Story Highlights
ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಸಣ್ಣ ವ್ಯಾಪಾರಿಗಳು Loan ಪಡೆದುಕೊಳ್ಳಬಹುದು.. ಸಣ್ಣ ಉದ್ಯೋಗ ಮಾಡುವ, ಸ್ವಂತ ಉದ್ಯಮ ಮಾಡುತ್ತಿರುವ ಜನರಿಗಾಗಿ ಈ ಒಂದು ವಿಶೇಷ ಸಾಲ ಸೌಲಭ್ಯವನ್ನು ಜಾರಿಗೆ ತರಲಾಗಿದೆ.
ಕೇಂದ್ರ ಸರ್ಕಾರವು ನಮ್ಮ ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಕಡಿಮೆ ಮಾಡಬೇಕು ಎಂದು ಜನರಿಗೆ ಕೆಲಸದ ಮೇಲೆ ಪ್ರೋತ್ಸಾಹ ತರುವುದಕ್ಕಾಗಿ ಈಗಾಗಲೇ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಇದೀಗ ಮತ್ತೊಂದು ಯೋಜನೆಯನ್ನು ಸಹ ಜಾರಿಗೆ ತಂದಿದ್ದು, ಸ್ವಂತ ಉದ್ಯಮ (Own Business) ಮಾಡಲು ಬಯಸುವವರಿಗೆ ಸರ್ಕಾರದ ಕಡೆಯಿಂದ ಸಹಾಯ ಸಿಗಲಿದೆ.
ಹೌದು, ಈ ಯೋಜನೆಯ ಹೆಸರು ಪ್ರಧಾನಮಂತ್ರಿ ಸ್ವಾನಿಧಿ ಯೋಜನೆ ಆಗಿದೆ. ಈ ಯೋಜನೆಯ ಮೂಲಕ ಸಣ್ಣ ವ್ಯಾಪಾರಿಗಳು Loan ಪಡೆದುಕೊಳ್ಳಬಹುದು.. ಸಣ್ಣ ಉದ್ಯೋಗ ಮಾಡುವ, ಸ್ವಂತ ಉದ್ಯಮ ಮಾಡುತ್ತಿರುವ ಜನರಿಗಾಗಿ ಈ ಒಂದು ವಿಶೇಷ ಸಾಲ ಸೌಲಭ್ಯವನ್ನು ಜಾರಿಗೆ ತರಲಾಗಿದೆ.
ಈ ಒಂದು ಯೋಜನೆಯ ಮೂಲಕ ಹಣ್ಣು, ತರಕಾರಿ ವ್ಯಾಪಾರ ಮಾಡುವವರು, ಬೀದಿಯಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡುವವರು, ಫಾಸ್ಟ್ ಫುಡ್ ಕಾರ್ಟ್ ಗಳನ್ನು ನಡೆಸುತ್ತಿರುವವರು, ಸಣ್ಣ ಅಂಗಡಿಗಳನ್ನು ಇಟ್ಟುಕೊಂಡಿರುವವರು ಇವರೆಲ್ಲರೂ ಸ್ವಾನಿಧಿ ಯೋಜನೆಗೆ ಅಪ್ಲೈ ಮಾಡಿ, ಈ ಒಂದು ಯೋಜನೆಯ ಮೂಲಕ ಸಾಲ ಸೌಲಭ್ಯವನ್ನು ಪಡೆದುಕೊಳ್ಳಬಹುದು.
ಕೆನರಾ ಬ್ಯಾಂಕ್ನಲ್ಲಿ ಹಿರಿಯ ನಾಗರಿಕರ ಫಿಕ್ಸೆಡ್ ಹಣಕ್ಕೆ ಸಿಗುತ್ತೆ 7.5% ಇಂದ 8% ವರೆಗೂ ಬಡ್ಡಿ!
ಬಡ ವ್ಯಾಪಾರಿಗಳಿಗೆ ಸಿಗಲಿದೆ ₹50,000 ಸಾಲ:
ಪಿಎಮ್ ಸ್ವಾನಿಧಿ ಯೋಜನೆಯ ಮೂಲಕ ಸಣ್ಣ ವ್ಯಾಪಾರ ಮಾಡುತ್ತಿರುವವರಿಗೆ ಅವರ ಕೆಲಸವನ್ನು ಉತ್ತಮವಾಗಿ ಮುಂದುವರೆಸಿಕೊಂಡು ಹೋಗಲು, ₹50,000 ರೂಪಾಯಿಗಳ ವರೆಗು Loan Facility ಸಿಗಲಿದೆ. ಇದಕ್ಕಾಗಿ ನೀವು ಯಾವುದೇ ಗ್ಯಾರೆಂಟಿ ಕೊಡಬೇಕಾಗಿಲ್ಲ.
ಹಾಗೆಯೇ ಈ ಯೋಜನೆಯಲ್ಲಿ ಒಂದೇ ಬಾರಿಗೆ 50 ಸಾವಿರ ಸಾಲ ಸಿಗುವುದಿಲ್ಲ, ಕಂತುಗಳ ರೂಪದಲ್ಲಿ ಸಿಗುತ್ತದೆ.. ಮೊದಲಿಗೆ 10,000 ಸಾಲ ಕೊಡಲಾಗುತ್ತದೆ, ಅದನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದರೆ ನಂತರ 20,000 ಸಾಲ ಕೊಡಲಾಗುತ್ತದೆ.
ಇದನ್ನು ಸಮಯಕ್ಕೆ ಸರಿಯಾಗಿ ಪಾವತಿ ಮಾಡಿದರೆ, ಇನ್ನು 20,000 ಸಾಲ ಸಿಗುತ್ತದೆ. ಇಲ್ಲಿ ನೀವು ಸಾಲ ಪಾವತಿ ಮಾಡಬೇಕಾದ ಮೊತ್ತವನ್ನು ಪ್ರತಿ ತಿಂಗಳು ಕಂತುಗಳ ರೂಪದಲ್ಲಿ ಕಟ್ಟಿ, ಒಂದು ವರ್ಷದ ಒಳಗೆ ಸಾಲ ತೀರಿಸಹುದು.
ಈ ಸಾಲ ಪಡೆಯಲು ಏನನ್ನು ಗ್ಯಾರೆಂಟಿ ನೀಡುವ ಅವಶ್ಯಕತೆ ಇರುವುದಿಲ್ಲ. ಈ ಸಾಲ ಸೌಲಭ್ಯ ಪಡೆದುಕೊಳ್ಳುವುದಕ್ಕೆ ನಿಮ್ಮ ಬಳಿ ಆಧಾರ್ ಕಾರ್ಡ್ ಒಂದು ಇದ್ದರೆ ಸಾಕು, ನಿಮಗೆ ಸಾಲ ಪಡೆಯುವ ಅರ್ಹತೆ ಇದೆಯೇ ಎಂದು ಪರಿಶೀಲಿಸಿ, ನಿಮ್ಮ ಬ್ಯಾಂಕ್ ಖಾತೆಗೆ (Bank Account) ಸಾಲದ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ.
ಕೆನರಾ ಬ್ಯಾಂಕ್ ಅಕೌಂಟ್ನಲ್ಲಿ 3 ಲಕ್ಷ ಹಣ ಫಿಕ್ಸೆಡ್ ಇಟ್ರೆ ಎಷ್ಟು ಬಡ್ಡಿ ಸಿಗುತ್ತೆ ಗೊತ್ತಾ? ಇಲ್ಲಿದೆ ಲೆಕ್ಕಾಚಾರ
ಯಾರಿಗೆಲ್ಲಾ ಸಿಗಲಿದೆ ಈ ಸಾಲ ಸೌಲಭ್ಯ:
*ಬೀದಿಗಳಲ್ಲಿ ಸಣ್ಣ ವ್ಯಾಪಾರ ಮಾಡುವ ಯಾರೇ ಇದ್ದರೂ ಈ ಯೋಜನೆಗೆ ಅಪ್ಲೈ ಮಾಡಿ, Loan ಪಡೆಯಬಹುದು.
*18 ರಿಂದ 60 ವರ್ಷಗಳ ಒಳಗಿರುವ ಯಾರೇ ಆದರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು
*ಅರ್ಜಿ ಹಾಕುವ ವ್ಯಕ್ತಿ ಈಗಾಗಲೇ ಯಾವುದೇ ಸಾಲ ಕಟ್ಟುತ್ತಿರಬಾರದು.
*ಈ ಯೋಜನೆಯ ಮೂಲಕ ಸರ್ಕಾರವು ಅರ್ಹ ಅಭ್ಯರ್ಥಿಗೆ ಯಾವುದೇ ಆಧಾರ ಇಲ್ಲದೆಯೇ 50 ಸಾವಿರ ರೂಪಾಯಿಯವರೆಗು ಸಾಲ ನೀಡುತ್ತದೆ.
Aadhaar card is enough, you can get a loan of 50,000 without any guarantee