Airtel ಹಾಗೂ Jio ಗೆ ಠಕ್ಕರ್ ಕೊಟ್ಟ BSNL ನೆಟ್‌ವರ್ಕ್, ಅತೀ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲ್ಯಾನ್ ಘೋಷಣೆ
ಈಗ ನಮ್ಮ ದೇಶದ ಏರ್ಟೆಲ್, ಜಿಯೋ, ವೊಡಾಫೋನ್ ಈ ಎಲ್ಲಾ ನೆಟ್ವರ್ಕ್ ಗಳು ತಮ್ಮ ರೀಚಾರ್ಜ್ ಪ್ಲಾನ್ (Recharge Plans) ಬೆಲೆಯನ್ನು ಜಾಸ್ತಿ ಮಾಡಿದೆ. ಇದರಿಂದ ಜನರಿಗೆ ರೀಚಾರ್ಜ್ ಬಿಲ್ ಭರಿಸುವುದು ಕಷ್ಟವಾಗಿದೆ, ಒಂದೊಂದು ರೀಚಾರ್ಜ್ ಪ್ಲಾನ್ ನಲ್ಲಿ ಕೂಡ 100 ರೂಪಾಯಿಗಿಂತ ಹೆಚ್ಚು ಮೊತ್ತ ಜಾಸ್ತಿ ಆಗಿದೆ ಎಂದು ಪ್ಲಾನ್ ಚೆಕ್ ಮಾಡಿ ಗೊತ್ತಾಗಿದೆ.
ಈ ವೇಳೆ ಜನರು ತಮ್ಮ ನೆಟ್ವರ್ಕ್ ಗಳನ್ನು ಬಿಟ್ಟು, ಸರ್ಕಾರದ ಬಿ.ಎಸ್.ಎನ್. ಎಲ್ ನೆಟ್ವರ್ಕ್ (BSNL Network) ಕಡೆಗೆ ಬರುತ್ತಿದ್ದಾರೆ. ಹಲವು ಜನರು ಏರ್ಟೆಲ್ (Airtel), ಜಿಯೋ (Jio) ಬಿಟ್ಟು ಬಿ.ಎಸ್.ಎನ್. ಎಲ್ ನೆಟ್ವರ್ಕ್ ಗೆ ಪೋರ್ಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಇದಕ್ಕೆ ಕಾರಣ ಬಿ.ಎಸ್.ಎನ್. ಎಲ್ ನಲ್ಲಿ ಬಹಳ ಕಡಿಮೆ ಮೊತ್ತಕ್ಕೆ ಒಳ್ಳೆಯ ರೀಚಾರ್ಜ್ ಪ್ಲಾನ್ ಗಳು ಬಂದಿದೆ. ಹೌದು, ಬಿ.ಎಸ್.ಎನ್. ಎಲ್ ಸರ್ಕಾರದ ಟೆಲಿಕಾಂ ಕಂಪನಿ ಆಗಿದ್ದು, ಅತೀ ಅಗ್ಗದ ಬೆಲೆಗೆ ಪ್ಲಾನ್ ಗಳನ್ನು ಜನರಿಗಾಗಿ ತರಲಾಗಿದೆ. ಶೀಘ್ರದಲ್ಲೇ 4G, 5G ಕೂಡ ಲಾಂಚ್ ಆಗಲಿದೆ. ಹಾಗಾಗಿ ಜನರು ಸಹ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಕಡೆಗೆ ಬರುತ್ತಿದ್ದಾರೆ.
ನಿಮ್ಮ ಮನೆ ಅತ್ರ ಇರೋ ಸ್ವಲ್ಪ ಜಾಗದಲ್ಲೇ ಶುರು ಮಾಡಿ ಈ ಬ್ಯುಸಿನೆಸ್! ಪ್ರತಿ ದಿನ 2 ಸಾವಿರ ಆದಾಯ
108 ರೂಪಾಯಿಯ ಪ್ಲಾನ್:
ಈಗಾಗಲೇ ಹಲವು ಕಡಿಮೆ ಬೆಲೆಯ ಪ್ಲಾನ್ ಗಳನ್ನು ಹೊಂದಿರುವ ಬಿ.ಎಸ್.ಎನ್.ಎಲ್ ಇದೀಗ ಮತ್ತೊಂದು ಅತೀ ಕಡಿಮೆ ಬೆಲೆಯ ಪ್ಲಾನ್ ಅನ್ನು ಹೊರತಂದಿದೆ. ಇದು 108 ರೂಪಾಯಿಯ ಪ್ಲಾನ್ ಆಗಿದೆ. ಈ ಅತ್ಯಂತ ಕಡಿಮೆ ಬೆಲೆಯ ಪ್ಲಾನ್, 28 ದಿನಗಳ ವ್ಯಾಲಿಡಿಟಿ ಹೊಂದಿದೆ ಎಂದು ಹೇಳಿದರೆ ನಿಮಗೆ ಶಾಕ್ ಆಗುವುದಂತೂ ಖಂಡಿತ. ಹೌದು, ಇಂಥ ಕಡಿಮೆ ಬೆಲೆಯ ಪ್ಲಾನ್ ಪೂರ್ತಿ 1 ತಿಂಗಳ ವ್ಯಾಲಿಡಿಟಿ ಜೊತೆಗೆ ಸಿಗುತ್ತಿದೆ ಹಾಗೆಯೇ ಇನ್ನಷ್ಟು ವಿಶೇಷತೆಗಳನ್ನು ಸಹ ಒಳಗೊಂಡಿದೆ.
ಈ 108 ರೂಪಾಯಿಯ ಪ್ಲಾನ್ ನಲ್ಲಿ ಸಿಗುವ ಮತ್ತೊಂದು ವಿಶೇಷತೆ, ಇದು ಅನ್ ಲಿಮಿಟೆಡ್ ಉಚಿತ ಕರೆಗಳನ್ನು (Unlimited Calls) ಸಹ ಹೊಂದಿದೆ. ಅದರ ಜೊತೆಗೆ ವ್ಯಾಲಿಡಿಟಿ ಮುಗಿಯುವವರೆಗೂ ದಿನಕ್ಕೆ 1GB ಉಚಿತ ಇಂಟರ್ನೆಟ್ ಕೂಡ ಸಿಗುತ್ತದೆ. 1GB ಮುಗಿದ ನಂತರ 40kbps ಸ್ಪೀಡ್ ನಲ್ಲಿ ಇಂಟರ್ನೆಟ್ (High Speed Internet) ಕೆಲಸ ಮಾಡುತ್ತದೆ.
ಈ ಸ್ಪೀಡ್ ನಲ್ಲಿ ನೀವು ಇಂಟರ್ನೆಟ್ ಬಳಸಬಹುದು. ಈ ಪ್ಲಾನ್ ನ ಮುಖ್ಯವಾದ ಮಾಹಿತಿ ಏನು ಎಂದರೆ, ಇದು FRC (First Recharge Coupon) ಪ್ಲಾನ್ ಆಗಿದೆ. ಇದರ ಅರ್ಥ, ಹೊಸದಾಗಿ ಬಿ.ಎಸ್.ಎನ್. ಎಲ್ ಸಿಮ್ ಖರೀದಿ ಮಾಡುವವರಿಗೆ ಮಾತ್ರ, ಈ ಯೋಜನೆಯ ಸೌಲಭ್ಯ ಸಿಗುತ್ತದೆ.
ಈ ತಳಿಯ ಮೇಕೆ ಸಾಕಾಣಿಕೆ ಮಾಡಿದ್ರೆ ಬಂಪರ್ ಲಾಭ ಫಿಕ್ಸ್, ಇದರ ಹಾಲು ಮಾಂಸಕ್ಕೆ ಭಾರೀ ಬೇಡಿಕೆ!
30 ದಿನ ವ್ಯಾಲಿಡಿಟಿ ಕೊಡುವ ಮತ್ತೊಂದು ಪ್ಲಾನ್:
ಬಿ.ಎಸ್.ಎನ್. ಎಲ್ ನಲ್ಲಿ ಪೂರ್ತಿ 1 ತಿಂಗಳು ಅಂದರೆ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಮತ್ತೊಂದು ಪ್ಲಾನ್ ಸಹ ಇದ್ದು, ಇದು 199 ರೂಪಾಯಿಗಳ ರೀಚಾರ್ಜ್ ಪ್ಲಾನ್ ಆಗಿದೆ. ಈ ಪ್ರೀಪೇಯ್ಡ್ ಪ್ಲಾನ್ ನಲ್ಲಿ ದಿನಕ್ಕೆ 2GB ಡೇಟಾ ಸಿಗುತ್ತದೆ, ಇದರ ಜೊತೆಗೆ ಅನ್ ಲಿಮಿಟೆಡ್ ಕಾಲ್ಸ್, ಹಾಗೂ ಉಚಿತ SMS ಸೌಲಭ್ಯ ಕೂಡ ಸಿಗುತ್ತದೆ. ಇದು 30 ದಿನಗಳ ರೀಚಾರ್ಜ್ ಪ್ಲಾನ್ ಸಹ ಆಗಿದ್ದು, ಇಷ್ಟೆಲ್ಲಾ ಸೌಲಭ್ಯಗಳನ್ನು ಪಡೆಯಬಹುದು.
ಯಾವುದೇ ಬ್ಯಾಂಕಿನಲ್ಲಿ ಅಕೌಂಟ್ ಇದ್ದೋರಿಗೆ ಬಿಗ್ ಅಪ್ಡೇಟ್! ಈ ತಪ್ಪು ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ
BSNL Network announced recharge plan at very low Cost
Our Whatsapp Channel is Live Now 👇