾಖಲೆಗಳನ್ನು ಪರಿಶೀಲನೆ ಮಾಡಿ ನಿಮಗೆ ಅನುಮೋದನೆ ನೀಡಲು ತಿಂಗಳುಗಟ್ಟಲೆ ಕಾಯಬೇಕು.

ಆದರೆ ಈಗ ಹಾಗಿಲ್ಲ, ಡಿಜಿಟಲ್ ಸಾಲ (digital loan) ಸೌಲಭ್ಯಗಳು ಜನರಿಗೆ ತುರ್ತು ಪರಿಸ್ಥಿತಿಯಲ್ಲಿ ಉಪಯೋಗಕ್ಕೆ ಬರುತ್ತದೆ. ಅದರಲ್ಲೂ ನೀವು ಮೊಬೈಲ್ ನಲ್ಲಿ ಯೇ ಕ್ಷಣಮಾತ್ರದಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು. ಗೂಗಲ್ ಪೇಯಲ್ಲಿ ಹತ್ತು ಲಕ್ಷದವರೆಗೂ ಕೂಡ ವೈಯಕ್ತಿಕ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ, ಇದಕ್ಕೂ ಅಷ್ಟೇ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಬಹಳ ಮುಖ್ಯವಾಗಿರುತ್ತದೆ ಎಂಬುದನ್ನು ಮರೆಯಬೇಡಿ.

Not only UPI Payment, get loan instantly through PhonePe