ಬಡವರಿಗೆ ಸ್ವಂತ ಮನೆ ಭಾಗ್ಯ! ಹೊಸ ಉಚಿತ ವಸತಿ ಯೋಜನೆಗೆ ಇಂದೇ ಅರ್ಜಿ ಸಲ್ಲಿಸಿ ಮನೆ ಪಡೆಯಿರಿ

Story Highlights

ಇದೀಗ ಮತ್ತೊಮ್ಮೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಅವಕಾಶ ಸಿಕ್ಕಿದ್ದು, ಮನೆ ಇಲ್ಲದವರು ಈ ಯೋಜನೆಗೆ (Housing Scheme) ಅರ್ಜಿ ಸಲ್ಲಿಸಬಹುದು. ಅದು ಹೇಗೆ ಎಂದು ತಿಳಿಯೋಣ

ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಳ್ವಿಕೆಯಲ್ಲಿ ಬಹಳಷ್ಟು ಬದಲಾವಣೆ ಮತ್ತು ಏಳಿಗೆಯನ್ನು ಕಂಡಿದೆ, ಕಾಣುತ್ತಿದೆ. ಪಿಎಮ್ ಮೋದಿ ಅವರು ಪ್ರಮುಖವಾಗಿ ಜಾರಿಗೆ ತಂದ ಯೋಜನೆ ಪ್ರಧಾನಮಂತ್ರಿ ಆವಾಸ್ ಯೋಜನೆ ಆಗಿದೆ.

ಈ ಯೋಜನೆಯ ಮೂಲಕ ಮನೆ ಇಲ್ಲದ ಬಡವರಿಗೆ, ನಿರ್ಗತಿಕರಿಗೆ ಸ್ವಂತ ಮನೆ (Own House) ನಿರ್ಮಾಣ ಮಾಡಿಕೊಡುವ ಯೋಜನೆ ಇದಾಗಿದೆ. ಈ ಯೋಜನೆಯ ಮೂಲಕ ಜನರು ಸ್ವಂತ ಮನೆ ಪಡೆದುಕೊಳ್ಳಬಹುದು.

ಹೌದು, ವಿಶೇಷವಾಗಿ ನಿರ್ಗತಿಕರಿಗಾಗಿ ಜಾರಿಗೆ ತಂದಿರುವ ಯೋಜನೆ ಇದಾಗಿದ್ದು, ಮನೆ ಇಲ್ಲದವರು ಸುಲಭವಾಗಿ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈಗಾಗಲೇ ಲಕ್ಷಗಟ್ಟಲೇ ಜನರು ಪಿಎಮ್ ಆವಾಸ್ ಯೋಜನೆಯ ಮೂಲಕ ಸ್ವಂತ ಮನೆ ಪಡೆದುಕೊಂಡಿದ್ದಾರೆ.

ಇದೊಂದು ಕಾರ್ಡ್ ನಿಮ್ಮತ್ರ ಇದ್ರೆ ಸಾಕು ಸಿಗಲಿದೆ 2 ಲಕ್ಷ ರೂಪಾಯಿ ಬೆನಿಫಿಟ್! ಬಂಪರ್ ಅವಕಾಶ

ಇದೀಗ ಮತ್ತೊಮ್ಮೆ ಈ ಯೋಜನೆಗೆ ಅರ್ಜಿ ಸಲ್ಲಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಅವಕಾಶ ಸಿಕ್ಕಿದ್ದು, ಮನೆ ಇಲ್ಲದವರು ಈ ಯೋಜನೆಗೆ (Housing Scheme) ಅರ್ಜಿ ಸಲ್ಲಿಸಬಹುದು. ಅದು ಹೇಗೆ ಎಂದು ತಿಳಿಯೋಣ..

ಒಂದು ವೇಳೆ ನಿಮ್ಮ ಬಳಿ ಕೂಡ ಸ್ವಂತ ಮನೆ ಇಲ್ಲದೇ ಹೋದರೆ, ಪಿಎಮ್ ಆವಾಸ್ ಯೋಜನೆಗೆ ತಕ್ಷಣವೇ ಅರ್ಜಿ ಸಲ್ಲಿಸಿ. ಮೋದಿ ಅವರು 3ನೇ ಬಾರಿ ಅಧಿಕಾರಕ್ಕೆ ಬಂದ ನಂತರ ಪಿಎಮ್ ಆವಾಸ್ ಯೋಜನೆಯನ್ನು ಮತ್ತೆ ಶುರು ಮಾಡಿದ್ದು, ಈ ಯೋಜನೆಯಲ್ಲಿ ಈಗ 3 ಕೋಟಿ ಮನೆಗಳನ್ನು ನಿರ್ಮಾಣ ಮಾಡಿ, ಅರ್ಹತೆ ಹೊಂದಿರುವವರಿಗೆ ಕೊಡುವ ನಿರ್ಧಾರವನ್ನು ಸರ್ಕಾರ ತೆಗೆದುಕೊಂಡಿದ್ದು, ಈ ಯೋಜನೆಯಲ್ಲಿ ಎರಡು ಥರದಲ್ಲಿ ಮನೆಯ ನಿರ್ಮಾಣ ಆಗಲಿದೆ..

1.ಪಿಎಮ್ ಆವಾಸ್ ಯೋಜನೆ ಗ್ರಾಮೀಣ (PMAY-G)
2. ಪಿಎಮ್ ಆವಾಸ್ ಯೋಜನೆ ನಗರ (PMAY-U)

ಪಿಎಮ್ ಆವಾಸ್ ಯೋಜನೆಯ ಮೂಲಕ ಸ್ವಂತ ಮನೆ ಪಡೆಯಲು ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯ 18 ಲಕ್ಷಗಳ ಒಳಗಿರಬೇಕು. ಈ ಆದಾಯವನ್ನು 3 ರೀತಿಯಾಗಿ ವಿಂಗಡಿಸಲಾಗಿದೆ.

ಆರ್ಥಿಕವಾಗಿ ದುರ್ಬಲವಾಗಿ ಇರುವವರನ್ನು EWS ಗುಂಪಿಗೆ ಸೇರಿಸಲಾಗಿದ್ದು, ಇವರ ವಾರ್ಷಿಕ ಆದಾಯ ಮಿತಿ 3 ಲಕ್ಷ. ಕಡಿಮೆ ಆದಾಯ ಹೊಂದಿರುವವರನ್ನು LIG ವರ್ಗಕ್ಕೆ ಸೇರಿಸಲಾಗಿದ್ದು, ಇವರ ವಾರ್ಷಿಕ ಆದಾಯ ಮಿತಿ 3 ರಿಂದ 6 ಲಕ್ಷ. ಮಧ್ಯಮ ಆದಾಯ ಹೊಂದುವ ಜನರನ್ನು MIG ಗುಂಪಿಗೆ ಸೇರಿಸಲಾಗಿದ್ದು, ಇವರ ಆದಾಯ 6 ರಿಂದ 18 ಲಕ್ಷಗಳ ವರೆಗು ಇರುತ್ತದೆ.

ದುಬೈನಲ್ಲಿ ಚಿನ್ನದ ಬೇಲೆ ಸಿಕ್ಕಾಪಟ್ಟೆ ಕಡಿಮೆ, ಆದ್ರೆ ಅಲ್ಲಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?

PM Awas Yojanaಪಿಎಮ್ ಆವಾಸ್ ಯೋಜನೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ:

*ಪಿಎಮ್ ಆವಾಸ್ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲಿಗೆ ನೀವು pmaymis.gov.in ಈ ಲಿಂಕ್ ಗೆ ಭೇಟಿ ನೀಡಬೇಕು.

*ಇಲ್ಲಿ ಸಿಟಿಜನ್ ಆಸೆಸ್ಮೆಂಟ್ ಎನ್ನುವ ಡ್ರಾಪ್ ಡೌನ್ ಇರುತ್ತದೆ, ಇಲ್ಲಿ ಇರುವ 3 ಆಯ್ಕೆಗಳಲ್ಲಿ ನೀವು ಯಾವುದಕ್ಕೆ ಅಪ್ಲೈ ಮಾಡುತ್ತೀರಿ ಎನ್ನುವುದನ್ನು ಸೆಲೆಕ್ಟ್ ಮಾಡಿ.

*ಈಗ ನಿಮ್ಮ ಆಧಾರ್ ಕಾರ್ಡ್ ನಂಬರ್ (Aadhaar Number) ನಮೂದಿಸಿ, ಮಾಹಿತಿ ಸರಿ ಇದ್ದರೆ ಹೊಸ ಪೇಜ್ ಓಪನ್ ಆಗುತ್ತದೆ.

ಸ್ಟೇಟ್ ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡಿದ್ರೆ ಇಲ್ಲಿದೆ ಬಿಗ್ ಅಪ್ಡೇಟ್! ಬಡ್ಡಿದರ ಧಿಡೀರ್ ಬದಲಾವಣೆ

*ಇಲ್ಲಿ ನಿಮ್ಮ ಬಗ್ಗೆ ಕೇಳುವ ಎಲ್ಲಾ ವಿವರಗಳನ್ನು ಸರಿಯಾಗಿ ಎಂಟರ್ ಮಾಡಿ

*ಆಧಾರ್ ಮಾಹಿತಿ ಚೆಕ್ ಮಾಡಿದ ನಂತರ ಹೊಸ ಪೇಜ್ ಗೆ ಹೋಗುತ್ತದೆ.

*ಇಲ್ಲಿ ನಿಮಗೆ ಹಾಗೂ ನಿಮ್ಮ ಕುಟುಂಬಕ್ಕೆ ಸೇರಿದ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತಿಳಿಸಬೇಕು, ಹೆಸರು, ವಿಳಾಸ, ರಾಜ್ಯದ ಮಾಹಿತಿ, ಮನೆಯ ಮುಖ್ಯಸ್ಥರ ಮಾಹಿತಿ, ಇದೆಲ್ಲವನ್ನು ಕೂಡ ಸರಿಯಾಗಿ ನಮೂದಿಸಬೇಕು. ಬಳಿಕ ಸಬ್ಮಿಟ್ ಮಾಡಬೇಕು.

*ಒಂದು ವೇಳೆ ತಪ್ಪು ಮಾಹಿತಿ ಹಾಕಿದರೆ, ಬಳಿಕ ಅದನ್ನು ಸರಿಪಡಿಸಬಹುದು.

Apply for free housing scheme today and get a home