Gold Limit : ನಮ್ಮ ದೇಶದ ಕುಟುಂಬಗಳಲ್ಲಿ ಚಿನ್ನ ಖರೀದಿ ಎನ್ನುವುದು ಬಹಳ ಪ್ರಮುಖವಾದ ವಿಷಯ. ಚಿನ್ನವನ್ನು (Gold) ಪಾರಂಪರಿಕ ಅಭರಣಗಳಾಗಿ ಕೂಡ ಇಟ್ಟುಕೊಂಡಿರುತ್ತಾರೆ. ಇನ್ನು ಕೆಲವರಿಗೆ ಚಿನ್ನ ಖರೀದಿ ಮಾಡುವುದು ಬಹಳ ಇಷ್ಟವಿರುತ್ತದೆ.
ಆದರೆ ಎಲ್ಲರೂ ಕೂಡ ತಮಗೆ ಇಷ್ಟ ಎಂದು ಮನಸ್ಸಿಗೆ ಬಂದಷ್ಟು ಚಿನ್ನ ಖರೀದಿ ಮಾಡಲು ಸಾಧ್ಯವಿಲ್ಲ, ಇಂತಿಷ್ಟು ಚಿನ್ನವನ್ನು ಮಾತ್ರ ಖರೀದಿ ಮಾಡಬೇಕು ಎಂದು ತೆರಿಗೆ ಇಲಾಖೆ ಲಿಮಿಟ್ ಇಟ್ಟಿದೆ. ಅದನ್ನು ಮೀರಿ ಖರೀದಿ ಮಾಡಿದರೆ, ಏನಾಗುತ್ತದೆ ಗೊತ್ತಾ?
ಪ್ರಸ್ತುತ ಚಿನ್ನದ ಬೆಲೆ (Gold Price) ಗಗನಕ್ಕೆ ಏರಿದೆ ಎಂದರೆ ತಪ್ಪಲ್ಲ, 10 ಗ್ರಾಮ್ ಅಪರಂಜಿ ಚಿನ್ನದ ಬೆಲೆ ಸುಮಾರು 68 ಸಾವಿರಕ್ಕೆ ಬಂದು ನಿಂತಿದೆ. ಈ ಕಾರಣಕ್ಕೆ ಹೆಚ್ಚಿನ ಜನರು ಈಗಲೇ ಚಿನ್ನ ಖರೀದಿ (Buy Gold) ಮಾಡುವುದು ಒಳ್ಳೆಯದು ಎಂದುಕೊಂಡಿದ್ದಾರೆ.
ಹೀಗಿರುವಾಗ ಚಿನ್ನ ಖರೀದಿಗೆ ಹೆಚ್ಚು ಜನ ಆಸಕ್ತಿ ತೋರಿಸುತ್ತಿರುವುದೇನೋ ನಿಜ, ಆದರೆ ಚಿನ್ನ ಖರೀದಿ ಮಾಡುವ ಮುನ್ನ ತೆರಿಗೆ ಇಲಾಖೆಯ ನಿಯಮಗಳು ಏನೇನು ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು. ಆಗ ನೀವು ಚಿನ್ನ ಖರೀದಿ ಮಾಡಿದರು ಕೂಡ, ಏನು ಸಮಸ್ಯೆ ಆಗುವುದಿಲ್ಲ.
ಸ್ಟೇಟ್ ಬ್ಯಾಂಕಿನಿಂದ ಬಂಪರ್ ಕೊಡುಗೆ! ಮನೆಯಲ್ಲೇ ಕುಳಿತು ಪ್ರತಿ ತಿಂಗಳು ಲಕ್ಷಗಟ್ಟಲೇ ಹಣಗಳಿಸಿ
ಭಾರತದಲ್ಲಿ ಚಿನ್ನ ಖರೀದಿಗೆ ಇರುವ ನಿಯಮಗಳೇನು?
ನಮ್ಮ ದೇಶದಲ್ಲಿ ಚಿನ್ನ ಖರೀದಿಗೆ ಅದರದ್ದೇ ಆದ ನಿಯಮಗಳನ್ನು ಜಾರಿಗೆ ತಂದಿದೆ ತೆರಿಗೆ ಇಲಾಖೆ. ಅದನ್ನು ನಾವು ತಿಳಿದುಕೊಂಡರೆ ಒಳ್ಳೆಯದು. ಇಲ್ಲಿ ಮಹಿಳೆಯರಿಗೆ ಮತ್ತು ಪುರುಷರಿಗೆ ಎಷ್ಟು ಚೆನ್ನ ಖರೀದಿ ಮಾಡಬಹುದು ಎಂದು ಲಿಮಿಟ್ ಇದೆ.
ಅದೇ ರೀತಿ ಮದುವೆಯಾಗದ ಮಹಿಳೆಯರು, ಮದುವೆ ಆಗಿರುವ ಮಹಿಳೆಯರು ಎಷ್ಟು ಚಿನ್ನ ಖರೀದಿ ಮಾಡಬಹುದು ಎನ್ನುವುದಕ್ಕೆ ಕೂಡ ಲಿಮಿಟ್ ಇದೆ. ಇವುಗಳ ಬಗ್ಗೆ ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ..
ಚಿನ್ನ ಖರೀದಿಯ ಲಿಮಿಟ್ ಅನ್ನು ಜಾರಿಗೆ ತಂದಿರುವುದು
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (CBDT) ಇಲಾಖೆ, ಇಲಾಖೆಯ ಲಿಮಿಟ್ ಅಷ್ಟು ಮಾತ್ರ ನಿಮ್ಮ ಬಳಿ ಚಿನ್ನ ಇದ್ದರೆ, ಆಗ ನೀವು ಆ ಚಿನ್ನದ ಮೂಲ ಏನು ಎನ್ನುವುದಕ್ಕೆ ಯಾವುದೇ ಪುರಾವೆ ತೋರಿಸುವ ಅಗತ್ಯವಿಲ್ಲ.
ಮದುವೆಯಾದ ಮಹಿಳೆಯ ಹತ್ತಿರ 500 ಗ್ರಾಮ್ ಚಿನ್ನ ಇರಬಹುದು, ಇನ್ನು ಮದುವೆಯಾಗದ ಮಹಿಳೆಯ ಹತ್ತಿರ 250 ಗ್ರಾಮ್ ಚಿನ್ನ ಇರಬಹುದು, ಪುರುಷರ ಬಳಿ 100 ಗ್ರಾಮ್ ಚಿನ್ನ ಇರಬಹುದು. ಇಷ್ಟು ಚಿನ್ನ ಮಾತ್ರ ಇದ್ದರೆ, ನಿಮ್ಮ ಮನೆಗೆ ಅಧಿಕಾರಿಗಳು ಬಂದು ದಾಳಿ ಮಾಡಿದರೂ ಕೂಡ, ಪುರಾವೆ ಕೇಳುವ ಹಾಗಿಲ್ಲ.
ಹೆಚ್ಚು ಪ್ರೆಶರ್ ಇರೋದಿಲ್ಲ, ಬ್ಯಾಂಕ್ ಲೋನ್ ಪಡೆಯೋಕೆ ಇದಕ್ಕಿಂತ ಒಳ್ಳೆಯ ಮಾರ್ಗ ಇನ್ನೊಂದಿಲ್ಲ!
ಚಿನ್ನದ ಮೇಲೆ ಟ್ಯಾಕ್ಸ್:
ಒಂದು ವೇಳೆ ನೀವು ಚಿನ್ನ ಖರೀದಿಸಿದ ನಂತರ ಅದನ್ನು ಮಾರಾಟ ಮಾಡಬೇಕು ಎಂದರೆ, ಆಗ ನೀವು ಚಿನ್ನದ ಮೇಲೆ ತೆರಿಗೆ ಪಾವತಿ ಮಾಡಬೇಕು. ಚಿನ್ನ ಖರೀದಿ ಮಾಡಿ, 3 ವರ್ಷಗಳ ನಂತರ ಅದನ್ನು ಮಾರಾಟ ಮಾಡುತ್ತೀರಿ ಎಂದರೆ, ಆಗ ತೆರಿಗೆ ಸ್ಲ್ಯಾಬ್ ಕಟ್ಟಬೇಕಾಗುತ್ತದೆ. ಚಿನ್ನ ಖರೀದಿಸಿ 3 ವರ್ಷಕ್ಕಿಂತ ಹೆಚ್ಚಿನ ಸಮಯ ಆಗಿದ್ದರೆ, ಚಿನ್ನದ ಬೆಲೆಯ 20% ಅನ್ನು ಟ್ಯಾಕ್ಸ್ ರೂಪದಲ್ಲಿ ಪಾವತಿ ಮಾಡಬೇಕಾಗುತ್ತದೆ.
ನೀವು ಜಾಮೀನು ನೀಡಿದ್ದ ವ್ಯಕ್ತಿ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಬ್ಯಾಂಕ್ ನಿಯಮ ಹೀಗಿದೆ
How many grams of gold can you keep in your house, Do you know the limit
Providing News, information & entertainment in Kannada Language, Since 2019. This Website reacts as a voice of the people & representative of a common man. as per Google it was first indexed in March 2019
ಕನ್ನಡ ನ್ಯೂಸ್ ಟುಡೇ ಇಂದಿನ ಪ್ರಮುಖ ಸುದ್ದಿ ಹಾಗೂ ಬ್ರೇಕಿಂಗ್ ನ್ಯೂಸ್ ಅಪ್ಡೇಟ್ ಗಳನ್ನು ಪ್ರಸ್ತುತ ಪಡಿಸುತ್ತದೆ.