ನೀವು ಜಾಮೀನು ನೀಡಿದ್ದ ವ್ಯಕ್ತಿ ಸಾಲ ತೀರಿಸದೇ ಹೋದ್ರೆ ಏನಾಗುತ್ತೆ ಗೊತ್ತಾ? ಬ್ಯಾಂಕ್ ನಿಯಮ ಹೀಗಿದೆ

Story Highlights

ಸಾಲ ಪಡೆಯುವುದಕ್ಕೆ ಹೆಚ್ಚಿನ ಜನರು ಬ್ಯಾಂಕ್ ಮೊರೆ ಹೋಗುತ್ತಾರೆ. ಆದರೆ ಎಲ್ಲರಿಗೂ ಬ್ಯಾಂಕ್ ನಲ್ಲಿ ಸಾಲ ಸಿಗುವುದಿಲ್ಲ. ಹೌದು, ಬ್ಯಾಂಕ್ ನಲ್ಲಿ ಅನೇಕ ವಿಚಾರಗಳನ್ನು ಗಮನಿಸಿ ಸಾಲ ಕೊಡಲಾಗುತ್ತದೆ.

ಯಾವುದೇ ವ್ಯಕ್ತಿಯ ಬದುಕಿನಲ್ಲಿ ಹಣಕಾಸಿನ ಸಂಕಷ್ಟ ಯಾವಾಗ ಬರುತ್ತದೆ ಎಂದು ಹೇಳೋದಕ್ಕೆ ಸಾಧ್ಯವಿಲ್ಲ. ಮನೆಯಲ್ಲಿ ಏನೋ ಸಮಸ್ಯೆ ಬರಬಹುದು, ಆರೋಗ್ಯದ ಸಮಸ್ಯೆ ಎದುರಾಗಬಹುದು. ಹೀಗೆ ನಾವು ಊಹೆ ಕೂಡ ಮಾಡಿರದ ಹಾಗೆ ಹಣಕಸಿಗೆ ಸಂಬಂಧಿಸಿದ ಯಾವುದೇ ಒಂದು ಸಮಸ್ಯೆ ಬಂದು ಎದುರಾಗಬಹುದು.

ಅಂಥ ಸಮಯದಲ್ಲಿ ಸಾಲ ಪಡೆಯುವುದಕ್ಕೆ ಹೆಚ್ಚಿನ ಜನರು ಬ್ಯಾಂಕ್ ಮೊರೆ (Bank Loan) ಹೋಗುತ್ತಾರೆ. ಆದರೆ ಎಲ್ಲರಿಗೂ ಬ್ಯಾಂಕ್ ನಲ್ಲಿ ಸಾಲ ಸಿಗುವುದಿಲ್ಲ. ಹೌದು, ಬ್ಯಾಂಕ್ ನಲ್ಲಿ ಅನೇಕ ವಿಚಾರಗಳನ್ನು ಗಮನಿಸಿ Loan ಕೊಡಲಾಗುತ್ತದೆ.

ಅದೆಲ್ಲದರ ಜೊತೆಗೆ ಸಾಲ ನೀಡಲು ಒಬ್ಬರು ಗ್ಯಾರೆಂಟಿದಾರರು ಬೇಕಾಗುತ್ತಾರೆ. ಹೌದು, ಶುರಿಟಿ ಕೊಡುವ ವ್ಯಕ್ತಿ ಕೂಡ ಆರ್ಥಿಕವಾಗಿ ಸಬಲರಾಗಿದ್ದು, ಆತ ಗ್ಯಾರೆಂಟಿ ಕೊಟ್ಟರೆ ಆಗ ಲೋನ್ ಗೆ ಅಪ್ಲೈ ಮಾಡಿರುವ ವ್ಯಕ್ತಿಗೆ ಸುಲಭವಾಗಿ ಸಾಲ ಸಿಗುತ್ತದೆ. ಹೀಗೆ ಬ್ಯಾಂಕ್ ನಿಯಮಗಳು ಸಾಕಷ್ಟಿದೆ. ಒಂದು ವೇಳೆ ನೀವು ಶುರಿಟಿ ಕೊಟ್ಟಿದ್ದು, ಸಾಲ ಪಡೆದ ವ್ಯಕ್ತಿ ಸಾಲ ತೀರಿಸದೇ (Loan Re Payment) ಹೋದರೆ ಏನಾಗುತ್ತದೆ?

ಬಂಪರ್ ಕೊಡುಗೆ! ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಪ್ರತಿ ತಿಂಗಳು ಸಿಗುತ್ತೆ 5,550 ರೂಪಾಯಿ ಪಿಂಚಣಿ

ಒಂದು ವೇಳೆ ಆ ವ್ಯಕ್ತಿ ಸಾಲ ತೀರಿಸುವಲ್ಲಿ ವಿಫಲವಾದರೆ ಅದರ ಪೂರ್ತಿ ಜವಾಬ್ದಾರಿ ಶುರಿಟಿ ಕೊಟ್ಟ ವ್ಯಕ್ತಿಯ ಮೇಲೆ ಬೀಳುತ್ತದೆ. ಹೌದು, ಶುರಿಟಿ (Loan surety) ಕೊಡುವವರು ಸಹಸಾಲಗಾರನಾಗಿ ಇರುತ್ತಾರೆ. ಹಾಗಾಗಿ ಒಂದು ವೇಳೆ ಸಾಲ ಪಡೆದ ವ್ಯಕ್ತಿ ಅದನ್ನು ಹಿಂದಿರುಗಿಸಲು ಸಾಧ್ಯವಾಗದೆ ಹೋದರೆ, ಸಾಲದ ಹೊರೆ ಗ್ಯಾರೆಂಟಿದಾರರ ಮೇಲೆ ಬೀಳುತ್ತದೆ. ಹಾಗಾಗಿ ಯಾರಿಗೇ ಆದರೂ ಶುರಿಟಿ ಕೊಡುವುದಕ್ಕಿಂತ ಮೊದಲು, ಬ್ಯಾಂಕ್ ನ ಎಲ್ಲಾ ನಿಯಮಗಳ ಬಗ್ಗೆ ಕೂಡ ತಿಳಿದುಕೊಳ್ಳುವುದು ಒಳ್ಳೆಯದು.

ಸರಿಯಾದ ಮಾಹಿತಿ ಪಡೆದು ಶುರಿಟಿ ಕೊಡಿ:

ಸಮಯ ಸಂದರ್ಭ ಒಂದೇ ರೀತಿ ಇರುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಒಂದು ವೇಳೆ ನಿಮ್ಮ ಫ್ರೆಂಡ್ಸ್, ರಿಲೇಟಿವ್, ಯಾರಿಗೆ ಆದರೂ ಸಾಲಕ್ಕೆ ಶುರಿಟಿ ಕೊಡುವ ಪರಿಸ್ಥಿತಿ ಬಂದು, ನೀವು ಶುರಿಟಿ ಕೊಡುವುದಾದರೆ, ಅವರು ಪ್ರತಿ ತಿಂಗಳು ಸರಿಯಾಗಿ ಸಾಲ ಪಾವತಿ ಮಾಡುತ್ತಿದ್ದಾರಾ ಎನ್ನುವುದನ್ನು ಚೆಕ್ ಮಾಡಿ, ಒಂದು ವೇಳೆ ಇಎಂಐ ಕಟ್ಟುತ್ತಿಲ್ಲ ಎಂದರೆ, ಸಮಯಕ್ಕೆ ಸರಿಯಾಗಿ ಇಎಂಐ (Loan EMI) ಕಟ್ಟಬೇಕು ಎಂದು ಅವರಿಗೆ ಬುದ್ಧಿವಾದ ಹೇಳಿ. ಈ ಕೆಲಸವನ್ನು ಕೂಡ ನೀವು ಮಾಡುತ್ತಿರಬೇಕು.

ಮಿತಿಗಿಂತ ಹೆಚ್ಚು ಆಸ್ತಿ, ಜಮೀನು ಇದ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ವ್ಯಕ್ತಿ ಬಳಿ ಇರಬೇಕಾದ ಮಿತಿ ಎಷ್ಟು

loan suretyಸಾಲ ಪಡೆದ ವ್ಯಕ್ತಿ ಮಾರುಪಾವತಿಯನ್ನು ಸರಿಯಾಗಿ ಮಾಡಲಿಲ್ಲ ಎಂದರೆ, ಅದರಿಂದ ಆತ ಮಾತ್ರ ತೊಂದರೆ ಅನುಭವಿಸುವುದಿಲ್ಲ ಶುರಿಟಿ ಕೊಟ್ಟ ವ್ಯಕ್ತಿಯ ಸಿಬಿಲ್ ಸ್ಕೋರ್ ಕೂಡ ಕಡಿಮೆ ಆಗುತ್ತದೆ. ಹಾಗಾಗಿ ಶುರಿಟಿ ಕೊಡುವವರು ಹುಷಾರಾಗಿರಬೇಕು.

ಸ್ಟೇಟ್ ಬ್ಯಾಂಕ್ ನಲ್ಲಿ ಒಂದು ವರ್ಷ ನಿಮ್ಮ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ?

ಸಿಬಿಲ್ ಸ್ಕೋರ್ ಕಡಿಮೆ ಆಗಿಬಿಟ್ಟರೆ, ಮುಂದೊಂದು ದಿನ ಅವರು ಬ್ಯಾಂಕ್ ಇಂದ ಸಾಲ (Bank Loan) ಪಡೆಯಬೇಕು ಎಂದರೆ, ಆಗ ಸಮಸ್ಯೆ ಆಗುತ್ತದೆ. ಒಂದು ವೇಳೆ ಸಾಲ ಪಡೆದ ವ್ಯಕ್ತಿ ಮರುಪಾವತಿ ಮಾಡುತ್ತಿಲ್ಲ ಎಂದರೆ, ಆತನ ವಿರುದ್ಧ ಪೊಲೀಸರಲ್ಲಿ ಕಂಪ್ಲೇಂಟ್ ಕೊಡಬಹುದು. ಜಾಮೀನುದಾರ ಗುತ್ತಿಗೆ ಕಾಯ್ದೆಯಲ್ಲಿ ಶುರಿಟಿ ಕೊಡುವವರಿಗೆ ಹಕ್ಕು ಇರುತ್ತದೆ, ಅದರ ಸದುಪಯೋಗ ಪಡಿಸಿಕೊಳ್ಳಬಹುದು.

Do you know what happens if the person Not Paid Loan you Given surety

Related Stories