ಸ್ಟೇಟ್ ಬ್ಯಾಂಕ್ ನಲ್ಲಿ ಒಂದು ವರ್ಷ ನಿಮ್ಮ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ?

FD ಯಲ್ಲಿ ಹೂಡಿಕೆ ಮಾಡಿದರೆ ಸಾಮಾನ್ಯ ಜನರಿಗೆ 3 ರಿಂದ 7% ವರೆಗು ಬಡ್ಡಿ ಸಿಗುತ್ತದೆ. ಆದರೆ ಹಿರಿಯ ನಾಗರೀಕರಿಗೆ 50 ಬೇಸಿಸ್ ಪಾಯಿಂಟ್ ಜಾಸ್ತಿ ಇರುವ ಕಾರಣ, ಅವರಿಗೆ ಹೆಚ್ಚು ಬಡ್ಡಿದರ ನಿಗದಿ ಆಗಿರುತ್ತದೆ.

Fixed Deposit : ನಾವು ಸಂಪಾದನೆ ಮಾಡುವ ಹಣದಲ್ಲಿ ಸ್ವಲ್ಪ ಮೊತ್ತವನ್ನು ಕೂಡಿಟ್ಟು, ಹೂಡಿಕೆ ಮಾಡುತ್ತಾ ಬಂದರೆ ಅದರಿಂದ ಬಹಳಷ್ಟು ಒಳ್ಳೆಯದು. ಒಳ್ಳೆಯ ಲಾಭ ಗಳಿಸಬಹುದು ಜೊತೆಗೆ ನಮ್ಮ ಬದುಕನ್ನು ಸೆಕ್ಯೂರ್ ಮಾಡಿಕೊಂಡ ಹಾಗೆ ಆಗುತ್ತದೆ.

ಹೂಡಿಕೆಗೆ ಬ್ಯಾಂಕ್ ನಲ್ಲಿ FD ಮಾಡುವುದು ಉತ್ತಮ. ಇದು ನಿಮ್ಮ ಹಣಕ್ಕೆ ಸುರಕ್ಷತೆ ಕೊಡುವುದರ ಜೊತೆಗೆ, ನಿಮ್ಮ ಹಣಕ್ಕೆ ಉತ್ತಮವಾದ ಬಡ್ಡಿದರ ಹಾಗು ರಿಟರ್ನ್ಸ್ ಅನ್ನು ಕೂಡ ಕೊಡುತ್ತದೆ. ಇಂದು ಇದರ ಬಗ್ಗೆ ತಿಳಿಯೋಣ..

FD ಯಲ್ಲಿ ಹೂಡಿಕೆ ಮಾಡುವುದರಿಂದ ಬಹಳಷ್ಟು ಪ್ರಯೋಜನಗಳು ಸಹ ಇದೆ. ಹೌದು, ಇದರಿಂದ TDS ನಿಯಮದಲ್ಲಿ ತೆರಿಗೆ ಮುಕ್ತಿ ಪಡೆಯಬಹುದು, ಉತ್ತಮ ಬಡ್ಡಿದರ ಗಳಿಸಬಹುದು. ಹೀಗೆ ವಿವಿಧ ರೀತಿಯ ಪ್ರಯೋಜನಗಳು FD ಯೋಜನೆಯಲ್ಲಿ ಕಾಣಬರುತ್ತದೆ.

ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿದ್ರೆ ಬಿಗ್ ರಿಲೀಫ್! ಸಾಲ ಕಟ್ಟೋಕೆ ಆಗದವರಿಗೆ ನೆಮ್ಮದಿಯ ವಿಚಾರ

ಒಂದು ವೇಳೆ ನೀವು ಕೂಡ FD ಖಾತೆ ತೆರೆದು ಹೂಡಿಕೆ ಮಾಡಬೇಕು ಎಂದು ಬಯಸಿದರೆ, ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿ ಕೊಡಲಾಗುತ್ತದೆ? ಅದರಿಂದ ಎಷ್ಟು ಲಾಭ ಸಿಗುತ್ತದೆ? ಬ್ಯಾಂಕ್ ನಿಯಮಗಳು ಏನೇನು? ಇದನ್ನೆಲ್ಲ ತಿಳಿಯುವುದು ಉತ್ತಮ. ಹಾಗಿದ್ದಲ್ಲಿ FD ಹೂಡಿಕೆಗೆ 3 ಬೆಸ್ಟ್ ಬ್ಯಾಂಕ್ ಗಳು ಯಾವುವು ಎಂದು ತಿಳಿಯೋಣ..

HDFC Bank: ಇದು ಪ್ರೈವೇಟ್ ವಲಯದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಬ್ಯಾಂಕ್ ಆಗಿದೆ. HDFC ನಲ್ಲಿ FD ಹೂಡಿಕೆಗೆ ಎಷ್ಟು ಬಡ್ಡಿದರ ನಿಗದಿ ಆಗಿದೆ ಎಂದು ನೋಡುವುದಾದರೆ, 12 ರಿಂದ 15 ತಿಂಗಳ ಹೂಡಿಕೆ ಮೇಲೆ 6.6% ಬಡ್ಡಿ ಸಿಗುತ್ತದೆ, 4.7 ವರ್ಷದಿಂದ 55 ತಿಂಗಳ ಅವಧಿಯ FD ಮೇಲೆ 7.20 ಬಡ್ಡಿ ದರ ಸಿಗುತ್ತದೆ. ಇದು HDFC ಬ್ಯಾಂಕ್ ನಲ್ಲಿ FD ಬಗೆಗಿನ ಮಾಹಿತಿ ಆಗಿದೆ.

ICICI Bank: ಪ್ರೈವೇಟ್ ವಲಯದಲ್ಲಿರುವ ಮತ್ತೊಂದು ಪ್ರಮುಖವಾದ ಬ್ಯಾಂಕ್ ICICI ಬ್ಯಾಂಕ್ ಆಗಿದೆ. ಈ ಒಂದು ಬ್ಯಾಂಕ್ ನಲ್ಲಿ FD ಮೇಲೆ ಬಡ್ಡಿದರ ಹೇಗಿದೆ ಎಂದು ನೋಡುವುದಾದರೆ, ಇಲ್ಲಿ ನಿಮಗೆ 3% ಇಂದ 7.25% ವರೆಗು ಬಡ್ಡಿ ಸಿಗುತ್ತದೆ. 15 ತಿಂಗಳಿನಿಂದ 2 ವರ್ಷದ ವರೆಗಿನ FD ಹೂಡಿಕೆಗೆ 7.2% ಬಡ್ಡಿ ನಿಗದಿ ಆಗಿದೆ. 12 ರಿಂದ 15 ತಿಂಗಳ ಅವಧಿಯ FD ಯೋಜನೆಗೆ 6.5% ಬಡ್ಡಿ ನಿಗದಿ ಮಾಡಲಾಗಿದೆ.

ಕೆನರಾ ಬ್ಯಾಂಕ್‌ನಲ್ಲಿ 25 ಲಕ್ಷ ಹೋಮ್ ಲೋನ್ ತಗೊಂಡ್ರೆ, ಬಡ್ಡಿ ಎಷ್ಟು? ಇಎಂಐ ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ

Fixed depositಬ್ಯಾಂಕ್ ಆಫ್ ಬರೋಡಾ: ಇದು ಕೂಡ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು, ಇಲ್ಲಿ 2 ರಿಂದ 3 ವರ್ಷಗಳ FD ಹೂಡಿಕೆಯ ಮೇಲೆ 7.25% ಬಡ್ಡಿಯನ್ನು ನಿಗದಿ ಮಾಡಲಾಗಿದೆ.

SBI Bank: ಈ ಬ್ಯಾಂಕ್ ನಲ್ಲಿ FD ಯಲ್ಲಿ ಹೂಡಿಕೆ ಮಾಡಿದರೆ ಸಾಮಾನ್ಯ ಜನರಿಗೆ 3 ರಿಂದ 7% ವರೆಗು ಬಡ್ಡಿ ಸಿಗುತ್ತದೆ. ಆದರೆ ಹಿರಿಯ ನಾಗರೀಕರಿಗೆ 50 ಬೇಸಿಸ್ ಪಾಯಿಂಟ್ ಜಾಸ್ತಿ ಇರುವ ಕಾರಣ, ಅವರಿಗೆ ಹೆಚ್ಚು ಬಡ್ಡಿದರ ನಿಗದಿ ಆಗಿರುತ್ತದೆ. 3 ರಿಂದ 5 ವರ್ಷಗಳ ಸಮಯಕ್ಕೆ 6.75% ಬಡ್ಡಿ ಸಿಗುತ್ತದೆ, 2 ರಿಂದ 3 ವರ್ಷಗಳ ಸಮಯಕ್ಕೆ 7% ಬಡ್ಡಿ ಸಿಗುತ್ತದೆ.

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್‌ನಲ್ಲಿ 75 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ EMI ಎಷ್ಟಾಗುತ್ತೆ ಗೊತ್ತಾ?

ಕೋಟಕ್ ಮಹಿಂದ್ರ ಬ್ಯಾಂಕ್: ಈ ಬ್ಯಾಂಕ್ ನಲ್ಲಿ ಸಹ FD ಯೋಜನೆಯ ಹೂಡಿಕೆ ಮೇಲೆ ಉತ್ತಮ ಬಡ್ಡಿದರ ಸಿಗಲಿದ್ದು, 1 ರಿಂದ 2 ವರ್ಷಗಳ FD ಯೋಜನೆಗೆ 7.25% ಅಷ್ಟು ಬಡ್ಡಿ ಸಿಗುತ್ತದೆ. 180 ದಿನಗಳ FD ಯೋಜನೆಗೆ 7% ಬಡ್ಡಿ ಸಿಗುತ್ತದೆ. ಇದನ್ನೆಲ್ಲಾ ಅರಿತು ಯಾವ ಬ್ಯಾಂಕ್ ನಲ್ಲಿ FD ಇಡುವುದು ಎಂದು ಡಿಸೈಡ್ ಮಾಡಿ.

How much interest will you get if you make a fixed deposit in State Bank for one year