ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್‌ನಲ್ಲಿ 75 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ EMI ಎಷ್ಟಾಗುತ್ತೆ ಗೊತ್ತಾ?
Home Loan : ಸ್ವಂತ ಮನೆ ಮಾಡಿಕೊಳ್ಳುವುದಕ್ಕೆ ಹಲವಾರು ಜನರು ಬ್ಯಾಂಕ್ ನಲ್ಲಿ ಹೋಮ್ ಲೋನ್ ಮೊರೆ ಹೋಗುತ್ತಾರೆ. ಆದರೆ ಹೋಮ್ ಲೋನ್ ಪಡೆದು, ಅದರ ಇಎಂಐ ಕಟ್ಟಿಕೊಳ್ಳುವುದು ಸುಲಭದ ವಿಷಯ ಅಂತೂ ಅಲ್ಲ. ಏಕೆಂದರೆ ಬ್ಯಾಂಕ್ ಗಳಲ್ಲಿ ಹೋಮ್ ಲೋನ್ ಮೇಲೆ ಸಿಕ್ಕಾಪಟ್ಟೆ ಬಡ್ಡಿದರ ವಿಧಿಸುತ್ತಾರೆ.
ಹಾಗೆಯೇ ಸಿಬಿಲ್ ಸ್ಕೋರ್ (CIBIL Score) ಆಧಾರದ ಮೇಲೆ ಹೋಮ್ ಲೋನ್ ಕೊಡಬೇಕೋ ಬೇಡವೋ ಎಂದು ನಿರ್ಧರಿಸುತ್ತಾರೆ. ಹೀಗೆ ಹೋಮ್ ಲೋನ್ ಗೆ (Home Loan) ಸಂಬಂಧಿಸಿದ ಹಾಗೆ ಅನೇಕ ವಿಚಾರಗಳು ಇದೆ..
ಇನ್ನು ಹೋಮ್ ಲೋನ್ ಪಡೆಯಬೇಕು ಎಂದುಕೊಂಡಿರುವವರಿಗೆ ಇದೀಗ RBI ಕಡೆಯಿಂದ ಒಂದು ಗುಡ್ ನ್ಯೂಸ್ ಕಾದಿದೆ. ಅದು ಏನು ಎಂದರೆ, ಇದೀಗ 7ನೇ ಬಾರಿ ಕೂಡ Repo ದರದಲ್ಲಿ ಏರಿಕೆ ಮಾಡಿಲ್ಲ. ಹಾಗಾಗಿ ಲೋನ್ ಪಾವತಿ ಮಾಡುತ್ತಿರುವವರಿಗೆ ಬಡ್ಡಿದರ ಹೆಚ್ಚಳ ಆಗುವುದಿಲ್ಲ ಎನ್ನುವುದು ಸಾಲ ಪಡೆದಿರುವವರಿಗೆ ಸಂತೋಷದ ವಿಷಯ ಆಗಿದೆ.
ಹಾಗಿದ್ದರು ಸಹ ಹೋಮ್ ಲೋನ್ ಪಡೆಯುವುದಕ್ಕಿಂತ ಮೊದಲು, ಯಾವ ಬ್ಯಾಂಕ್ ಗಳಲ್ಲಿ (Banks) ಎಷ್ಟು ಹೋಮ್ ಲೋನ್ ಬಡ್ಡಿ ಇದೆ ಎನ್ನುವುದನ್ನು ತಿಳಿದುಕೊಂಡು, ಕಡಿಮೆ ಬಡ್ಡಿ ಇರುವ ಬ್ಯಾಂಕ್ ನಲ್ಲಿ ಹೋಮ್ ಲೋನ್ ಪಡೆಯುವುದು ಒಳ್ಳೆಯದು.
ಟಗರು ಸಾಕಾಣಿಕೆ ಮೂಲಕ ಪ್ರತಿ ತಿಂಗಳು ಗಳಿಸಬಹುದು ₹60 ಸಾವಿರ! ಬೆಸ್ಟ್ ಬ್ಯುಸಿನೆಸ್ ಐಡಿಯಾ ಇದು
ಹಾಗಿದ್ದಲ್ಲಿ ಅತ್ಯಂತ ಕಡಿಮೆ ಬಡ್ಡಿದರಕ್ಕೆ ಹೋಮ್ ಲೋನ್ (Home Loan) ಕೊಡುವಂಥ ಬ್ಯಾಂಕ್ ಗಳು ಯಾವುವು ಎಂದು ತಿಳಿಯೋಣ..
*ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: ಹೋಮ್ ಲೋನ್ ಪಡೆಯಲು ಬಯಸುವವರಿಗೆ ಈ ಬ್ಯಾಂಕ್ ನಲ್ಲಿ 75 ಲಕ್ಷಗಳವರೆಗು ಹೋಮ್ ಲೋನ್ ಸಿಗುತ್ತದೆ, ಸಾಲ ಮರುಪಾವತಿ ಅವಧಿ 20 ವರ್ಷಗಳ ಕಾಲ ಇರಲಿದ್ದು, ಈ ಲೋನ್ ಮೇಲೆ 8.35% ಬಡ್ಡಿ ವಿಧಿಸಲಾಗುತ್ತದೆ. ತಿಂಗಳ ಇಎಂಐ ₹63,900 ರೂಪಾಯಿ ಆಗಿರುತ್ತದೆ.
ಕೆನರಾ ಬ್ಯಾಂಕ್ (Canara Bank): ಈ ಬ್ಯಾಂಕ್ ಮತ್ತು ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಈ ಎರಡು ಬ್ಯಾಂಕ್ ಗಳಲ್ಲಿ ಸಹ ನೀವು 75 ಲಕ್ಷದವರೆಗು ಸಾಲ ಪಡೆಯಬಹುದು. ಈ ಸಾಲದ ಮರುಪಾವತಿ ಅವಧಿ 20 ವರ್ಷಗಳ ಸಮಯ ಇರಲಿದ್ದು, 8.5% ಬಡ್ಡಿ ನಿಗದಿ ಮಾಡಲಾಗಿದೆ. ಇಲ್ಲಿ ತಿಂಗಳ ಇಎಂಐ ₹64,650 ರೂಪಾಯಿ ಆಗಿರುತ್ತದೆ.
*ಕೋಟಕ್ ಮಹಿಂದ್ರ ಬ್ಯಾಂಕ್: ಈ ಬ್ಯಾಂಕ್ ನಲ್ಲಿ 75 ಲಕ್ಷಗಳ ಹೋಮ್ ಲೋನ್ ಮರುಪಾವತಿಗೆ 20 ವರ್ಷಗಳ ಅವಧಿ ಇದ್ದು, ಈ ಸಾಲಕ್ಕೆ 8.7% ಬಡ್ಡಿ ವಿಧಿಸಲಾಗಿದೆ. ಇನ್ನು ತಿಂಗಳ ಇಎಂಐ ₹64,550 ರೂಪಾಯಿ ಆಗಿದೆ.
ಪಡೆಯಿರಿ 5 ಲಕ್ಷದವರೆಗೂ ವ್ಯಾಪಾರ ಸಾಲ! ಯಾವುದೇ ಬಡ್ಡಿ ಇಲ್ಲ, ಯಾವುದೇ ಆಧಾರ ಕೂಡ ಬೇಕಿಲ್ಲ
*ಆಕ್ಸಿಸ್ ಬ್ಯಾಂಕ್: ಈ ಬ್ಯಾಂಕ್ ನಲ್ಲಿ 75 ಲಕ್ಷ ಹೋಮ್ ಲೋನ್ ಪಡೆದರೆ, ಮರುಪಾವತಿ ಅವಧಿ 20 ವರ್ಷ ಆಗಿದೆ. ಇಲ್ಲಿ ನೀವು ಪ್ರತಿ ತಿಂಗಳು ₹65,750 ರೂಪಾಯಿಗಳ ಇಎಂಐ ಪಾವತಿ ಮಾಡಬೇಕಾಗುತ್ತದೆ.
*ಐಸಿಐಸಿಐ ಬ್ಯಾಂಕ್: ಈ ಬ್ಯಾಂಕ್ ನಲ್ಲಿ 75 ಲಕ್ಷ ರೂಪಾಯಿಗಳ ಹೋಮ್ ಲೋನ್ ಅನ್ನು, 20 ವರ್ಷಗಳ ಮರುಪಾವತಿ ಅವಧಿಗೆ ಪಡೆದರೆ, 9% ಬಡ್ಡಿ ವಿಧಿಸಲಾಗುತ್ತದೆ. ಇನ್ನು ಮಾಸಿಕ ಇಎಂಐ ₹66,975 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಕೆನರಾ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರ ಫಿಕ್ಸೆಡ್ ಹಣಕ್ಕೆ ಸಿಗುತ್ತೆ 7.5% ಇಂದ 8% ವರೆಗೂ ಬಡ್ಡಿ!
*ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ಈ ಬ್ಯಾಂಕ್ ನಲ್ಲಿ 75 ಲಕ್ಷ ರೂಪಾಯಿಗಳ ಹೋಮ್ ಲೋನ್ ಅನ್ನು, 20 ವರ್ಷಗಳ ಮರುಪಾವತಿ ಅವಧಿಗೆ ಪಡೆದರೆ 9.15% ಬಡ್ಡಿ ವಿಧಿಸಲಾಗುತ್ತದೆ. ಪ್ರತಿ ತಿಂಗಳು ₹67,725 ಇಎಂಐ ಪಾವತಿ ಮಾಡಬೇಕಾಗುತ್ತದೆ.
*HDFC: ಈ ಬ್ಯಾಂಕ್ ನಲ್ಲಿ 75 ಲಕ್ಷ ಹೋಮ್ ಲೋನ್ ಅನ್ನು 20 ವರ್ಷಗಳ ಮರುಪಾವತಿ ಅವಧಿಗೆ ಪಡೆದರೆ, 9.4% ಬಡ್ಡಿ ವಿಧಿಸಲಾಗುತ್ತದೆ. ಇನ್ನು ₹68,850 ರೂಪಾಯಿಗಳ ತಿಂಗಳ ಇಎಂಐ ಪಾವತಿ ಮಾಡಬೇಕಾಗುತ್ತದೆ.
how much is the monthly EMI for a 75 lakh home loan in Canara Bank, State Bank
Our Whatsapp Channel is Live Now 👇