ನಿಮ್ಮ ಮನೆ ಅತ್ರ ಇರೋ ಸ್ವಲ್ಪ ಜಾಗದಲ್ಲೇ ಶುರು ಮಾಡಿ ಈ ಬ್ಯುಸಿನೆಸ್! ಪ್ರತಿ ದಿನ 2 ಸಾವಿರ ಆದಾಯ
ಮನೆಯ ಹತ್ತಿರವೇ ಶುರು ಮಾಡಬಹುದಾಗ ಕೆಲವು ಬ್ಯುಸಿನೆಸ್ ಐಡಿಯಾಗಳ ಬಗ್ಗೆ ಇಂದು ತಿಳಿಸುತ್ತೇವೆ. ಈ ಬ್ಯುಸಿನೆಸ್ ಅನ್ನು ಸುಲಭವಾಗಿ ಶುರು ಮಾಡಬಹುದು, ಹಳ್ಳಿಗಳಲ್ಲಿ ಕೂಡ ಶುರು ಮಾಡಬಹುದು.
ನಮ್ಮಲ್ಲಿ ಹಲವರಿಗೆ ಇನ್ನೊಬ್ಬರ ಕೈಕೆಳಗೆ ಕೆಲಸ ಮಾಡುವುದಕ್ಕೆ ಇಷ್ಟ ಆಗುವುದಿಲ್ಲ. ಅಂಥವರು ತಮ್ಮದೇ ಸ್ವಂತ ಕೆಲಸ ಅಥವಾ ಬ್ಯುಸಿನೆಸ್ (Own Business) ಮಾಡಬೇಕು ಎಂದುಕೊಳ್ಳುತ್ತಾರೆ. ಆ ಮೂಲಕ ಉತ್ತಕ ಆದಾಯ ಗಳಿಸಬೇಕು ಎಂದು ಕೂಡ ಬಯಸುತ್ತಾರೆ.
ಆದರೆ ಯಾವ ಬ್ಯುಸಿನೆಸ್ ನಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ, ಎಷ್ಟು ಹೂಡಿಕೆ ಮಾಡಿ ಲಾಭ (Earning) ಗಳಿಸಬಹುದು ಎಂದು ಅವರಿಗೆ ಸರಿಯಾಗಿ ಗೊತ್ತಿರುವುದಿಲ್ಲ. ಇದರಿಂದಲೇ ಹಿಂದೇಟು ಹಾಕಿ, ಹೆಚ್ಚಿನ ಜನರು ಬ್ಯುಸಿನೆಸ್ ಮಾಡುವ ಕನಸು ಇದ್ದರು ಕೂಡ ಶುರು ಮಾಡದೇ ಹಾಗೆಯೇ ಇರುತ್ತಾರೆ.
ಅಂಥವರಿಗೆ ಮನೆಯ ಹತ್ತಿರವೇ ಶುರು ಮಾಡಬಹುದಾಗ ಕೆಲವು ಬ್ಯುಸಿನೆಸ್ ಐಡಿಯಾಗಳ (Business Idea) ಬಗ್ಗೆ ಇಂದು ತಿಳಿಸುತ್ತೇವೆ. ಈ ಬ್ಯುಸಿನೆಸ್ ಅನ್ನು ಸುಲಭವಾಗಿ ಶುರು ಮಾಡಬಹುದು, ಹಳ್ಳಿಗಳಲ್ಲಿ ಕೂಡ ಶುರು ಮಾಡಬಹುದು.
ಈ ತಳಿಯ ಮೇಕೆ ಸಾಕಾಣಿಕೆ ಮಾಡಿದ್ರೆ ಬಂಪರ್ ಲಾಭ ಫಿಕ್ಸ್, ಇದರ ಹಾಲು ಮಾಂಸಕ್ಕೆ ಭಾರೀ ಬೇಡಿಕೆ!
ಇದರಿಂದ ದಿನಕ್ಕೆ 2000 ರೂಪಾಯಿಗಳವರೆಗು ಆದಾಯವನ್ನು ಕೂಡ ಗಳಿಸಬಹುದು. ಹಾಗಿದ್ದಲ್ಲಿ ಈ ಬ್ಯುಸಿನೆಸ್ ಗಳು ಯಾವುವು? ಇದರಿಂದ ಏನೆಲ್ಲಾ ಲಾಭವಿದೆ? ಯಾವ ಬ್ಯುಸಿನೆಸ್ ನಲ್ಲಿ ಎಷ್ಟು ಲಾಭ ಗಳಿಸಬಹುದು? ಇದೆಲ್ಲವನ್ನು ತಿಳಿದುಕೊಳ್ಳೋಣ..
*ಹಣ್ಣು ತರಕಾರಿ ಅಂಗಡಿ: ಇದು ಎವರ್ ಗ್ರೀನ್ ಬ್ಯುಸಿನೆಸ್, ಪ್ರತಿ ಮನೆಗಳಲ್ಲಿ ಪ್ರತಿ ನಿತ್ಯ ಹಣ್ಣು ಮತ್ತು ತರಕಾರಿಗೆ ಬೇಡಿಕೆ ಇದ್ದೇ ಇರುತ್ತದೆ. ಹಾಗಾಗಿ ನೀವು ಹಳ್ಳಿಯಲ್ಲಿದ್ದು, ನಿಮ್ಮ ಬಳಿ ಜಮೀನು ಇದ್ದರೆ, ಅದರಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ಬೆಳೆದು ವ್ಯಾಪಾರ ಶುರು ಮಾಡಬಹುದು. ಇದರಿಂದ ನಿಮಗೆ ಒಳ್ಳೆಯ ಲಾಭ ಸಿಗುತ್ತದೆ.
*ಟೀ ಅಂಗಡಿ: ಎಲ್ಲಾ ಕಡೆ ಕಾಣಸಿಗುವ ಅಂಗಡಿ ಇದು. ಕೆಲಸಕ್ಕೆ ಹೋಗುವವರು, ರಸ್ತೆಯಲ್ಲಿ ಓಡಾಡುವವರು ಎಲ್ಲರೂ ಕೂಡ ಒಂದಲ್ಲಾ ಒಂದು ಸಮಯದಲ್ಲಿ ಟೀ ಕುಡಿಯಲು ಬಯಸುತ್ತಾರೆ. ಹಾಗಾಗಿ ಟೀ ಅಂಗಡಿ ಕೂಡ ಒಳ್ಳೆಯ ಬ್ಯುಸಿನೆಸ್ ಆಗಿದೆ. ಹೆಚ್ಚಿನ ಜನ ಓಡಾಡುವ ಕಡೆ ಒಂದು ಟೀ ಅಂಗಡಿ (Tea Shop) ಶುರು ಮಾಡಿದರೆ, ಒಳ್ಳೆಯ ಲಾಭ ಗಳಿಸಬಹುದು.
ಸ್ಟೇಟ್ ಬ್ಯಾಂಕಿನಲ್ಲಿ 20 ವರ್ಷಕ್ಕೆ 40 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ ಇಎಂಐ ಎಷ್ಟು ಕಟ್ಟಬೇಕು?
*ಎಲೆಕ್ಟ್ರಾನಿಕ್ ಉಪಕರಣಗಳ ಅಂಗಡಿ: ಸಿಟಿ ಇಂದ ಹಳ್ಳಿಯವರೆಗು ಎಲ್ಲಾ ಕಡೆಗಳಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳ (Electronic Shop) ಬಳಕೆ ಇದ್ದೆ ಇರುತ್ತದೆ. ಹಾಗಾಗಿ ಫ್ಯಾನ್, ಮಿಕ್ಸಿ, ಫ್ರಿಜ್ ಇವುಗಳನ್ನು ಜನರು ಖರೀದಿ ಮಾಡಿಯೇ ಮಾಡುತ್ತಾರೆ. ಈ ಅಂಗಡಿ ಶುರು ಮಾಡುವ ಮೂಲಕ ಕೂಡ ನೀವು ಉತ್ತಮವಾದ ಲಾಭ ಗಳಿಸಬಹುದು. ತಿಂಗಳಿಗೆ ಕಡಿಮೆ ಎಂದರು 20 ರಿಂದ 40 ಸಾವಿರ ವರೆಗು ಹಣ ಗಳಿಸಬಹುದು.
*ಅಪ್ಲಿಕೇಶನ್ ಹಾಕುವ ಸೇವಾ ಕೇಂದ್ರ; ಹಲವು ಜನರಿಗೆ ಆನ್ಲೈನ್ ಮೂಲಕ ಸರ್ಕಾರದ ಯೋಜನೆಗಳಿಗೆ, ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸಲು ಬರುವುದಿಲ್ಲ. ಅಂಥವರಿಗಾಗು ನೀವು ಸಾರ್ವಜನಿಕ ಸೇವಾ ಕೇಂದ್ರವನ್ನು ಶುರು ಮಾಡಬಹುದು. ಇಲ್ಲಿ ಒಂದು ಅಪ್ಲಿಕೇಶನ್ ಹಾಕುವುದಕ್ಕೆ 100 ರೂಪಾಯಿ ಚಾರ್ಜ್ ಮಾಡಬಹುದು. ನಿಮ್ಮ ಕೇಂದ್ರಕ್ಕೆ ಪ್ರತಿ ದಿನ 10 ರಿಂದ 15 ಗ್ರಾಹಕರು ಬಂದರೂ ಕೂಡ, ತಿಂಗಳಿಗೆ 30 ಸಾವಿರ ವರೆಗು ಹಣ ಗಳಿಸಬಹುದು.
ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಈ ಬ್ಯಾಂಕ್ ಗ್ರಾಹಕರಿಗೆ ಕ್ಷಣದಲ್ಲಿ ಸಿಗುತ್ತೆ 10 ಲಕ್ಷ ಪರ್ಸನಲ್ ಲೋನ್!
ಫಾಸ್ಟ್ ಫುಡ್: ಈಗ ಸಿಟಿ ಇಂದ ಹಿಡಿದು ಹಳ್ಳಿಯವರೆಗೂ ಎಲ್ಲಾ ಕಡೆಗಳಲ್ಲಿ ಫಾಸ್ಟ್ ಫುಡ್ (Fast Food) ಅನ್ನು ಇಷ್ಟಪಟ್ಟು ತಿನ್ನುತ್ತಾರೆ. ನಿಮಗೆ ಅಡುಗೆ ಚೆನ್ನಾಗಿ ಬರುತ್ತದೆ ಎಂದರೆ, ಗೋಬಿ, ನೂಡಲ್ಸ್, ಫ್ರೈಡ್ ರೈಸ್ ಇದೆಲ್ಲವನ್ನು ಮಾಡುವಂಥ ಫಾಸ್ಟ್ ಫುಡ್ ಕಾರ್ಟ್ ಶುರು ಮಾಡಬಹುದು.
ನೀವು ಮಾಡುವ ಅಡುಗೆಯಲ್ಲಿ ಒಳ್ಳೆಯ ರುಚಿ ಇದ್ದರೆ, ಹೆಚ್ಚು ಜನರು ನಿಮ್ಮ ಫುಡ್ ಕಾರ್ಟ್ ಗೆ ಭೇಟಿ ನೀಡುತ್ತಾರೆ. 5 ರಿಂದ 10 ಸಾವಿರ ಹೂಡಿಕೆಯಲ್ಲಿ ಈ ಬ್ಯುಸಿನೆಸ್ ಶುರು (Start Business) ಮಾಡಬಹುದು. ತಿಂಗಳಿಗೆ ಹೆಚ್ಚು ಆದಾಯವನ್ನು ಸಹ ಗಳಿಸಬಹುದು.
Start this business from your home and earn 2 thousand income per day