ಒಂದೇ ಮೊಬೈಲ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ಇನ್ಮುಂದೆ ಹೊಸ ರೂಲ್ಸ್

ಒಬ್ಬ ವ್ಯಕ್ತಿಯ ಫೋನ್ ನಂಬರ್ ಗೆ ಎರಡರಿಂದ ಮೂರು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಅದಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಅದರಿಂದ ಸಮಸ್ಯೆ ಉಂಟಾಗಬಹುದು.

Bengaluru, Karnataka, India
Edited By: Satish Raj Goravigere

ಭಾರತ ದೇಶದ ಎಲ್ಲಾ ಪ್ರಜೆಗಳಿಗೆ ಆಧಾರ್ ಕಾರ್ಡ್ (Aadhaar Card) ಬಹಳ ಪ್ರಮುಖವಾಗಿ ಬೇಕಾಗಿರುವ ದಾಖಲೆ ಆಗಿದೆ. ಭಾರತೀಯ ನಾಗರೀಕರ ಪ್ರಮುಖವಾದ ಗುರುತಿನ ಚೀಟಿ ಇದು. ಆಧಾರ್ ಕಾರ್ಡ್ ಇದ್ದರೆ, ಅದರಿಂದ ಸಾಕಷ್ಟು ಪ್ರಯೋಜನಗಳನ್ನು ಕೂಡ ಪಡೆದುಕೊಳ್ಳಬಹುದು. ಸರ್ಕಾರದ ಸೌಲಭ್ಯಗಳು ಕೂಡ ಸಿಗುತ್ತದೆ.

ಹಾಗಾಗಿ ಎಲ್ಲರೂ ಆಧಾರ್ ಕಾರ್ಡ್ ಅನ್ನು ತಪ್ಪದೇ ಇಟ್ಟುಕೊಂಡಿರುತ್ತಾರೆ. ಹಾಗೆಯೇ ಆಧಾರ್ ಕಾರ್ಡ್ ಅನ್ನು ಇನ್ನಿತರ ಪ್ರಮುಖ ದಾಖಲೆಗಳ ಜೊತೆಗೆ ಲಿಂಕ್ ಮಾಡಬೇಕು. ಇದು ಸರ್ಕಾರದ ನಿಯಮ ಆಗಿದೆ. ಬಹುತೇಕ ಎಲ್ಲಾ ದಾಖಲೆಗಳ ಜೊತೆಗೆ ಆಧಾರ್ ಲಿಂಕ್ ಮಾಡಿರುತ್ತೇವೆ.

How many Aadhaar cards can be linked to a single mobile number

ಈ ರೀತಿ ಮಾಡುವುದರಿಂದ ಒಬ್ಬ ವ್ಯಕ್ತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಳನ್ನು ಅವರ ಆಧಾರ್ ಕಾರ್ಡ್ ಮೂಲಕ ಪಡೆಯಬಹುದು. ಒಬ್ಬ ವ್ಯಕ್ತಿ ತನ್ನ ಆಧಾರ್ ಕಾರ್ಡ್ ಗೆ ತನ್ನ ಫೋನ್ ನಂಬರ್ ಲಿಂಕ್ (Mobile Number) ಮಾಡಿರುತ್ತಾನೆ, ಒಂದು ವೇಳೆ ಸಣ್ಣ ಮಗುವಿನ ಆಧಾರ್ ಕಾರ್ಡ್ ಮಾಡಿಸಬೇಕು ಎಂದರೆ ಮಗುವಿನ ಹತ್ತಿರ ಫೋನ್ ಇಲ್ಲದ ಕಾರಣ ತಂದೆ ತಾಯಿಯ ಆಧಾರ್ ಕಾರ್ಡ್ ಲಿಂಕ್ ಮಾಡಿರಲಾಗುತ್ತದೆ.

ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಈ ಬ್ಯಾಂಕ್ ಗ್ರಾಹಕರಿಗೆ ಕ್ಷಣದಲ್ಲಿ ಸಿಗುತ್ತೆ 10 ಲಕ್ಷ ಪರ್ಸನಲ್ ಲೋನ್!

ಹಾಗೆಯೇ ಮನೆಯಲ್ಲಿ ವಯಸ್ಸಾದವರು ಇದ್ದು ಅವರಿಗೆ ಮೊಬೈಲ್ ಬಳಸಲು ಬರುವುದಿಲ್ಲ ಎಂದರೆ, ಅವರ ಆಧಾರ್ ಕಾರ್ಡ್ ಗು ಮಕ್ಕಳ ಫೋನ್ ನಂಬರ್ ಲಿಂಕ್ ಮಾಡುತ್ತಾರೆ. ಹಾಗಿದ್ದಲ್ಲಿ ಒಂದು ಫೋನ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ಪೂರ್ತಿ ಮಾಹಿತಿ ಪಡೆಯೋಣ..

ಒಂದು ವೇಳೆ ಮನೆಯಲ್ಲಿ ಮಗು ಇದ್ದರೆ ಅಥವಾ ಹಿರಿಯರು ಇದ್ದರೆ ಅವರು ತಮ್ಮ ಮನೆಯಲ್ಲಿ ಇರುವ ಮುಖ್ಯಸ್ಥರು ಅಥವಾ ತಮಗೆ ಇಷ್ಟವಾಗುವ ಇನ್ಯಾವುದೇ ವ್ಯಕ್ತಿಯ ಫೋನ್ ನಂಬರ್ ಗೆ ತಮ್ಮ ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಿಕೊಳ್ಳಬಹುದು.

ಹೀಗೆ ಒಬ್ಬ ವ್ಯಕ್ತಿಯ ಫೋನ್ ನಂಬರ್ ಗೆ ಎರಡರಿಂದ ಮೂರು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡಬಹುದು. ಅದಕ್ಕಿಂತ ಹೆಚ್ಚು ಆಧಾರ್ ಕಾರ್ಡ್ ಲಿಂಕ್ ಮಾಡಿದರೆ ಅದರಿಂದ ಸಮಸ್ಯೆ ಉಂಟಾಗಬಹುದು. ಹಾಗಾಗಿ ಆಧಾರ್ ಕಾರ್ಡ್ ಗೆ ಫೋನ್ ನಂಬರ್ ಲಿಂಕ್ ಮಾಡುವಾಗ ಹುಷಾರಾಗಿರಿ.

ನಿಮ್ಮತ್ರ ಸ್ವಂತ ಜಾಗ ಇದ್ರೆ ಜಿಯೋ ಸ್ಟೋರ್ ಫ್ರ್ಯಾಂಚೈಸಿ ಶುರು ಮಾಡಿ ಹಣ ಗಳಿಸಿ! ಬಂಪರ್ ಕೊಡುಗೆ

Aadhaar Cardಫೋನ್ ನಂಬರ್ ಲಿಂಕ್ ಮಾಡುವುದು ಯಾಕೆ?

ನೀವು ಸರ್ಕಾರಕ್ಕೆ ಸಂಬಂಧಿಸಿದ ಯಾವುದೇ ಕೆಲಸ ಮಾಡುವುದಕ್ಕೆ, ಯೋಜನೆಗಳಿಗೆ ಅರ್ಜಿ ಸಲ್ಲಿಸುವುದಕ್ಕೆ, ಯಾವುದೇ ಕೆಲಸಕ್ಕೆ ಅಪ್ಲೈ ಮಾಡುವುದಕ್ಕೆ ಆಧಾರ್ ಕಾರ್ಡ್ ಬೇಕಾಗುತ್ತದೆ.

ಇದಕ್ಕಾಗಿ ನಿಮ್ಮ ಫೋನ್ ನಂಬರ್ ಕೊಟ್ಟಾಗ, ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಹಾಗೆ ನಿಮ್ಮ ಫೋನ್ ನಂಬರ್ ಗೆ OTP ಬರುತ್ತದೆ. ಅದನ್ನು ನೀವು ಈ ಯಾವುದೇ ಕೆಲಸ ಮಾಡುವಾಗ ನೀಡಬೇಕಾಗುತ್ತದೆ. ಈ ಕಾರಣಗಳಿಗೆ ಆಕ್ಟಿವ್ ಆಗಿರುವ ಫೋನ್ ನಂಬರ್ ಅನ್ನು ಕೊಡುವುದು ಒಳ್ಳೆಯದು.

ಸಿಮೆಂಟ್ ಬೇಡ, ಮರಳು ಕೂಡ ಬೇಕಿಲ್ಲ ಕೇವಲ ₹8 ಲಕ್ಷಕ್ಕೆ ಕಟ್ಟಿಕೊಳ್ಳಿ ಸ್ವಂತ ಮನೆ! ಇಲ್ಲಿದೆ ಡೀಟೇಲ್ಸ್

ಗೊಂದಲ ಹೆಚ್ಚಾಗುತ್ತದೆ:

ನೀವು ನಿಮ್ಮ ಆಧಾರ್ ಕಾರ್ಡ್ ಗೆ ನಿಮ್ಮ ಪರ್ಸನಲ್ ಫೋನ್ ನಂಬರ್ ಲಿಂಕ್ ಮಾಡುವುದು ಒಳ್ಳೆಯದು. ಏಕೆಂದರೆ ಹೆಚ್ಚು ಆಧಾರ್ ಕಾರ್ಡ್ ಗೆ ಒಂದೇ ಫೋನ್ ನಂಬರ್ ಲಿಂಕ್ ಮಾಡಿ, ಅದಕ್ಕೆ ಬರುವ ಓಟಿಪಿ ಗಳು ಯಾವ ಆಧಾರ್ ಕಾರ್ಡ್ ಗೆ ಬಂದಿದೆ ಎನ್ನುವುದು ಕೂಡ ಗೊಂದಲ ಉಂಟು ಮಾಡುತ್ತದೆ. ಹಾಗಾಗಿ ನಿಮ್ಮ ಆಧಾರ್ ಗೆ ನಿಮ್ಮ ಫೋನ್ ನಂಬರ್ ಲಿಂಕ್ ಮಾಡಿ, ತುಂಬಾ ಅಗತ್ಯವಿದೆ ಎಂದರೆ ಮಾತ್ರ ಇನ್ನೊಬ್ಬರ ಆಧಾರ್ ಕಾರ್ಡ್ ಗೆ ನಿಮ್ಮ ಫೋನ್ ನಂಬರ್ ಗೆ ಲಿಂಕ್ ಮಾಡಿ.

How many Aadhaar cards can be linked to a single mobile number