Personal Loan : ಹಣಕಾಸಿನ ಅವಶ್ಯಕತೆಗಳು ಬಂದಾಗ ಪರ್ಸನಲ್ ಲೋನ್ ಪಡೆಯುವುದು ನಡೆಯುತ್ತದೆ. ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ಪರ್ಸನಲ್ ಲೋನ್ ಸಿಗುತ್ತದೆ. ಆದರೆ ಪರ್ಸನಲ್ ಲೋನ್ ಎನ್ನುವುದು ಅಸುರಕ್ಷಿತ ಸಾಲ ಆಗಿರುವ ಕಾರಣ ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ಪರ್ಸನಲ್ ಲೋನ್ ಮೇಲೆ ಬಡ್ಡಿ ಜಾಸ್ತಿ ವಿಧಿಸಲಾಗುತ್ತದೆ.
ಪರ್ಸನಲ್ ಲೋನ್ ಪಡೆಯುವುದಕ್ಕೆ ಯಾವ ಬ್ಯಾಂಕ್ ಸೂಕ್ತ? ಎಲ್ಲಿ ಕಡಿಮೆ ಬಡ್ಡಿಗೆ ಪರ್ಸನಲ್ ಲೋನ್ ಸಿಗುತ್ತದೆ? ಇಂದು ತಿಳಿಸುತ್ತೇವೆ ನೋಡಿ..
ಪ್ರೈವೇಟ್ ವಲಯದ HDFC ಬ್ಯಾಂಕ್ ಹೂಡಿಕೆಗೆ ಮತ್ತು ಲೋನ್ (Personal Loan) ಪಡೆಯುವುದಕ್ಕೆ ಒಳ್ಳೆಯ ಆಯ್ಕೆ ಆಗಿದೆ. ಈ ಬ್ಯಾಂಕ್ ನಲ್ಲಿ ನೀವು ಪರ್ಸನಲ್ ಲೋನ್ ಪಡೆಯುವುದು ಉತ್ತಮ. ಇಲ್ಲಿ ಬಡ್ಡಿದರ ಕೂಡ ಹೊರೆ ಎನ್ನಿಸುವ ಹಾಗೇನು ಇಲ್ಲ.
ಹಾಗೆಯೇ ಇಲ್ಲಿ ಬಹಳ ಬೇಗ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಆದರೆ ಪರ್ಸನಲ್ ಲೋನ್ ಪಡೆಯಲು ಬ್ಯಾಂಕ್ ನ ಕೆಲವು ಷರತ್ತುಗಳನ್ನು ಪೂರೈಸಬೇಕು. ಆಗ ನಿಮಗೆ ಬ್ಯಾಂಕ್ ಇಂದ ಲೋನ್ (Bank Loan) ಸಿಗುತ್ತದೆ.
ನಿಮ್ಮತ್ರ ಸ್ವಂತ ಜಾಗ ಇದ್ರೆ ಜಿಯೋ ಸ್ಟೋರ್ ಫ್ರ್ಯಾಂಚೈಸಿ ಶುರು ಮಾಡಿ ಹಣ ಗಳಿಸಿ! ಬಂಪರ್ ಕೊಡುಗೆ
HDFC ಬ್ಯಾಂಕ್ ನಲ್ಲಿ ಪರ್ಸನಲ್ ಲೋನ್ ಮೇಲೆ ಎಷ್ಟು ಬಡ್ಡಿ ನಿಗದಿ ಆಗಿರುತ್ತದೆ ಎಂದು ನೋಡುವುದಾದರೆ, ಇಲ್ಲಿ ನಿಮಗೆ 10% ಇಂದ 14% ಬಡ್ಡಿದರದಲ್ಲಿ ಪರ್ಸನಲ್ ಲೋನ್ ಸಿಗುತ್ತದೆ.
ಆದರೆ RBI ರೆಪೋ ರೇಟ್ ನಲ್ಲಿ ಏರಿಳಿತ ಮಾಡಿದರೆ, ಆಗ ಬಡ್ಡಿದರದಲ್ಲಿ ಕೂಡ ಹೆಚ್ಚು ಕಡಿಮೆ ಆಗಬಹುದು. HDFC ಬ್ಯಾಂಕ್ ನಲ್ಲಿ 10 ಸಾವಿರ ಇಂದ 10 ಲಕ್ಷದವರೆಗೂ ಪರ್ಸನಲ್ ಲೋನ್ ಪಡೆದುಕೊಳ್ಳಬಹುದು. ಪರ್ಸನಲ್ ಲೋನ್ ಗಾಗಿ ಅರ್ಜಿ ಸಲ್ಲಿಸಿದರೆ, ಕಡಿಮೆ ಸಮಯದಲ್ಲಿ ಬೇಗ ಲೋನ್ ಸಿಗುತ್ತದೆ.
ಲೋನ್ ಪಡೆಯುವುದಕ್ಕೆ ಬ್ಯಾಂಕ್ ನಿಯಮಗಳು:
*21 ರಿಂದ 60 ವರ್ಷಗಳ ಒಳಗಿರುವ ಜನರು HDFC ಬ್ಯಾಂಕ್ ಇಂದ ಪರ್ಸನಲ್ ಲೋನ್ ಪಡೆಯಬಹುದು.
*ಪರ್ಸನಲ್ ಲೋನ್ ಪಡೆಯಲು 2 ವರ್ಷವಾದರೂ ಉದ್ಯೋಗದ ಅನುಭವ ಇರಲೇಬೇಕು.
*ಸಿಟಿಯಲ್ಲಿ ವಾಸ ಮಾಡುವವರಿಗೆ ಪ್ರತಿ ತಿಂಗಳು ಕನಿಷ್ಠ 15 ಸಾವಿರ ಸಂಬಳ ಬರಬೇಕು.
*ಪರ್ಸನಲ್ ಲೋನ್ ಪಡೆಯಲು ಆಧಾರ್ ಕಾರ್ಡ್, ಪ್ಯಾನ್ ಕಾರ್ಸ್, ಡಿಎಲ್, ಐಡೆಂಟಿಟಿ ಪ್ರೂಫ್ ಹಾಗೂ ಇನ್ನಿತರ ದಾಖಲೆಗಳು ಬೇಕಾಗುತ್ತದೆ.
*ಇದೆಲ್ಲದರ ಜೊತೆಗೆ ಕಳೆದ 6 ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್ ಕೊಡಬೇಕು.
ಸಿಮೆಂಟ್ ಬೇಡ, ಮರಳು ಕೂಡ ಬೇಕಿಲ್ಲ ಕೇವಲ ₹8 ಲಕ್ಷಕ್ಕೆ ಕಟ್ಟಿಕೊಳ್ಳಿ ಸ್ವಂತ ಮನೆ! ಇಲ್ಲಿದೆ ಡೀಟೇಲ್ಸ್
ಲೋನ್ ಪಡೆಯುವ ಪ್ರಕ್ರಿಯೆ:
*HDFC App ಡೌನ್ಲೋಡ್ ಮಾಡಿ, ಈಗ ಕೆಳ ಭಾಗದಲ್ಲಿ ಕಾಣುವ ಐಕಾನ್ ಅನ್ನು ಕ್ಲಿಕ್ ಮಾಡಿ.
*ಇಲ್ಲಿ ಪರ್ಸನಲ್ ಲೋನ್ ಪಡೆಯುವ ಆಪ್ಶನ್ ಕಾಣುತ್ತದೆ, ಅದನ್ನು ಸೆಲೆಕ್ಟ್ ಮಾಡಿ.
*ಈಗ ಅಪ್ಲಿಕೇಶನ್ ನಲ್ಲಿ ಕೇಳುವ ಎಲ್ಲಾ ಮಾಹಿತಿಯನ್ನು ತಪ್ಪಿಲ್ಲದ ಹಾಗೆ ಸರಿಯಾಗಿ ನಮೂದಿಸಿ,
ಕೆನರಾ ಬ್ಯಾಂಕಿನಲ್ಲಿ ಸೆಕೆಂಡ್ ಹ್ಯಾಂಡ್ ಕಾರು ಖರೀದಿಗೂ ಸಿಗುತ್ತೆ ಲೋನ್! ಅದೂ ಅತೀ ಕಡಿಮೆ ಬಡ್ಡಿಗೆ
*ನಂತರ ekyc ಪ್ರಕ್ರಿಯೆಯನ್ನು ಪೂರ್ತಿ ಮಾಡಿಕೊಳ್ಳಬೇಕು…
*ಸಾಲ ಪಡೆಯಲು ಆನ್ಲೈನ್ ಅಥವಾ ಆಫ್ಲೈನ್ ಎರಡು ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು.
*ನಿಮ್ಮ ಮಾಹಿತಿ ಎಲ್ಲವೂ ಸರಿ ಇದ್ದರೆ, ನಿಮ್ಮ ಅಕೌಂಟ್ ಗೆ ಹಣ ವರ್ಗಾವಣೆ ಆಗುತ್ತದೆ.
Available 10 lakh personal loan for customers of this bank instantly
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.