ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿದ್ರೆ ಬಿಗ್ ರಿಲೀಫ್! ಸಾಲ ಕಟ್ಟೋಕೆ ಆಗದವರಿಗೆ ನೆಮ್ಮದಿಯ ವಿಚಾರ

Story Highlights

Bank Loan : ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ರಿಕವರಿ ಏಜೆಂಟ್ ಗಳು ತೊಂದರೆ ಕೊಡುತ್ತಿದ್ದಾರಾ? ಈಗ ಈ ಹೊಸ ನಿಯಮಗಳಿಂದ ನಿಮಗೆ ಸಿಗಲಿದೆ ರಿಲೀಫ್

Bank Loan : ಕೆಲವೊಮ್ಮೆ ಅನಿವಾರ್ಯ ಪಾರಿಸ್ಥಿತಿಗಳ ಕಾರಣ ಬ್ಯಾಂಕ್ ಇಂದ ಲೋನ್ (Bank Loan) ತೆಗೆದುಕೊಳ್ಳಬೇಕಾಗುತ್ತದೆ. ವಿವಿಧ ರೀತಿಯ ಸಾಲಗಳನ್ನು ಜನರು ಪಡೆದುಕೊಳ್ಳುತ್ತಾರೆ, ಹೋಮ್ ಲೋನ್ (Home Loan), ಪರ್ಸನಲ್ ಲೋನ್ (Personal Loan), ಗೋಲ್ಡ್ ಲೋನ್ (Gold Loan), ವೆಹಿಕಲ್ ಲೋನ್ ಹೀಗೆ ಬೇರೆ ಬೇರೆಯ ರೀತಿಯ ಸಾಲವನ್ನೇ ಪಡೆದಿರಬಹುದು.

ಸಾಲ ಪಡೆದ ನಂತರ ಇನ್ನೇನೋ ಸಮಸ್ಯೆ ಆಗಿ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗದೇ ಹೋದರೆ, ರಿವಕರಿ ಏಜೆಂಟ್ ಗಳು ಬಂದು ವಿಪರೀತ ತೊಂದರೆ ಕೊಡುತ್ತಿದ್ದಾರಾ? ಈ ರೀತಿ ಆಗ್ತಿದ್ರೆ ಹೆದರಬೇಡಿ, ನಿಮಗಾಗಿ ಪರಿಹಾರ ಇದೆ.

ಹೌದು, ಪ್ರತಿ ಬ್ಯಾಂಕ್ ನಲ್ಲಿ ಕೂಡ ಗ್ರಾಹಕರಿಗೆ ಸಾಲದ ಸೌಲಭ್ಯ ಇದ್ದೆ ಇರುತ್ತದೆ. ಸಾಲ ಪಡೆದವರು ಸಾಲದ ಮೊತ್ತವನ್ನು ಸರಿಯಾದ ಸಮಯಕ್ಕೆ ಮರುಪಾವತಿ ಮಾಡಿಲ್ಲ ಎಂದರೆ, ಅವರಿಂದ ಸಾಲ ವಸೂಲಿ ಮಾಡುವುದಕ್ಕಾಗಿಗೆ ಪ್ರತಿ ಬ್ಯಾಂಕ್ ನಲ್ಲಿ ರಿಕವರಿ ಏಜೆಂಟ್ ಗಳು ಇರುತ್ತಾರೆ, ಅದಕ್ಕಾಗಿಯೇ ಅವರನ್ನು ಕೆಲಸಕ್ಕೆ ತೆಗೆದುಕೊಂಡಿರಲಾಗುತ್ತದೆ.

ಕೆನರಾ ಬ್ಯಾಂಕ್‌ನಲ್ಲಿ 25 ಲಕ್ಷ ಹೋಮ್ ಲೋನ್ ತಗೊಂಡ್ರೆ, ಬಡ್ಡಿ ಎಷ್ಟು? ಇಎಂಐ ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ

ಆದರೆ ರಿಕವರಿ ಏಜೆಂಟ್ ಗಳು ಮನಸ್ಸಿಗೆ ಬಂದ ಹಾಗೆ ಸಾಲಗಾರರಿಗೆ ಪದೇ ಪದೇ ಫೋನ್ ಮಾಡುವುದು, ಸಾಲಗಾರರ ಮನೆಗೆ ಬಂದು ತೊಂದರೆ ಕೊಡುವುದು ಇದನ್ನೆಲ್ಲಾ ಮಾಡುವ ಹಾಗಿಲ್ಲ.

ಹೌದು, ಇದಕ್ಕಾಗಿ RBI ಕೆಲವು ನಿಯಮಗಳನ್ನು ಜಾರಿಗೆ ತಂದಿದೆ. ಅವುಗಳ ಬಗ್ಗೆ ನೀವು ತಿಳಿದುಕೊಳ್ಳುವುದು ಒಳ್ಳೆಯದು. ಸಾಲ ಪಡೆಯುವ ವ್ಯಕ್ತಿಯ ಮನೆಗೆ ಇದ್ದಕಿದ್ದ ಹಾಗೆ ಹೋಗುವ ಹಕ್ಕು ಬ್ಯಾಂಕ್ ಅಧಿಕಾರಿಗಳಿಗೆ ಅಥವಾ ರಿಕವರಿ ಏಜೆಂಟ್ ಗಳಿಗೆ ಇರುವುದಿಲ್ಲ, ಅವರಿಗೆ ದೈಹಿಕವಾಗಿ ಅಥವಾ ಮಾನಸಿಕವಾಗಿ ತೊಂದರೆ ಮಾಡಿದರೆ, ಗ್ರಾಹಕರು RBI ಗೆ ಅಥವಾ ಪೊಲೀಸ್ ಠಾಣೆಗೆ ಆ ಏಜೆಂಟ್ ವಿರುದ್ಧ ಬ್ಯಾಂಕ್ ವಿರುದ್ಧ ದೂರು ಕೊಟ್ಟು, ಅವರು ದಂಡ ಕಟ್ಟುಕೊಡಲು ಕೇಳಬಹುದು.

ಕೆನರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್‌ನಲ್ಲಿ 75 ಲಕ್ಷ ಹೋಮ್ ಲೋನ್ ತಗೊಂಡ್ರೆ ತಿಂಗಳ EMI ಎಷ್ಟಾಗುತ್ತೆ ಗೊತ್ತಾ?

Bank Loanಒಂದು ವೇಳೆ ಗ್ರಾಹಕರು ಮೊದಲ ತಿಂಗಳ ಸಾಲ ಕಟ್ಟಿಲ್ಲ ಎಂದರೆ, 3 ತಿಂಗಳಿನಿಂದ ಹೋಮ್ ಲೋನ್ ಪಾವತಿ ಮಾಡಿಲ್ಲ ಎಂದರೆ, ಮೊದಲು ಅವರಿಗೆ ಕಾನೂನಾತ್ಮಕವಾಗಿ ನೋಟಿಸ್ ಕಳಿಸಬೇಕು. ಗ್ರಾಹಕರು ಈ ನೋಟಿಸ್ ಗೆ ಕಾನೂನಾತ್ಮಕವಾಗಿಯೆ ಉತ್ತರ ಕೊಡಬೇಕು.

ಒಂದು ಗ್ರಾಹಕರಿಂದ ಯಾವುದೇ ಉತ್ತರ ಬರದೇ ಹೋದರೇ, ಆಗ ಅವರನ್ನು ಡಿಫಾಲ್ಟರ್ ಎಂದು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಆಗ ಮಾತ್ರ ರಿಕವರಿ ಏಜೆಂಟ್ ಗಳು ಅವರಿಗೆ ಕರೆಮಾಡಬಹುದು. ಅದು ಕರೆ ಮಾಡುವುದಕ್ಕೆ ಸಮಯ ನಿಗದಿ ಆಗಿದ್ದು, ಬೆಳಗ್ಗೆ 7 ಗಂಟೆ ಇಂದ ಸಂಜೆ 7 ಗಂಟೆಯ ಒಳಗೆ ಮಾತ್ರ ಕರೆ ಮಾಡಬಹುದು.

ಕೆನರಾ ಬ್ಯಾಂಕ್‌ನಲ್ಲಿ ಹಿರಿಯ ನಾಗರಿಕರ ಫಿಕ್ಸೆಡ್ ಹಣಕ್ಕೆ ಸಿಗುತ್ತೆ 7.5% ಇಂದ 8% ವರೆಗೂ ಬಡ್ಡಿ!

ಇನ್ನು ರಿಕವರಿ ಏಜೆಂಟ್ ಗಳು ಗ್ರಾಹಕರ ಮನೆವರೆಗು ಹೋಗಬೇಕು ಎಂದರೆ ಅವರ ಹತ್ತಿರ ಬ್ಯಾಂಕ್ ಇಂದ ಕೊಟ್ಟಿರುವ ಅಧಿಕಾರದ ಪತ್ರ ಇರಬೇಕು. ಹಾಗೆಯೇ ಅವರ ಐಡಿ ಕಾರ್ಡ್ ಅನ್ನು ಕೂಡ ತೋರಿಸಬೇಕು.

ಈ ಎಲ್ಲಾ ನಿಯಮಗಳು ಇದ್ದು, ಎಲ್ಲರೂ ಸಹ ಈ ನಿಯಮಗಳನ್ನು ಪಾಲಿಸಬೇಕು, ಒಂದು ವೇಳೆ ಗ್ರಾಹಕರಿಗೆ ತೊಂದರೆ ಮಾಡಿದರೆ, ಅವರು ಪೊಲೀಸರ ಸಹಾಯ ಪಡೆದುಕೊಳ್ಳಬಹುದು. ಇಷ್ಟೆಲ್ಲಾ ಆಗುವುದಕ್ಕಿಂತ, ಸಮಯಕ್ಕೆ ಸರಿಯಾಗಿ ನೀವು ಲೋನ್ ಪಾವತಿ (Loan Re Payment) ಮಾಡಿದರೆ, ಯಾವುದೇ ಸಮಸ್ಯೆ ಉಂಟಾಗುವುದಿಲ್ಲ. ನಿಮ್ಮ ಸಿಬಿಲ್ ಸ್ಕೋರ್ (Credit Score) ಕೂಡ ಚೆನ್ನಾಗಿರುತ್ತದೆ

Bank recovery agents cannot bother about non-repayment of loans

Related Stories