ಕೆನರಾ ಬ್ಯಾಂಕ್‌ನಲ್ಲಿ 25 ಲಕ್ಷ ಹೋಮ್ ಲೋನ್ ತಗೊಂಡ್ರೆ, ಬಡ್ಡಿ ಎಷ್ಟು? ಇಎಂಐ ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ
Canara Bank Home Loan : ನಮ್ಮ ದೇಶದಲ್ಲಿ ಜನರ ವಿಶ್ವಾಸ ಮತ್ತು ನಂಬಿಕೆ ಗಳಿಸಿ, ಉತ್ತಮ ಸೇವೆ ಕೊಡುತ್ತಿರುವ ಬ್ಯಾಂಕ್ ಗಳ ಪೈಕಿ ಕೆನರಾ ಬ್ಯಾಂಕ್ ಕೂಡ ಪ್ರಮುಖ ಸ್ಥಾನ ಪಡೆದುಕೊಂಡಿದೆ ಎಂದರೆ ತಪ್ಪಲ್ಲ. ಈ ಬ್ಯಾಂಕ್ ನಲ್ಲಿ ನೀಡುವ ಸೇವೆಗಳು ಗ್ರಾಹಕರಿಗೆ ಕೂಡ ಬಹಳ ಇಷ್ಟವಾಗಿದೆ.
ಕೆನರಾ ಬ್ಯಾಂಕ್ ನಲ್ಲಿ ನಿಮಗೆ ಸಾಲ ಪಡೆಯುವುದಕ್ಕೆ ಉತ್ತಮವಾದ ಸೇವೆ ಇದೆ, ಹಣ ಹೂಡಿಕೆ ಮಾಡಿದರೆ ಒಳ್ಳೆಯ ರಿಟರ್ನ್ಸ್ ಕೂಡ ಬರುತ್ತದೆ. ಹಾಗಾಗಿ ಗ್ರಾಹಕರಿಗೆ ಒಳ್ಳೆಯ ಆಫರ್ ಗಳನ್ನು ನೀಡುವ ಬ್ಯಾಂಕ್ ಇದು ಎಂದರೆ ತಪ್ಪಲ್ಲ.
ಕೆನರಾ ಬ್ಯಾಂಕ್ ನಲ್ಲಿ ನೀವು ಒಂದು Fixed Deposit ಯೋಜನೆಯಲ್ಲಿ ಅಥವಾ ಇನ್ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುತ್ತೀರಾ ಎಂದರೆ, ಅದರ ಮೇಲೆ ನಿಮಗೆ ಉತ್ತಮವಾದ ಬಡ್ಡಿದರ ಲಭ್ಯವಾಗುತ್ತದೆ. ಅದೇ ರೀತಿ ಸಾಲ ಪಡೆಯುತ್ತೀರಿ ಎಂದರೆ, ಕಡಿಮೆ ಬಡ್ಡಿಯಲ್ಲಿ ಸಾಲ ಕೊಡಲಾಗುತ್ತದೆ.
ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್‌ನಲ್ಲಿ 75 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ EMI ಎಷ್ಟಾಗುತ್ತೆ ಗೊತ್ತಾ?
ಈಗ ನಮಗೆಲ್ಲಾ ಗೊತ್ತಿರುವ ಹಾಗೆ ಹೋಮ್ ಲೋನ್ (Home Loan) ಪಡೆಯುವವರ ಸಂಖ್ಯೆ ಹೆಚ್ಚು, ಒಂದು ವೇಳೆ ನೀವು ಕೂಡ ಹೋಮ್ ಲೋನ್ ಪಡಿಯಬೇಕು ಎಂದುಕೊಂಡಿದ್ದರೆ, ಕೆನರಾ ಬ್ಯಾಂಕ್ ನಲ್ಲಿ 8.40% ಇಂದ ಹೋಮ್ ಲೋನ್ ಶುರುವಾಗುತ್ತದೆ..
ಯಾರಿಗೆಲ್ಲಾ ಸಿಗಲಿದೆ ಕಡಿಮೆ ಬಡ್ಡಿಯಲ್ಲಿ ಹೋಮ್ ಲೋನ್?
ಹೋಮ್ ಲೋನ್ ಪಡೆಯುವುದಕ್ಕೆ ಕೆನರಾ ಬ್ಯಾಂಕ್ ಒಳ್ಳೆಯ ಆಯ್ಕೆ ಎಂದು ಹೇಳಬಹುದು. ನಿಮ್ಮ ಸಿಬಿಲ್ ಸ್ಕೋರ್ (CIBIL Score) ಚೆನ್ನಾಗಿದ್ದರೆ, ಆರಂಭಿಕ ಬಡ್ಡಿದರದಲ್ಲೇ ನಿಮಗೆ ಹೋಮ್ ಲೋನ್ ಸಿಗುತ್ತದೆ.
ಹೌದು, ನಿಮ್ಮ ಸಿಬಿಲ್ ಸ್ಕೋರ್ 800 ಅಥವಾ ಅದಕ್ಕಿಂತ ಜಾಸ್ತಿ ಇದೆ ಎಂದರೆ, 8.40% ಬಡ್ಡಿಗೆ ಹೋಮ್ ಲೋನ್ ಪಡೆಯಬಹುದು. ಇದು ನಿಮಗೆ ಲಾಭದಾಯಕ ಅವಕಾಶ ಆಗಿದೆ. ಕೆನರಾ ಬ್ಯಾಂಕ್ ಸೇವೆಯನ್ನು ಮಿಸ್ ಮಾಡಿಕೊಳ್ಳಬೇಡಿ.
ಟಗರು ಸಾಕಾಣಿಕೆ ಮೂಲಕ ಪ್ರತಿ ತಿಂಗಳು ಗಳಿಸಬಹುದು ₹60 ಸಾವಿರ! ಬೆಸ್ಟ್ ಬ್ಯುಸಿನೆಸ್ ಐಡಿಯಾ ಇದು
20 ವರ್ಷ ಅವಧಿಯ 25 ಲಕ್ಷ ಸಾಲಕ್ಕೆ ಎಷ್ಟು EMI ಪಾವತಿ ಮಾಡಬೇಕು?
ಒಂದು ವೇಳೆ ನೀವು ಕೆನರಾ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯುತ್ತೀರಿ ಎಂದರೆ, ನಿಮ್ಮ ಕ್ರೆಡಿಟ್ ಸ್ಕೋರ್ ಉತ್ತಮವಾಗಿ ಇರುವ ಕಾರಣ 8.40% ಗೆ ಬಡ್ಡಿ ಸಿಗುತ್ತದೆ ಎಂದರೆ, 20 ವರ್ಷಗಳ ಅವಧಿಗೆ 25 ಲಕ್ಷ ಲೋನ್ ಪಡೆದುಕೊಂಡರೆ, 8.40% ಬಡ್ಡಿ ನಿಗದಿ ಆಗಿದ್ದರೆ, ಈ ಮೊತ್ತಕ್ಕೆ ನೀವು 26,69,027.000 ರೂಪಾಯಿಗಳನ್ನು ಬಡ್ಡಿ ರೂಪದಲ್ಲಿ ಪಾವತಿ ಮಾಡಬೇಕು, ಸಾಲದ ಮೊತ್ತಕ್ಕಿಂತ ಪಾವತಿ ಮಾಡಬೇಕಾದ ಬಡ್ಡಿ ಜಾಸ್ತಿ ಇರುತ್ತದೆ.
ಪಡೆಯಿರಿ 5 ಲಕ್ಷದವರೆಗೂ ವ್ಯಾಪಾರ ಸಾಲ! ಯಾವುದೇ ಬಡ್ಡಿ ಇಲ್ಲ, ಯಾವುದೇ ಆಧಾರ ಕೂಡ ಬೇಕಿಲ್ಲ
ಒಟ್ಟಾರೆಯಾಗಿ 20 ವರ್ಷಗಳ ಅವಧಿಗೆ 51,69,027 ರೂಪಾಯಿಗಳನ್ನು ಬ್ಯಾಂಕ್ ಗೆ ಪಾವತಿ ಮಾಡುತ್ತೀರಿ. ಈ ಮೊತ್ತಕ್ಕೆ ತಿಂಗಳ ಇಎಂಐ ₹21,538 ರೂಪಾಯಿ ಆಗಿರುತ್ತದೆ. ಈ ಮಾಹಿತಿ ನಿಮಗೆ ತಿಳಿದ ನಂತರ, ಬ್ಯಾಂಕ್ ಇಂದ ಎಷ್ಟು ಮೊತ್ತವನ್ನು ಲೋನ್ ಪಡೆಯುತ್ತೀರಿ ಎಂದು ಡಿಸೈಡ್ ಮಾಡಿ, ಹೆಚ್ಚಿನ ಮಾಹಿತಿ ಪಡೆಯಲು ನಿಮ್ಮ ಹತ್ತಿರದ ಕೆನರಾ ಬ್ಯಾಂಕ್ ಬ್ರಾಂಚ್ ಗೆ ಭೇಟಿ ನೀಡಿ..
How much EMI should be paid for 25 lakh home loan from Canara Bank