Business News

ಕಾರ್ ಲೋನ್ ಪಡೆಯೋಕೆ ಸಿಬಿಲ್ ಸ್ಕೊರ್ ಎಷ್ಟಿರಬೇಕು? ಗೊತ್ತಿರಲಿ ಎಲ್ಲರಿಗೂ ಸಿಗೋಲ್ಲ ಕಾರ್ ಲೋನ್!

Car Loan : ನಮಗೆ ಹಣಕಾಸಿನ ಅವಶ್ಯಕತೆ ಬಂದಾಗ ಬ್ಯಾಂಕ್ ಗಳಲ್ಲಿ ಲೋನ್ (Bank Loan) ಮೊರೆ ಹೋಗುತ್ತೇವೆ. ಬ್ಯಾಂಕ್ ಗಳಲ್ಲಿ ಅವಶ್ಯಕತೆ ಇರುವವರಿಗೆ ಲೋನ್ ಸಿಗುತ್ತದೆ, ಆದರೆ ಅದು ಎಲ್ಲರಿಗೂ ಸಿಗುವುದಿಲ್ಲ. ಬ್ಯಾಂಕ್ ಗಳಲ್ಲಿ ಸಾಲ ಸಿಗಬೇಕು ಎಂದರೆ ಹಲವು ಮಾನದಂಡಗಳು ಇರುತ್ತದೆ, ಇನ್ನಷ್ಟು ವಿಚಾರಗಳು ಸಹ ಇರುತ್ತದೆ.

ಅದೆಲ್ಲದಕ್ಕೂ ಸರಿ ಹೊಂದುವವರಿಗೆ ಮಾತ್ರ ಲೋನ್ ಸಿಗುತ್ತದೆ. ಬ್ಯಾಂಕ್ ನಲ್ಲಿ ಹೋಮ್ ಲೋನ್ (Home Loan), ವೆಹಿಕಲ್ ಲೋನ್ (Vehicle Loan), ಪರ್ಸನಲ್ ಲೋನ್ (Personal Loan), ಗೋಲ್ಡ್ ಲೋನ್ (Gold Loan) ಇದೆಲ್ಲವೂ ಸಿಗುತ್ತದೆ.

What is the CIBIL score Required to get a car loan

ಈ ಯಾವುದೇ ಲೋನ್ ಆದರೂ ಸಹ ಅವುಗಳನ್ನು ಪಡೆಯುವುದಕ್ಕೆ ಸಿಬಿಲ್ ಸ್ಕೋರ್ (CIBIL Score) ತುಂಬಾ ಮುಖ್ಯ ಆಗುತ್ತದೆ. ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ಲೋನ್ ಸಿಗುತ್ತದೆ. ಅದರಲ್ಲೂ ಹೋಮ್ ಲೋನ್ ಪಡೆಯುವುದಕ್ಕೆ ಸಿಬಿಲ್ ಸ್ಕೋರ್ (Credit Score) ಉತ್ತಮವಾಗಿರಬೇಕು.

ವೆಹಿಕಲ್ ಲೋನ್ ಗಳನ್ನು ಸುರಕ್ಷಿತ ಸಾಲ ಎಂದು ಕೊಡಲಾಗುತ್ತದೆ. ಹಾಗಿದ್ದಲ್ಲಿ ಕಾರ್ ಲೋನ್ (Car Loan) ಪಡೆಯುವುದಕ್ಕೆ ಸಿಬಿಲ್ ಸ್ಕೋರ್ ಎಷ್ಟಿರಬೇಕು ಎಂದು ತಿಳಿದುಕೊಳ್ಳೋಣ..

ಲೋನ್ ತಗೊಂಡು ಸ್ವಂತ ಮನೆ ಕಟ್ಟಬೇಕು ಅನ್ನೋರಿಗೆ ಕಡಿಮೆ ಬಡ್ಡಿಗೆ ಸಿಗುತ್ತೆ ಸ್ಟೇಟ್ ಬ್ಯಾಂಕ್ ಲೋನ್

ನೀವು ಸಾಲ ಪಡೆಯಬೇಕು ಎಂದರೆ ಸಿಬಿಲ್ ಸ್ಕೋರ್ ಬಹಳ ಮುಖ್ಯವಾಗುತ್ತದೆ. ಯಾವುದೇ ಬ್ಯಾಂಕ್ ಇಂದ ನೀವು ಲೋನ್ ಪಡೆಯಬೇಕು ಎಂದರೆ, ಯಾವುದೇ ಹಣಕಾಸಿನ ಸಂಸ್ಥೆ ಇಂದ ಲೋನ್ ಪಡೆಯಬೇಕು ಎಂದರೆ ಮೊದಲಿಗೆ ಸಿಬಿಲ್ ಸ್ಕೋರ್ ಚೆಕ್ ಮಾಡುತ್ತಾರೆ..

ನಿಮಗೆ ಸಿಬಿಲ್ ಸ್ಕೋರ್ ಚೆನ್ನಾಗಿದ್ದರೆ ಮಾತ್ರ ಲೋನ್ ಸುಲಭವಾಗಿ ಸಿಗುತ್ತದೆ. ಆದರೆ ಲೋನ್ ಕೊಡುವುದಕ್ಕೆ ಸಿಬಿಲ್ ಸ್ಕೋರ್ ಮಾತ್ರ ಮುಖ್ಯವಾದ ಮಾನದಂಡ ಆಗಿರುವುದಿಲ್ಲ ಎನ್ನುವುದು ನಿಮ್ಮ ಗಮನದಲ್ಲಿ ಇರಲಿ..

ಬ್ಯಾಂಕ್ ನಲ್ಲಿ ನೀವು ಲೋನ್ ಮರುಪಾವತಿ ಮಾಡುವುದಕ್ಕೆ ಆದಾಯ ಉತ್ತಮವಾಗಿದೆಯ ಎಂದು ಚೆಕ್ ಮಾಡುತ್ತಾರೆ. ನಿಮಗೆ ಒಳ್ಳೆಯ ಆದಾಯ ಸ್ಥಿರ ಆದಾಯ ಪ್ರತಿ ತಿಂಗಳು ಬರಬೇಕು. ಈ ಕಾರಣಕ್ಕೆ ಬಹುತೇಕ ಎಲ್ಲಾ ಬ್ಯಾಂಕ್ ಗಳಲ್ಲಿ ಕೂಡ ಸಿಬಿಲ್ ಸ್ಕೋರ್ ಜೊತೆಗೆ ನಿಮ್ಮ ಸ್ಯಾಲರಿ ಸ್ಲಿಪ್ ಹಾಗೂ ಬ್ಯಾಂಕ್ ಸ್ಟೇಟ್ಮೆಂಟ್ ಇದೆಲ್ಲವನ್ನು ಕೂಡ ಚೆಕ್ ಮಾಡುತ್ತಾರೆ.

ಹಾಗಾಗಿ ಸಿಬಿಲ್ ಸ್ಕೋರ್ ಒಂದೇ ಮಾನದಂಡ ಅಲ್ಲ, ನೀವು ಸರಿಯಾಗಿ ಲೋನ್ ಪಾವತಿ ಮಾಡಿಲ್ಲ ಎಂದರೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಆಗಿಬಿಡುತ್ತದೆ. ಕ್ರೆಡಿಟ್ ಸ್ಕೋರ್ ಎನ್ನುವುದು ನಿಮ್ಮ ಆರ್ಥಿಕ ಜವಾಬ್ದಾರಿಯನ್ನು ತೋರಿಸುತ್ತದೆ ಅಷ್ಟೇ.

ಈ 10 ರೂಪಾಯಿ ನೋಟು ನಿಮ್ಮನ್ನು ಲಕ್ಷಾಧಿಪತಿ ಮಾಡುತ್ತೆ ಅಂದ್ರೆ ನೀವು ನಂಬಲೇಬೇಕು! ಹೇಗೆ ಗೊತ್ತಾ?

Car Loanಲೋನ್ ಪಡೆಯಲು ಎಷ್ಟು ಕ್ರೆಡಿಟ್ ಸ್ಕೋರ್ ಇರಬೇಕು?

ಸಾಮಾನ್ಯವಾಗಿ ಕ್ರೆಡಿಟ್ ಸ್ಕೋರ್ 300 ರಿಂದ 900 ವರೆಗು ಇರುತ್ತದೆ. ಇಲ್ಲಿ 300 ಮಿನಿಮಮ್ ಕ್ರೆಡಿಟ್ ಸ್ಕೋರ್, 900 ಮ್ಯಾಕ್ಸಿಮಮ್ ಕ್ರಡಿಟ್ ಸ್ಕೋರ್ ಆಗಿರುತ್ತದೆ. ನೀವು ವೆಹಿಕಲ್ ಲೋನ್ ಪಡೆಯುವುದಕ್ಕೆ 700 ಕ್ರೆಡಿಟ್ ಸ್ಕೋರ್ ಇರುವುದು ಒಳ್ಳೆಯದಾಗಿದೆ.

ಕೇವಲ 20 ಸಾವಿರಕ್ಕೆ ಮನೆಗೆ ತನ್ನಿ Hero Splendor Plus Bike! ಸಿಂಗಲ್ ಓನರ್, ಒಳ್ಳೆಯ ಕಂಡೀಷನ್

ಆದರೆ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದರೆ Loan ಸಿಗುವುದೇ ಇಲ್ಲ ಎಂದು ಹೇಳುವ ಹಾಗಿಲ್ಲ. ಒಂದು ವೇಳೆ ನಿಮ್ಮ ಸಿಬಿಲ್ ಸ್ಕೋರ್ ಕಡಿಮೆ ಇದ್ದರೆ, ನಿಮಗೆ ಬಡ್ಡಿ ಹೆಚ್ಚಿಗೆ ವಿಧಿಸುತ್ತಾರೆ. ಕಡಿಮೆ ಸಿಬಿಲ್ ಸ್ಕೋರ್ ಇರುವವರಿಗೆ ಸಾಲ ಕೊಟ್ಟರೆ, ಅಸುರಕ್ಷಿತ ಎಂದು ಬ್ಯಾಂಕ್ ಭಾವಿಸುವ ಕಾರಣ, ಹೆಚ್ಚಿನ ಬಡ್ಡಿ ಹೇರುತ್ತದೆ.

What is the CIBIL score Required to get a car loan

Our Whatsapp Channel is Live Now 👇

Whatsapp Channel

Related Stories