ಮಿತಿಗಿಂತ ಹೆಚ್ಚು ಆಸ್ತಿ, ಜಮೀನು ಇದ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ವ್ಯಕ್ತಿ ಬಳಿ ಇರಬೇಕಾದ ಮಿತಿ ಎಷ್ಟು

ಬ್ರಿಟಿಷರ ಆಳ್ವಿಕೆ ಇದ್ದ ಕಾಲದಲ್ಲಿ ಯಾರು ಎಷ್ಟು ಜಮೀನು ಖರೀದಿ ಮಾಡಬಹುದು ಎನ್ನುವ ನಿಯಮವನ್ನು ಜಾರಿಗೆ ತರಲಾಗಿತ್ತು, ಆ ಮಿತಿಗಿಂತ ಹೆಚ್ಚು ಭೂಮಿ ಖರೀದಿ ಮಾಡಿದರೆ ಅಂಥವರಿಗೆ ಜೈಲು ಶಿಕ್ಷೆ ಕೊಡಲಾಗುತ್ತಿತ್ತು,

ಪ್ರಪಂಚದ ಎಲ್ಲಾ ದೇಶಗಳಲ್ಲಿ ಕೂಡ ಕೆಲವು ವಿಚಾರಗಳಿಗೆ ಅದರದ್ದೇ ಆದ ಕಾನೂನು (Law) ಇರುತ್ತದೆ. ಒಬ್ಬ ವ್ಯಕ್ತಿ ತನ್ನ ಬಳಿ ಎಷ್ಟು ಹಣ, ಬೆಳ್ಳಿ, ಚಿನ್ನ ಇಟ್ಟುಕೊಳ್ಳಬಹುದು ಎನ್ನುವುದಕ್ಕೆ ಕಾನೂನು ಇದೆ, ಆ ಮಿತಿಗಿಂತ ಜಾಸ್ತಿ ಇಟ್ಟುಕೊಂಡರೆ, ಕಾನೂನಿನ ಕೆಲವು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇದು ಚಿನ್ನ ಬೆಳ್ಳಿ ವಿಷಯಕ್ಕೆ ಮಾತ್ರವಲ್ಲ, ಜಮೀನಿನ (Property Rules) ವಿಷಯಕ್ಕೆ ಕೂಡ ಇದೇ ರೂಲ್ಸ್ ಆಗಿರುತ್ತದೆ. ಮಿತಿಗಿಂತ ಹೆಚ್ಚು ಜಮೀನು ಹೊಂದಿದ್ದರೆ, ನೀವು ಕೆಲವು ಕಾನೂನಿನ ಕ್ರಮಗಳನ್ನು ಎದುರಿಸಬೇಕಾಗುತ್ತದೆ.

ಸ್ಟೇಟ್ ಬ್ಯಾಂಕ್ ನಲ್ಲಿ ಒಂದು ವರ್ಷ ನಿಮ್ಮ ಹಣ ಫಿಕ್ಸೆಡ್ ಡೆಪಾಸಿಟ್ ಮಾಡಿದ್ರೆ ಬಡ್ಡಿ ಎಷ್ಟು ಸಿಗುತ್ತೆ ಗೊತ್ತಾ?

ಮಿತಿಗಿಂತ ಹೆಚ್ಚು ಆಸ್ತಿ, ಜಮೀನು ಇದ್ರೆ ಏನಾಗುತ್ತೆ ಗೊತ್ತಾ? ಅಷ್ಟಕ್ಕೂ ವ್ಯಕ್ತಿ ಬಳಿ ಇರಬೇಕಾದ ಮಿತಿ ಎಷ್ಟು - Kannada News

ಭೂ ಒಡೆತನದ ಕಾಯ್ದೆ:

ನಮ್ಮ ದೇಶದಲ್ಲಿ ಜಮೀನ್ದಾರಿಕೆ ಪದ್ಧತಿ ಇತ್ತು, ಅದರಿಂದ ಏನೆಲ್ಲಾ ನಡೆದಿದೆ ಎನ್ನುವುದು ನಮಗೆ ಗೊತ್ತೇ ಇದೆ. ಹಾಗಾಗಿ 1954 ರಲ್ಲಿ ನಮ್ಮ ದೇಶದಲ್ಲಿ ಭೂ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲಾಯಿತು.

ಈ ಒಂದು ಕಾಯ್ದೆ ಬಂದ ನಂತರ ಒಂದೊಂದು ರಾಜ್ಯದಲ್ಲಿಯು ಭೂಮಿ ಒಡೆತನಕ್ಕೆ ಸಂಬಂಧಿಸಿದ ಹಾಗೆ ಬೇರೆ ಬೇರೆ ನಿಯಮಗಳನ್ನು ಜಾರಿಗೆ ತರಲಾಯಿತು. ಇದಕ್ಕೆ ಒಂದು ಉದಾಹರಣೆ ಕೊಡುವುದಾದರೆ, 1963ದಲ್ಲಿ ಕೇರಳದಲ್ಲಿ ಜಾರಿಗೆ ಬಂದ ಭೂ ಕಾಯ್ದೆಯ ಅನುಸಾರ ಮದುವೆ ಆಗಿಲ್ಲದ ವ್ಯಕ್ತಿಯ ಹೆಸರಿನಲ್ಲಿ 7.2 ಎಕರೆ ಭೂಮಿ ಇರಬಹುದು, ಒಂದು ಕುಟುಂಬದಲ್ಲಿ 5 ಜನರಿದ್ದರೆ, ಅಂಥವರ ಬಳಿ 5 ಎಕರೆ ಭೂಮಿ (Land) ಇರಬಹುದು.

ಮಹಾರಾಷ್ಟ್ರ ರಾಜ್ಯದಲ್ಲಿ ಬೇರೆ ಥರದ ನಿಯಮ, ಇಲ್ಲಿ ವ್ಯವಸಾಯ ಮಾಡುವವರು ಮಾತ್ರ ಜಮೀನು ಹೊಂದಬಹುದು, ಅದಕ್ಕೂ ಮಿತಿ ಇದ್ದು, 54 ಎಕರೆಗಳನ್ನು ಮಾತ್ರ ಹೊಂದಬಹುದು. ಪಶ್ಚಿಮ ಬಂಗಾಳದಲ್ಲಿ 24 ಎಕರೆ ಭೂಮಿ ಹೊಂದಬಹುದು, ಬಿಹಾರದಲ್ಲಿ 15 ಎಕರೆ ಕೃಷಿ ಭೂಮಿ ಹೊಂದಬಹುದು.

ಹಿಮಾಚಲ ಪ್ರದೇಶದಲ್ಲಿ 32 ಎಕರೆ ಭೂಮಿ ಹೊಂದಬಹುದು, ಉತ್ತರ ಪ್ರದೇಶದಲ್ಲಿ ಒಬ್ಬ ವ್ಯಕ್ತಿ 12.5 ಎಕರೆ ಭೂಮಿ ಹೊಂದಬಹುದು. ಹೀಗೆ ವಿವಿಧ ರಾಜ್ಯಗಳಲ್ಲಿ ವಿವಿಧ ಕಾನೂನು ಇರುತ್ತದೆ. ಇನ್ನು ಸರ್ಕಾರಕ್ಕೆ ಸಂಬಂಧಿಸಿದ ಜಮೀನುಗಳನ್ನು ಬೇರೆಯವರು ಕೊಂಡುಕೊಳ್ಳಲು ಸಾಧ್ಯ ಆಗುವುದಿಲ್ಲ.

ಯಾವುದೇ ಬ್ಯಾಂಕಿನಲ್ಲಿ ಸಾಲ ಮಾಡಿದ್ರೆ ಬಿಗ್ ರಿಲೀಫ್! ಸಾಲ ಕಟ್ಟೋಕೆ ಆಗದವರಿಗೆ ನೆಮ್ಮದಿಯ ವಿಚಾರ

Property Rulesನೆರೆ ದೇಶಗಳಲ್ಲಿ ಬೇರೆಯದೇ ಕಾನೂನು:

ನಮ್ಮ ದೇಶದ ವಿವಧ ರಾಜ್ಯಗಳಲ್ಲಿ ಈ ರೀತಿಯ ಕಾನೂನು ಇದೆ, ಇನ್ನು ನಮ್ಮ ಅಕ್ಕಪಕ್ಕದ ದೇಶಗಳಾದ ಬಾಂಗ್ಲಾದೇಶ ಮತ್ತು ಪಾಕಿಸ್ತಾನದಲ್ಲಿ ಬೇರೆಯದೇ ಕಾನೂನು ಇದೆ. ಪಾಕಿಸ್ತಾನದಲ್ಲಿ ಕಾನೂನು ಹೇಗಿದೆ ಎಂದರೆ, ಇಲ್ಲಿ ಉತ್ತರಾಧಿಕಾರಿ ಕಾನೂನು ಕಾಯ್ದೆಯ ಅನುಸಾರ ಭೂಮಿಯನ್ನು ಹೊಂದಬಹುದು.

ಇನ್ನು ಬಾಂಗ್ಲಾದೇಶದಲ್ಲಿ ಈ ವಿಚಾರದ ಬಗ್ಗೆ ಇನ್ನೂ ಕೂಡ ಸರಿಯಾದ ಕಾನೂನು ಜಾರಿಗೆ ಬಂದಿಲ್ಲ. ಇನ್ನು ನಮ್ಮ ದೇಶದಲ್ಲಿ ಜಮೀನಿಗೆ ಸಂಬಂಧಪಟ್ಟ ಹಾಗೆ, ಈ ಥರದ ಕಾನೂನನ್ನು ಮಾಡಿದ್ದು ಬ್ರಿಟಿಷರು.

ಕೆನರಾ ಬ್ಯಾಂಕ್‌ನಲ್ಲಿ 25 ಲಕ್ಷ ಹೋಮ್ ಲೋನ್ ತಗೊಂಡ್ರೆ, ಬಡ್ಡಿ ಎಷ್ಟು? ಇಎಂಐ ಎಷ್ಟು ಕಟ್ಟಬೇಕು? ಇಲ್ಲಿದೆ ಲೆಕ್ಕಾಚಾರ

ಬ್ರಿಟಿಷರ ಆಳ್ವಿಕೆ ಇದ್ದ ಕಾಲದಲ್ಲಿ ಯಾರು ಎಷ್ಟು ಜಮೀನು ಖರೀದಿ ಮಾಡಬಹುದು ಎನ್ನುವ ನಿಯಮವನ್ನು ಜಾರಿಗೆ ತರಲಾಗಿತ್ತು, ಆ ಮಿತಿಗಿಂತ ಹೆಚ್ಚು ಭೂಮಿ ಖರೀದಿ ಮಾಡಿದರೆ ಅಂಥವರಿಗೆ ಜೈಲು ಶಿಕ್ಷೆ ಕೊಡಲಾಗುತ್ತಿತ್ತು, ಆದರೆ ಈಗ ಇಷ್ಟು ಕಠಿಣ ನಿಯಮವಿಲ್ಲ, ನಿಯಮದಲ್ಲಿ ಸ್ವಲ್ಪ ಸಡಿಲಿಕೆ ಮಾಡಲಾಗಿದೆ.

ಆದರೂ ಕೂಡ ಯಾವುದೇ ವ್ಯಕ್ತಿ ಜಮೀನು ಖರೀದಿ ಮಾಡುವುದಕ್ಕಿಂತ ಮೊದಲು, ಕಾನೂನಿನ ನಿಯಮ ಏನು ಎನ್ನುವುದನ್ನು ತಿಳಿದುಕೊಂಡು ನಂತರ ಖರೀದಿ ಮಾಡುವುದು ಒಳ್ಳೆಯದು.

Do you know what happens if you have more property, land, agricultural land than the limit

Related Stories