ಗೂಗಲ್ ಪೇ ಬಳಸುತ್ತಿದ್ದು 100 ರೂಪಾಯಿಗಿಂತ ಹೆಚ್ಚು ವಹಿವಾಟು ಮಾಡಿದ್ರೆ ಸಿಗುತ್ತೆ 5 ಲಕ್ಷ ಪರ್ಸನಲ್ ಲೋನ್

ಯುಪಿಐ ಅಪ್ಲಿಕೇಶನ್ ಗೂಗಲ್ ಪೇ (Google Pay) ಮೂಲಕ ಸುಲಭವಾಗಿ ಪರ್ಸನಲ್ ಲೋನ್ (Personal Loan) ಸಿಗುತ್ತದೆ. ಕೇವಲ 5 ನಿಮಿಷಗಳಲ್ಲಿ 5 ಲಕ್ಷ ರೂಪಾಯಿಯವರೆಗು ಸಾಲ ಪಡೆಯಬಹುದು.

Bengaluru, Karnataka, India
Edited By: Satish Raj Goravigere

ಹಣಕಾಸಿನ ಸಮಸ್ಯೆ ಯಾವಾಗ ಹೇಗೆ ಬರುತ್ತದೆ ಎಂದು ಹೇಳಲು ಆಗೋದಿಲ್ಲ. ದಿಢೀರ್ ಎಂದು ಯಾವುದೋ ಸಮಸ್ಯೆ ಬಂದಾಗ ಸಾಮಾನ್ಯವಾಗಿ ನಾವೆಲ್ಲರು ಬ್ಯಾಂಕ್ ಲೋನ್ (Bank Loan) ಮೊರೆ ಹೋಗುತ್ತೇವೆ ಅಥವಾ ಬೇರೆ ಹಣಕಾಸು ಸಂಸ್ಥೆಗಳಲ್ಲಿ Loan ಪಡೆಯುವ ಪ್ರಯತ್ನ ಮಾಡುತ್ತೇವೆ.

ಬ್ಯಾಂಕ್ ಆಗಲಿ ಅಥವಾ ಬೇರೆ ಫೈನಾನ್ಸ್ ಸಂಸ್ಥೆಗಳೇ ಆಗಲಿ ಇಲ್ಲೆಲ್ಲಾ ನಮಗೆ ತಕ್ಷಣಕ್ಕೆ ಲೋನ್ ಸಿಗುತ್ತದೆ ಎಂದು ಹೇಳುವುದು ಅಸಾಧ್ಯ. ಹಾಗೆಯೇ ಇಲ್ಲಿ ರೂಲ್ಸ್ ಗಳು ಜಾಸ್ತಿ ಇರುತ್ತದೆ..

ಗೂಗಲ್ ಪೇ ಬಳಸುತ್ತಿದ್ದು 100 ರೂಪಾಯಿಗಿಂತ ಹೆಚ್ಚು ವಹಿವಾಟು ಮಾಡಿದ್ರೆ ಸಿಗುತ್ತೆ 5 ಲಕ್ಷ ಪರ್ಸನಲ್ ಲೋನ್ - Kannada News

ಜೊತೆಗೆ ಅಪ್ಲಿಕೇಶನ್ ರಿಜೆಕ್ಟ್ ಆಗುವ ಸಾಧ್ಯತೆಗಳು ಇರುತ್ತದೆ. ತಕ್ಷಣಕ್ಕೆ ಅಂತೂ ಸಾಲ ಸಿಗುವುದಿಲ್ಲ. ಇಂಥ ಪರಿಸ್ಥತಿ ಬಂದಾಗ ಲೋನ್ (Loan) ಪಡೆಯೋದು ಹೇಗೆ ಎಂದು ನಿಮಗೆ ಚಿಂತೆ ಶುರುವಾಗಬಹುದು.

ಆದರೆ ನೀವು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ, ಇನ್ನುಮುಂದೆ ನಿಮಗೆ ಯುಪಿಐ ಅಪ್ಲಿಕೇಶನ್ ಗೂಗಲ್ ಪೇ (Google Pay) ಮೂಲಕ ಸುಲಭವಾಗಿ ಪರ್ಸನಲ್ ಲೋನ್ (Personal Loan) ಸಿಗುತ್ತದೆ. ಕೇವಲ 5 ನಿಮಿಷಗಳಲ್ಲಿ 5 ಲಕ್ಷ ರೂಪಾಯಿಯವರೆಗು ಸಾಲ ಪಡೆಯಬಹುದು. ಹೌದು, ಇದರ ಬಗ್ಗೆ ಇಂದು ಪೂರ್ತಿಯಾಗಿ ತಿಳಿಯೋಣ..

ಇನ್ಮೇಲೆ ಇಂಟರ್ನೆಟ್ ಇಲ್ಲದೆ ಇದ್ರೂ ಬಳಸಬಹುದು WhatsApp! ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್

ಗೂಗಲ್ ಪೇ ಬಳಕೆ ಮಾಡುವವರು ಹಣಕಾಸಿನ ವಹಿವಾಟು ನಡೆಸಲು ಮಾತ್ರ ಬಳಕೆ ಮಾಡುವ ಹಾಗಿಲ್ಲ, ನಿಮಗೆ ಎಮರ್ಜೆನ್ಸಿ ಇದ್ದು ಲೋನ್ ಬೇಕು ಎಂದರು ಸಹ, ಗೂಗಲ್ ಪೇ ಮೂಲಕ ಲೋನ್ ಪಡೆಯಬಹುದು. ಆಕ್ಸಿಸ್ ಬ್ಯಾಂಕ್, HDFC ಸೇರಿದಂತೆ ಹಲವು ಹಣಕಾಸು ಸಂಸ್ಥೆಗಳ ಜೊತೆಗೆ ಗೂಗಲ್ ಪೇ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ರೀತಿಯಾಗಿ ನಿಮಗೆ ಬಹಳ ಬೇಗ ಪರ್ಸನಲ್ ಲೋನ್ (Personal Loan) ಸಿಗುವುದಕ್ಕೆ ಸಹಾಯ ಆಗುತ್ತದೆ.

ಗೂಗಲ್ ಪೇ ಆಪ್ ಗೆ ಭೇಟಿ ನೀಡಿ, ಲೋನ್ ವಿಭಾಗಕ್ಕೆ ಹೋಗುವ ಮೂಲಕ ಸುಲಭವಾಗಿ ನೀವು ಗೂಗಲ್ ಪೇ ಇಂದ ಲಕ್ಷದವರೆಗು ಸಾಲ ಪಡೆದುಕೊಳ್ಳಬಹುದು.

ಗೂಗಲ್ ಪೇ ಇಂದ ಲೋನ್ ಪಡೆಯಲು ಮಾನದಂಡಗಳು ಏನೇನು? ಲೋನ್ ಪಡೆಯಲು ಯಾವೆಲ್ಲಾ ದಾಖಲೆಗಳು ಬೇಕಾಗುತ್ತದೆ? ಲೋನ್ ಗೆ ಅಪ್ಲೈ ಮಾಡುವುದು ಹೇಗೆ? ಇದೆಲ್ಲದರ ಪೂರ್ತಿ ಮಾಹಿತಿ ತಿಳಿಸುತ್ತೇವೆ ನೋಡಿ…

ನಿಮ್ಮ ಮನೆ ಅತ್ರ ಇರೋ ಸ್ವಲ್ಪ ಜಾಗದಲ್ಲೇ ಶುರು ಮಾಡಿ ಈ ಬ್ಯುಸಿನೆಸ್! ಪ್ರತಿ ದಿನ 2 ಸಾವಿರ ಆದಾಯ

Google Pay Personal Loan
Image Credit: Sangbad Pratidin

ಗೂಗಲ್ ಪೇ ಇಂದ ಸಾಲ ಪಡೆಯುವ ವಿಧಾನ:

*ಮೊದಲಿಗೆ ಗೂಗಲ್ ಪೇ ಆಪ್ ಓಪನ್ ಮಾಡಿ, ಅದರಲ್ಲಿ ಕ್ರೆಡಿಟ್ ಅಥವಾ ಸಾಲ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ

*ಇಲ್ಲಿ ನಿಮ್ಮ ಹೆಸರು, ಅಡ್ರೆಸ್ ಹಾಗೂ ಇನ್ನಿತರ ಮಾಹಿತಿ ಕೇಳುತ್ತದೆ. ಅದೆಲ್ಲವನ್ನು ಸರಿಯಾಗಿ ಫಿಲ್ ಮಾಡಿ.

*Personal Loan ಪಡೆಯುವುದಕ್ಕೆ ನಿಮ್ಮ ಐಡೆಂಟಿಟಿ ಪ್ರೂಫ್, ಇನ್ಕಮ್ ಸರ್ಟಿಫಿಕೇಟ್, ಬ್ಯಾಂಕ್ ಪಾಸ್ ಬುಕ್ ಇವುಗಳ ಫೋಟೋ ಅಪ್ಲೋಡ್ ಮಾಡಬೇಕಾಗುತ್ತದೆ.

ಈ ತಳಿಯ ಮೇಕೆ ಸಾಕಾಣಿಕೆ ಮಾಡಿದ್ರೆ ಬಂಪರ್ ಲಾಭ ಫಿಕ್ಸ್, ಇದರ ಹಾಲು ಮಾಂಸಕ್ಕೆ ಭಾರೀ ಬೇಡಿಕೆ!

*ಈ ಪ್ರಕ್ರಿಯೆ ಮುಗಿದ ನಂತರ ನೀವು ಹಾಕಿರುವ ಅಪ್ಲಿಕೇಶನ್ ನಲ್ಲಿ ಇರುವ ಎಲ್ಲಾ ಮಾಹಿತಿ ಸರಿ ಇದ್ದರೆ, ನಿಮಗೆ ಲೋನ್ ಸಿಗುವ ಬಗ್ಗೆ ಅಧಿಕೃತ ಮಾಹಿತಿ ಸಿಗುತ್ತದೆ.

*ಇಂತಿಷ್ಟು ಸಮಯದ ಒಳಗೆ ಸಾಲ ತೀರಿಸಬೇಕು ಎಂದು ತಿಳಿಸಲಾಗುತ್ತದೆ.

If you have Google Pay on your mobile, you will get 5 lakh personal loan