ಕ್ರೆಡಿಟ್ ಕಾರ್ಡ್‌ನಿಂದ ನಿಮ್ಮ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡುವ ಸುಲಭ ವಿಧಾನ ಇಲ್ಲಿದೆ!
Credit Card : ಡಿಟ್ ಕಾರ್ಡ್ (Credit Card) ಹೊಂದಿರುವವರು ದಿಢೀರ್ ಹಣದ ಆವಶ್ಯಕತೆ ಬಂದಾಗ ಅದನ್ನು ಬಳಸಿಕೊಳ್ಳಬಹುದು, ಪೇಮೆಂಟ್ ಗಳು ಕ್ರೆಡಿಟ್ ಕಾರ್ಡ್ ಇಂದ ಸುಲಭ ಆಗುತ್ತದೆ. ಕ್ರೆಡಿಟ್ ಕಾರ್ಡ್ ಇಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಹಣ ವರ್ಗಾವಣೆ ಮಾಡಿಕೊಳ್ಳಬಹುದು.
Credit Card : ಇಂದು ಹಣಕಾಸಿನ ವ್ಯವಹಾರ ಮಾಡಲು, ಹಣಕಾಸಿನ ಪೇಮೆಂಟ್ ಗಳನ್ನು ಮಾಡಲು ಅನೇಕ ವಿಧಾನಗಳಿವೆ, ಅವುಗಳಲ್ಲಿ ಎಲ್ಲರೂ ಪ್ರಮುಖವಾಗಿ ಗೂಗಲ್ ಪೇ (Google Pay) ಮತ್ತು ಫೋನ್ ಪೇ (PhonePe) ಬಳಕೆ ಮಾಡುತ್ತಾರೆ.
ಈ ಎರಡು ಆಪ್ ಗಳನ್ನು ಹೆಚ್ಚಿನ ಜನರು ಬಳಕೆ ಮಾಡುತ್ತಾರೆ, ಇವುಗಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹಣ ವರ್ಗಾವಣೆ (Money Transfer) ಮಾಡುವುದು ಸುಲಭ, ಒಂದೇ ಕ್ಷಣದಲ್ಲಿ ಪೇಮೆಂಟ್ ಮಾಡಬಹುದು. ಜೊತೆಗೆ ಈ ಆಪ್ ಗಳಲ್ಲಿ Loan ಪಡೆಯುವ ಸೌಲಭ್ಯಗಳು ಇದೆ.
ಹಾಗೆಯೇ ಇನ್ನಷ್ಟು ಜನರು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತಾರೆ. ಹೌದು, ಕ್ರೆಡಿಟ್ ಕಾರ್ಡ್ ಇಂದ ಸಿಗುವಂಥ ಸೌಲಭ್ಯ ಗಳು ಕೂಡ ಜಾಸ್ತಿಯೇ ಇರುತ್ತದೆ. ತುರ್ತು ಪರಿಸ್ಥಿತಿ ಎದುರಾದಾಗ ಅಂಥ ಸಮಯದಲ್ಲಿ ನಾವು ಕ್ರೆಡಿಟ್ ಕಾರ್ಡ್ ಬಳಕೆ ಮಾಡುತ್ತೇವೆ.
ಚಿನ್ನ ಖರೀದಿಗೂ ಮುನ್ನ ಬಿಲ್ ನಲ್ಲಿ ಈ ಅಂಶ ನಮೂದಿಸಲಾಗಿದೆಯಾ ತಪ್ಪದೆ ಚೆಕ್ ಮಾಡಿ! ಹೊಸ ನಿಯಮ
ಕ್ರೆಡಿಟ್ ಕಾರ್ಡ್ (Credit Card) ಹೊಂದಿರುವವರು ದಿಢೀರ್ ಹಣದ ಆವಶ್ಯಕತೆ ಬಂದಾಗ ಅದನ್ನು ಬಳಸಿಕೊಳ್ಳಬಹುದು, ಪೇಮೆಂಟ್ ಗಳು ಕ್ರೆಡಿಟ್ ಕಾರ್ಡ್ ಇಂದ ಸುಲಭ ಆಗುತ್ತದೆ. ಕ್ರೆಡಿಟ್ ಕಾರ್ಡ್ ಇಂದ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ (Bank Account) ಹಣ ವರ್ಗಾವಣೆ ಮಾಡಿಕೊಳ್ಳಬಹುದು.
ಹೌದು, ನಿಮ್ಮ ಬಳಿ ಕ್ರೆಡಿಟ್ ಕಾರ್ಡ್ ಇದ್ದರೆ, ಅದರಿಂದ ಕೂಡ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು. ಇದು ಕೂಡ ಬಹಳ ಸುಲಭದ ವಿಧಾನ ಆಗಿದೆ, ಹಾಗೆಯೇ ವಿವಿಧ ರೀತಿಗಳಲ್ಲಿ ಕ್ರೆಡಿಟ್ ಕಾರ್ಡ್ ನಲ್ಲಿರುವ ಹಣವನ್ನು ನಿಮ್ಮ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಿಕೊಳ್ಳಬಹುದು. ಅದು ಹೇಗೆ ಎಂದು ಇಂದು ನಿಮಗೆ ಪೂರ್ತಿಯಾಗಿ ತಿಳಿಸಿಕೊಡುತ್ತೇವೆ ನೋಡಿ..
ಕ್ರೆಡಿಟ್ ಕಾರ್ಡ್ ಇಂದ ಅಕೌಂಟ್ ಗೆ ಹಣ ವರ್ಗಾವಣೆ ಮಾಡುವ ವಿಧಾನ:
*ನಿಮ್ಮ ಕ್ರೆಡಿಟ್ ಇಂದ ಅಮೌಂಟ್ ಟ್ರಾನ್ಸ್ಫರ್ ಮಾಡಿಕೊಳ್ಳಲು ಮೊದಲಿಗೆ ನೀವು ಬ್ಯಾಂಕ್ ಆಪ್ ಓಪನ್ ಮಾಡಿ, ಅಲ್ಲಿ Transfer Fund ಎನ್ನುವ ಒಂದು ಆಪ್ಶನ್ ಇರುತ್ತದೆ, ಅದರಲ್ಲಿ Transfer From Credit Card ಎನ್ನುವ ಆಪ್ಶನ್ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ, ಎಷ್ಟು ಹಣ transfer ಮಾಡಬೇಕು ಎನ್ನುವುದನ್ನು ನಮೂದಿಸಿ, ಈ ಹಣವನ್ನು ಟ್ರಾನ್ಸ್ಫರ್ ಮಾಡಿಕೊಳ್ಳಬಹುದು.
*ಇನ್ನೊಂದು ಆಯ್ಕೆ E-wallet ಮೂಲಕ ಹಣ ವರ್ಗಾವಣೆ ಮಾಡಬಹುದು. ಇವ್ಯಾಲೆಟ್ ಆಪ್ ಓಪನ್ ಮಾಡಿ, ಇದರಲ್ಲಿ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಿ ಎನ್ನುವ ಆಪ್ಶನ್ ಇರುತ್ತದೆ, ಅದನ್ನು ಸೆಲೆಕ್ಟ್ ಮಾಡಿ, ನಂತರ ನಿಮ್ಮ ಬ್ಯಾಂಕ್ ಅಕೌಂಟ್ ನಂಬರ್, IFSC Code ಡೀಟೇಲ್ಸ್ ಇದೆಲ್ಲವನ್ನು ಹಾಕಿ, ನಂತರ ಅಕೌಂಟ್ ಹಣ ಟ್ರಾನ್ಸ್ಫರ್ ಮಾಡಿ ಎನ್ನುವ ಆಪ್ಶನ್ ಸೆಲೆಕ್ಟ್ ಮಾಡಿ. ನಿಮ್ಮ ಅಕೌಂಟ್ ಗೆ ಹಣ ಬರುತ್ತದೆ.
ಸ್ಟೇಟ್ ಬ್ಯಾಂಕ್ ನಲ್ಲಿ 40 ಸಾವಿರದಿಂದ 80 ಸಾವಿರ ಫಿಕ್ಸೆಡ್ ಹಣಕ್ಕೆ ಬಡ್ಡಿ ಎಷ್ಟು ಸಿಗುತ್ತೆ? ಇಲ್ಲಿದೆ ಲೆಕ್ಕಾಚಾರ
*ಒಂದು ವೇಳೆ ನಿಮ್ಮ ಇಂಟರ್ನೆಟ್ ಇಲ್ಲದೇ ಇದ್ದಾಗ ತಕ್ಷಣವೇ ಕ್ರೆಡಿಟ್ ಕಾರ್ಡ್ ಇಂದ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡಬೇಕು ಎಂದರೆ, ಅಂಥ ಸಮಯದಲ್ಲಿ ನೀವು ಒಂದು ಕಾಲ್ ಮೂಲಕ ಕೂಡ ಕ್ರೆಡಿಟ್ ಕಾರ್ಡ್ ಇಂದ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡಿಕೊಳ್ಳಬಹುದು.
*ಕ್ರೆಡಿಟ್ ಕಾರ್ಡ್ ಆಪ್ಶನ್ ಇರುವ ಎಟಿಎಂ ಗೆ ಹೋಗಿ ಅಲ್ಲಿಂದ ಬ್ಯಾಂಕ್ ಅಕೌಂಟ್ ಗೆ ಹಣ ವರ್ಗಾವಣೆ ಮಾಡಬಹುದು. ಕಾರ್ಡ್ ಇನ್ಸರ್ಟ್ ಮಾಡಿದ ನಂತರ, Cash Advance ಎನ್ನುವ ಆಪ್ಶನ್ ಕಾಣುತ್ತದೆ, ಇದನ್ನು ಸೆಲೆಕ್ಟ್ ಮಾಡಿ, ಕ್ರೆಡಿಟ್ ಕಾರ್ಡ್ ಗೆ ಲಿಂಕ್ ಆಗಿರುವ ಅಕೌಂಟ್ ನಂಬರ್ ನಮೂದಿಸಿ, ಹಣ ಎಷ್ಟು ಟ್ರಾನ್ಸ್ಫರ್ ಆಗಬೇಕು ಎನ್ನುವುದನ್ನು ತಿಳಿಸಿ, ಈ ವಾಹಿವಾಟನ್ನು ಪೂರ್ತಿಮಾಡಬಹುದು.
1963ರಲ್ಲಿ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ? 61 ವರ್ಷಗಳ ಹಿಂದಿನ ಪೆಟ್ರೋಲ್ ಬಿಲ್ ಈಗ ವೈರಲ್
*ನೇರವಾಗಿ ಬ್ಯಾಂಕ್ ಗೆ ಹೋಗಿ, ಕ್ರೆಡಿಟ್ ಕಾರ್ಡ್ (Credit Card) ಇಂದ ಹಣ ವರ್ಗಾವಣೆ ಮಾಡುವ ಫಾರ್ಮ್ ಪಡೆದು, ಕ್ರೆಡಿಟ್ ಕಾರ್ಡ್ ಡೀಟೇಲ್ಸ್, ಅಕೌಂಟ್ ಡೀಟೇಲ್ಸ್ ಎಲ್ಲವನ್ನು ಭರ್ತಿ ಮಾಡಿಕೊಟ್ಟರೆ, ಹಣ ವರ್ಗಾವಣೆ ಮಾಡಲಾಗುತ್ತದೆ..
Here’s an easy way to transfer money from your credit card to your bank account