ಸ್ಟೇಟ್ ಬ್ಯಾಂಕಿನಲ್ಲಿ 20 ವರ್ಷಕ್ಕೆ 40 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ ಇಎಂಐ ಎಷ್ಟು ಕಟ್ಟಬೇಕು?

Home Loan : ನಿಮಗೆ ಕಡಿಮೆ ಬಡ್ಡಿಗೆ ಲೋನ್ ಸಿಗಬೇಕು ಎಂದರೆ, ನಿಮ್ಮ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿರಬೇಕು. ಹೆಚ್ಚು ಸಿಬಿಲ್ ಸ್ಕೋರ್ ಇರುವವರಿಗೆ 8.50% ಬಡ್ಡಿದರಕ್ಕೆ ಹೋಮ್ ಲೋನ್ ಸಿಗುತ್ತದೆ

Bengaluru, Karnataka, India
Edited By: Satish Raj Goravigere

Home Loan : ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವ ಹಲವರ ಕನಸು ನನಸಾಗುವುದು ಹೋಮ್ ಲೋನ್ (Home Loan) ಮೂಲಕ. ಮನೆ ಕಟ್ಟುವುದಕ್ಕೆ ಸಾಮಾನ್ಯವಾಗಿ ಹೋಮ್ ಲೋನ್ ಪಡೆಯುತ್ತಾರೆ. ಆದರೆ ಯಾವ ಬ್ಯಾಂಕ್ ನಲ್ಲಿ ಬಡ್ಡಿ ಕಡಿಮೆ, ಎಲ್ಲಿ ನಿಮಗೆ ಸರಿ ಹೊಂದುವ ಹಾಗೆ EMI ಪಾವತಿ ಮಾಡುವ ಆಯ್ಕೆ ಇರುತ್ತದೆ? ಇದೆಲ್ಲವನ್ನು ತಿಳಿದುಕೊಂಡು, ಉತ್ತಮವಾದ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯುವುದು ಒಳ್ಳೆಯದು.

ಹಾಗಿದ್ದಲ್ಲಿ ಹೋಮ್ ಲೋನ್ (Home Loan Tips) ಪಡೆಯುವುದಕ್ಕೆ ಯಾವ ಬ್ಯಾಂಕ್ ನಲ್ಲಿ ಯಾವ ರೂಲ್ಸ್ ಇದೆ ಎಂದು ಪೂರ್ತಿಯಾಗಿ ತಿಳಿಯೋಣ..

How much monthly EMI should I pay for a 30 lakh home loan for 15 to 20 years

SBI ಹೋಮ್ ಲೋನ್: SBI ನಲ್ಲಿ ಹೋಮ್ ಲೋನ್ ಗೆ ಕಡಿಮೆ ಬಡ್ಡಿದರದಿಂದ ಶುರುವಾಗಲಿದ್ದು, ಇಲ್ಲಿ 8.50% ಇಂದ ಬಡ್ಡಿದರ ಶುರುವಾಗುತ್ತದೆ. ಇಲ್ಲಿ ನಿಮಗೆ ಇಷ್ಟು ಕಡಿಮೆ ಬಡ್ಡಿಗೆ ಲೋನ್ ಸಿಗಬೇಕು ಎಂದರೆ, ನಿಮ್ಮ ಸಿಬಿಲ್ ಸ್ಕೋರ್ (CIBIL Score) ಉತ್ತಮವಾಗಿರಬೇಕು.

800 ಅಥವಾ ಅದಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಇರುವವರಿಗೆ 8.50% ಬಡ್ಡಿದರಕ್ಕೆ ಹೋಮ್ ಲೋನ್ ಸಿಗುತ್ತದೆ. 20 ವರ್ಷಗಳ ಅವಧಿಗೆ, 40 ಲಕ್ಷದವರೆಗೂ 8.50% ಬಡ್ಡಿದರಕ್ಕೆ ಹೋಮ್ ಲೋನ್ ಸಿಗುತ್ತದೆ.

ಒಂದೇ ಮೊಬೈಲ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ಇನ್ಮುಂದೆ ಹೊಸ ರೂಲ್ಸ್

ಇದಕ್ಕಾಗಿ ನೀವು ಪ್ರತಿ ತಿಂಗಳು ₹34,713 ರೂಪಾಯಿ ಇಎಂಐ ಪಾವತಿ ಮಾಡಬೇಕಾಗುತ್ತದೆ. ಇಲ್ಲಿ ನೀವು 20 ವರ್ಷದ ಅವಧಿಯಲ್ಲಿ ₹4,31,103 ರೂಪಾಯಿಗಳ ಬಡ್ಡಿ ಪಾವತಿ ಮಾಡಿರುತ್ತೀರಿ.

HDFC ಹೋಮ್ ಲೋನ್: ಈ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯುವವರಿಗೆ 8.75% ಇಂದ 9.95% ವರೆಗು ಬಡ್ಡಿದರ ನಿಗದಿ ಆಗುತ್ತದೆ. ಬಡ್ಡಿದರ ಎಷ್ಟು ನಿಗದಿ ಆಗುತ್ತದೆ ಎನ್ನುವುದು ನಿಮ್ಮ ಸಿಬಿಲ್ ಸ್ಕೋರ್ (Credit Score) ಎಷ್ಟಿದೆ ಎನ್ನುವುದರ ಮೇಲೆ ನಿರ್ಧಾರ ಆಗುತ್ತದೆ.

40 ಲಕ್ಷ ಹೋಮ್ ಲೋನ್ ಅನ್ನು, 8.75% ಬಡ್ಡಿದರದಲ್ಲಿ 20 ವರ್ಷದ ಅವಧಿಗೆ ಪಡೆದರೆ, ಪ್ರತಿ ತಿಂಗಳು ₹35,348 ರೂಪಾಯಿಗಳನ್ನು EMI ಕಟ್ಟಬೇಕಾಗುತ್ತದೆ. ಇಲ್ಲಿ ನೀವು ಸಾಲ ಪಡೆದರೆ, ₹4,83,623 ರೂಪಾಯಿ ಬಡ್ಡಿ ಪಾವತಿ ಮಾಡಿರುತ್ತೀರಿ.

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಈ ಬ್ಯಾಂಕ್ ಗ್ರಾಹಕರಿಗೆ ಕ್ಷಣದಲ್ಲಿ ಸಿಗುತ್ತೆ 10 ಲಕ್ಷ ಪರ್ಸನಲ್ ಲೋನ್!

Home Loanಬ್ಯಾಂಕ್ ಆಫ್ ಬರೋಡಾ: ಈ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆದುಕೊಳ್ಳುವುದು ಉತ್ತಮ. ಇಲ್ಲಿ ನಿಮಗೆ ಅತ್ಯಂತ ಕಡಿಮೆ ಬಡ್ಡಿದರಕ್ಕೆ ಹೋಮ್ ಲೋನ್ ಸಿಗಲಿದ್ದು, 8.40% ಬಡ್ಡಿದರದಿಂದ ಹೋಮ್ ಲೋನ್ ಶುರುವಾಗುತ್ತದೆ.

ನಿಮ್ಮ ಸಿಬಿಲ್ ಸ್ಕೋರ್ ಉತ್ತಮವಾಗಿದ್ದರೆ, 8.40% ಬಡ್ಡಿದರಲ್ಲಿ ನಿಮಗೆ ಹೋಮ್ ಲೋನ್ ಸಿಗುತ್ತದೆ. ಇಲ್ಲಿ ಹೋಮ್ ಲೋನ್ ಮೇಲಿನ ಬಡ್ಡಿದರ 8.40% ಇಂದ 10.60% ವರೆಗು ಇರುತ್ತದೆ. ನಿಮಗೆ ಎಷ್ಟು ಬಡ್ಡಿದರ ನಿಗದಿ ಆಗುತ್ತದೆ ಎನ್ನುವುದು ನಿಮ್ಮ ಸಿಬಿಲ್ ಸ್ಕೋರ್ ಮೇಲೆ ಅವಲಂಬಿಸಿರುತ್ತದೆ.

ಕೆನರಾ ಬ್ಯಾಂಕಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ ಲೋನ್! ಅದೂ ಅತೀ ಕಡಿಮೆ ಬಡ್ಡಿಗೆ

ICICI ಹೋಮ್ ಲೋನ್; ಈ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯುವವರಿಗೆ 9% ಇಂದ 10.05% ವರೆಗು ಬಡ್ಡಿದರ ನಿಗದಿ ಆಗಿರುತ್ತದೆ. ಪೂರ್ವ ಅನುಮೋದಿತ ಗ್ರಾಹಕರಾದರೆ ಅಂಥವರಿಗೆ 8.75% ಗೆ Home Loan ಸಿಗುತ್ತದೆ.

ಇಲ್ಲಿ ನಿಮಗೆ 40 ಲಕ್ಷ ಹೋಮ್ ಲೋನ್, 9% ಬಡ್ಡಿದರಕ್ಕೆ, 20 ವರ್ಷದ ಅವಧಿಗೆ ಪಡೆದರೆ ಪ್ರತಿ ತಿಂಗಳು ₹35,989 ರೂಪಾಯಿ ಇಎಂಐ ಪಾವತಿ ಮಾಡಬೇಕಾಗುತ್ತದೆ. ಇಲ್ಲಿ ನೀವು ಬಡ್ಡಿ 6,37,369 ರೂಪಾಯಿ ಪಾವತಿ ಮಾಡುತ್ತೀರಿ.

Monthly EMI For 40 lakh home loan Taken 20 years Tenure in State Bank Of India