Jio ಬಿಟ್ಟು ಎಲ್ಲಾ BSNL ಗೆ ಜಂಪ್! ಇನ್ನೆರಡು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ಸ್ ಘೋಷಿಸಿದ ಬಿಎಸ್ಎನ್ಎಲ್

Story Highlights

ಹೆಚ್ಚಿನ ಜನರು ಈಗ BSNL ನೆಟ್ವರ್ಕ್ ಗೆ ಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ. ಏರ್ಟೆಲ್ ಮತ್ತು ಜಿಯೋ ನೆಟ್ವರ್ಕ್ ಗಳಲ್ಲಿ ಪ್ಲಾನ್ ಗಳು ಸಿಕ್ಕಾಪಟ್ಟೆ ಏರಿಕೆ ಆಗಿದೆ

ಈಗ ಟೆಲಿಕಾಂ ಕಂಪನಿಗಳ ರೀಚಾರ್ಜ್ ಪ್ಲಾನ್ ಗಳಲ್ಲಿ ಭಾರಿ ವ್ಯತ್ಯಾಸ ಕಂಡುಬರುತ್ತಿದೆ. ಹೌದು, ಏರ್ಟೆಲ್ (Airtel Prepaid), ಜಿಯೋ (Jio Recharge) ಈ ಎರಡು ಸಂಸ್ಥೆಗಳು ಕೂಡ ರೀಚಾರ್ಜ್ ಪ್ಲಾನ್ ಗಳನ್ನು ಜಾಸ್ತಿ ಮಾಡಿದ ಬಳಿಕ, ಜನರು ಇವುಗಳನ್ನು ಬಿಟ್ಟು ಬಿ.ಎಸ್.ಎನ್.ಎಲ್ (BSNL Network) ಕಡೆಗೆ ವಾಲುತ್ತಿದ್ದಾರೆ.

ಇದು ಸರ್ಕಾರದ ಟೆಲಿಕಾಮ್ ಕಂಪನಿ ಆಗಿದ್ದು, ಅತ್ಯುತ್ತಮವಾದ ಪ್ಲಾನ್ ಗಳನ್ನು (Prepaid Recharge Plans) ಸಹ ಹೊಂದಿದೆ. ಅದರ ಜೊತೆಗೆ ಇದೀಗ ಇನ್ನೆರಡು ಹೊಸ ಪ್ಲಾನ್ ಗಳನ್ನು ಸಹ ಹೊರತಂದಿದ್ದು, ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದೆ.

ಹೌದು, ಹೆಚ್ಚಿನ ಜನರು ಈಗ BSNL ನೆಟ್ವರ್ಕ್ ಗೆ ಪೋರ್ಟ್ ಮಾಡಿಕೊಳ್ಳುತ್ತಿದ್ದಾರೆ. ಏರ್ಟೆಲ್ ಮತ್ತು ಜಿಯೋ ನೆಟ್ವರ್ಕ್ ಗಳಲ್ಲಿ ಪ್ಲಾನ್ ಗಳು ಸಿಕ್ಕಾಪಟ್ಟೆ ಏರಿಕೆ ಆಗಿದೆ, ಇತ್ತ BSNL ಜೊತೆಗೆ ಟಾಟಾ ಸಂಸ್ಥೆ ಕೈಜೋಡಿಸಿದ್ದು, ಇದರಿಂದ ಹೆಚ್ಚಿನ ಜನರು BSNL ಕಡೆಗೆ ಬರುತ್ತಿದ್ದಾರೆ.

ಈಗಾಗಲೇ ಎಲ್ಲರೂ ಹೊಸ ಬಿ.ಎಸ್.ಎನ್.ಎಲ್ ಸಿಮ್ ಖರೀದಿ ಮಾಡುವುದಕ್ಕೆ ಮತ್ತು ಪೋರ್ಟ್ ಮಾಡಿಸಿಕೊಳ್ಳುವುದಕ್ಕೆ ಶುರು ಮಾಡಿದ್ದು, ಈ ವೇಳೆ ಬಿ.ಎಸ್.ಎನ್.ಎಲ್ ಇನ್ನು ಎರಡು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ ಗಳನ್ನು ಹೊರತಂದಿದೆ.

ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ!

108 ರೂಪಾಯಿಗಳ ಹೊಸ ಪ್ಲಾನ್:

ಇದು ಬಿ.ಎಸ್.ಎನ್. ಎಲ್ ಸಂಸ್ಥೆ ತಮ್ಮ ಗ್ರಾಹಕರಿಗಾಗಿ ಜಾರಿಗೆ ತಂದಿರುವ ಹೊಸ ಯೋಜನೆ ಆಗಿದ್ದು ಇದು 28 ಹಾಗೂ 30 ದಿನಗಳ ವ್ಯಾಲಿಡಿಟಿ ಹೊಂದಿರುವ ಪ್ಲಾನ್ ಆಗಿದೆ, ಈ ಒಂದು ಪ್ಲಾನ್ ನ ಅನುಸಾರ ಬಹಳ ಕಡಿಮೆ ಬೆಲೆ ಆಗಿರುವ 108 ರೂಪಾಯಿಗೆ ವಿವಿಧ ಸೇವೆಗಳು ಲಭ್ಯವಾಗುತ್ತದೆ.

ಕಡಿಮೆ ಬೆಲೆಯ ಪ್ಲಾನ್ ಹುಡುಕುತ್ತಿರುವವರಿಗೆ, ಇದು ಉತ್ತಮವಾದ ಆಯ್ಕೆ ಆಗಿದ್ದು, ಗ್ರಾಹಕರು ಹೆಚ್ಚುವರಿ ಶುಲ್ಕ ಪಾವತಿ ಮಾಡದೇ, ಈ ಪ್ಲಾನ್ ರೀಚಾರ್ಜ್ ಮಾಡಿಕೊಳ್ಳಬಹುದು.

ಚಿನ್ನ ಖರೀದಿಗೂ ಮುನ್ನ ಬಿಲ್ ನಲ್ಲಿ ಈ ಅಂಶ ನಮೂದಿಸಲಾಗಿದೆಯಾ ತಪ್ಪದೆ ಚೆಕ್ ಮಾಡಿ! ಹೊಸ ನಿಯಮ

BSNL New Recharge Planಈ ಪ್ಲಾನ್ ನಲ್ಲಿ 28 ದಿನಗಳವರೆಗು ಅಂದರೆ 1 ತಿಂಗಳ ಕಾಲ ಪ್ರತಿದಿನ 1 GB ಉಚಿತ ಡೇಟಾ ಸಿಗುತ್ತದೆ, ಹಾಗೆಯೇ 28 ದಿನಗಳವರೆಗು ಅನಿಯಮಿತ ಕರೆಗಳ ಸೌಲಭ್ಯವನ್ನು ಸಹ ಪಡೆದುಕೊಳ್ಳಬಹುದು.

ಒಂದು ವೇಳೆ ದಿನಕ್ಕೆ 1 ಜಿಬಿ ಡೇಟಾ ಖಾಲಿ ಆಗಿ ಹೋದರೆ, ಆಗ 40 kbps ಸ್ಪೀಡ್ ನಲ್ಲಿ ಡೇಟಾ ಬಳಸಬಹುದು. ಈ ರೀತಿಯಾಗಿ ಈ ಪ್ಲಾನ್ ಇದ್ದು, ಇದೊಂದು FRC ಪ್ಲಾನ್ ಆಗಿದೆ. ಅಂದರೆ ಇದು First Recharge Plan ಆಗಿದ್ದು, ಹೊಸದಾಗಿ ಸಿಮ್ ಖರೀದಿಸಿದಾಗ ಮಾಡಬಹುದಾದಂಥ ಪ್ಲಾನ್ ಮಾತ್ರ ಇದಾಗಿರುತ್ತದೆ.

ಸ್ಟೇಟ್ ಬ್ಯಾಂಕ್ ನಲ್ಲಿ 40 ಸಾವಿರದಿಂದ 80 ಸಾವಿರ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ

199 ರೂಪಾಯಿಯ ಮತ್ತೊಂದು ರೀಚಾರ್ಜ್ ಪ್ಲಾನ್:

ಇದು BSNL ನ ಮತ್ತೊಂದು ಕಡಿಮೆ ಬೆಲೆಯ ರೀಚಾರ್ಜ್ ಪ್ಲಾನ್ (Recharge Plan) ಆಗಿದೆ. ಈ ಒಂದು ಪ್ಲಾನ್ ನಲ್ಲಿ ಗ್ರಾಹಕರಿಗೆ 199 ರೂಪಾಯಿಗೆ ಪ್ರತಿ ದಿನ 2 GB ಡೇಟಾ ಸಿಗಲಿದೆ, ಹಾಗೆಯೇ ಅನಿಯಮಿತ ಫ್ರೀ ಕಾಲ್ಸ್ ಕೂಡ ಇರುತ್ತದೆ. ಜೊತೆಗೆ ಈ ಪ್ಲಾನ್ ನ ವ್ಯಾಲಿಡಿಟಿ ಸಹ ಇದ್ದು, ಇದು 30 ದಿನಗಳ ಸೌಲಭ್ಯ ಹೊಂದಿರುವ ಪ್ಲಾನ್ ಆಗಿದೆ. ಒಂದು ತಿಂಗಳುಗಳ ಕಾಲ ಪೂರ್ತಿ ನೀವು ಈ ಪ್ಲಾನ್ ನ ಸೌಲಭ್ಯ ಪಡೆದುಕೊಳ್ಳಬಹುದು.

BSNL has announced two more low-cost recharge plans