ಹೆಚ್ಚು ಪ್ರೆಶರ್ ಇರೋದಿಲ್ಲ, ಬ್ಯಾಂಕ್ ಲೋನ್ ಪಡೆಯೋಕೆ ಇದಕ್ಕಿಂತ ಒಳ್ಳೆಯ ಮಾರ್ಗ ಇನ್ನೊಂದಿಲ್ಲ!
ಹೋಮ್ ಲೋನ್ (Home Loan), ಪರ್ಸನಲ್ ಲೋನ್ (Personal Loan), ಗೋಲ್ಡ್ ಲೋನ್ (Gold Loan), ವೆಹಿಕಲ್ ಲೋನ್ ಹೀಗೆ ಬೇರೆ ಬೇರೆ ರೀತಿಯಲ್ಲಿ ಸಾಲ ಪಡೆಯಬಹುದು. ಆದರೆ ಕೆಲವೊಮ್ಮೆ ಈ ಥರದ ಸಾಲಗಳು ಬ್ಯಾಂಕ್ ಇಂದ ಸಿಗುವುದು ಕಷ್ಟ.
ಹಣಕಾಸಿನ ವಿಷಯದಲ್ಲಿ ಯಾವಾಗ ತುರ್ತು ಪರಿಸ್ಥಿತಿ ಎದುರಾಗುತ್ತದೆ ಎಂದು ಊಹಿಸೋಕೆ ಸಾಧ್ಯವಿಲ್ಲ. ಅಂಥ ಸಮಯದಲ್ಲಿ ಸಾಮಾನ್ಯವಾಗಿ ಎಲ್ಲರೂ ಬ್ಯಾಂಕ್ ನಲ್ಲಿ ಸಾಲ ಪಡೆಯುವುದಕ್ಕೆ ಮುಂದಾಗುತ್ತಾರೆ. ಹೋಮ್ ಲೋನ್ (Home Loan), ಪರ್ಸನಲ್ ಲೋನ್ (Personal Loan), ಗೋಲ್ಡ್ ಲೋನ್ (Gold Loan), ವೆಹಿಕಲ್ ಲೋನ್ ಹೀಗೆ ಬೇರೆ ಬೇರೆ ರೀತಿಯಲ್ಲಿ ಸಾಲ ಪಡೆಯಬಹುದು. ಆದರೆ ಕೆಲವೊಮ್ಮೆ ಈ ಥರದ ಸಾಲಗಳು ಬ್ಯಾಂಕ್ ಇಂದ ಸಿಗುವುದು ಕಷ್ಟ.
ಆಗ ತುರ್ತು ಸಮಯದಲ್ಲಿ ಹಣ ಹೇಗೆ ಹೊಂದಿಸೋದು, ಸಾಲ ಹೇಗೆ ಪಡೆಯೋದು ಎನ್ನುವ ಪ್ರಶ್ನೆ ನಿಮ್ಮಲ್ಲಿದ್ದರೆ, ಅದಕ್ಕಿಂದು ಉತ್ತರ ತಿಳಿಸುತ್ತೇವೆ. ಈಗ ಬಹಳಷ್ಟು ಜನರಿಗೆ ತಮ್ಮ ಬಳಿ ಹಣ ಇದ್ದಾಗ ಅದನ್ನು ಸೇವಿಂಗ್ಸ್ ರೂಪದಲ್ಲಿ FD ಮಾಡಿ, ಮುಂದಿನ ದಿನಗಳಲ್ಲಿ ಒಳ್ಳೆಯ ಆದಾಯ ಪಡೆಯುವ ಆಸಕ್ತಿ ಇರುತ್ತದೆ, ಹಲವಾರು ಜನರು ಇದೇ ಥರ ಬ್ಯಾಂಕ್ ಗಳಲ್ಲಿ FD ಮಾಡಿರುತ್ತಾರೆ.
ನೀವು ಜಾಮೀನು ನೀಡಿದ್ದ ವ್ಯಕ್ತಿ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಬ್ಯಾಂಕ್ ನಿಯಮ ಹೀಗಿದೆ
ಒಂದು ವೇಳೆ ನೀವು ಕೂಡ ಈ ಹಿಂದೆ ನಿಮ್ಮ ಹಣವನ್ನು ಬ್ಯಾಂಕ್ ನಲ್ಲಿ FD ಮಾಡಿದ್ದರೆ, ಅದರ ಮೇಲೆ ಈಗ ಸಾಲ ಪಡೆಯಬಹುದು..
ಹೌದು, ಸಾಲ ಪಡೆಯುವುದಕ್ಕೆ ಈ ಒಂದು ಮಾರ್ಗ ಕೂಡ ಇದೆ. ಆದರೆ ಹೆಚ್ಚಿನ ಜನರಿಗೆ ಇದರ ಬಗ್ಗೆ ಗೊತ್ತಿಲ್ಲ. ಹಾಗಾಗಿ ನೀವು ಕೂಡ ಈ ಸಾಲದ ಬಗ್ಗೆ ತಿಳಿದುಕೊಳ್ಳುವುದು ಒಳ್ಳೆಯದು.
ಒಂದು ವೇಳೆ ನಿಮಗೆ ಬೇರೆ ಯಾವುದೇ ಲೋನ್ ಪಡೆಯಲು ಸಾಧ್ಯವಾಗಿಲ್ಲ ಎಂದರೆ, ಬ್ಯಾಂಕ್ ನಲ್ಲಿ ನೀವು ಹೂಡಿಕೆ ಮಾಡಿರುವ Fixed Deposit ಮೊತ್ತದ ಮೇಲೆ ಸಾಲ ಪಡೆಯಬಹುದು, ಈ ಸಾಲ ಪಡೆಯುವುದು ಹೇಗೆ? FD ಆಧಾರದ ಮೇಲೆ ಎಷ್ಟು ಸಾಲ ಸಿಗುತ್ತದೆ? ಈ ಮಾಹಿತಿಯನ್ನು ಪೂರ್ತಿಯಾಗಿ ತಿಳಿಯೋಣ…
ಬಂಪರ್ ಕೊಡುಗೆ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ 5,550 ರೂಪಾಯಿ ಪಿಂಚಣಿ
FD ಮೇಲಿನ ಸಾಲ ಒಳ್ಳೆಯದು:
ಒಂದು ವೇಳೆ ನಿಮಗೆ ಹಣದ ಅವಶ್ಯಕತೆ ಇದ್ದು, ತಕ್ಷಣವೇ ಹಣ ಬೇಕು ಎಂದರೆ, ನಿಮ್ಮ FD ಮೇಲೆ ಹಣ ಪಡೆಯುವುದು ಉತ್ತಮವಾದ ಆಯ್ಕೆ ಆಗಿದೆ. ಇದರಲ್ಲಿ ನಿಮಗೆ ಬಡ್ಡಿ ಕೂಡ ಕಡಿಮೆ ಇರುತ್ತದೆ, ಹಾಗೆಯೇ ಕಡಿಮೆ ಸಮಯದಲ್ಲಿ ಬೇಗ ಸಾಲ ತೀರಿಸಿಕೊಳ್ಳಬಹುದು.
ಪರ್ಸನಲ್ ಲೋನ್ ಅಥವಾ ಗೋಲ್ಡ್ ಲೋನ್ ರೀತಿಯಲ್ಲಿ ಈ ಸಾಲದ ಮೇಲೆ ಹೆಚ್ಚು ಪ್ರೆಶರ್ ಇರುವುದಿಲ್ಲ. ಒಂದು ವೇಳೆ ನೀವು ಹಣವನ್ನು ವಾಪಸ್ ನೀಡಿದ ಬಳಿಕ, FD ಬ್ಯಾಲೆನ್ಸ್ ಇನ್ನು ಇದ್ದರೆ ಆ ಮೊತ್ತವನ್ನು ಅವಶ್ಯಕತೆ ಬಂದಾಗ ಬಳಸಿಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ನಲ್ಲಿ ಒಂದು ವರ್ಷ ನಿಮ್ಮ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ?
ಲೋನ್ ಎಷ್ಟು ಸಿಗುತ್ತದೆ?
ನೀವು ಹೂಡಿಕೆ ಮಾಡಿರುವ FD ಮೊತ್ತದ ಆಧಾರದ ಮೇಲೆ ಲೋನ್ ಪಡೆಯಬೇಕು ಎಂದರೆ, ನೀವು ಹೂಡಿಕೆ ಮಾಡಿರುವ ಮೊತ್ತದಲ್ಲಿ 95% ವರೆಗು ಸಾಲ ಪಡೆಯಬಹುದು. ಅಕಸ್ಮಾತ್ ನೀವು 2 ಲಕ್ಷ FD ಮಾಡಿದ್ದರೆ, 1.90 ಲಕ್ಷದ ವರೆಗು ಸಾಲ ಪಡೆಯಬಹುದು.
ಈ ಸಾಲವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡುವುದರಿಂದ ನಿಮ್ಮ ಕ್ರೆಡಿಟ್ ಸ್ಕೋರ್ (Credit Score) ಕೂಡ ಜಾಸ್ತಿಯಾಗುತ್ತದೆ. ಹಾಗಾಗಿ ಸಾಲ ಮಾಡುವ ಪ್ಲಾನ್ ಹೊಂದಿದ್ದರೆ, ಇದು ಉತ್ತಮವಾದ ಆಯ್ಕೆ ಆಗಿದೆ.
There is not much pressure, There is no better way to get a bank loan then This