ಯಾವುದೇ ಬ್ಯಾಂಕಿನಲ್ಲಿ ಅಕೌಂಟ್ ಇದ್ದೋರಿಗೆ ಬಿಗ್ ಅಪ್ಡೇಟ್! ಈ ತಪ್ಪು ಮಾಡಿದ್ರೆ ಬ್ಯಾಂಕ್ ಖಾತೆ ಖಾಲಿ
ಈಗ ಟೆಕ್ನಾಲಜಿ ಎಷ್ಟು ಮುಂದುವರೆಯುತ್ತಿದೆಯೋ, ಅದೇ ರೀತಿ ಮೋಸ ವಂಚನೆ ಇವುಗಳು ಸಹ ಜಾಸ್ತಿಯಾಗುತ್ತಿದೆ. ಹೌದು, ಆನ್ಲೈನ್ ಸ್ಕ್ಯಾಮ್, ಆನ್ಲೈನ್ ಮೋಸ ಇದೆಲ್ಲವೂ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಆನ್ಲೈನ್ ವಂಚಕರು ಜನರನ್ನು ಮೋಸ ಮಾಡಲು ಹೊಸ ವಿಧಾನಗಳನ್ನು ಕಂಡು ಹಿಡಿಯುತ್ತಲೇ ಇದ್ದಾರೆ.
ಜನರು ಕೂಡ ತಮಗೆ ಗೊತ್ತಿಲ್ಲದೇ ಈ ಮೋಸದ ಬಲೆಗೆ ಬೀಳುತ್ತಿದ್ದಾರೆ. ಈ ಕಾರಣದಿಂದ ಬ್ಯಾಂಕ್ ಅಕೌಂಟ್ (Bank Account) ಹೊಂದಿರುವ ಜನರು ಬಹಳ ಹುಷಾರಾಗಿ ಇರಬೇಕು..
ಸರ್ಕಾರ ಹಾಗೂ ಬ್ಯಾಂಕ್ ಗಳು (Banks) ಎರಡು ಕೂಡ ತಮ್ಮ ಗ್ರಾಹಕರಿಗೆ ಈ ರೀತಿ ಆನ್ಲೈನ್ ವಂಚನೆ ಆಗಬಹುದು ಎಂದು ಬಹಳಷ್ಟು ಕ್ರಮಗಳನ್ನು ತೆಗೆದುಕೊಂಡಿದ್ದರೂ ಕೂಡ, ಆನ್ಲೈನ್ ವಂಚನೆಯನ್ನು ಸಂಪೂರ್ಣವಾಗಿ ತಪ್ಪಿಸಲು ಸಾಧ್ಯವಾಗುತ್ತಿಲ್ಲ.
ಸ್ಟೇಟ್ ಬ್ಯಾಂಕಿನಲ್ಲಿ 20 ವರ್ಷಕ್ಕೆ 40 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ ಇಎಂಐ ಎಷ್ಟು ಕಟ್ಟಬೇಕು?
ಈಗ ಯಾವುದೇ ಓಟಿಪಿ ಪಡೆಯದೆಯೇ ಸೈಬರ್ ಕಳ್ಳರು ನಿಮ್ಮ ಬ್ಯಾಂಕ್ ಅಕೌಂಟ್ ಇಂದ ಹಣ ದೋಚುವ ವಿಧಾನವನ್ನು ಕಂಡುಹಿಡಿದುಕೊಂಡಿದ್ದಾರೆ. ಹಾಗಾಗಿ ಬ್ಯಾಂಕ್ ಗಳು (Banks) ಕೆಲವು ಸೂಚನೆಗಳನ್ನು ನೀಡಿದೆ, ಅದನ್ನೆಲ್ಲಾ ಪಾಲಿಸದೇ ಹೋದರೆ ನಿಮಗೆ ತೊಂದರೆ ಉಂಟಾಗಬಹುದು.
ಮೋಸ ಮಾಡಲು ಹೊಸ ವಿಧಾನ:
ಆನ್ಲೈನ್ ಕ್ರಿಮಿನಲ್ ಗಳು ಈಗ ಹೊಸದೊಂದು ವಿಧಾನವನ್ನು ಕಂಡು ಹಿಡಿದುಕೊಂಡಿದ್ದಾರೆ. ಯಾವುದೇ ಓಟಿಪಿ ಇಲ್ಲದೇ ನಿಮ್ಮ ಮಾಹಿತಿ ಕದಿಯುತ್ತಾರೆ. RAT (Remote Access Tool) ಇದನ್ನು ಬಳಸಿ ಒಂದು APK file ಅನ್ನು ನಿಮ್ಮ ಬ್ಯಾಂಕ್ ಅಕೌಂಟ್ ಗೆ ಲಿಂಕ್ ಆಗಿರುವ ಫೋನ್ ನಂಬರ್ ನ ವಾಟ್ಸಾಪ್ ಅಥವಾ SMS ಮೂಲಕ ಕಳಿಸುತ್ತಾರೆ.
ಒಂದು ವೇಳೆ ನೀವು ಅದನ್ನು ಓಪನ್ ಮಾಡಿದರೆ, ನಿಮ್ಮ ಫೋನ್ ಗೆ ಬರುವ ಎಲ್ಲಾ ಮೆಸೇಜ್ ಗಳು ಸಹ ಆಟೊಮ್ಯಾಟಿಕ್ ಆಗಿ ಅವರಿಗೆ ಹೋಗುತ್ತದೆ. ಈ ಕಾರಣಕ್ಕೆ ಎಲ್ಲರೂ ಹುಷಾರಾಗಿ ಇರುವುದು ಒಳ್ಳೆಯದು.
ಒಂದೇ ಮೊಬೈಲ್ ನಂಬರ್ ಗೆ ಎಷ್ಟು ಆಧಾರ್ ಕಾರ್ಡ್ ಲಿಂಕ್ ಮಾಡಬಹುದು? ಇನ್ಮುಂದೆ ಹೊಸ ರೂಲ್ಸ್
ನಿಮ್ಮ ಫೋನ್ ಗೆ ಈ ಥರದ ಮೆಸೇಜ್ ಬಂದು, ನೀವು ಆ ಲಿಂಕ್ ಓಪನ್ ಮಾಡಿದರೇ, ನಿಮ್ಮ ಮೊಬೈಲ್ ನ ಮಾಹಿತಿ ಅವರಿಗೆ ಸಿಗುತ್ತದೆ. ಇದರಿಂದ ಅವರು ನಿಮ್ಮ ಬ್ಯಾಂಕ್ ಅಕೌಂಟ್ ನ ಇಂಟರ್ನೆಟ್ ಬ್ಯಾಂಕಿಂಗ್ ಡೀಟೇಲ್ಸ್ ಪಡೆದು, ಬರುವ ಓಟಿಪಿಯನ್ನು ಈ RAT ಮೂಲಕ ಸುಲಭವಾಗಿ ಆಕ್ಸೆಸ್ ಮಾಡಿ, ನಿಮ್ಮ ಅಕೌಂಟ್ ನಲ್ಲಿರುವ ಸಂಪೂರ್ಣ ಹಣವನ್ನು ಪಡೆದುಕೊಳ್ಳುತಾರೆ. ಈ ಥರದ ಸಮಸ್ಯೆ ಹೆಚ್ಚಾಗಿ ಕೆನರಾ ಬ್ಯಾಂಕ್ ಗ್ರಾಹಕರಲ್ಲಿ ಕಂಡುಬರುತ್ತಿದೆ ಎಂದು ವರದಿಯ ಮೂಲಕ ತಿಳಿದುಬಂದಿದೆ.
ನಂಬಿದ್ರೆ ನಂಬಿ ಬಿಟ್ರೆ ಬಿಡಿ, ಈ ಬ್ಯಾಂಕ್ ಗ್ರಾಹಕರಿಗೆ ಕ್ಷಣದಲ್ಲಿ ಸಿಗುತ್ತೆ 10 ಲಕ್ಷ ಪರ್ಸನಲ್ ಲೋನ್!
ಈ ಕಾರಣಕ್ಕೆ ಕೆನರಾ ಬ್ಯಾಂಕ್ (Canara Bank) ಕಡೆಯಿಂದ ಗ್ರಾಹಕರಿಗೆ ಈ ಬಗ್ಗೆ ಸೂಚನೆ ಸಿಕ್ಕಿದೆ, ಈ ರೀತಿಯಾಗಿ ಯಾವುದೇ ನಂಬರ್ ಇಂದ ಅಪ್ಲಿಕೇಶನ್ ಡೌನ್ಲೋಡ್ (Download) ಮಾಡುವುದಕ್ಕೆ ಲಿಂಕ್ ಬಂದರೂ ಕೂಡ ಅದನ್ನು ಓಪನ್ ಮಾಡಬಾರದು ಎಂದು ಬ್ಯಾಂಕ್ ತಿಳಿಸಿದೆ.
ಅಕಸ್ಮಾತ್ ಗೊತ್ತಿಲ್ಲದೇ, ಲಿಂಕ್ ಓಪನ್ ಮಾಡಿದರೆ, ತಕ್ಷಣವೇ ಫೋನ್ ಸ್ವಿಚ್ ಆಫ್ ಮಾಡಿ ಇಟ್ಟುಬಿಡಿ ಎಂದಿದ್ದಾರೆ ಬ್ಯಾಂಕ್ ಹಿರಿಯ ಸಿಬ್ಬಂದಿಗಳು. ಈ ಸಣ್ಣ ಎಚ್ಚರಿಕೆಯನ್ನು ತಪ್ಪಿದರೇ, ಆನ್ಲೈನ್ ಸ್ಕ್ಯಾಮರ್ ಗಳು ನಿಮ್ಮ ಅಕೌಂಟ್ ನಲ್ಲಿರುವ ಪೂರ್ತಿ ಹಣವನ್ನು ಕಬಳಿಸುತ್ತಾರೆ.
Big update for those who have account in any bank
Our Whatsapp Channel is Live Now 👇