ಪಡೆಯಿರಿ 5 ಲಕ್ಷದವರೆಗೂ ವ್ಯಾಪಾರ ಸಾಲ! ಯಾವುದೇ ಬಡ್ಡಿ ಇಲ್ಲ, ಯಾವುದೇ ಆಧಾರ ಕೂಡ ಬೇಕಿಲ್ಲ
ಮೊದಲ ಹಂತದಲ್ಲಿ ₹10,000, ಇದನ್ನು ತೀರಿಸಿದ ಬಳಿಕ ₹20,000, ಇದನ್ನೂ ತೀರಿಸಿದ ಬಳಿಕ ಇನ್ನು ₹20,000. ಹೀಗೆ ಹಂತ ಹಂತವಾಗಿ Loan ಸಿಗುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಆಧಾರ ಕೊಡುವ ಅವಶ್ಯಕತೆ ಇಲ್ಲ.
Loan : ನಮ್ಮ ದೇಶದಲ್ಲಿ ಹಲವು ಜನರಿಗೆ ಅವರ ವಿದ್ಯಾರ್ಹತೆಗೆ ತಕ್ಕಂಥ ಕೆಲಸ ಸಿಗುತ್ತಿಲ್ಲ. ಅಂಥವರು ಸ್ವಂತ ಉದ್ಯಮ (Own Business) ಶುರು ಮಾಡಬೇಕು ಎಂದು ಆಸೆ ಹೊಂದಿದ್ದರೂ ಸಹ, ಆರ್ಥಿಕ ಸಮಸ್ಯೆಗಳ ಕಾರಣ ಬ್ಯುಸಿನೆಸ್ ಶುರು ಮಾಡಲು ಹಿಂದೇಟು ಹಾಕುತ್ತಿದ್ದಾರೆ.
ಬ್ಯುಸಿನೆಸ್ ಶುರು ಮಾಡಿ, ಉತ್ತಮ ಲಾಭ ಗಳಿಸುವ ಸಾಮರ್ಥ್ಯ ಹೊಂದಿದ್ದರೂ ಸಹ ಅವರಿಗೆ ಸರಿಯಾದ ಬೆಂಬಲ ಸಿಗುತ್ತಿಲ್ಲ. ಅಂಥವರಿಗೆ ಸಹಾಯ ಮಾಡಲು ಮುಂದಾಗಿದೆ ಕೇಂದ್ರ ಸರ್ಕಾರ.
ಹೌದು, ಕೇಂದ್ರ ಸರ್ಕಾರವು ಸ್ವಂತ ಉದ್ಯಮ ಶುರು ಮಾಡಬೇಕು ಎಂದುಕೊಂಡಿರುವವರಿಗೆ ಸಹಾಯ ಮಾಡುವ ಸಲುವಾಗಿ ಕೆಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳ ಮೂಲಕ ಸ್ವಂತ ಉದ್ಯಮ ಮಾಡಲು ಬಯಸುವವರಿಗೆ ಬಡ್ಡಿರಹಿತ ಸಾಲ (Loan) ಸೌಲಭ್ಯವನ್ನು ನೀಡುತ್ತಿದೆ.
ಈ ಯೋಜನೆಗಳ ಮೂಲಕ ಜನರು ತಮ್ಮ ಕನಸಿನ ಬ್ಯುಸಿನೆಸ್ ಶುರು ಮಾಡಬಹುದು. ಹಾಗಿದ್ದಲ್ಲಿ ಕೇಂದ್ರ ಸರ್ಕಾರದ ಆ ಯೋಜನೆಗಳು ಯಾವುವು ಎಂದು ತಿಳಿಯೋಣ..
ಆಧಾರ್ ಕಾರ್ಡ್ ಇದ್ರೆ ಸಾಕು, ಮತ್ಯಾವುದೇ ಗ್ಯಾರೆಂಟಿ ಇಲ್ಲದೆ ಸಿಗುತ್ತೆ ₹50,000 ರೂಪಾಯಿ ಸಾಲ!
ಪಿಎಮ್ ಸ್ವಾನಿಧಿ ಯೋಜನೆ: ಇದು ಬೀದಿಬದಿಯಲ್ಲಿ ಸಣ್ಣ ವ್ಯಾಪಾರ ಮಾಡುವ ಜನರಿಗಾಗಿ ಜಾರಿಗೆ ತಂದಿರುವ ಯೋಜನೆ ಆಗಿದೆ. ಈ ಯೋಜನೆಯ ಅಡಿಯಲ್ಲಿ ಅರ್ಹತೆ ಹೊಂದುವವರಿಗೆ ಸಾಲದ ಮೊತ್ತ ನೇರವಾಗಿ ಅವರ ಬ್ಯಾಂಕ್ ಖಾತೆಗೆ (bank Account) ವರ್ಗಾವಣೆ ಆಗುತ್ತದೆ.
ಯಾವುದೇ ಬಡ್ಡಿ ಇಲ್ಲದೇ 50 ಸಾವಿರ ರೂಪಾಯಿಗಳ ವರೆಗು ಸಾಲ ಪಡೆಯಬಹುದು. ಈ ಮೊತ್ತ ಒಂದೇ ಸಾರಿ ಸಿಗುವುದಿಲ್ಲ. ಹಂತಹಂತವಾಗಿ ಸಾಲ ಸಿಗಲಿದ್ದು, ಮೊದಲ ಹಂತದಲ್ಲಿ ₹10,000, ಇದನ್ನು ತೀರಿಸಿದ ಬಳಿಕ ₹20,000, ಇದನ್ನೂ ತೀರಿಸಿದ ಬಳಿಕ ಇನ್ನು ₹20,000. ಹೀಗೆ ಹಂತ ಹಂತವಾಗಿ Loan ಸಿಗುತ್ತದೆ. ಈ ಯೋಜನೆಯ ಸೌಲಭ್ಯ ಪಡೆಯಲು ಯಾವುದೇ ಆಧಾರ ಕೊಡುವ ಅವಶ್ಯಕತೆ ಇಲ್ಲ.
ಲಕ್ಪತಿ ದೀದಿ ಯೋಜನೆ: ಇದು 2023ರಲ್ಲಿ ಮಹಿಳಾ ಸಬಲೀಕರಣಕ್ಕಾಗಿ ಜಾರಿಗೆ ಬಂದಿರುವ ವಿಶೇಷವಾದ ಯೋಜನೆ ಆಗಿದ್ದು. ಸ್ವಂತ ಉದ್ಯಮ ಶುರು ಮಾಡಲು ಬಯಸುವ ಮಹಿಳೆಯರು ಈ ಯೋಜನೆಯ ಮೂಲಕ 1 ಲಕ್ಷದಿಂದ 1 ಕೋಟಿ ವರೆಗೂ ಸಾಲ ಪಡೆಯಬಹುದು.
ಹಾಗೆಯೇ ಈ ಯೋಜನೆಯಲ್ಲಿ ಮಹಿಳೆಯರಿಗೆ ತರಬೇತಿಯನ್ನು ಸಹ ಕೊಡಲಾಗುತ್ತದೆ. ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆಯಬಹುದು. ಸ್ವಸಹಾಯ ಗುಂಪುಗಳಲ್ಲಿ ಇರುವ ಮಹಿಳೆಯರು ಆಫೀಸ್ ಗೆ ಭೇಟಿ ನೀಡಿ, ತಮ್ಮ ಬ್ಯುಸಿನೆಸ್ ಬಗ್ಗೆ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ಸುಲಭವಾಗಿ ಸಾಲ ಸಿಗುತ್ತದೆ. 5 ಲಕ್ಷದವರೆಗು ಬೇಗ Loan ಪಡೆಯಬಹುದು, ತಮ್ಮ ಬ್ಯುಸಿನೆಸ್ ಅನ್ನು ವೃದ್ಧಿಸಬಹುದು.
ಕೆನರಾ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರ ಫಿಕ್ಸೆಡ್ ಹಣಕ್ಕೆ ಸಿಗುತ್ತೆ 7.5% ಇಂದ 8% ವರೆಗೂ ಬಡ್ಡಿ!
ಪಿಎಮ್ ಮುದ್ರಾ ಯೋಜನೆ: ಇದು ಕೇಂದ್ರ ಸರ್ಕಾರವು 2015ರಲ್ಲಿ ಸ್ವಂತ ಉದ್ಯಮ ನಡೆಸಲು ಬಯಸುವವರಿಗಾಗಿ ಜಾರಿಗೆ ತಂದ ಯೋಜನೆ ಆಗಿದ್ದು, ಮೂರು ಹಂತಗಳಲ್ಲಿ ಈ ಸಾಲ ಸೌಲಭ್ಯ ಸಿಗುತ್ತದೆ. ಶಿಶು ಹಂತದಲ್ಲಿ 50 ಸಾವಿರ ವರೆಗು Loan ಸಿಗುತ್ತದೆ, ಕಿಶೋರ್ ಹಂತದಲ್ಲಿ 5 ಲಕ್ಷದವರೆಗು ಸಾಲ ಸಿಗುತ್ತದೆ.
ಹಾಗೆಯೇ ಇನ್ನು ದೊಡ್ಡ ಬ್ಯುಸಿನೆಸ್ ಮಾಡುವವರಿಗೆ ತರುಣ್ ಹಂತದಲ್ಲಿ 10 ಲಕ್ಷದವರೆಗೂ ಸಾಲ ಸಿಗುತ್ತದೆ. ಭಾರತ ದೇಶದ ಎಲ್ಲಾ ಪ್ರಜೆಗಳು ಕೂಡ ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸಬಹುದು.
Get a business loan up to 5 lakhs with No interest by This Schemes