ನಮ್ಮ ದೇಶದಲ್ಲಿ ಹೋಮ್ ಲೋನ್ (Home Loan) ಪಡೆಯುವವರ ಸಂಖ್ಯೆ ತುಂಬಾ ಜಾಸ್ತಿ ಇದೆ. ಎಲ್ಲರೂ ಕೂಡ ಮನೆ ಕಟ್ಟಲು ಬಯಸುತ್ತಾರೆ, ಆದರೆ ಎಲ್ಲರ ಬಳಿ ಮನೆ ಕಟ್ಟುವಷ್ಟು ಆರ್ಥಿಕವಾಗಿ ಸೌಲಭ್ಯ ಇರುವುದಿಲ್ಲ. ಅಂಥವರು ಹೋಮ್ ಲೋನ್ ಮೊರೆ ಹೋಗುತ್ತಾರೆ. ಎಲ್ಲಾ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಸಿಗುತ್ತದೆ.
ಹೋಮ್ ಲೋನ್ ಮೇಲೆ ಬಡ್ಡಿ ಜಾಸ್ತಿ ಆದರೂ ಕೂಡ, ಜನರು ಬೇರೆ ದಾರಿ ಇಲ್ಲದೇ ಹೋಮ್ ಲೋನ್ (Home Loan) ತೆಗೆದುಕೊಳ್ಳುತ್ತಾರೆ. ಇದೀಗ ಹೋಮ್ ಲೋನ್ ಪಡೆದವರಿಗೆ ಒಂದು ಬೇಸರದ ಸುದ್ದಿ ಎದುರಾಗಿದೆ.
ಹೌದು, ಸರ್ಕಾರಿ ವಲಯದ ಬ್ಯಾಂಕ್ ಆಗಿರುವ SBI ನಲ್ಲಿ ಬಹಳಷ್ಟು ಜನರು ಹೋಮ್ ಲೋನ್ ಪಡೆದಿದ್ದಾರೆ. ಈಗಲೂ ಪಡೆಯುತ್ತಿದ್ದಾರೆ, ಗ್ರಾಹಕರಿಗೆ ಉತ್ತಮವಾದ ಸೇವೆ ನೀಡುತ್ತಾ ಬಂದಿರುಗ SBI ಇಂದ ಇದೀಗ ತಮ್ಮ ಗ್ರಾಹಕರಿಗೆ ಒಂದು ಬೇಸರದ ಸುದ್ದಿ ಸಿಕ್ಕಿದೆ.
ಅದೇನು ಎಂದರೆ, ಇದ್ದಕ್ಕಿದ್ದಂತೆ SBI ಹೋಮ್ ಲೋನ್ EMI ಗಳನ್ನು ಜಾಸ್ತಿ ಮಾಡಿದ್ದು, ಇದರಿಂದ ಜನರಿಗೆ ಸಾಲದ ಹೊರೆ ಇನ್ನಷ್ಟು ಹೆಚ್ಚಾಗಿದೆ. ಅಷ್ಟಕ್ಕೂ ಈಗ ಹೋಮ್ ಲೋನ್ ನ ಎಷ್ಟು ಮೊತ್ತ ಜಾಸ್ತಿ ಆಗಿದೆ? ಎಲ್ಲವನ್ನು ತಿಳಿಯೋಣ..
ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು? ಇಡಬಹುದಾದ ಲಿಮಿಟ್ ಎಷ್ಟು ಗೊತ್ತಾ?
ಗ್ರಾಹಕರಿಗೆ ಶಾಕ್ ಕೊಟ್ಟ SBI
ಪ್ರಸ್ತುತ ನಮ್ಮ ದೇಶದಲ್ಲಿ ಎಲ್ಲಾ ವಸ್ತುಗಳ ಬೆಲೆ ಜಾಸ್ತಿ ಆಗುತ್ತಿದೆ, ಆರ್ಥಿಕವಾಗಿ ದೇಶದ ಪರಿಸ್ಥಿತಿ ಉತ್ತಮವಾಗಿಲ್ಲ. ಈ ವೇಳೆ ಬ್ಯಾಂಕ್ ಗಳಿಂದ ಕೂಡ ಗ್ರಾಹಕರಿಗೆ ಬೇಸರದ ಸುದ್ದಿಯೇ ಕೇಳಿಬರುತ್ತಿದೆ. SBI Bank ನಲ್ಲಿ ಲೋನ್ ಪಡೆದಿರುವವರು ಇನ್ನುಮುಂದೆ ಹೆಚ್ಚು ಬಡ್ಡಿ ಕಟ್ಟಬೇಕು, ಇದರ ಅರ್ಥ EMI ಮೊತ್ತ ಕೂಡ ಜಾಸ್ತಿ ಕಟ್ಟಬೇಕಾಗಿದೆ.
ಇದೀಗ SBI ತಮ್ಮ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅನ್ನು ಹೆಚ್ಚಿಸಿದೆ, 5 ಇಂದ 10 ಬೇಸಿಕ್ ಪಾಯಿಂಟ್ಸ್ ಗಳನ್ನು ಹೆಚ್ಚಿಸಿದ್ದು, ಇದರಿಂದ ಜನರ ಮೇಲೆ ಹೊರೆ ಹೆಚ್ಚಾಗಿದೆ.
ಇದೀಗ ಮಾರ್ಜಿನ್ ಆಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಅನ್ನು 0.05% ಇಂದ 0.10% ಗೆ ಹೆಚ್ಚಿಸಲಾಗಿದೆ. ನಮಗೆಲ್ಲಾ ಗೊತ್ತಿರುವ ಹಾಗೆ SBI ನಮ್ಮ ದೇಶದ ಅತಿದೊಡ್ಡ ಸರ್ಕಾರಿ ವಲಯದ ಬ್ಯಾಂಕ್ ಆಗಿದೆ. ಬೇರೆ ಎಲ್ಲಾ ಬ್ಯಾಂಕ್ ಗಿಂತ ಇಲ್ಲಿ ಗ್ರಾಹಕರು ಜಾಸ್ತಿ ಇದ್ದಾರೆ.
ಹಾಗಿರುವಾಗ SBI ಇದೀಗ ಮಾರ್ಜಿನಲ್ ಕಾಸ್ಟ್ ಆಫ್ ಲೆಂಡಿಂಗ್ ರೇಟ್ ಜಾಸ್ತಿ ಮಾಡಿರುವುದರ ಪರಿಣಾಮ ಅವರಲ್ಲಿ ಲೋನ್ ಪಡೆದಿರುವ ಎಲ್ಲಾ ಗ್ರಾಹಕರ ಮೇಲೆ ಬೀಳಲಿದ್ದು, ಲೋನ್ ಪಡೆದಿರುವ ಕೋಟ್ಯಾಂತರ ಗ್ರಾಹಕರು ಹೆಚ್ಚು ಬಡ್ಡಿದರ ಪಾವತಿಸಬೇಕಾಗಿ ಬರಬಹುದು, ಇದರಿಂದ ಅವರು ಪಾವತಿ ಮಾಡುತ್ತಿದ್ದ EMI ಕೂಡ ಹೆಚ್ಚಾಗಬಹುದು.
ಹೆಚ್ಚು ಪ್ರೆಶರ್ ಇರೋದಿಲ್ಲ, ಬ್ಯಾಂಕ್ ಲೋನ್ ಪಡೆಯೋಕೆ ಇದಕ್ಕಿಂತ ಒಳ್ಳೆಯ ಮಾರ್ಗ ಇನ್ನೊಂದಿಲ್ಲ!
ಹೆಚ್ಚಾಗಿರುವುದು ಎಷ್ಟು ಬಡ್ಡಿದರ?
*90 ದಿನಗಳ ಅವಧಿಯ ಸಾಲಕ್ಕೆ MCLR 10 ಪಾಯಿಂಟ್ಸ್ ಜಾಸ್ತಿಯಾಗಿದ್ದು, 8.4% ಬಡ್ಡಿ ಪಾವತಿ ಮಾಡಬೇಕು.
*180 ದಿನಗಳ ಅವಧಿಯ ಸಾಲದ MCRL 10 ಪಾಯಿಂಟ್ಸ್ ಜಾಸ್ತಿಯಾಗಿದ್ದು, 8.75% ಬಡ್ಡಿ ಪಾವತಿ ಮಾಡಬೇಕು.
*1 ವರ್ಷದ ಅವಧಿಯ ಸಾಲಕ್ಕೆ MCRL 10 ಪಾಯಿಂಟ್ಸ್ ಹೆಚ್ಚಾಗಿದ್ದು, 8.85% ಬಡ್ಡಿ ಪಾವತಿಸಬೇಕಾಗುತ್ತದೆ.
*2 ವರ್ಷದ ಅವಧಿಯ ಸಾಲಕ್ಕೆ MCRL 10 ಪಾಯಿಂಟ್ಸ್ ಹೆಚ್ಚಾಗಿರುವ ಕಾರಣ, 8.95% ಬಡ್ಡಿ ಪಾವತಿ ಮಾಡಬೇಕಾಗುತ್ತದೆ.
ಸ್ಟೇಟ್ ಬ್ಯಾಂಕಿನಿಂದ ಬಂಪರ್ ಕೊಡುಗೆ! ಮನೆಯಲ್ಲೇ ಕುಳಿತು ಪ್ರತಿ ತಿಂಗಳು ಲಕ್ಷಗಟ್ಟಲೇ ಹಣಗಳಿಸಿ
Here is a big update if you have Taken any loan in State Bank of India
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.