ಕೆನರಾ ಬ್ಯಾಂಕ್ ಅಕೌಂಟ್‌ನಲ್ಲಿ 3 ಲಕ್ಷ ಹಣ ಫಿಕ್ಸೆಡ್ ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ

Story Highlights

Canara Bank Fixed Deposit : ಎಲ್ಲಾ ಬ್ಯಾಂಕ್ ಗಳ ಹಾಗೆ ಕೆನರಾ ಬ್ಯಾಂಕ್ ನಲ್ಲಿ (Canara Bank) ಕೂಡ ಉತ್ತಮವಾದ ರಿಟರ್ನ್ಸ್ ಕೊಡುವಂಥ FD ಯೋಜನೆಗಳು ಜಾರಿಯಲ್ಲಿದೆ.

Canara Bank Fixed Deposit : ನಮ್ಮ ದೇಶದ ಎಲ್ಲಾ ಸರ್ಕಾರಿ ಬ್ಯಾಂಕ್ ಗಳು, ಪ್ರೈವೇಟ್ ಬ್ಯಾಂಕ್ ಗಳು ಜನರಿಗೆ ಲಾಭ ತರುವಂಥ, ಉತ್ತಮ ಬಡ್ಡಿದರ ನೀಡುವಂಥ ಅನೇಕ ಉತ್ತಮವಾದ ಯೋಜನೆಗಳನ್ನು ಜಾರಿಗೆ ತಂದಿದೆ. ಇಂಥ ಬ್ಯಾಂಕ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಜನರು ಒಳ್ಳೆಯ ಲಾಭ ಪಡೆಯಬಹುದು.

ದೀರ್ಘಕಾಲದ ಹೂಡಿಕೆ, ಅಲ್ಪ ಕಾಲದ ಹೂಡಿಕೆ ಇದೆಲ್ಲದಕ್ಕೂ ಸಹ ಬ್ಯಾಂಕ್ ಯೋಜನೆಗಳ ಹೂಡಿಕೆ ಉತ್ತಮವಾದ ಆಯ್ಕೆ. ಅದರಲ್ಲಿ FD ಯೋಜನೆ ಸೂಕ್ತ ಆಯ್ಕೆ ಆಗಿದೆ. ಎಲ್ಲಾ ಬ್ಯಾಂಕ್ ಗಳ ಹಾಗೆ ಕೆನರಾ ಬ್ಯಾಂಕ್ ನಲ್ಲಿ (Canara Bank) ಕೂಡ ಉತ್ತಮವಾದ ರಿಟರ್ನ್ಸ್ ಕೊಡುವಂಥ FD ಯೋಜನೆಗಳು ಜಾರಿಯಲ್ಲಿದೆ.

ಕೆನರಾ ಬ್ಯಾಂಕ್ ನಲ್ಲಿ ನೀವು ಹೂಡಿಕೆ ಮಾಡುವ ಹಣ ಡಬಲ್ ಅಗುವಂಥ FD ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಒಂದು ಯೋಜನೆಯಲ್ಲಿ ಹೂಡಿಕೆ ಮಾಡಿ, ನಿಮ್ಮ ಹಣವನ್ನು ಡಬಲ್ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಎಷ್ಟು ಅವಧಿಗೆ ನಿಮ್ಮ ಹಣ ಡಬಲ್ ಆಗುತ್ತದೆ? ಇದರಲ್ಲಿ ಹೂಡಿಕೆ ಮಾಡುವುದು ಹೇಗೆ? ಎಲ್ಲವನ್ನು ತಿಳಿಯೋಣ..

ಕಾರ್ ಲೋನ್ ಪಡೆಯೋಕೆ ಸಿಬಿಲ್ ಸ್ಕೊರ್ ಎಷ್ಟಿರಬೇಕು? ಗೊತ್ತಿರಲಿ ಎಲ್ಲರಿಗೂ ಸಿಗೋಲ್ಲ ಕಾರ್ ಲೋನ್!

ಹಿರಿಯ ನಾಗರೀಕರಿಗೆ ಹೆಚ್ಚಿನ ಲಾಭ:

ನಮ್ಮ ದೇಶದ ಪ್ರಮುಖ ಬ್ಯಾಂಕ್ ಆಗಿ ಹೆಸರು ಪಡೆದಿರುವ ಕೆನರಾ ಬ್ಯಾಂಕ್ ತಮ್ಮ ಗ್ರಾಹಕರಿಗೆ ಅತ್ಯುತ್ತಮ ಸೇವೆಗಳನ್ನು ನೀಡುವ ಮೂಲಕ ಅವರ ವಿಶ್ವಾಸ ಪಡೆದುಕೊಂಡಿದೆ. ಕೆನರಾ ಬ್ಯಾಂಕ್ ನಲ್ಲಿ FD ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ಹೆಚ್ಚು ಬಡ್ಡಿ ಪಡೆದುಕೊಳ್ಳಬಹುದು, ಇದರಿಂದ ನೀವು ಹೂಡಿಕೆ ಮಾಡುವ ಹಣ ಡಬಲ್ ಆಗುತ್ತದೆ.

ಇಲ್ಲಿ ಸಾಮಾನ್ಯ ಜನರಿಗಿಂತ ಹಿರಿಯ ಗ್ರಾಹಕರಿಗೆ ಹೆಚ್ಚು ಬಡ್ಡಿ ಸಿಗುತ್ತದೆ. ಈ ಎಲ್ಲಾ ಪ್ರಯೋಜನಗಳು ಕೂಡ ಸಿಗಲಿದೆ. ಹಿರಿಯರು ಹೂಡಿಕೆ ಮಾಡಲು ಇದು ಉತ್ತಮವಾದ ಆಯ್ಕೆ ಆಗಿದೆ.

ಲೋನ್ ತಗೊಂಡು ಸ್ವಂತ ಮನೆ ಕಟ್ಟಬೇಕು ಅನ್ನೋರಿಗೆ ಕಡಿಮೆ ಬಡ್ಡಿಗೆ ಸಿಗುತ್ತೆ ಸ್ಟೇಟ್ ಬ್ಯಾಂಕ್ ಲೋನ್

Canara Bank Fixed Depositಹಣ ಡಬಲ್ ಆಗುವ ಸ್ಕೀಮ್:

ಕೆನರಾ ಬ್ಯಾಂಕ್ ನಲ್ಲಿ ನಿಮ್ಮ ಬ್ಯಾಂಕ್ ಅಕೌಂಟ್ (Bank Account) ಇದ್ದರೆ, ಇಲ್ಲಿನ FD ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಹಣವನ್ನು ಡಬಲ್ ಮಾಡುವುದು 444 ದಿನಗಳ FD ಹೂಡಿಕೆಯ ಯೋಜನೆ ಆಗಿರುತ್ತದೆ. ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿದರೆ, ನಿಮಗೆ 7% ಬಡ್ಡಿದರ ಲಭಿಸುತ್ತದೆ. ಈ ಯೋಜನೆಯಲ್ಲಿ ನೀವು ಒಟ್ಟು ₹3,00,000 ಹೂಡಿಕೆ ಮಾಡಿದರೆ, 444 ದಿನಗಳ ನಂತರ ₹3.27 ಲಕ್ಷ ಹಣವನ್ನು ರಿಟರ್ನ್ಸ್ ಪಡೆಯುತ್ತೀರಿ.

ಈ 10 ರೂಪಾಯಿ ನೋಟು ನಿಮ್ಮನ್ನು ಲಕ್ಷಾಧಿಪತಿ ಮಾಡುತ್ತೆ ಅಂದ್ರೆ ನೀವು ನಂಬಲೇಬೇಕು! ಹೇಗೆ ಗೊತ್ತಾ?

ಇದು ಸಾಮಾನ್ಯ ಜನರಿಗೆ ಸಿಗುವಂಥ ರಿಟರ್ನ್ಸ್ ಆಗಿದೆ. ಆದರೆ ಹಿರಿಯ ನಾಗರೀಕರು ಇದೇ ಯೋಜನೆಯಲ್ಲಿ 444 ದಿನಗಳ FD ಯೋಜನೆಯಲ್ಲಿ 3 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದರೆ, ಹಿರಿಯರಿಗೆ 7.75% ಬಡ್ಡಿದರ ನೀಡಲಾಗುತ್ತದೆ.

ಈ ಬಡ್ಡಿದರಲ್ಲಿ 444 ದಿನಗಳ FD ಯೋಜನೆ ಮೆಚ್ಯುರ್ ಆದ ಬಳಿಕ ₹3.29 ಲಕ್ಷ ರೂಪಾಯಿ ರಿಟರ್ನ್ಸ್ ಬರುತ್ತದೆ. ಈ ರೀತಿಯಾಗಿ ಕೆನರಾ ಬ್ಯಾಂಕ್ ನ FD ಯೋಜನೆಗಳ ಮೂಲಕ ಹೆಚ್ಚು ಲಾಭ ಪಡೆದುಕೊಳ್ಳಬಹುದು.

how much interest will be earned on 3 lakh fixed deposit in Canara Bank

Related Stories