1963ರಲ್ಲಿ ಪೆಟ್ರೋಲ್ ಬೆಲೆ ಎಷ್ಟಿತ್ತು ಗೊತ್ತಾ? 61 ವರ್ಷಗಳ ಹಿಂದಿನ ಪೆಟ್ರೋಲ್ ಬಿಲ್ ಈಗ ವೈರಲ್

Story Highlights

ಪೆಟ್ರೋಲ್ ಬಿಲ್ (Petrol Bill) ವೈರಲ್ ಆಗುವುದರ ಜೊತೆಗೆ 1964ರ ಅಂಬಾಸಿಡರ್ ಕಾರ್ ಖರೀದಿ ಮಾಡಿರುವ ಬಿಲ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈಗ ದಿನದಿಂದ ದಿನಕ್ಕೆ ದಿನನಿತ್ಯ ಬಳಕೆ ಮಾಡುವ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಲೇ ಇದೆ. ಅವುಗಳನ್ನು ಖರೀದಿ ಮಾಡುವುದು ಸಾಮಾನ್ಯ ಜನರಿಗೆ ಕಷ್ಟವಾಗಿದೆ. ಅದರಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ (Petrol and Diesel Price) ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ, ಈಗ ಒಂದು ಲೀಟರ್ ಪೆಟ್ರೋಲ್ ಬೆಲೆ ₹102 ರೂಪಾಯಿ ಆಗಿದ್ದು, ಒಂದು ಲೀಟರ್ ಡೀಸೆಲ್ ಬೆಲೆ 100 ರೂಪಾಯಿ ಆಗಿದೆ. ಇಂದು ಈ ಎರಡರ ಬೆಲೆ ಬಹಳ ಜಾಸ್ತಿ ಇದೆ.

ಆದರೆ 1963ರಲ್ಲಿ, ಅಂದರೆ 61 ವರ್ಷಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ (Petrol and Diesel) ಎಷ್ಟಿತ್ತು ಗೊತ್ತಾ? ಇದೀಗ 1963 ಪೆಟ್ರೋಲ್ ಬಿಲ್ ಒಂದು ಸೋಶಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ ಆಗಿದೆ.

2 ವರ್ಷಕ್ಕಿಂತಲೂ ಹೆಚ್ಚಾಗಿ PhonePe ಬಳಕೆ ಮಾಡಿದ್ರೆ, ನಿಮಗೆ ಸಿಗಲಿದೆ 5 ಲಕ್ಷ ಪರ್ಸನಲ್ ಲೋನ್!

ಈ ಬಿಲ್ ನೋಡಿದ ಜನರು ಆಶ್ಚರ್ಯಪಟ್ಟಿದ್ದಾರೆ, 1963 ರ ಫೆಬ್ರವಡಿ 2ರಂದು ಒಬ್ಬ ವ್ಯಕ್ತಿ ಭಾರತ್ ಪೆಟ್ರೋಲ್ ಬಂಕ್ (Petrol Bunk) ಇಂದ 5 ಲೀಟರ್ ಪೆಟ್ರೋಲ್ ಖರೀದಿ ಮಾಡಿದ್ದು, ಅದರ ಬೆಲೆ ₹3 ರೂಪಾಯಿ 60 ಪೈಸೆ ಆಗಿದೆ. ಇದನ್ನು ಗಮನಿಸಿದರೆ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 72 ಪೈಸೆ ಎಂದು ಗೊತ್ತಾಗುತ್ತಿದೆ. ಆಗ ಪೆಟ್ರೋಲ್ ಬೆಲೆ 1 ರೂಪಾಯಿ ಕೂಡ ಆಗಿರಲಿಲ್ಲ, ಆದರೆ ಇಂದು ಸೆಂಚುರಿ ದಾಟಿದೆ.

ಪೆಟ್ರೋಲ್ ಬೆಲೆ ಕೇಳಿ ಬಹಳಷ್ಟು ಜನರು ಶಾಕ್ ಆಗಿರೋದಂತೂ ನಿಜ. ಪೆಟ್ರೋಲ್ ಬಿಲ್ (Petrol Bill) ವೈರಲ್ ಆಗುವುದರ ಜೊತೆಗೆ 1964ರ ಅಂಬಾಸಿಡರ್ ಕಾರ್ ಖರೀದಿ ಮಾಡಿರುವ ಬಿಲ್ ಕೂಡ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈಗಿನ ಕಾಲದಲ್ಲಿ ಬೆಂಜ್, BMW ಹೀಗೆ ಅನೇಕ ಟಾಪ್ ಕಂಪನಿಗಳ ಐಷಾರಾಮಿ ಕಾರ್ ಗಳು (Cars) ಮಾರುಕಟ್ಟೆಯಲ್ಲಿದೆ ಎಂದು ನಮಗೆ ಗೊತ್ತೇ ಇದೆ. ಆದರೆ ಆಗಿನ ಕಾಲದಲ್ಲಿ ಅಂಬಾಸಿಡರ್ ಕಾರ್ ಎಲ್ಲವೂ ಆಗಿತ್ತು, BMW, ರೇಂಜ್ ರೋವರ್ ಈ ಎಲ್ಲಾ ಕಾರ್ ಗಳಿಗೆ (Cars) ಇರುವಷ್ಟೇ ಬೇಡಿಕೆ ಅಂಬಾಸಿಡರ್ ಕಾರ್ ಗೆ ಇತ್ತು..

ಬಡವರಿಗೆ ಸ್ವಂತ ಮನೆ ಭಾಗ್ಯ! ಹೊಸ ಉಚಿತ ವಸತಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಮನೆ ಪಡೆಯಿರಿ

Petrol Bill Goes Viralಆಗ ಎಲ್ಲಾ ಶ್ರೀಮಂತರು, ರಾಜ ಮನೆತನದವರು ಅಂಬಾಸಿಡರ್ ಕಾರ್ ಅನ್ನೇ ಖರೀದಿ ಮಾಡುತ್ತಿದ್ದರು. ಈಗ ಅಂಬಾಸಿಡರ್ ಕಾರ್ ಉತ್ಪಾದನೆ ನಿಂತಿದೆ, ಆದರೆ ಆಗ ಈ ಕಾರ್ ಗೆ ಇದ್ದಷ್ಟು ಬೇಡಿಕೆ ಇನ್ಯಾವುದೇ ವಾಹನಕ್ಕು ಇರಲಿಲ್ಲ ಎಂದರೆ ಖಂಡಿತ ತಪ್ಪಲ್ಲ.

ಇದೀಗ 1964ರಲ್ಲಿ ಅಂಬಾಸಿಡರ್ ಕಾರ್ ಖರೀದಿ ಮಾಡಿರುವ ಬಿಲ್ ಒಂದು Madras Trends ಎನ್ನುವ ಫೇಸ್ ಬುಕ್ ಪೇಜ್ ನಲ್ಲಿ ವೈರಲ್ ಆಗಿದೆ. 1964ರ ಅಕ್ಟೊಬರ್ 20ರಂದು ಕಾರ್ ಖರೀದಿ ಮಾಡಲಾಗಿದೆ. ಈ ಕಾರ್ ನ ಬೆಲೆ ₹16,495 ರೂಪಾಯಿ ಆಗಿದೆ ಎಂದು ಬಿಲ್ ಮೂಲಕ ತಿಳಿದುಬಂದಿದೆ.

ದುಬೈನಲ್ಲಿ ಚಿನ್ನದ ಬೇಲೆ ಸಿಕ್ಕಾಪಟ್ಟೆ ಕಡಿಮೆ, ಆದ್ರೆ ಅಲ್ಲಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?

ಈ ಬಿಲ್ ನಲ್ಲಿ ಗೊತ್ತಾಗಿರುವುದು ಏನು ಎಂದರೆ, ಈ ಅಂಬಾಸಿಡರ್ ಕಾರ್ ಬೆಲೆ ₹13,787 ರೂಪಾಯಿ ಆಗಿದೆ. ಇದರ ಸೇಲ್ಸ್ ಟ್ಯಾಕ್ಸ್ ₹1493 ರೂಪಾಯಿ ಆಗಿದೆ. ಜೊತೆಗೆ ಸಾರಿಗೆ ಶುಲ್ಕ ₹897 ರೂಪಾಯಿ ಆಗಿದೆ. ಇದೆಲ್ಲ ಶುಲ್ಕಗಳನ್ನು ಸೇರಿಸಿ, ₹16,495 ರೂಪಾಯಿ ಆಗಿದೆ.

ಆಗಿನ ಕಾಲದಲ್ಲಿ ಇಷ್ಟು ಕಡಿಮೆ ಮೊತ್ತಕ್ಕೆ ಕಾರ್ ಸಿಗುತ್ತಿತ್ತು ಎಂದು ತಿಳಿದು, ಜನರು ಶಾಕ್ ಆಗಿದ್ದು, ಈ ಕಾರ್ ಬಿಲ್ ಹಾಗೂ ಪೆಟ್ರೋಲ್ ಬಿಲ್ ಎರಡು ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

Do you know the price of petrol in 1963, 61 years old petrol bill Goes viral

Related Stories