ಇನ್ಮೇಲೆ ಇಂಟರ್ನೆಟ್ ಇಲ್ಲದೆ ಇದ್ರೂ ಬಳಸಬಹುದು WhatsApp! ಬಳಕೆದಾರರಿಗೆ ಇಲ್ಲಿದೆ ಗುಡ್ ನ್ಯೂಸ್
ಈಗಿನ ಡಿಜಿಟಲ್ ಯುಗದಲ್ಲಿ ಎಲ್ಲರೂ ಅತಿಹೆಚ್ಚಾಗಿ ಬಳಕೆ ಮಾಡುವ ಮೊಬೈಲ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ಆಗಿದೆ. ಸ್ಮಾರ್ಟ್ ಫೋನ್ (Smartphone) ಹೊಂದಿರುವ ಪ್ರತಿಯೊಬ್ಬರು ಕೂಡ ವಾಟ್ಸಾಪ್ ಬಳಸುತ್ತಾರೆ.
ನಿಮ್ಮ ಸ್ನೇಹಿತರಿಗೆ, ಬಂಧುಮಿತ್ರರಿಗೆ ಪ್ರತಿದಿನ ಸಂದೇಶ ಕಳಿಸುವುದಕ್ಕೆ, ಯಾವುದೇ ಮುಖ್ಯವಾದ ಫೈಲ್ ಗಳನ್ನು ಶೇರ್ ಮಾಡುವುದಕ್ಕೆ, ಲಿಂಕ್ ಶೇರ್ ಮಾಡುವುದಕ್ಕೆ, ಫೋಟೋ (Photo), ಆಡಿಯೋ (Audio), ವಿಡಿಯೋ ಗಳನ್ನು (Videos) ಶೇರ್ ಮಾಡುವುದಕ್ಕೆ ವಾಟ್ಸಾಪ್ ಬಳಕೆ ಮಾಡುತ್ತೇವೆ..
ಪ್ರತಿದಿನ ಬೆಳಗ್ಗೆ ನಮ್ಮ ದಿನ ಶುರು ಮಾಡುವುದು ವಾಟ್ಸಾಪ್ ನಲ್ಲಿ ಏನೆಂದು ಮೆಸೇಜ್ ಬಂದಿದೆ ಎಂದು ಚೆಕ್ ಮಾಡುವ ಮೂಲಕ ಎಂದರೆ ಖಂಡಿತ ತಪ್ಪಲ್ಲ. ಹೌದು, ಬಿಲಿಯನ್ ಗಟ್ಟಲೇ ಜನರು ವಾಟ್ಸಾಪ್ ಬಳಕೆ ಮಾಡುತ್ತಾರೆ, ಅನೇಕ ಜನರು ವಾಟ್ಸಾಪ್ ನಲ್ಲಿ ಸಿಗುತ್ತಿರುವ ಹೊಸ ಫೀಚರ್ಸ್ ಗಳನ್ನು (New Features) ಬಳಸುವುದಕ್ಕೋಸ್ಕರ ದಿನೇ ದಿನೇ ಹೆಚ್ಚಿನ ಜನರು ವಾಟ್ಸಾಪ್ ಡೌನ್ಲೋಡ್ ಮಾಡುವವರ ಸಂಖ್ಯೆ ಸಹ ಜಾಸ್ತಿ ಆಗುತ್ತಿದೆ. ಇದೀಗ ವಾಟ್ಸಾಪ್ ನಲ್ಲಿ ಹೊಸದೊಂದು ಫೀಚರ್ ಬರುತ್ತಿದೆ.
ನಮಗೆಲ್ಲ ಗೊತ್ತಿರುವ ಹಾಗೆ ವಾಟ್ಸಾಪ್ ನಲ್ಲಿ ಒಂದು ಮೆಸೇಜ್ (Message) ಕಳಿಸಬೇಕು ಎಂದರೆ ಅಥವಾ ಯಾವುದೇ ಫೈಲ್, ಫೋಟೋ ಶೇರ್ ಮಾಡಬೇಕು ಎಂದರೆ ಇಂಟರ್ನೆಟ್ ಇರಲೇಬೇಕು. ಆದರೆ ಇದೀಗ ಸಿಕ್ಕಿರುವ ಹೊಸ ಮಾಹಿತಿಯ ಅನುಸಾರ, ಇದೀಗ ವಾಟ್ಸಾಪ್ ನಲ್ಲಿ ಹೊಸ ಫೀಚರ್ ಬಂದಿದ್ದು, ಇಂಟರ್ನೆಟ್ ಇಲ್ಲದೆಯೇ ಮೆಸೇಜ್ ಅಥವಾ ಫೈಲ್ ಗಳನ್ನು ಶೇರ್ ಮಾಡಬಹುದು.
ಹೌದು, ಈ ಫೀಚರ್ ಸಧ್ಯಕ್ಕೆ ಬೀಟಾ ಯುಸರ್ ಗಳಿಗೆ ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಎಲ್ಲಾ ವಾಟ್ಸಾಪ್ (WhatsApp) ಬಳಕೆದಾರರಿಗೂ ಈ ಒಂದು ಸೌಲಭ್ಯ ಸಿಗಲಿದೆ.
Jio ಬಿಟ್ಟು ಎಲ್ಲಾ BSNL ಗೆ ಜಂಪ್! ಇನ್ನೆರಡು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ಸ್ ಘೋಷಿಸಿದ ಬಿಎಸ್ಎನ್ಎಲ್
ವಾಟ್ಸಾಪ್ ನಲ್ಲಿ ತಂದಿರುವ ಹೊಸ ಫೀಚರ್ ಮೂಲಕ ಇಂಟರ್ನೆಟ್ (Internet) ಇಲ್ಲದೆಯೇ ಫೈಲ್, ಫೋಟೋ, ವಿಡಿಯೋಗಳನ್ನು ಶೇರ್ ಮಾಡಬಹುದು. ನೀವು ಶೇರ್ ಮಾಡುವ ಯಾವುದೇ ಫೋಟೋ ಅಥವಾ ವಿಡಿಯೋ ಅದೇ ಕ್ವಾಲಿಟಿಯಲ್ಲಿ ಶೇರ್ ಮಾಡಬಹುದಾಗಿದೆ,
ಇಂಟರ್ನೆಟ್ ಇಲ್ಲದೆಯೇ ದೊಡ್ಡ ಸೈಜ್ ನ ಡಾಕ್ಯುಮೆಂಟ್ ಗಳನ್ನು ಶೇರ್ ಮಾಡಿಕೊಳ್ಳಬಹುದು. ಪ್ರಸ್ತುತ ಐಫೋನ್ ನಲ್ಲಿ (iPhone) ಇರುವ ಏರ್ ಡ್ರಾಪ್ ಫೀಚರ್ ರೀತಿಯಲ್ಲಿ, ವಾಟ್ಸಾಪ್ ಕೂಡ ಹೊಸ ಫೀಚರ್ ತರುತ್ತಿದೆ.
ವಾಟ್ಸಾಪ್ ಹೊರತಂದಿರುವ ಈ ವಿಶಿಷ್ಟ ಫೀಚರ್ ಮೂಲಕ ನಿಮ್ಮ ಪಕ್ಕದಲ್ಲಿ ಇರುವ ವ್ಯಕ್ತಿಯ ವಾಟ್ಸಾಪ್ ಗೆ ಇಂಟರ್ನೆಟ್ ಇಲ್ಲದೆಯೇ ಸುಲಭವಾಗಿ ಯಾವುದೇ ಫೈಲ್ ಅನ್ನು ಶೇರ್ ಮಾಡಬಹುದು. ಇದು ಹೇಗೆ ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ (Scan QR Code) ಮಾಡುವ ಮೂಲಕ.
ಹೌದು, ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ನಿಮ್ಮ ಪಕ್ಕದಲ್ಲಿ ಇರುವವರ ವಾಟ್ಸಾಪ್ ಗೆ ಯಾವುದೇ ಫೈಲ್ ಅನ್ನು ಶೇರ್ ಮಾಡಬಹುದು. ಮೊದಲೆಲ್ಲಾ ಈ ರೀತಿ ಶೇರ್ ಮಾಡುವುದಕ್ಕೆ ಬ್ಲೂಟೂತ್ ಅಥವಾ ಶೇರ್ ಇಟ್ ಬಳಕೆ ಮಾಡುತ್ತಿದ್ದೆವು, ಆದರೆ ಈಗ ವಾಟ್ಸಾಪ್ ಇಂದಲೇ ಈ ರೀತಿ ಶೇರ್ ಮಾಡಬಹುದು.
Airtel ಹಾಗೂ Jio ಗೆ ಠಕ್ಕರ್ ಕೊಟ್ಟ BSNL ನೆಟ್‌ವರ್ಕ್, ಅತೀ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲ್ಯಾನ್ ಘೋಷಣೆ
WhatsApp can be used even without internet
Our Whatsapp Channel is Live Now 👇