ಕೆನರಾ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರ ಫಿಕ್ಸೆಡ್ ಹಣಕ್ಕೆ ಸಿಗುತ್ತೆ 7.5% ಇಂದ 8% ವರೆಗೂ ಬಡ್ಡಿ!
ಬ್ಯಾಂಕ್ ಗಳಲ್ಲಿ FD ಯೋಜನೆಯ ಮೇಲೆ ಒಳ್ಳೆಯ ಬಡ್ಡಿದರ ಸಿಗುತ್ತದೆ. ಅದರಲ್ಲೂ ಹಿರಿಯ ನಾಗರೀಕರು FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅವರಿಗೆ ಹೆಚ್ಚಿನ ಬಡ್ಡಿದರ ಸಿಗುತ್ತದೆ.
Fixed Deposit : ನಮ್ಮೆಲ್ಲರಿಗೂ ಇರುವ ಒಂದೇ ಯೋಚನೆ ಕೊನೆಗಾಲದಲ್ಲಿ ನಾವು ಯಾರಿಗೂ ತೊಂದರೆಯಾಗಿ ಇರಬಾರದು ಎನ್ನುವುದಾಗಿರುತ್ತದೆ. ಹೌದು, ಅದರಲ್ಲೂ ಆರ್ಥಿಕವಾಗಿ ನಾವು ಯಾರಿಗೂ ಭಾರ ಆಗಿರಬಾರದು ಎನ್ನುವ ಚಿಂತೆ ನಮ್ಮಲ್ಲಿ ಇರುತ್ತದೆ.
ಈ ಕಾರಣಕ್ಕೆ ಹಲವರು ಚಿಕ್ಕ ವಯಸ್ಸಿನಲ್ಲೇ ಹೂಡಿಕೆ ಮಾಡುವುದಕ್ಕೆ ಶುರು ಮಾಡಿ, ತಮ್ಮ ನಿವೃತ್ತಿ ನಂತರದ ಜೀವನವನ್ನು ಸುರಕ್ಷಿತವಾಗಿ ಮಾಡಿಕೊಳ್ಳುತ್ತಾರೆ. ಬದುಕನ್ನು ಕಟ್ಟಿಕೊಳ್ಳುವುದಕ್ಕೆ ಇದು ಉತ್ತಮವಾದ ದಾರಿ ಎಂದರೆ ತಪ್ಪಲ್ಲ..
ಹೌದು, ಇಂದು ನಾವು ಹೂಡಿಕೆ ಮಾಡುತ್ತೇವೆ ಎಂದು ಬಯಸಿದರೆ, ನಮಗೆ ಅನೇಕ ಆಯ್ಕೆಗಳಿವೆ. ಹಲವು ಬ್ಯಾಂಕ್ ಗಳು, ಹಣಕಾಸು ಸಂಸ್ಥೆಗಳು ಹೂಡಿಕೆಗೆ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ.
ಅವುಗಳಲ್ಲಿ Fixed Deposit ಯೋಜನೆ ಅತ್ಯುತ್ತಮವಾದ ಆಯ್ಕೆ ಎಂದರೆ ತಪ್ಪಲ್ಲ. ಎಲ್ಲಾ ಬ್ಯಾಂಕ್ ಗಳಲ್ಲಿ FD ಅಥವಾ ಸ್ಥಿರ ಠೇವಣಿ ಯೋಜನೆಗಳು ಲಭ್ಯವಿರುತ್ತದೆ. ಅವುಗಳಲ್ಲಿ ಒಳ್ಳೆಯ ಬಡ್ಡಿದರ ಮತ್ತು ರಿಟರ್ನ್ಸ್ ಕೂಡ ಸಿಗುತ್ತದೆ. ಹಾಗಾಗಿ FD ಯೋಜನೆಯಲ್ಲಿ ಹೂಡಿಕೆ ಮಾಡುವುದು ಉತ್ತಮವಾದ ಆಯ್ಕೆ ಆಗಿದೆ.
ಕೆನರಾ ಬ್ಯಾಂಕ್ ಅಕೌಂಟ್‌ನಲ್ಲಿ 3 ಲಕ್ಷ ಹಣ ಫಿಕ್ಸೆಡ್ ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಬ್ಯಾಂಕ್ ಗಳಲ್ಲಿ FD ಯೋಜನೆಯ ಮೇಲೆ ಒಳ್ಳೆಯ ಬಡ್ಡಿದರ ಸಿಗುತ್ತದೆ. ಅದರಲ್ಲೂ ಹಿರಿಯ ನಾಗರೀಕರು FD ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅವರಿಗೆ ಹೆಚ್ಚಿನ ಬಡ್ಡಿದರ ಸಿಗುತ್ತದೆ. ಹಿರಿಯ ನಾಗರೀಕರಿಗೆ ಒಳ್ಳೆಯ ರಿಟರ್ನ್ಸ್ ಬಂದು, ಅವರಿಗೆ ಪ್ರತಿ ತಿಂಗಳು ಉತ್ತಮ ಬಡ್ಡಿದರದ ಆದಾಯ ಸಿಗುವುದಕ್ಕೆ ಯಾವ ಬ್ಯಾಂಕ್ ನಲ್ಲಿ ಹೆಚ್ಚು ಬಡ್ಡಿದರ FD ಯೋಜನೆಯ ಮೇಲೆ ಸಿಗುತ್ತದೆ? ಈ ಎಲ್ಲಾ ಮಾಹಿತಿಯನ್ನು ಇಂದು ಪೂರ್ತಿಯಾಗಿ ತಿಳಿದುಕೊಳ್ಳೋಣ.
ಈ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದೇ ಬೆಸ್ಟ್..
FD ಮಾಡಲು ಹಿರಿಯರಿಗೆ ಗುಡ್ ನ್ಯೂಸ್!
ನೀವು ಹಿರಿಯ ನಾಗರೀಕರಾಗಿದ್ದು, FD ಯೋಜನೆಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡರೆ, ನಿಮ್ಮ ಆಯ್ಕೆ ಅತ್ಯುತ್ತಮವಾದದ್ದು. ಹೌದು, FD ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಪ್ರತಿ ತಿಂಗಳು ನಿಮಗೆ ನಿರ್ದಿಷ್ಟ ಆದಾಯ ಬರುವುದರಲ್ಲಿ ಯಾವುದೇ ಸಂಶಯ ಇಲ್ಲ.
FD ಠೇವಣಿಯನ್ನು ಒಂದು ವರ್ಷಕ್ಕೆ ಲಾಕ್ ಮಾಡಬಹುದು, ಒಂದು ವೇಳೆ ನೀವು 1 ವರ್ಷದ ನಂತರ ಯೋಜನೆಯನ್ನು ಮುಂದುವರೆಸಿಕೊಂಡು ಹೋಗುತ್ತೀರಿ ಎಂದರೆ, ಅದನ್ನು ಕೂಡ ಮಾಡಬಹುದು.
ಕಾರ್ ಲೋನ್ ಪಡೆಯೋಕೆ ಸಿಬಿಲ್ ಸ್ಕೊರ್ ಎಷ್ಟಿರಬೇಕು? ಗೊತ್ತಿರಲಿ ಎಲ್ಲರಿಗೂ ಸಿಗೋಲ್ಲ ಕಾರ್ ಲೋನ್!
ಯಾವ ಬ್ಯಾಂಕ್ ನಲ್ಲಿ ಎಷ್ಟು ಬಡ್ಡಿದರ?
ಹಿರಿಯ ನಾಗರೀಕರು ಸ್ಥಿರ ಠೇವಣಿಯಲ್ಲಿ ಹೂಡಿಕೆ ಮಾಡಬೇಕು ಎಂದುಕೊಂಡಿದ್ದರೆ, ಸರ್ಕಾರದ ಮಾನ್ಯತೆ ಪಡೆದಿರುವ ಕೆನರಾ ಬ್ಯಾಂಕ್ (Canara Bank), ಕರ್ಣಾಟಕ ಬ್ಯಾಂಕ್ ನಲ್ಲಿ FD ಮಾಡಿದರೆ, ಹಿರಿಯ ನಾಗರೀಕರಿಗೆ 7.5% ಇಂದ 8% ವರೆಗು ಬಡ್ಡಿದರ ಸಿಗುತ್ತದೆ..
ಪ್ರೈವೇಟ್ ಬ್ಯಾಂಕ್ ಆಗಿರುವ HDFC, Axis Bank, ICICI ಇಲ್ಲಿ ಹೂಡಿಕೆ ಮಾಡಿದರೆ FD ಯೋಜನೆಗೆ ಹಿರಿಯ ನಾಗರೀಕರಿಗೆ 8.5% ವರೆಗು ಬಡ್ಡಿ ಸಿಗುತ್ತದೆ. ಇನ್ನು ಹೆಚ್ಚಿನ ಬಡ್ಡಿ ಸಿಗಬೇಕು ಎಂದರೆ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಗಳಲ್ಲಿ FD ಮಾಡಬಹುದು, ಇಲ್ಲಿ 9.5% ಬಡ್ಡಿದರ ಸಿಗುತ್ತದೆ.
ಲೋನ್ ತಗೊಂಡು ಸ್ವಂತ ಮನೆ ಕಟ್ಟಬೇಕು ಅನ್ನೋರಿಗೆ ಕಡಿಮೆ ಬಡ್ಡಿಗೆ ಸಿಗುತ್ತೆ ಸ್ಟೇಟ್ ಬ್ಯಾಂಕ್ ಲೋನ್
ಇದಕ್ಕೊಂದು ಉದಾಹರಣೆ ಕೊಡುವುದಾದರೆ, ಫಿನ್ ಕೇರ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ ನೀವು 444 ದಿನಗಳಿಗೆ FD ಯಲ್ಲಿ ಹೂಡಿಕೆ ಮಾಡಿದರೆ, 9% ಬಡ್ಡಿ ಸಿಗುತ್ತದೆ. ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ನಲ್ಲಿ 15 ತಿಂಗಳ ಅವಧಿಗೆ ಹಿರಿಯ ನಾಗರೀಕರು FD ಮಾಡಿದರೆ, 9% ಬಡ್ಡಿ ಸಿಗುತ್ತದೆ. ಇಲ್ಲಿ ಕೂಡ ನೀವು ಹೂಡಿಕೆ ಮಾಡಬಹುದು.
interest Rates for fixed Deposit of senior citizens in Canara Bank