Business News

ದುಬೈನಲ್ಲಿ ಚಿನ್ನದ ಬೇಲೆ ಸಿಕ್ಕಾಪಟ್ಟೆ ಕಡಿಮೆ, ಆದ್ರೆ ಅಲ್ಲಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು ಗೊತ್ತಾ?

ದುಬೈ.. ಇದು ಎಲ್ಲರ ಕಣ್ಣರಳಿಸುವ ದೇಶ ಎಂದರೆ ತಪ್ಪಲ್ಲ. ಭಾರತದ ಬಹಳಷ್ಟು ಜನರು ಈ ದೇಶಕ್ಕೆ ಪ್ರವಾಸಕ್ಕೆ ಹೋಗುತ್ತಾರೆ, ಇನ್ನಷ್ಟು ಜನರು ಕೆಲಸ ಮಾಡುವ ಸಲುವಾಗಿ ಹೋಗುತ್ತಾರೆ. ಆ ದೇಶದಲ್ಲಿರುವ ಅತ್ಯಂತ ಎತ್ತರದ ಕಟ್ಟಡ ಭುರ್ಜ್ ಖಲೀಫಾ (Burj khalifa) ನೋಡುವ ಸಲುವಾಗಿ ಹೋಗುವವರು ಇನ್ನಷ್ಟು ಜನರು.

ಹಾಲಿಡೇ ಗಾಗಿ ದುಬೈ ಗೆ ಹೋಗಿ (Dubai Holiday Trip), ಅಲ್ಲಿನ ಸುಂದರ ತಾಣಗಳನ್ನು ಎಂಜಾಯ್ ಮಾಡಿಕೊಂಡು ಬರಲು ಸಾಕಷ್ಟು ಜನರು ಹೋಗುತ್ತಾರೆ. ಒಂದಷ್ಟು ಜನರು ಅಲ್ಲಿಂದ ಚಿನ್ನ (Buy Gold) ತರುವುದಕ್ಕೆ ಹೋಗುತ್ತಾರೆ.

Do you know how much gold can be brought to India from Dubai

ಹೌದು ಕೆಲವು ಜನರು ದುಬೈಗೆ ಪ್ರವಾಸಕ್ಕಾಗಿ (Trip or tour Package) ಹೋದಾಗ, ಅಲ್ಲಿಂದ ಹೆಚ್ಚಾಗಿ ಚಿನ್ನ ಖರೀದಿ (Gold Purchase) ಮಾಡಿಕೊಂಡು ಬರುತ್ತಾರೆ. ಏಕೆಂದರೆ ಭಾರತಕ್ಕಿಂತ ದುಬೈನಲ್ಲಿ ಚಿನ್ನದ ಬೆಲೆ ಬಹಳ ಕಡಿಮೆ.

ಸ್ಟೇಟ್ ಬ್ಯಾಂಕಿನಲ್ಲಿ ಯಾವುದೇ ಸಾಲ ಮಾಡಿದ್ರೆ ಇಲ್ಲಿದೆ ಬಿಗ್ ಅಪ್ಡೇಟ್! ಬಡ್ಡಿದರ ಧಿಡೀರ್ ಬದಲಾವಣೆ

ಈ ಕಾರಣಕ್ಕೆ ಹೆಚ್ಚಿನ ಜನರು ದುಬೈನಲ್ಲಿ ಖರೀದಿ ಮಾಡುತ್ತಾರೆ. ದುಬೈ ನಲ್ಲಿ ಚಿನ್ನ ಖರೀದಿ ಕಡಿಮೆ ಬೆಲೆ, ಆದರೆ ಅಲ್ಲಿಂದ ಭಾರತಕ್ಕೆ ಎಷ್ಟು ಚೆನ್ನ ತರಬೇಕು ಎನ್ನುವುದಕ್ಕೆ ರೂಲ್ಸ್, ಆ ರೂಲ್ಸ್ ಮೀರಿ ಹೆಚ್ಚು ಚಿನ್ನವನ್ನು ಭಾರತಕ್ಕೆ ತರಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಈ ರೂಲ್ಸ್ ಏನು? ಎಷ್ಟು ಚಿನ್ನ ತರಬಹುದು?

ದುಬೈ ನಲ್ಲಿ ಇಲ್ಲಿನ ಚಿನ್ನಕ್ಕಿಂತ ಬೆಲೆ ಕಡಿಮೆ ಎನ್ನುವುದಕ್ಕೆ, ಬಹಳಷ್ಟು ಜನರು ಪ್ರವಾಸಕ್ಕಾಗಿ ಹೋದರು, ಮೂಲ ಉದ್ದೇಶ ಚಿನ್ನ ಖರೀದಿ ಮಾಡುವುದಕ್ಕಾಗಿಯೇ ಹೋಗುತ್ತಾರೆ. ಆದರೆ ಕಸ್ಟಮ್ ಕ್ಲಿಯರೆನ್ಸ್ ಹಾಗೂ ಇನ್ನಿತರ ರೂಲ್ಸ್ ಗಳು ಇದೆ, ಅದೆಲ್ಲವನ್ನು ನೋಡಿಕೊಂಡು ಅಲ್ಲಿಂದ ಭಾರತಕ್ಕೆ ಚಿನ್ನವನ್ನು ತರಬೇಕು.

ಇನ್ನು ಭಾರತದಲ್ಲಿ 10 ಗ್ರಾಮ್ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ಸುಮಾರು ₹74,210 ರೂಪಾಯಿಗೆ ಬಂದು ನಿಂತಿದೆ. ಆದರೆ ದುಬೈ ನಲ್ಲಿ ಇಲ್ಲಿಗಿಂತ ಕಡಿಮೆ, ಅಲ್ಲಿ 10 ಗ್ರಾಮ್ 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ₹66,910 ರೂಪಾಯಿ ಮಾತ್ರ. ಹಾಗಾಗಿ ಹೆಚ್ಚು ಜನ ಚಿನ್ನ ಖರೀದಿಗಾಗಿ ಅಲ್ಲಿಗೇ ಹೋಗುತ್ತಾರೆ.

ಭಾರತಕ್ಕೆ ದುಬೈ ಇಂದ ಚಿನ್ನ ತರುವುದು ಸುಲಭ ಅಲ್ಲ;

ನಮ್ಮ ದೇಶದ ದುಬೈ ಗೆ ಹೋಗಿ, ಇಲ್ಲಿಗಿಂತ ಕಡಿಮೆ ಬೆಲೆ ಕೊಟ್ಟು ಚಿನ್ನವೇನೋ ಖರೀದಿ ಮಾಡುತ್ತಾರೆ. ಆಭರಣಗಳು ಇಲ್ಲಿಗಿಂತ ₹7000 ರೂಪಾಯಿ ಕಡಿಮೆಗೆ ಸಿಗುತ್ತದೆ. ಆದರೆ ಅಲ್ಲಿಂದ ಭಾರತಕ್ಕೆ ಚಿನ್ನವನ್ನು ಎಕ್ಸ್ಪೋರ್ಟ್ (Gold Export) ಮಾಡುವುದೇ ಕಷ್ಟದ ಪ್ರಕ್ರಿಯೆ.

ದುಬೈನಲ್ಲಿ ಚಿನ್ನ ಎಕ್ಸ್ಪೋರ್ಟ್ ಗೆ ಕಸ್ಟಮ್ ಶುಲ್ಕ ಪಾವತಿ ಮಾಡಬೇಕು, ಹಲವು ನಿಯಮಗಳ ಪಾಲನೆ ಆಗಬೇಕು, ಜೊತೆಗೆ ಅವರು ಕೇಳುವ ದಾಖಲೆಗಳನ್ನು ನೀಡಬೇಕು. ಇದೆಲ್ಲವೂ ಒಂದು ರೀತಿ ರಿಸ್ಕಿ ಪ್ರಕ್ರಿಯೆ ಎಂದರೆ ತಪ್ಪಾಗಲಾರದು. ಇನ್ನು ನಿಯಮಗಳು ಹೇಗಿವೆ ಎಂದು ನೋಡುವುದಾದರೆ..

ನಿಮ್ಮ ಮನೆಯಲ್ಲಿ ಒಟ್ಟು ಎಷ್ಟು ಗ್ರಾಂ ಚಿನ್ನ ಇಟ್ಟುಕೊಳ್ಳಬಹುದು? ಇಡಬಹುದಾದ ಲಿಮಿಟ್ ಎಷ್ಟು ಗೊತ್ತಾ?

Dubai Gold Priceದುಬೈ ನಿಯಮಗಳು:

*ನೀವು ದುಬೈ ನಲ್ಲಿ 6 ತಿಂಗಳು ಅಥವಾ 1 ವರ್ಷದಿಂದ ವಾಸ ಮಾಡುತ್ತಿರುವ ವ್ಯಕ್ತಿಯಾದರೆ, ಅಲ್ಲಿಂದ ಚಿನ್ನ ತರುವುದು ಅಷ್ಟು ಕಷ್ಟ ಆಗುವುದಿಲ್ಲ. ಸ್ವಲ್ಪ ಡಿಸ್ಕೌಂಟ್ ಸಿಗುತ್ತದೆ.

*ಹೆಂಗಸರಿಗೆ ಬೇರೆ ರೀತಿ ಕಸ್ಟಮ್ಸ್ ನಿಯಮ, ಗಂಡಸರಿಗೆ ಬೇರೆ ರೀತಿ ಕಸ್ಟಮ್ಸ್ ನಿಯಮ ಇರುತ್ತದೆ.

*ಗಂಡಸರು 20 ಗ್ರಾಮ್ ವರೆಗೂ ಚಿನ್ನ ಖರೀದಿ ಮಾಡಿ, ಅದನ್ನು ಭಾರತಕ್ಕೆ ತರುವುದಾದರೆ, ಅದಕ್ಕೆ ಯಾವುದೇ ಕಸ್ಟಮ್ ಶುಲ್ಕ ಇರುವುದಿಲ್ಲ. 20 ಗ್ರಾಮ್ ಗಿಂತ ಜಾಸ್ತಿ ಚಿನ್ನವಿದ್ದರೆ, 3% ಕಸ್ಟಮ್ ಡ್ಯೂಟಿ ಶುಲ್ಕ ಪಾವತಿ ಮಾಡಬೇಕು.

ಸ್ಟೇಟ್ ಬ್ಯಾಂಕಿನಿಂದ ಬಂಪರ್ ಕೊಡುಗೆ! ಮನೆಯಲ್ಲೇ ಕುಳಿತು ಪ್ರತಿ ತಿಂಗಳು ಲಕ್ಷಗಟ್ಟಲೇ ಹಣಗಳಿಸಿ

*ಗಂಡಸರು 50 ಗ್ರಾಮ್ ಚಿನ್ನವನ್ನು ಖರೀದಿ ಮಾಡಿದರೆ 10% ಕಸ್ಟಮ್ ಶುಲ್ಕ ಪಾವತಿ ಮಾಡಬೇಕು.

*ಮಹಿಳೆಯರು 1 ಲಕ್ಷದ ಮೊತ್ತ ಆಗುವಷ್ಟು ಚಿನ್ನವನ್ನು ಖರೀದಿ ಮಾಡಿ, ಯಾವುದೇ ಶುಲ್ಕ ಪಾವತಿ ಮಾಡದೆ ಭಾರತಕ್ಕೆ ತರಬಹುದು. ಅದಕ್ಕಿಂತ ಹೆಚ್ಚಿನ ಚಿನ್ನವನ್ನು ಖರೀದಿ ಮಾಡಿದರೆ, ಶುಲ್ಕ ಪಾವತಿ ಮಾಡಬೇಕಾಗುತ್ತದೆ.

*14 ವರ್ಷದ ಒಳಗಿನ ಮಕ್ಕಳು 40 ಗ್ರಾಮ್ ಗಿಂತ ಜಾಸ್ತಿ ಚಿನ್ನವನ್ನು ಖರೀದಿ ಮಾಡುವ ಹಾಗಿಲ್ಲ.

Do you know how much gold can be brought to India from Dubai

Our Whatsapp Channel is Live Now 👇

Whatsapp Channel

Related Stories