ಲೋನ್ ತಗೊಂಡು ಸ್ವಂತ ಮನೆ ಕಟ್ಟಬೇಕು ಅನ್ನೋರಿಗೆ ಕಡಿಮೆ ಬಡ್ಡಿಗೆ ಸಿಗುತ್ತೆ ಸ್ಟೇಟ್ ಬ್ಯಾಂಕ್ ಲೋನ್

Story Highlights

Home Loan : SBI ನಲ್ಲಿ ಕೂಡ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗುತ್ತದೆ, ಇಲ್ಲಿ ಹೋಮ್ ಲೋನ್ ಗೆ ವಾರ್ಷಿಕ ಬಡ್ಡಿದರ 8.4% ಇರುತ್ತದೆ. ಮಹಿಳೆಯರು ಹೋಮ್ ಲೋನ್ ಗೆ ಅರ್ಜಿ ಸಲ್ಲಿಸಿದರೆ, 0.5% ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುತ್ತದೆ.

Home Loan : ಸ್ವಂತ ಮನೆ ಮಾಡಿಕೊಳ್ಳಬೇಕು ಎನ್ನುವುದು ಎಲ್ಲರ ಕನಸು. ದಿನೇ ದಿನೇ ಜಾಸ್ತಿ ಆಗುತ್ತಿರುವ ಬೆಲೆ ಏರಿಕೆಯ ನಡುವೆ ಸ್ವಂತ ಮನೆ (Own House) ಕಟ್ಟಿಕೊಳ್ಳುವುದು ಸುಲಭ ಅಂತೂ ಅಲ್ಲ. ಹಾಗಾಗಿ ಹೆಚ್ಚಿನ ಜನರು ಮನೆ ಮಾಡಿಕೊಳ್ಳುವುದಕ್ಕೆ ಲೋನ್ ಮೊರೆ ಹೋಗುತ್ತಾರೆ.

ಬ್ಯಾಂಕ್ ಇಂದ ಲೋನ್ (Bank Loan) ಪಡೆದು ಸ್ವಂತ ಮನೆ ಮಾಡಿಕೊಳ್ಳುವ ಕನಸನ್ನು ನನಸು ಮಾಡಿಕೊಳ್ಳುತ್ತಾರೆ. ಬ್ಯಾಂಕ್ ಗಳಲ್ಲಿ ಕೂಡ ಜನರಿಗೆ ಹೋಮ್ ಲೋನ್ (Home Loan) ಭಾಗ್ಯ ಸಿಗುತ್ತದೆ. ಹೋಮ್ ಲೋನ್ ಪಡೆಯಲು ಕೆಲವು ಕಂಡೀಷನ್ ಗಳು ಸಹ ಇದೆ.

ಹೌದು, ಹೋಮ್ ಲೋನ್ ಕೊಡುವುದಕ್ಕೆ ನಿಮ್ಮ ಸಿಬಿಲ್ ಸ್ಕೋರ್ (CIBIL Score) ಚೆಕ್ ಮಾಡಿ, ಅದರ ಆಧಾರದ ಮೇಲೆ ಬಡ್ಡಿ ನಿಗದಿ ಮಾಡಲಾಗುತ್ತದೆ. ಆದರೆ ಹೋಮ್ ಲೋನ್ ಪಡೆಯುವ ಮೊದಲು ಎಲ್ಲಾ ಬ್ಯಾಂಕ್ ಗಳಲ್ಲಿ ಬಡ್ಡಿದರ ಎಷ್ಟಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ಈ 10 ರೂಪಾಯಿ ನೋಟು ನಿಮ್ಮನ್ನು ಲಕ್ಷಾಧಿಪತಿ ಮಾಡುತ್ತೆ ಅಂದ್ರೆ ನೀವು ನಂಬಲೇಬೇಕು! ಹೇಗೆ ಗೊತ್ತಾ?

ಎಲ್ಲಾ ಬ್ಯಾಂಕ್ ಬಗ್ಗೆ ಮಾಹಿತಿ ಪಡೆದು, ಎಲ್ಲಿ ಕಡಿಕೆ ಬಡ್ಡಿದರಲ್ಲಿ ಹೋಮ್ ಲೋನ್ ಸಿಗುತ್ತದೆಯೋ ಆ ಬ್ಯಾಂಕ್ ನಲ್ಲಿ ಲೋನ್ ಪಡೆಯಬಹುದು. ಹಾಗಿದ್ದಲ್ಲಿ ಯಾವ ಬ್ಯಾಂಕ್ ನಲ್ಲಿ ಹೋಮ್ ಲೋನ್ ಗೆ ಎಷ್ಟು ಬಡ್ಡಿ ನಿಗದಿ ಆಗಿರುತ್ತದೆ ಎಂದು ನೋಡೋಣ..

Bank of India: ಇದು ನಮ್ಮ ದೇಶದ ಪ್ರಮುಖ ಬ್ಯಾಂಕ್ ಆಗಿದ್ದು, ಇಲ್ಲಿ ಹೋಮ್ ಲೋನ್ ಗೆ ಕಡಿಮೆ ಬಡ್ಡಿ ದರ ನಿಗದಿ ಆಗಿದೆ. ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹೋಮ್ ಲೋನ್ ಬಡ್ಡಿ ವರ್ಷಕ್ಕೆ 8.30% ಇಂದ ಶುರುವಾಗುತ್ತದೆ. ನಿಮ್ಮ ಆಸ್ತಿ ಎಷ್ಟಿದೆಯೋ ಅದರ ಮೇಲೆ 90% ಸಾಲ ಪಡೆದುಕೊಳ್ಳಬಹುದು. ಹೋಮ್ ಲೋನ್ ಪಾವತಿ ಮಾಡಲು 30 ವರ್ಷ ಅವಧಿ ಇರುತ್ತದೆ.

Punjab National Bank: ಈ ಬ್ಯಾಂಕ್ ನಲ್ಲಿ ಹೋಮ್ ಲೋನ್ ಗೆ ವಾರ್ಷಿಕ ಬಡ್ಡಿದರ ಎಷ್ಟಿರುತ್ತದೆ ಎಂದರೆ 8.45% ಇಂದ 10.5% ವರೆಗು ಸಿಗುತ್ತದೆ. ಒಂದು ವೇಳೆ ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ದರೆ ಇನ್ನು ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ.

ಈ ಬ್ಯಾಂಕ್ ಇಂದ ನೀವು 30 ಲಕ್ಷದಿಂದ 75 ಲಕ್ಷ ರೂಪಾಯಿಗಳವರೆಗು ಸಾಲ ಪಡೆದುಕೊಳ್ಳಬಹುದು. ಹೋಮ್ ಲೋನ್ ಪಡೆಯಲು ಇದೊಂದು ಒಳ್ಳೆಯ ಆಯ್ಕೆ ಆಗಿದೆ.

ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ Hero Splendor Plus Bike! ಸಿಂಗಲ್ ಓನರ್, ಒಳ್ಳೆಯ ಕಂಡೀಷನ್

Home LoanBank Of Baroda: ಇದು ಸಹ ಭಾರತದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದು, ಬ್ಯಾಂಕ್ ಆಫ್ ಬರೋಡಾದಲ್ಲಿ ಹೋಮ್ ಲೋನ್ ಗೆ ಕಡಿಮೆ ಬಡ್ಡಿದರ ಇರಲಿದೆ. ಇಲ್ಲಿ ಹೋಮ್ ಲೋನ್ ಮೇಲೆ 8.4% ಇಂದ 10.6% ವರೆಗು ಬಡ್ಡಿದರ ವಿಧಿಸಲಾಗುತ್ತದೆ.

ಇಲ್ಲಿ ಕೂಡ ನಿಮ್ಮ ಸಿಬಿಲ್ ಸ್ಕೋರ್ ಚೆಕ್ ಮಾಡಲಾಗುತ್ತದೆ. ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ, ಕಡಿಮೆ ಬಡ್ಡಿಗೆ ಸಾಲ ಸಿಗುತ್ತದೆ.

ಸರ್ಕಾರದಿಂದಲೇ ಸಿಗಲಿದೆ 10 ಲಕ್ಷ ಹಣ! ಸ್ವಂತ ಬ್ಯುಸಿನೆಸ್ ಮಾಡಬೇಕು ಅನ್ನೋರಿಗೆ ಹೊಸ ಯೋಜನೆ

State Bank of India: ನಮ್ಮ ದೇಶದಲ್ಲಿ ಅತಿಹೆಚ್ಚು ಗ್ರಾಹಕರನ್ನು ಹೊಂದಿರುವ ಸರ್ಕಾರಿ ವಲಯದ ಬ್ಯಾಂಕ್ ಇದು. SBI ನಲ್ಲಿ ಕೂಡ ಕಡಿಮೆ ಬಡ್ಡಿಗೆ ಹೋಮ್ ಲೋನ್ ಸಿಗುತ್ತದೆ, ಇಲ್ಲಿ ಹೋಮ್ ಲೋನ್ ಗೆ ವಾರ್ಷಿಕ ಬಡ್ಡಿದರ 8.4% ಇರುತ್ತದೆ. ಮಹಿಳೆಯರು ಹೋಮ್ ಲೋನ್ ಗೆ ಅರ್ಜಿ ಸಲ್ಲಿಸಿದರೆ, 0.5% ಕಡಿಮೆ ಬಡ್ಡಿದರಕ್ಕೆ ಸಾಲ ಸಿಗುತ್ತದೆ.

Top banks offer low interest Home loan for those who want to build their own house

Related Stories